ಲಾಭಕ್ಕಾಗಿ ನಿಯಮಗಳ ಗಾಳಿಗೆ ತೂರಿದ ಇಂಡಿಗೋ: ಈ ಭಂಡಧೈರ್ಯ ಎಲ್ಲಿಂದ ಬಂತು?

Date:

ಹೊಸ ನಿಯಮವನ್ನು ನವೆಂಬರ್‌ 1ರಿಂದ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿತ್ತು. ಈ ನಿಯಮಕ್ಕೆ ಹೊಂದುವಂತೆ ಇತರ ಏರ್‌ಲೈನ್‌ಗಳು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಇಂಡಿಗೋ ಮಾತ್ರ ಲಾಭದ ಆಸೆಗೆ ಬಿದ್ದು ಸಿಬ್ಬಂದಿ ನೇಮಕ ಮೊದಲಾದ ತಯಾರಿಯನ್ನು ಮಾಡಿಕೊಂಡಿಲ್ಲ ಎಂಬ ಆರೋಪಗಳಿವೆ.

ಇಂಡಿಗೋ ಬಿಕ್ಕಟ್ಟು ಇಡೀ ದೇಶದಲ್ಲಿ ಲಕ್ಷಾಂತರ ಮಂದಿಯ ಜೀವನದ ಮೇಲೆ ಪ್ರಭಾವ ಬೀರಿತು. ಹಲವು ಮಂದಿ ತಮ್ಮ ಪ್ರಮುಖ ಸಭೆಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇಂಡಿಗೋ ರದ್ದಾದ ಕಾರಣದಿಂದಾಗಿ ಹುಬ್ಬಳ್ಳಿಯಲ್ಲಿ ನಡೆಯಲಿದ್ದ ನವವಿವಾಹಿತರ ಆರತಕ್ಷತೆ ಕಾರ್ಯಕ್ರಮ ಆನ್‌ಲೈನ್ ಮೂಲಕ ನಡೆದಿತ್ತು. ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ಸಂಸ್ಥೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದಂತಿತ್ತು. ವಿಮಾನಗಳು ರದ್ದಾಗಿದ್ದರೂ ಇದರ ಬಗ್ಗೆ ಸರಿಯಾದ ಮಾಹಿತಿ ನೀಡದೆ ಪ್ರಯಾಣಿಕರನ್ನು 10-12 ಗಂಟೆಗಳಿಗೂ ಅಧಿಕ ಸಮಯ ಕಾಯಿಸಿತು. ಟಿಕೆಟ್ ಮೊತ್ತವನ್ನೂ ಪೂರ್ಣವಾಗಿ ವಾಪಸ್ ಮಾಡದೆ ಬೇಜವಬ್ದಾರಿ ತೋರಿತ್ತು. ಆದರೆ ಈ ಎಲ್ಲ ಭಂಡತನದ ಹಿಂದಿದ್ದ ಕೆಟ್ಟ ಧೈರ್ಯ ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಇಂಡಿಗೋ ಸಂಸ್ಥೆಯ ಲಾಭಕೋರತನದಿಂದಾಗಿ ಸೃಷ್ಟಿಯಾದ ಅವ್ಯವಸ್ಥೆಯಿಂದಾಗಿ ಪೀಕಲಾಟಕ್ಕೆ ಸಿಲುಕಿದವರು ಪ್ರಯಾಣಿಕರು. ಕಳೆದ 7-8 ದಿನಗಳ ಬೆಳವಣಿಗೆಯನ್ನು ನಾವು ಸ್ಪಷ್ಟವಾಗಿ ನೋಡಿದಾಗ ಇಂಡಿಗೋ ತನ್ನ ಲಾಭಕ್ಕಾಗಿ ನೀತಿ ನಿಯಮಗಳನ್ನು ಗಾಳಿಗೆ ತೋರಿದೆ ಎಂಬುದು ಸ್ಪಷ್ಟವಾಗುತ್ತದೆ. ಜತೆಗೆ ಇದೇ ಸಂದರ್ಭದಲ್ಲಿ ಬಿಜೆಪಿ ನೀರೆರೆದು ಪೋಷಿಸಿದ ಏಕಸ್ವಾಮ್ಯದ ಪರಿಣಾಮವೂ ಜಗಜ್ಜಾಹೀರಾಗುತ್ತಿದೆ. ಇವೆಲ್ಲವುದಕ್ಕೂ ಮುಖ್ಯವಾಗಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದಂತೆ ಚುನಾವಣಾ ಬಾಂಡ್‌ಗಳತ್ತ ಮತ್ತೆ ಕಣ್ಣಾಯಿಸಿ ವಿಶ್ಲೇಷಿಸುವುದು ಅತ್ಯಗತ್ಯ.

