ಜೈಲಿನಲ್ಲಿ ಕೇಜ್ರಿವಾಲ್ ಹೆಣೆದ ತಂತ್ರಕ್ಕೆ ಮೋದಿ ಪಡೆ ತತ್ತರ!

Date:

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 50 ದಿನಗಳ ಬಳಿಕ ಹೊರಬಂದಿದ್ದಾರೆ. ಬರಬರುತ್ತಲೇ, ಬಿಜೆಪಿ ವಿರುದ್ಧ ನಾನಾ ರೀತಿಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಈವರೆಗೆ, ತಾನು ರಾಜಕೀಯ ‘ಗ್ರೌಂಡ್‌ ಸೆಟ್‌’ ಮಾಡಿ, ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಬಿಜೆಪಿಗೇ ಈಗ ಇಕ್ಕಟ್ಟು ಎದುರಾಗುತ್ತಿದೆ. ಅದನ್ನು ನಿಭಾಯಿಸಲಾಗದ ಪೇಜಿಗೆ ಸಿಲುಕಿರುವ ಬಿಜೆಪಿ ನಾಯಕರು ತತ್ತರಿಸುತ್ತಿದ್ದಾರೆ.

ಅಂದಹಾಗೆ, 2002ರಲ್ಲಿ ಜೊತೆಯಾಗಿಯೇ ಇರುವ ಮೋದಿ-ಶಾ ಜೋಡಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಹಿಡಿದರು. ಅಧಿಕಾರಕ್ಕೆ ಬಂದ ಕೂಡಲೇ, ಬಿಜೆಪಿಯಲ್ಲಿ ಜನಪ್ರತಿನಿಧಿಗಳ ನಿವೃತ್ತಿ ವಯಸ್ಸನ್ನು 75 ವರ್ಷವೆಂದು ನಿಗದಿ ಮಾಡಿದ್ದಾರೆ. ಇದೇ 75 ವರ್ಷದ ನಿವೃತ್ತಿ ರೇಖೆಯನ್ನು ಉಲ್ಲೇಖಿಸಿ ಹಲವಾರು ರಾಜಕೀಯ ನಾಯಕರ ಜೀವನಕ್ಕೆ ಮೋದಿ ಮತ್ತು ಅಮಿತ್ ಶಾ ತಿಲಾಂಜಲಿ ಹಾಡಿದ್ದಾರೆ.

ಇದೀಗ, ಇದೇ ನಿವೃತ್ತಿ ವಯಸ್ಸಿನ ಬಗ್ಗೆ ಮಾತನಾಡಿರುವ ಕೇಜ್ರಿವಾಲ್, ಮೋದಿ ಅವರನ್ನು ಕಟ್ಟಿಹಾಕಿದ್ದಾರೆ. “ಮೋದಿಗೆ 75 ವರ್ಷ ಆಗ್ತಿದೆ. ಅವರದ್ದೇ ನಿಯಮದ ಪ್ರಕಾರ, 75 ವ‍ರ್ಷ ವಯಸ್ಸಾದವರಿಗೆ ಯಾವುದೇ ಹುದ್ದೆ ಇಲ್ಲ. ಅದರಂತೆ, ಈಗ ಮತ್ತೆ ಬಿಜೆಪಿ ಗೆದ್ದರೆ, ಮುಂದಿನ ಪ್ರಧಾನಿ ಯಾರು” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಜ್ರಿವಾಲ್ ಪ್ರಶ್ನೆ ಪ್ರಸ್ತುತ ರಾಜಕೀಯದ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ. 2020ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌ ಯಡಿಯೂರಪ್ಪ ಅವರನ್ನೂ ಇದೇ 75 ವರ್ಷದ ಕಾರಣವೊಡ್ಡಿ ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಿಸಿದರು. ಅಂತೆಯೇ, ಇತ್ತೀಚೆಗೆ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್ ಅವರನ್ನು ಕಿತ್ತೊಗೆದರು. ಬಿಜೆಪಿಗೆ ಹಿಂದುತ್ವ ಮೈಲೇಜ್‌ ತಂದುಕೊಟ್ಟು, ಬಿಜೆಪಿಯಲ್ಲಿ ಅಧಿಕಾರದವರೆಗೆ ಕೊಂಡೊಯ್ದ ಅಡ್ವಾಣಿ ಅವರನ್ನೂ ಇದೇ 75ರ ಕಾರಣವೊಡ್ಡಿ ಮೂಲೆಗುಂಪು ಮಾಡಿದ್ದಾರೆ. ಅಡ್ವಾಣಿ ಜೊತೆಗೆ, ಮುರಳಿ ಮನೋಹರ್ ಜೋಶಿ, ಯಶವಂತ ಸಿನ್ಹಾ, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ರಮಣ್ ಸಿಂಗ್ ಅವರು ರಾಜಕೀಯ ಹಾದಿಯನ್ನೂ ಅಂತ್ಯಗೊಳಿಸಿದ್ದಾರೆ.

