ಅದಾನಿ ಮಾನನಷ್ಟ ಮೊಕದ್ದಮೆ: ಪತ್ರಕರ್ತ ರವಿ ನಾಯರ್‌ಗೆ ಜೈಲು ಶಿಕ್ಷೆ; CASR ಖಂಡನೆ

Date:

ಅದಾನಿ ಗುಂಪಿನ ಹೆಸರಿನಲ್ಲಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದು ಪ್ರಭುತ್ವ ಹಿಂಸಾಚಾರ ವಿರುದ್ಧ ಅಭಿಯಾನ (CASR) ತೀವ್ರವಾಗಿ ಖಂಡಿಸಿದೆ. ಈ ದೋಷಾರೋಪಣೆ ಕೇವಲ ಒಬ್ಬ ಪತ್ರಕರ್ತನ ಮೇಲಿನ ದಾಳಿ ಮಾತ್ರವಲ್ಲ, ಇದು ಮಾಧ್ಯಮ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಧ್ವನಿ ಮತ್ತು ಕಾರ್ಪೊರೇಟ್ ಶಕ್ತಿಯನ್ನು ಪ್ರಶ್ನಿಸುವ ಜನರ ಹಕ್ಕಿನ ಮೇಲೆ ಗಂಭೀರ ದಾಳಿಯಾಗಿದೆ ಎಂದು ಹೇಳಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಭಾರತದ ಪ್ರಭುತ್ವ ನಡುವಿನ ಗಾಢ ಸಂಬಂಧವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದಾರೆ. ಕ್ರೋನಿ ಕ್ಯಾಪಿಟಲಿಸಂ, ನಿಯಂತ್ರಣ, ವಶಪಡಿಸಿಕೊಳ್ಳುವಿಕೆ ಮತ್ತು ಸಾರ್ವಜನಿಕ ಸಂಪನ್ಮೂಲಗಳು ಕೆಲವು ದೊಡ್ಡ ಕಾರ್ಪೊರೇಟ್ ಗುಂಪುಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವ ಬಗ್ಗೆ ಉದ್ಭವಿಸಿದ ಗಂಭೀರ ಪ್ರಶ್ನೆಗಳನ್ನು ಪರಿಹರಿಸುವ ಬದಲು, ಪ್ರಭುತ್ವವು ತನ್ನ ತನಿಖಾ ಸಂಸ್ಥೆಗಳನ್ನು ಹಾಗೂ ನ್ಯಾಯಾಂಗ ಸೇರಿದಂತೆ ಬಳಸಿಕೊಂಡು ದಿಟ್ಟತನದಿಂದ ಮಾತಾಡುವವರನ್ನು ಮೌನಗೊಳಿಸಲು ಮತ್ತು ಶಿಕ್ಷಿಸಲು ಬಳಸಿದೆ. ಈ ಧೋರಣೆ ಹೊಸದಲ್ಲ, ಪ್ರತ್ಯೇಕವೂ ಅಲ್ಲ” ಎಂದು ಅಭಿಪ್ರಾಯಿಸಿದೆ.

ಇದನ್ನು ಓದಿದ್ದೀರಾ? ಜಾತ್ಯತೀತ ತತ್ವದ ಮೇಲೆ ಮಮ್ದಾನಿ; ಭಾರತದ ನಾಯಕರಿಗೆ ಪಾಠವಾಗಲಿದೆಯೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ದೇಶದಾದ್ಯಂತ ಕೇಂದ್ರದ ಪ್ರಭುತ್ವವು ಕರಾಳ ಕಾನೂನುಗಳಾದ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅನ್ನು ಏಕಪಕ್ಷೀಯವಾಗಿ ಮತ್ತು ಮನಬಂದಂತೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ತಮ್ಮ ಜಲ, ಜಂಗಲ್, ಜಮೀನ್ (ನೀರು, ಕಾಡು, ಭೂಮಿ) ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿ ಮತ್ತು ಅಂಚಿನ ಸಮುದಾಯಗಳ ವಿರುದ್ಧ ಬಳಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಾರ್ಪೊರೇಟ್ ಭೂಸ್ವಾಧೀನ, ಗಣಿಗಾರಿಕೆ ವಿಸ್ತರಣೆ, ಸ್ಥಳಾಂತರ ಮತ್ತು ಪರಿಸರ ನಾಶದ ವಿರುದ್ಧ ಪ್ರತಿರೋಧಿಸುವವರನ್ನು ‘ರಾಷ್ಟ್ರವಿರೋಧಿ’ ಅಥವಾ ‘ಭಯೋತ್ಪಾದಕ’ ಎಂದು ಗುರುತಿಸಲಾಗುತ್ತದೆ, ಆದರೆ ಪ್ರಕೃತಿ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿ ದಂಡಮುಕ್ತವಾಗಿ ಮುಂದುವರಿಯುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಸಂದೇಶ ಸ್ಪಷ್ಟವಾಗಿದೆ: ಕಾರ್ಪೊರೇಟ್ ಲೂಟಿಗೆ ವಿರೋಧಿಸುವವರನ್ನು ಅಪರಾಧಿಗಳನ್ನಾಗಿ ಮಾಡಲಾಗುತ್ತದೆ; ಪ್ರಭುತ್ವ ಮತ್ತು ಕಾರ್ಪೊರೇಟ್ ಕುಟುಂಬಗಳ ನಡುವಿನ ಮೈತ್ರಿಯನ್ನು ಬಹಿರಂಗಪಡಿಸುವವರು ಮಾನಹಾನಿ ಮೊಕದ್ದಮೆಗಳು, ಜೈಲು ಶಿಕ್ಷೆ ಮತ್ತು ವೃತ್ತಿಜೀವನದ ಕೊನೆ ದಿನಗಳನ್ನು ಎದುರಿಸುತ್ತಾರೆ. ಇದೇ ವೇಳೆ, ಪ್ರಭಾವಿ ಕಾರ್ಪೊರೇಷನ್‌ಗಳಿಗೆ ಸಂಬಂಧಿಸಿದ ಹಣಕಾಸು ಅಕ್ರಮಗಳು, ಪರಿಸರ ಉಲ್ಲಂಘನೆಗಳು ಮತ್ತು ಪಕ್ಷಪಾತದ ಆರೋಪಗಳು ಜವಾಬ್ದಾರಿ ಸಂಸ್ಥೆಗಳಿಂದ ಗಂಭೀರ ತನಿಖೆ ಅಪರೂಪವಾಗಿದೆ” ಎಂದು ಹೇಳಿದೆ.