ಇದನ್ನು ಓದಿದ್ದೀರಾ? ಇಂಡಿಗೋ ವಿಮಾನ ಸಂಚಾರ ಅಸ್ತವ್ಯಸ್ತ- ಧೂಮಪರದೆಯ ಹಿಂದಿನ ಅಸಲು ಕಾರಣವೇನು? ಏರ್‌ಬಸ್ ತಂತ್ರಾಂಶ ದೋಷವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುರಕ್ಷತೆಯನ್ನು ಹೆಚ್ಚಿಸಲು ಪೈಲಟ್‌ಗಳು ಸರಿಯಾಗಿ ನಿದ್ದೆ ಮಾಡುವುದು, ವಿಶ್ರಾಂತಿ ಪಡೆಯುವುದು ಅತಿ ಮುಖ್ಯ ಎಂಬ ಕಾರಣಕ್ಕೆ ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿಗೆ ಒಂದು ವಾರ ವಿಶ್ರಾಂತಿ ನೀಡುವ ನಿಯಮವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಜಾರಿಗೆ ತಂದಿತ್ತು. ಈ ನಿಯಮವನ್ನು ನವೆಂಬರ್‌ 1ರಿಂದ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿತ್ತು. ಈ ನಿಯಮಕ್ಕೆ ಹೊಂದುವಂತೆ ಇತರ ಏರ್‌ಲೈನ್‌ಗಳು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಇಂಡಿಗೋ ಮಾತ್ರ ಲಾಭದ ಆಸೆಗೆ ಬಿದ್ದು ಸಿಬ್ಬಂದಿ ನೇಮಕ ಮೊದಲಾದ ತಯಾರಿಯನ್ನು ಮಾಡಿಕೊಂಡಿಲ್ಲ ಎಂಬ ಆರೋಪಗಳಿವೆ. ಈ ಆರೋಪವನ್ನು ಸಾಬೀತುಪಡಿಸುವುದು ಇತ್ತೀಚೆಗೆ ಎಲ್ಲ ಬೆಳವಣಿಗೆಗಳು. ನಿಯಮಗಳು ಜಾರಿಗೆ ಬರುತ್ತಿದ್ದಂತೆ ಕಾನೂನುಬದ್ಧವಾಗಿ ಸಿಬ್ಬಂದಿ ವಿಶ್ರಾಂತಿ ಪಡೆದಿದ್ದಾರೆ. ಇದರಿಂದಾಗಿ ದಿಢೀರ್ ಆಗಿ ಇಂಡಿಗೋ ಸಂಸ್ಥೆಗೆ ಸಿಬ್ಬಂದಿ ಕೊರತೆ ಉಂಟಾಗಿದೆ. ಇದು ಸಾವಿರಾರು ಪ್ರಯಾಣಿಕರನ್ನ ತೊಂದರೆಗೀಡು ಮಾಡಿದೆ.