ಇದೀಗ, ಮೋದಿ ಅವರೇ ನಿಗದಿ ಮಾಡಿದ ರಾಜಕೀಯ ನಿವೃತ್ತಿ ವಯಸ್ಸು, ಈಗ ಮೋದಿ ಬುಡಕ್ಕೇ ಬಂದಿದೆ. ಹೀಗಾಗಿ, ಕೇಜ್ರಿವಾಲ್ ಎತ್ತಿದ ಈ ಪ್ರಶ್ನೆಗೆ ಬಿಜೆಪಿಯ ಬುಡ ಅಲುಗಾಡುತ್ತಿದೆ.

ಅದಾಗ್ಯೂ, ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, “75 ವರ್ಷ ದಾಟಿದರೂ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಬಿಜೆಪಿಯ ಸಂವಿಧಾನದಲ್ಲಿ 75 ವರ್ಷದ ನಂತರ ರಾಜಕೀಯ ನಿವೃತ್ತಿಯಾಗುವಂತಹ ಯಾವುದನ್ನೂ ಉಲ್ಲೇಖಿಸಿಯೇ ಇಲ್ಲ” ಎಂದು ಹೇಳಿದ್ದಾರೆ.

ಆದರೆ, ಇದೇ ಕಟ್ಟುಪಾಡು ಆಧಾರಿಸಿ ಮೋದಿ ಮತ್ತು ಅಮಿತ್ ಶಾ ಅಧಿಕಾರದಲ್ಲಿದ್ದ ಪ್ರಬಲ ನಾಯರನ್ನೇ ಕಿತ್ತೊಗೆದಿದ್ದಾರೆ. ಅಂದಮೇಲೆ, ಈ ನಿಯಮ ಮೋದಿಗೂ ಅನ್ವಯ ಆಗಲೇಬೇಕಲ್ಲವೇ? 73 ವರ್ಷ ವಯಸ್ಸನ್ನು ಪೂರೈಸಿರುವ ಮೋದಿ 75ರ ಗಡುವಿಗೆ ಸಮೀಪದಲ್ಲಿದ್ದಾರೆ. ಅವರಿಗೆ ನಿವೃತ್ತಿ ಕೊಡುವುದು ಬಿಜೆಪಿ ರಾಜಕೀಯ ಧರ್ಮ. ತಾವೇ ಜಾರಿಗೆ ತಂದ ಕಟ್ಟುಪಾಡನ್ನು ತಾವೂ ಪಾಲಿಸುವುದು ಮೋದಿ ನೈತಿಕ ಧರ್ಮ. ಆದರೆ, ಅಧಿಕಾರಕ್ಕಾಗಿ ಮೋದಿ – ಮೋದಿಗಾಗಿ ಬಿಜೆಪಿ ಈ ಕಟ್ಟುಪಾಡನ್ನು ಮೀರುವುದು ಸರಿಯಲ್ಲ. ಈ ನೈತಿಕತೆಯ ವಿಚಾರ ಕೇಜ್ರಿವಾಲ್ ಪ್ರಶ್ನೆಯ ಬಳಿಕ ಮುನ್ನೆಲೆಗೆ ಬಂದಿದೆ.

