ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚೆಗೆ ಭಾರತರತ್ನ ಪ್ರಶಸ್ತಿ ಪಡೆದ ಬಿಜೆಪಿ ಮುಖಂಡ ಎಲ್‌ಕೆ ಅಡ್ವಾಣಿ ಕುರಿತು ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಆರೋಪದಲ್ಲಿ ಹಿರಿಯ ಪತ್ರಕರ್ತ ನಿಖಿಲ್ ವಾಘ್ಲೆ ಮೇಲೆ ಪುಣೆಯ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಸಲ್ಲಿಸಿದ ದೂರಿನಲ್ಲಿ, ಎರಡು ಸಮುದಾಯಗಳ ನಡುವೆ ಶತ್ರುತ್ವ ಉತ್ತೇಜಿಸುವುದು ಮತ್ತು ನಾಯಕರ ಅವಹೇಳನ ಮಾಡಿರುವುದು ಮೊದಲಾದ ಆರೋಪಗಳನ್ನು ನಿಖಿಲ್ ಮೇಲೆ ಹೊರಿಸಲಾಗಿದೆ.
ಶುಕ್ರವಾರ ಪುಣೆಯಲ್ಲಿ ನಿಖಿಲ್ ಭಾಗವಹಿಸಲಿದ್ದ ಕಾರ್ಯಕ್ರಮಕ್ಕೆ ಅಡಚಣೆ ಮಾಡುವುದಾಗಿ ಬಿಜೆಪಿ ಬೆದರಿಕೆಯನ್ನೂ ಹಾಕಿದೆ.
This is BJP’s threat
—————————Journalist Nikhil Wagle’s speech will not be allowed in Pune – Dheeraj Ghate
Pune: 06- Pune city president of Bharatiya Janata Party Dhiraj Ghate has demanded that the police should deny permission to the speech of journalist Nikhil Wagle, who has…
— nikhil wagle (@waglenikhil) February 8, 2024
ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಬರೆದಿದ್ದರು. ಈ ಅಭಿಪ್ರಾಯವನ್ನು ವಿರೋಧಿಸಿ ಹಿರಿಯ ಬಿಜೆಪಿ ನಾಯಕ ಸುನೀಲ್ ಡಿಯೋಡಾರ್ ಅವರು ಶುಕ್ರವಾರ ವಿಶ್ರಾಮ್‌ಬಾಗ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ವಾಘ್ಲೆ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿಭಿನ್ನ ಗುಂಪುಗಳ ನಡುವೆ ಶತ್ರುತ್ವ ಪ್ರಚೋದನೆ), ಸೆಕ್ಷನ್ 500 (ಅವಹೇಳನ ಮಾಡಿರುವುದು) ಹಾಗೂ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ದೂರು ದಾಖಲಾಗಿದೆ.
‘ನಿರ್ಭಯ್ ಬನೋ’ ಎನ್ನುವ ಕಾರ್ಯಕ್ರಮದಲ್ಲಿ ನಿಖಿಲ್ ಭಾಗವಹಿಸುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಬೇಕು ಎಂದು ಬಿಜೆಪಿ ಪುಣೆ ಪೊಲೀಸರಿಗೆ ಮನವಿ ಮಾಡಿದೆ. ಆದರೆ ನಿಖಿಲ್ ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
Pune city BJP president has threatened to disturb our Nirbhay Bano meeting tomorrow evening at Sane Guruji Smarak, if police don’t ban the meeting.
Friends, this meeting is against undeclared emergency. We need to save our democracy. #ModiDisasterForIndia #NirbhayBano— nikhil wagle (@waglenikhil) February 8, 2024
ನಿಖಿಲ್ ವಾಘ್ಲೆ ತಮ್ಮ ಬರಹವನ್ನು ಸಾಮಾಜಿಕ ಜಾಲತಾಣದಿಂದ ಅಳಿಸಲು ನಿರಾಕರಿಸಿದ್ದಾರೆ. “ಇದು ಘೋಷಿಸದ ತುರ್ತುಪರಿಸ್ಥಿತಿ” ಎಂದು ಎಫ್‌ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.