ಇತರೆ ಏರ್‌ಲೈನ್‌ಗಳಂತೆ ಇಂಡಿಗೋ ಸಿದ್ಧತೆ ಮಾಡಿಕೊಂಡಿದ್ದರೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿರಲಿಲ್ಲ ಎಂಬುದು ಸ್ಪಷ್ಟ. ಈ ಬಿಕ್ಕಟ್ಟಿನ ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಈ ಸಮಸ್ಯೆಗಳಿಗೆ ಇಂಡಿಗೋ ಬಳಿ ಕಾರಣ ಕೇಳಿದ್ದಾರೆ. ಅದಾದ ಬಳಿಕ ಈ ನಿಯಮವನ್ನೇ ಡಿಜಿಸಿಎ ಹಿಂಪಡೆದಿದೆ! ಸರ್ಕಾರದ ನಿಯಮವನ್ನು ಸರಿಯಾಗಿ ಪಾಲಿಸದ ಇಂಡಿಗೋ ಸಂಸ್ಥೆಯ ಮೇಲೆ ಕ್ರಮಕೈಗೊಳ್ಳಬೇಕಾಗಿದ್ದು ಮುಖ್ಯವೇ ಅಥವಾ ನಿಯಮವನ್ನೇ ಹಿಂಪಡೆಯುವುದು ಸರಿಯೇ ಎಂಬ ಪ್ರಶ್ನೆಗಳು ಇಲ್ಲಿ ಕಾಡುತ್ತದೆ.

ಸರ್ಕಾರ ಕೈಗೊಂಡ ಕ್ರಮಗಳೇನು?

ಅವಾಂತರ ನಡೆಯುವುದಕ್ಕೂ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಕ್ಕೂ ಭಿನ್ನವಾಗಿ ಬಿಕ್ಕಟ್ಟು ತಾರಕಕ್ಕೆ ಏರಿದ ಬಳಿಕ ಕ್ರಮಕೈಗೊಳ್ಳುವ ಪರಿಸ್ಥಿತಿ ಸರ್ಕಾರದ್ದು. ವಿಮಾನ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿದ, ದಕ್ಷತೆಯನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಡಿಜಿಸಿಎ ವಾರದ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಶೇ. 10ರಷ್ಟು ಕಡಿತಗೊಳಿಸಲು ಆದೇಶಿಸಿದೆ. ಕಡಿತಗೊಳಿಸಿದ ವಿಮಾನ ಮಾರ್ಗಗಳು ಮತ್ತು ಸ್ಲಾಟ್‌ಗಳನ್ನು ಇತರ ವಿಮಾನಯಾನ ಸಂಸ್ಥೆಗಳಿಗೆ ತಾತ್ಕಾಲಿಕವಾಗಿ ಪುನರ್ ಹಂಚಿಕೆ ಮಾಡಲಾಗುವುದು. ಸಂಸ್ಥೆಯು ಸರಿಯಾಗಿ ಕಾರ್ಯಾಚರಣೆ ಆರಂಭಿಸುವವರೆಗೂ ವಿಮಾನ ಮಾರ್ಗಗಳನ್ನು ನೀಡಲಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವರು ಹೇಳಿದ್ದಾರೆ. ಆದರೆ ಏಕಸ್ವಾಮ್ಯ ಮತ್ತು ದ್ವೈಪತ್ಯವೇ ಇದಕ್ಕೆ ಕಾರಣ ಎಂಬುದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟ. ಸರ್ಕಾರ ಸದ್ಯ ಏಕಸ್ವಾಮ್ಯದ ವಿರುದ್ಧ ದೃಢ ಕ್ರಮಕೈಗೊಳ್ಳಬೇಕೇ ಹೊರತು ತಾತ್ಕಾಲಿಕ ಪರಿಹಾರವಲ್ಲ.

ಇದನ್ನು ಓದಿದ್ದೀರಾ?ಇಂಡಿಗೋ ಬಿಕ್ಕಟ್ಟು: ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕ ಹೇಳುವುದೇನು?