ವಯಸ್ಸಿನ ಕಾರಣದಿಂದಲೇ ಬಿಜೆಪಿ ಘಟಾನುಘಟಿ ನಾಯಕರನ್ನು ಮೂಲೆಗೊತ್ತಿದ ಮೋದಿ-ಶಾಗೆ ಇದೇ ವಯಸ್ಸು ತೂಗುಗತ್ತಿಯಂತೆ ಕಾಣಿಸುತ್ತಿದೆ. ಯಾವ ರೀತಿಯ ಉತ್ತರಿಸಬೇಕು. ಏನು ಉತ್ತರಿಸಬೇಕು. ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬ ತಂತ್ರ ಎಣೆಯಲಾಗದೆ ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಪತರುಗುಟ್ಟುತ್ತಿದ್ದಾರೆ.

ಇನ್ನು, ಬಿಜೆಪಿ ಗೆದ್ದರೆ, ಮುಂದಿನ ಪ್ರಧಾನಿ ಯಾರು ಎಂಬ ಗಂಭೀರ ಪ್ರಶ್ನೆಯ ಜೊತೆಗೆ ಯೋಗಿಯ ರಾಜಕೀಯ ಭವಿಷ್ಯದ ಬಗ್ಗೆಯೂ ಕೇಜ್ರಿವಾಲ್ ಮಾತನಾಡಿದ್ದಾರೆ. ಮೋದಿ-ಶಾ ಕೇವಲ ಎದುರಾಳಿ ಪಕ್ಷಗಳ ನಾಯಕರ ರಾಜಕೀಯವನ್ನು ಮಾತ್ರ ಮುಗಿಸುವುದಿಲ್ಲ. ತಮ್ಮದೇ ಪಕ್ಷದವರ ರಾಜಕೀಯವನ್ನೂ ಮುಗಿಸುತ್ತಾರೆ. ಹೀಗಾಗಲೇ, ಖಟ್ಟರ್, ಅಡ್ವಾಳಿ, ಜೋಶಿ, ರಾಜೆ ಅವರ ರಾಜಕೀಯವನ್ನು ಅವರು ಮುಗಿಸಿದ್ದಾರೆ ಎಂದು ಹೇಳಿದ್ದು, “ಮೋದಿ ಮತ್ತೆ ಗೆದ್ದರೆ 2 ತಿಂಗಳಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನವನ್ನು ಕೊನೆಗಾಣಿಸುತ್ತಾರೆ” ಎಂದೂ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ಸದ್ಯ, ಬಿಜೆಪಿಯಲ್ಲಿ ಮೋದಿ ನಂತರ ಹೆಚ್ಚು ಪ್ರಭಾವಿ ಅಥವಾ ಮುನ್ನೆಲೆಯಲ್ಲಿರುವುದು ಯೋಗಿ ಆದಿತ್ಯಾನಾಥ್. ಆದರೆ, ಯೋಗಿಯ ಬೆಳವಣಿಗೆ ಮೋದಿಗಾಗಲೀ, ಅಮಿತ್ ಶಾಗಾಗಲೀ ಇಷ್ಟವಿಲ್ಲ ಎಂಬುದು ಕಳೆದ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲೇ ಖಚಿತವಾಗಿತ್ತು. ಉತ್ತರ ಪ್ರದೇಶದಲ್ಲಿ ಗೆದ್ದ ಬಿಜೆಪಿ ಯೋಗಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಅದೃಷ್ಟವಶಾತ್ ಯೋಗಿಗೆ 2ನೇ ಬಾರಿಗೂ ಮುಖ್ಯಮಂತ್ರಿ ಹುದ್ದೆ ಒಲಿಯಿತು.