“ಈ ವ್ಯಾಪಕ ಹಿಂಸಾಚಾರದ ದಿನಗಳಲ್ಲಿ ನ್ಯಾಯಾಂಗದ ಕೆಲವು ವಿಭಾಗಗಳ ಪಾತ್ರದ ಬಗ್ಗೆ ನಾವು ಆಳವಾದ ಚಿಂತೆಯನ್ನು ವ್ಯಕ್ತಪಡಿಸುತ್ತೇವೆ. ಮತ್ತೆ ಮತ್ತೆ, ನ್ಯಾಯಾಲಯಗಳು ಕಾರ್ಪೊರೇಟ್ ಮಾನಹಾನಿ ದಾವೆಗಳನ್ನು ಪರಿಗಣಿಸಲು ಹಾಗೂ ಪತ್ರಕರ್ತರು ಮತ್ತು ಪ್ರತಿರೋಧ ಧ್ವನಿಗಳ ವಿರುದ್ಧದ ಪ್ರಕರಣಗಳನ್ನು ಮಿಂಚಿನ ವೇಗದಲ್ಲಿ ಮುಂದುವರಿಸಲು ಹೆಚ್ಚು ಸಿದ್ಧವಾಗಿರುವಂತೆ ಕಾಣುತ್ತವೆ. ಆದರೆ ಕಾರ್ಪೊರೇಟ್ ಜವಾಬ್ದಾರಿ ಅಥವಾ ಪ್ರಭುತ್ವದ ಅತಿರೇಕಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿವೆ” ಎಂದು ದೂರಿದೆ.

ಇದನ್ನು ಓದಿದ್ದೀರಾ? ‘ಸ್ಥಾನಾರ್ಥಿ ಶ್ರೀಕುಟ್ಟನ್’ | ಕೇರಳ ಶಾಲೆಗಳಲ್ಲಿ ಬದಲಾವಣೆ ತಂದ ಸಿನಿಮಾ

“ಪ್ರಭಾವಿ ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಲು ಯತ್ನಿಸಿದ ಕೆಲ ನ್ಯಾಯಾಧೀಶರನ್ನು ದಿಢೀರನೆ ವರ್ಗಾಯಿಸಿದ ಘಟನೆಗಳೂ ಕಂಡುಬಂದಿವೆ. ಇದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಸಾಂಸ್ದಿಕ ಒತ್ತಡದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನು ಜವಾಬ್ದಾರಿಯುತವಾಗಿ ಪ್ರಯೋಗಿಸುವಲ್ಲಿ ಮಾಧ್ಯಮವು ಮಹತ್ವದ ಪಾತ್ರ ವಹಿಸುತ್ತದೆ. ಮಾನಹಾನಿ ಕಾನೂನುಗಳನ್ನು ತನಿಖಾತ್ಮಕ ಪತ್ರಿಕೋದ್ಯಮವನ್ನು ಕುಂಠಿತಗೊಳಿಸಲು ಅಥವಾ ವಿಮರ್ಶಕರನ್ನು ಬೆದರಿಸಲು ಆಯುಧವಾಗಿಸಲು ಸಾಧ್ಯವಿಲ್ಲ. ನ್ಯಾಯಾಂಗವು ಕಾರ್ಪೊರೇಟ್ ಶಕ್ತಿಗಳ ರಕ್ಷಣೆ ಸ್ಥಳವಾಗಿಬಿಟ್ಟರೆ ಮತ್ತು ವಿರೋಧ ಧ್ವನಿಗಳನ್ನು ಅಪರಾಧೀಕರಿಸಿದರೆ, ಅದು ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತದೆ” ಎಂದು ಹೇಳಿದೆ.