ಬಿಜೆಪಿ ನೀರೆರೆದ ಏಕಸ್ವಾಮ್ಯ ಮತ್ತು ಚುನಾವಣಾ ಬಾಂಡ್

ಸದ್ಯ ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯ, ದ್ವೈಪತ್ಯವಿದ್ದು ಅದಕ್ಕೆ ನೀರೆರೆದಿದ್ದು ಬಿಜೆಪಿ ಎಂಬುದು ವಿಪಕ್ಷಗಳ ಆರೋಪ. ಇದು ನಿಜವೂ ಹೌದು. ಅದಕ್ಕಾಗಿ ಕೊಂಚ ಚುನಾವಣಾ ಬಾಂಡ್‌ಗಳತ್ತ ಮತ್ತು ವಿಮಾನಯಾನ ಸಂಸ್ಥೆಗಳ ಖಾಸಗೀಕರಣದತ್ತ ಕಣ್ಣಾಯಿಸಬೇಕಾಗುತ್ತದೆ. ಈ ವೇಳೆ ನಾವು ಸಸಿಕಾಂತ್ ಸೆಂಥಿಲ್ ಹೇಳಿಕೆಯತ್ತವೂ ಗಮನಹರಿಸಬೇಕು. ಇಂಡಿಗೋದ ಮೂಲ ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ದೊಡ್ಡ ಮೊತ್ತದ ದೇಣಿಗೆ ನೀಡಿವೆ. ಇದರಿಂದಾಗಿಯೇ ಸರ್ಕಾರವು ಇಂಡಿಯೋಗೆ ನಿಯಮಗಳ ಅನುಸರಣೆಯಲ್ಲಿ ಮೃದು ಧೋರಣೆ ತೋರುತ್ತಿದೆ. ಪ್ರಯಾಣಿಕರ ಸುರಕ್ಷತೆಯನ್ನು ಕಡೆಗಣಿಸಿದೆ ಎಂಬುದು ಸೆಂಥಿಲ್ ಅವರ ಗಂಭೀರ ಆರೋಪ.

ಭಾರತೀಯ ಚುನಾವಣಾ ಆಯೋಗವು (ECI) ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ದತ್ತಾಂಶದ ಪ್ರಕಾರ, ಇಂಡಿಗೋ ವಿಮಾನಯಾನ ಸಂಸ್ಥೆಯ ಮೂಲ ಕಂಪನಿಯಾದ ಇಂಟರ್‌ಗ್ಲೋಬ್ ಏವಿಯೇಷನ್ (InterGlobe Aviation) ಮತ್ತು ಅದರ ಸಂಬಂಧಿತ ಘಟಕಗಳು ಒಟ್ಟು ಸುಮಾರು ₹56 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದಾರೆ.

ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ (InterGlobe Aviation Ltd) ₹5 ಕೋಟಿ ಮೌಲ್ಯದ ಬಾಂಡ್‌, ಇಂಟರ್‌ಗ್ಲೋಬ್ ಏರ್ ಟ್ರಾನ್ಸ್‌ಪೋರ್ಟ್ (InterGlobe Air Transport) ₹11 ಕೋಟಿ ಮೌಲ್ಯದ ಬಾಂಡ್‌, ಇಂಟರ್‌ಗ್ಲೋಬ್ ರಿಯಲ್ ಎಸ್ಟೇಟ್ ವೆಂಚರ್ಸ್ (InterGlobe Real Estate Ventures) ₹20 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ರಾಹುಲ್ ಭಾಟಿಯಾ (ಪ್ರವರ್ತಕರು) ವೈಯಕ್ತಿಕವಾಗಿ ₹20 ಕೋಟಿ ಮೌಲ್ಯದ ಬಾಂಡ್‌ಗಳು ಖರೀದಿಸಿದ್ದಾರೆ.

