ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಯಾದ ಕೆ ಕವಿತಾ ಹೇಳಿದ್ದೇನು?

Date:

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಅರವಿಂದ್ ಕೇಜ್ರಿವಾಲ್ ಅವರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ, ಅದೇ ಪ್ರಕರಣದಲ್ಲಿ ಖುಲಾಸೆಗೊಂಡ ಮತ್ತಿಬ್ಬರು ನಾಯಕರಿದ್ದಾರೆ. ಅವರಲ್ಲಿ, ಒಬ್ಬರು ಕೇಜ್ರಿವಾಲ್ ಅವರ ಬಲಗೈ ಬಂಟ ಮನೀಶ್‌ ಸಿಸೋಡಿಯಾ. ಮತ್ತೊಬ್ಬರು, ಮಾಜಿ ಬಿಆರ್‌ಎಸ್‌ ನಾಯಕಿ, ತೆಲಂಗಾಣ ಜಾಗೃತಿ ಸಂಘಟನೆಯ ಮುಖ್ಯಸ್ಥೆ ಕೆ ಕವಿತಾ.

ಕವಿತಾ ಅವರನ್ನು ಇದೇ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 2024ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಇದೀಗ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರಂತೆ, ಕವಿತಾ ಕೂಡ ಎಲ್ಲ ಆರೋಪಗಳಿಂದ ಮುಕ್ತಗೊಂಡಿದ್ದಾರೆ.

ತಮ್ಮ ಬಂಧನ, ಜೈಲುವಾಸ ಮತ್ತು ಖುಲಾಸೆಯ ಕುರಿತು ಕವಿತಾ ಮಾತಮಾಡಿದ್ದಾರೆ. “…ನನ್ನನ್ನು ಜೈಲಿಗೆ ಕರೆದೊಯ್ಯುವ ದಿನ ನನ್ನ ಕಿರಿಯ ಮಗ ತನ್ನ ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಿದ್ದನು. ಇಂದಿನ ಮಕ್ಕಳು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿರುತ್ತಾರೆ. ನನ್ನ ವಿರುದ್ಧದ ದ್ವೇಷದ ವಿಷ ಹೊರಹಾಕುವುದನ್ನು ನನ್ನ ಮಗ ನೋಡಿರಬಹುದೆಂದು ನಾನು ಚಿಂತಿತಳಾಗಿದ್ದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನನ್ನ ಬಂಧನದ ಸಂದರ್ಭದಲ್ಲಿ ನನ್ನ ಹಿರಿಯ ಮಗ ವಿದೇಶದಲ್ಲಿ ಓದುತ್ತಿದ್ದ. ಕಿರಿಯ ಮಗ ಇಲ್ಲೇ ಇದ್ದ… ನನ್ನನ್ನು ಜೈಲಿಗೆ ಕರೆದೊಯ್ಯುವಾಗ… ಆತ ಮನೆಯಲ್ಲೇ ಇದ್ದ. ನನ್ನ ಬಂಧನ ನಂತರದ ಆ ಮೊದಲ 15 ದಿನಗಳಲ್ಲಿ ನಾನು ಅನುಭವಿಸಿದ ನೋವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

“ಅದು ನನ್ನ ಜೀವನದಲ್ಲಿ ತುಂಬಾ ಕೆಟ್ಟ ಹಂತವಾಗಿತ್ತು. ನನ್ನ ಕುಟುಂಬದ ಮೇಲೂ ಪರಿಣಾಮ ಬೀರಿತು. ಅದೇ ನೋವು ಈಗ ನನ್ನನ್ನು ಬಲಪಡಿಸಿದೆ. ನನ್ನ ಮಕ್ಕಳನ್ನು ಬಲಪಡಿಸಿದೆ ಎಂದು ನಾನು ಹೇಳಬಲ್ಲೆ. ಆದರೆ, ಯಾವ ತಪ್ಪೂ ಇಲ್ಲದೆ ಆ ನೋವನ್ನು ನಾನು ಏಕೆ ಅನುಭವಿಸಿದೆ. ಕಾರಣವೊಂದೇ, ನಾವು ಬಿಜೆಪಿ ವಿರುದ್ಧವಿದ್ದೇವೆ ಎಂಬುದಷ್ಟೇ” ಎಂದು ಹೇಳಿದ್ದಾರೆ.

“ಆದರೆ, ಸತ್ಯವು ಒಂದು ದಿನ ಗೆಲ್ಲುತ್ತದೆಂದು ನನಗೆ ವಿಶ್ವಾಸವಿತ್ತು. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದೆ. ಇಂದು ನ್ಯಾಯಾಂಗವು ನಮ್ಮ ವಿರುದ್ಧದ ಸುಳ್ಳಿನ ಜಾಲವನ್ನು ಗಮನಿಸಿದೆಯೆಂದು ನನಗೆ ಸಂತೋಷವಾಗಿದೆ. ಇಂದು ಒಂದು ರಾಷ್ಟ್ರವಾಗಿ ನಮಗೆಲ್ಲರಿಗೂ ಬಹಳ ದೊಡ್ಡ ಗೆಲುವು” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ

47 ವರ್ಷದ ಕವಿತಾ ಅವರು ತೆಲಂಗಾಣದ ರಾಜಕೀಯ ರಾಜಮನೆತನದವರು; ಅವರ ತಂದೆ ಕೆ ಚಂದ್ರಶೇಖರ್ ರಾವ್ ಅವರು ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿದ್ದರು. ಭಾರತೀಯ ರಾಷ್ಟ್ರ ಸಮಿತಿಯ (ಬಿಆರ್‌ಎಸ್‌) ಮುಖ್ಯಸ್ಥರು. ಅವರ ಸಹೋದರ ಕೆ ಟಿ ರಾಮರಾವ್ ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಆದರೆ, ಕವಿತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಿಂದಾಗಿ ಬಿಆರ್‌ಎಸ್‌ನಿಂದ ಅಮಾನತು ಮಾಡಲಾಯಿತು.

ತಮ್ಮ ವಿಚಾರದಲ್ಲಿ ಪಕ್ಷವು ನಡೆದುಕೊಂಡಿದ್ದರ ಕುರಿತೂ ಮಾತನಾಡಿರುವ ಕವಿತಾ, “ನಾನು ನನ್ನ ಬೆಂಬಲಕ್ಕಾಗಿ ಪಕ್ಷವನ್ನು ವಿನಂತಿಸಿದೆ. ನನ್ನ ಪರವಾಗಿ ಮಾತನಾಡಬೇಕು, ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಬೇಕೆಂದು ಕೇಳಿಕೊಂಡೆ. ಆದರೆ ಅದು ಎಂದಿಗೂ ನಡೆಯಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾವು ಒಂದೇ ಕುಟುಂಬವಾಗಿದ್ದರೂ, ರಾಜಕೀಯವಾಗಿ ಬೇರ್ಪಟ್ಟಿದ್ದೇವೆ. ನನಗೆ ಬಿಆರ್‌ಎಸ್‌ನೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ನನ್ನನ್ನು ಅಮಾನತುಗೊಳಿಸಿದರು. ನನ್ನನ್ನು ಹೊರಹಾಕಿದರು. ಆದರೆ, ಆಗ ಮತ್ತು ಈಗ ನನ್ನ ಏಕೈಕ ಶಕ್ತಿ ಸತ್ಯ ಮಾತ್ರ. ಈಗ, ನಾನು ನನ್ನ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...