ಕೊಲ್ಲಿ ಯುದ್ಧ । ಭಾರತದ ಮೌನ ಅರ್ಥವಾಗುತ್ತಿಲ್ಲ: ಮೆಹಬೂಬಾ ಮುಫ್ತಿ

Date:

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದೆ. ಆದರೆ ಈ ಬಗ್ಗೆ ಭಾರತ ಇನ್ನೂ ಮೌನವಾಗಿರುವುದು ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಪಿಡಿಪಿ ಅಧ್ಯಕ್ಷೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ. ಹಾಗೆಯೇ ಪರಮಾಣು ಪರೀಕ್ಷೆ ವಿಚಾರದಲ್ಲಿ ಭಾರತದ ವಿರುದ್ಧ ನಿರ್ಬಂಧಗಳನ್ನು ವಿಧಿಸಿದಾಗ ಇರಾನ್ ಮಾತ್ರ ನವದೆಹಲಿಯ ಪರವಾಗಿ ನಿಂತಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಇರಾನ್ ಮೇಲೆ ದಾಳಿಯನ್ನು ಖಂಡಿಸಿ ಮುಫ್ತಿ ಶ್ರೀನಗರದಲ್ಲಿ ಪ್ರತಿಭಟಿಸಿದ್ದಾರೆ. ಅಮೆರಿಕದ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿಗಳನ್ನು ಸುಟ್ಟು, ದಾಳಿಯನ್ನು ಖಂಡಿಸಿದ್ದಾರೆ. ಈ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವೇ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ನಾಯಕತ್ವವು ಈ ಹಿಂಸೆಯನ್ನು ಖಂಡಿಸಿಲ್ಲ ಅಥವಾ ಇರಾನ್‌ನ ಜನರಿಗೆ ದೇಶದ ನಾಯಕರಾಗಲಿ ಅಥವಾ ಜಮ್ಮು ಕಾಶ್ಮೀರದ ನಾಯಕರಾಗಲಿ ಸಂತಾಪವನ್ನೂ ಸೂಚಿಸಿಲ್ಲ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ ಚುನಾವಣೆ | ಬಿಜೆಪಿ ಜೊತೆ ಪಿಡಿಪಿ ಮೈತ್ರಿ?; ಮೆಹಬೂಬಾ ಮುಫ್ತಿ ಹೇಳಿದ್ದೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಭಾರತವು ಈ ಹಿಂದೆ ಇರಾನ್‌ನೊಂದಿಗೆ ಬಲವಾದ ಸಂಬಂಧವನ್ನು ಹೊಂದಿತ್ತು. ಕಾಶ್ಮೀರ ವಿಷಯದಲ್ಲಿ ಎಲ್ಲಾ ಮುಸ್ಲಿಂ ದೇಶಗಳು ಪಾಕಿಸ್ತಾನದ ಪರವಾಗಿತ್ತು, ಆದರೆ ಇರಾನ್ ಮಾತ್ರ ಭಾರತದ ಪರವಾಗಿತ್ತು. ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ, ಇರಾನ್ ನಮಗೆ ತೈಲವನ್ನು ನೀಡಿದ ಏಕೈಕ ದೇಶವಾಗಿತ್ತು. ಮೊದಲು ನಮ್ಮಲ್ಲಿ ಹಣವನ್ನೂ ತೆಗೆದುಕೊಂಡಿಲ್ಲ, ನಂತರ ನಾವು ತೈಲದ ಹಣ ಪಾವತಿಸಿದ್ದೇವೆ. ದುರದೃಷ್ಟವಶಾತ್, ದೇಶದ ನಾಯಕತ್ವವು ಈಗ ಇರಾನ್‌ ಮೇಲಿನ ದಾಳಿಯನ್ನು ಖಂಡಿಸುತ್ತಿಲ್ಲ, ಸಂತಾಪವೂ ಸೂಚಿಸುತ್ತಿಲ್ಲ” ಎಂದು ಹೇಳಿದರು.