ಒಟ್ಟು ₹56 ಕೋಟಿ ಮೌಲ್ಯದ ಬಾಂಡ್‌ಗಳಲ್ಲಿ ಬಹುಪಾಲು ದೇಣಿಗೆಗಳು ಭಾರತೀಯ ಜನತಾ ಪಕ್ಷ ಪಾಲಾಗಿದೆ. ಅಂದರೆ ಬಿಜೆಪಿ ಸುಮಾರು ₹31 ಕೋಟಿ ಪಡೆದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸುಮಾರು ₹6.2 ಕೋಟಿ ಪಡೆದಿದೆ. ಕಾಂಗ್ರೆಸ್ ₹3.8 ಕೋಟಿ ಪಡೆದಿದೆ. ಇತ್ತೀಚಿನ ಇಂಡಿಗೋ ವಿಮಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ವಿಪಕ್ಷಗಳು ಈ ದೇಣಿಗೆಗಳನ್ನು ಪ್ರಸ್ತಾಪಿಸಿ ಸರ್ಕಾರ ದೇಣಿಗೆ ಪಡೆದ ಕಾರಣ ಇಂಡಿಗೋ ಮೇಲೆ ಮೃದು ಧೋರಣೆ ತೋರಿದೆ, ಇಂಡಿಗೋಗೆ ಹೆಚ್ಚಿನ ಮಾರ್ಗ ಹಂಚಿಕೆ ಮಾಡಿದೆ ಎಂದು ಆರೋಪಿಸಿವೆ.

ಇಂಡಿಗೋ ಏಕಸ್ವಾಮ್ಯ: ಎಚ್ಚರಿಕೆ ಗಂಟೆ

ಕಳೆದ ವಾರದಿಂದ ಇಂಡಿಗೋದಲ್ಲಿನ ಬಿಕ್ಕಟ್ಟು ದೇಶದ ಸಂಪೂರ್ಣ ವಾಯುಯಾನ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿದೆ. ಆ ಮಿತಿಮೀರಿದ ಪರಿಣಾಮಕ್ಕೆ ಪ್ರಮುಖ ಕಾರಣ ದೇಶದ ವಾಯುಯಾನ ವಲಯದ ಮೇಲೆ ಇಂಡಿಗೋ ಹೊಂದಿರುವ ಪ್ರಾಬಲ್ಯ. ದೇಶದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಪ್ರತಿ 10 ಭಾರತೀಯ ಪ್ರಯಾಣಿಕರಲ್ಲಿ ಆರು ಮಂದಿ ಇಂಡಿಗೋದಲ್ಲಿ ಪ್ರಯಾಣಿಸುತ್ತಾರೆ. ಆದ್ದರಿಂದಾಗಿ ಇತ್ತೀಚೆಗೆ ಉಂಟಾದ ಬಿಕ್ಕಟ್ಟು ದೇಶದ ಶೇ.60ರಷ್ಟು ವಿಮಾನ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿಯೇ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಶೇ.65ಕ್ಕಿಂತ ಅಧಿಕ ಮಾರುಕಟ್ಟೆ ಪಾಲನ್ನು ಇಂಡಿಗೋ ಹೊಂದಿದೆ ಎಂಬುದು ಮುನ್ನೆಲೆಗೆ ಬಂದಿದೆ.

ಇದನ್ನು ಓದಿದ್ದೀರಾ? ಇಂಡಿಗೋ ಬಿಕ್ಕಟ್ಟು: ಬೆಂಗಳೂರು, ಹೈದರಾಬಾದ್‌ನಲ್ಲಿ 180 ವಿಮಾನಯಾನ ರದ್ದು, ಮಾರ್ಗಗಳ ಕಡಿತಕ್ಕೆ ಸರ್ಕಾರ ನಿರ್ಧಾರ