“ಆದ್ದರಿಂದ ರವಿ ನಾಯರ್ ಅವರ ಮೇಲಿನ ದೋಷಾರೋಪಣೆಯನ್ನು ಪ್ರತ್ಯೇಕ ಕಾನೂನು ತೀರ್ಪಾಗಿ ನೋಡದೆ, ದೊಡ್ಡ ಮಟ್ಟದ ಹಿಂಸಾಚಾರದ ವ್ಯವಸ್ಥೆಯ ಒಂದು ಭಾಗವೆಂದು ಅರ್ಥಮಾಡಿಕೊಳ್ಳಬೇಕು. ಇದು ಪತ್ರಕರ್ತರ ಮೇಲೆ ಹಿಂಸೆ, ಮಾನವ ಹಕ್ಕು ರಕ್ಷಕರನ್ನು ಯುಎಪಿಎ ಅಡಿಯಲ್ಲಿ ಬಂಧಿಸುವುದು, ಆದಿವಾಸಿ ಪ್ರತಿರೋಧ ಚಳವಳಿಗಳನ್ನು ಕುಂಠಿತಗೊಳಿಸುವುದು ಹಾಗೂ ಬುದ್ಧಿಜೀವಿಗಳು ಮತ್ತು ಲೇಖಕರನ್ನು ಮೌನಗೊಳಿಸುವುದನ್ನು ಸಹಜಗೊಳಿಸುತ್ತದೆ. ಹಿಂಸಾಚಾರವು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಸಮಾಜದ ಬೇರೆ ಬೇರೆ ವರ್ಗಗಳನ್ನು ಗುರಿಯಾಗಿಸುತ್ತದೆ,
ಆದರೆ ಅದರ ಮೂಲ ಉದ್ದೇಶ ಒಂದೇ: ಕಾರ್ಪೊರೇಟ್-ಪ್ರಭುತ್ವ ಮೈತ್ರಿಗೆ ಸಾರ್ವಜನಿಕ ಪರಿಶೀಲನೆಯಿಂದ ರಕ್ಷಣೆ ಒದಗಿಸುವುದು” ತಿಳಿಸಿದೆ.

CASRನ ಬೇಡಿಕೆಗಳು:

ರವಿ ನಾಯರ್ ಅವರ ಮೇಲಿನ ದೋಷಾರೋಪಣೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು.

ಪತ್ರಕರ್ತರು ಮತ್ತು ಕಾರ್ಯಕರ್ತರನ್ನು ಮೌನಗೊಳಿಸಲು ಅಪರಾಧಾತ್ಮಕ ಮಾನಹಾನಿ ಮತ್ತು ಕಠಿಣ ಕಾನೂನುಗಳ ದುರುಪಯೋಗ ನಿಲ್ಲಬೇಕು.

ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು.

ಕಾರ್ಪೊರೇಟ್-ಪ್ರಭುತ್ವ ಮೈತ್ರಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇರಬೇಕು.

“ಹೆಚ್ಚುತ್ತಿರುವ ಪ್ರಭುತ್ವವಾದಿ ಪ್ರವೃತ್ತಿಗೆ ವಿರುದ್ಧವಾಗಿ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು, ನಾಗರಿಕ ಸಮಾಜ ಸಂಘಟನೆಗಳು, ಪತ್ರಕರ್ತರ ಸಂಘಗಳು, ವಿದ್ಯಾರ್ಥಿ ಗುಂಪುಗಳು, ಕಾರ್ಮಿಕ ಸಂಘಟನೆಗಳು ಹಾಗೂ ಎಲ್ಲಾ ಜವಾಬ್ದಾರಿಯುತ ನಾಗರಿಕರು ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದೆ. “ಇಂದು ಒಬ್ಬ ಪತ್ರಕರ್ತನ ರಕ್ಷಣೆಯೇ ನಾಳೆ ಎಲ್ಲರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯಾಗಿದೆ. ಪ್ರತಿರೋಧದ ಧ್ವನಿಯನ್ನು ಮೌನಗೊಳಿಸುವುದರಿಂದ ಸತ್ಯ ಅಳಿದುಹೋಗುವುದಿಲ್ಲ. ಸತ್ಯ ಬಹಿರಂಗಪಡಿಸುವುದನ್ನು ಅಪರಾಧೀಕರಿಸುವುದರಿಂದ ಅನ್ಯಾಯವನ್ನು ರಕ್ಷಿಸಲು ಸಾಧ್ಯವಿಲ್ಲ. ನಾವು ರವಿ ನಾಯರ್ ಹಾಗೂ ಪ್ರಭುತ್ವ ಹಿಂಸಾಚಾರ ಮತ್ತು ಕಾರ್ಪೊರೇಟ್ ಪ್ರಭುತ್ವಕ್ಕೆ ವಿರುದ್ಧವಾಗಿ ಹೋರಾಡುವ ಎಲ್ಲರೊಂದಿಗೆ ಐಕ್ಯತೆಯಲ್ಲಿ ನಿಲ್ಲುತ್ತೇವೆ” ಎಂದು ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...