“ನಮಗೆ ಅತೀವ ದುಃಖವಾಗುತ್ತಿದೆ. ಆದರೆ ನಾವು ಹೊರಗೆ ಪ್ರತಿಭಟಿಸಲು ಸಾಧ್ಯವಿಲ್ಲ. ಆದ್ದರಿಂದ ಕನಿಷ್ಠ ಪಕ್ಷ ನಾವು ಈ ಪೈಶಾಚಿಕ ಶಕ್ತಿಗಳ ಪ್ರತಿಕೃತಿಗಳನ್ನು ಸುಟ್ಟು ಹಾಕಿ ಪ್ರತಿಭಟಿಸಿದ್ದೇವೆ. ಅದು ಟ್ರಂಪ್ ಆಗಿರಲಿ ಅಥವಾ ನೆತನ್ಯಾಹು ಆಗಿರಲಿ. ಜಮ್ಮು ಕಾಶ್ಮೀರದ ಜನರು ವಿಶೇಷವಾಗಿ ಕಣಿವೆಯ ಜನರು, ಇರಾನ್ ಜನರೊಂದಿಗೆ ನಿಲ್ಲುತ್ತಾರೆ. ಅಲ್ಲಿನ ಜನರ ಶೌರ್ಯ ಮತ್ತು ತ್ಯಾಗಗಳಿಗೆ ನಾವು ನಮಿಸುತ್ತೇವೆ” ಎಂದೂ ಈ ಸಂದರ್ಭದಲ್ಲೇ ತಿಳಿಸಿದರು.

ಇದನ್ನು ಓದಿದ್ದೀರಾ? ಮೂರು ವರ್ಷಗಳ ನಂತರ ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್‌ ನೀಡಿಕೆ

“ಇಂದು ವಿಶ್ವ ಕ್ರಮವಾಗಿ ನಡೆಯುತ್ತಿಲ್ಲ. ಟ್ರಂಪ್‌ನಂತಹ ಎಪ್‌ಸ್ಟೀನ್ ಗೂಂಡಾ ಎಪ್‌ಸ್ಟೀನ್ ಮಾಸ್ಟರ್ ನೆತನ್ಯಾಹು ಜೊತೆಗೆ ಇರಾನ್ ಮತ್ತು ವೆನೆಜುವೆಲಾಕ್ಕೆ ದಾಳಿ ನಡೆಸಬಹುದು. ಯುದ್ಧ ಅಪರಾಧಿಗಳು ಜತೆಯಾಗಿ ಸೇರಿ ಇರಾನ್‌ನಂತಹ ಸಾರ್ವಭೌಮ ರಾಷ್ಟ್ರದ ಮೇಲೆ ದಾಳಿ ಮಾಡಿದರೂ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ” ಎಂದು ಹೇಳಿದರು.

“ದುರದೃಷ್ಟವಶಾತ್, ಗಲ್ಫ್, ಮಧ್ಯಪ್ರಾಚ್ಯದಲ್ಲಿರುವ ಮುಸ್ಲಿಂ ರಾಷ್ಟ್ರಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿವೆ. ಅಮೆರಿಕನ್ನರಿಗೆ ನೆಲೆಗಳನ್ನು ಒದಗಿಸುವ ಮೂಲಕ ಇರಾನ್ ಮೇಲಿನ ಈ ದಾಳಿಯನ್ನು ಮೌನವಾಗಿ ಬೆಂಬಲಿಸುತ್ತಿವೆ. ಇದು ವಿಷಾದಕರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲೇ ಪಾಕಿಸ್ತಾನವನ್ನು ಟೀಕಿಸಿದ ಮುಫ್ತಿ, ಸೌದಿ ಅರೇಬಿಯಾದೊಂದಿಗಿನ ಪಾಕಿಸ್ತಾನದ ಇತ್ತೀಚಿನ ಒಪ್ಪಂದವು ಇಸ್ರೇಲ್ ವಿರುದ್ಧವಾಗಿ ನಡೆದಿರುವುದು ಅಲ್ಲ, ಇರಾನ್ ವಿರುದ್ಧವಾಗಿ ನಡೆದಿರುವುದು ಎಂದು ತೋರುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. 2025ರ ಸೆಪ್ಟೆಂಬರ್‌ 17ರಂದು ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ರಿಯಾದ್‌ನಲ್ಲಿ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ (SMDA) ಸಹಿ ಹಾಕಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...