ಭಾರತದ ವಾಯುಯಾನ ವಲಯವು ದ್ವೈಪತ್ಯವನ್ನು ಹೊಂದಿದ್ದರೂ ಅಕ್ಟೋಬರ್ ವೇಳೆಗೆ ಏರ್ ಇಂಡಿಯಾ ಗುಂಪು ಅಧಿಕ ಮಾರುಕಟ್ಟೆ ಪಾಲನ್ನು ಹೊಂದಿ ಇಂಡಿಗೋದ ಬಹುಪಾಲು ಮಾರ್ಗಗಳು ಏಕಸ್ವಾಮ್ಯ ಮಾರ್ಗಗಳಾಗಿವೆ. ಇಂಡಿಗೋ ಮಾತ್ರ ಹಾರಾಟ ನಡೆಸುವ ವಿಮಾನ ಮಾರ್ಗಗಳಿವೆ. ಏರ್ ಇಂಡಿಯಾ ಸಮೂಹವು ಇಂಡಿಗೋ ನಂತರ ಎರಡನೇ ಸ್ಥಾನದಲ್ಲಿದ್ದರೂ, ಇವೆರಡೂ ಒಟ್ಟು ದೇಶೀಯ ಮಾರುಕಟ್ಟೆಯಲ್ಲಿ ಶೇ.90ಕ್ಕಿಂತ ಅಧಿಕ ಪಾಲನ್ನು ಹೊಂದಿದೆ. ಒಟ್ಟಾರೆಯಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಸುಮಾರು 1,200 ದೇಶೀಯ ಮಾರ್ಗಗಳನ್ನು ಹೊಂದಿದೆ. ಅವುಗಳಲ್ಲಿ ಇಂಡಿಗೋ 950ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯಾಚರಿಸುತ್ತದೆ.

ಈ ಏಕಸ್ವಾಮ್ಯಕ್ಕೆ ನಾಂದಿ ಹಾಡಿದವರು ಯಾರು ಎಂಬ ಪ್ರಶ್ನೆಯೂ ಸದ್ಯ ಸೃಷ್ಟಿಯಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯೇ ಇಲ್ಲ. ಅದಕ್ಕೆ ಸರ್ಕಾರವೂ ಅವಕಾಶ ಮಾಡಿಕೊಟ್ಟಿಲ್ಲ. ಹಲವು ಆಫರ್‌ಗಳನ್ನು ನೀಡಿ ಇಂಡಿಗೋ ಜನರನ್ನು ಸೆಳೆಯುತ್ತಾ ಸಂಪೂರ್ಣ ಮಾರುಕಟ್ಟೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾವನ್ನು ನರೇಂದ್ರ ಮೋದಿ ಸರ್ಕಾರವು 2022ರಲ್ಲಿ ಟಾಟಾ ಗ್ರೂಪ್‌ಗೆ ಮಾರಾಟ ಮಾಡಿದೆ. ಸದ್ಯ ಸರ್ಕಾರದ ಒಡೆತನದಲ್ಲಿ ಅಲೈಯನ್ಸ್ ಏರ್ ಮಾತ್ರ ಉಳಿದಿದೆ. ಆದರೆ ಇಂಡಿಗೋಗೆ ಸ್ಪರ್ಧೆ ನೀಡುವಷ್ಟು ಬಲಿಷ್ಠವಾಗಿ ಈ ಸಂಸ್ಥೆಯನ್ನು ಸರ್ಕಾರ ಬೆಳೆಸಿಲ್ಲ. ಈ ಮೂಲಕ ವಿಮಾನಯಾನ ಕ್ಷೇತ್ರವೂ ಖಾಸಗೀಕರಣವಾಗಲು ಮೋದಿ ಸರ್ಕಾರವೇ ಅವಕಾಶ ನೀಡಿದೆ. ಸದ್ಯ ನಡೆದ ಎಲ್ಲ ಬೆಳವಣಿಗೆಯು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂಬುದನ್ನು ಸರ್ಕಾರ ಪರಿಗಣಿಸುವುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ನಿಷ್ಪ್ರಯೋಜಕವಾದದ್ದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...