ಆದರೆ, ಯೋಗಿಯನ್ನು ಪ್ರಧಾನಿ ಮಾಡುವ ಇಚ್ಚೆ ಮೋದಿ-ಶಾಗೆ ಇಲ್ಲ. ಮೋದಿ ನಂತರ ಅಮಿತ್ ಶಾ ಪ್ರಧಾನಿಯಾಗಬೇಕೆಂಬುದು ಮೋದಿ ಮತ್ತು ಅವರ ಪಾಳಯದ ಇಚ್ಛೆ. ಅಮಿತ್ ಶಾ ಪ್ರಧಾನಿ ಆಗಬೇಕೆಂದರೆ, ಯೋಗಿಯನ್ನು ಹಿಂದೆ ತಳ್ಳಲೇಬೇಕಾದ ಅಗತ್ಯವಿದೆ. ಹೀಗಾಗಿ, ಯೋಗಿಯ ರಾಜಕೀಯ ಜೀವನವನ್ನು ಮುಗಿಸಲು ಈ ಇಬ್ಬರೂ ಹವಣಿಸುತ್ತಿದ್ದಾರೆ. ಇದೇ ಚರ್ಚೆಯನ್ನೇ ಕೇಜ್ರಿವಾಲ್ ಮುನ್ನೆಲೆಗೆ ತಂದಿದ್ದಾರೆ.

ಈ ವರದಿ ಓದಿದ್ದೀರಾ?: ಪ್ರಜ್ವಲ್ ಲೈಂಗಿಕ ಹಗರಣ | ಹಾಸನ ರಿಪಬ್ಲಿಕ್ ಮತ್ತು ರಾಜಕೀಯ ವಿಕೃತಿ

ಮೋದಿ ನಂತರ ಅಮಿತ್ ಶಾ ಪ್ರಧಾನಿ ಅಥವಾ ಪ್ರಧಾನಿ ಅಭ್ಯರ್ಥಿಯೆಂದು ಹೇಳಿಕೊಳ್ಳಲು, ಬಹಿರಂಗ ಪಡಿಸಲು ಬಿಜೆಪಿಗೆ ಆಗುತ್ತಿಲ್ಲ. ಅಮಿತ್‌ ಶಾಗೂ ಕೂಡ ಮೋದಿ ನಂತರ ತಾನೇ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೇಜ್ರಿವಾಲ್ ಪ್ರಶ್ನೆಗೆ ಉತ್ತರಿಸಲಾಗದ ಬಿಜೆಪಿ, ಶಸ್ತ್ರತ್ಯಾಗ ಮಾಡಿ, ಶರಾಣದಂತೆ ಕಾಣಿಸುತ್ತಿದೆ. ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದೆ. ಈವರೆಗೆ, ಎದುರಾಳಿ ಪಕ್ಷಗಳು ಮತ್ತು ನಾಯಕರನ್ನು ಇಟ್ಟಕ್ಕಿಗೆ ಸಿಲುಕಿಸುತ್ತಿದ್ದ ಮೋದಿ-ಶಾರನ್ನೇ ಈಗ ಕೇಜ್ರಿವಾಲ್ ಪೇಜಿಗೆ ಸಿಲುಕಿಸಿದ್ದಾರೆ. ಇದು, ಕೇಜ್ರಿವಾಲ್ ಅವರನ್ನು ಬಂಧಿಸಿ, ಜೈಲಿನಲ್ಲಿಟ್ಟು ಅವರಿಗೆ ಯೋಚಿಸಲು ಸಮಯಕೊಟ್ಟು, ‘ತಮ್ಮ ತಲೆ ಮೇಲೆ ತಾವೇ ಕಲ್ಲು ಎಳೆದುಕೊಂಡೆವೇ’ ಎಂಬ ಸಂದಿಗ್ಧ ಪರಿಸ್ಥಿತಿಗೆ ಮೋದಿ-ಶಾರನ್ನು ದೂಡಿದೆ.

ಬಿಜೆಪಿ ಪ್ರವರ್ಧಮಾನಕ್ಕೆ ಬಂದ ದಿನಗಳಿಂದಲೂ ಭಾರತೀಯ ರಾಜಕೀಯದಲ್ಲಿ ಯಾವ ವಿಚಾರ ಚರ್ಚೆಯಾಗಬೇಕು ಎಂಬುದನ್ನು ಬಿಜೆಪಿ ಮತ್ತು ಅದರ ಪೋಷಕ ಆರ್‌ಎಸ್‌ಎಸ್‌ ನಿರ್ಧರಿಸುತ್ತವೆ. ರಾಜಕೀಯ ‘ಗ್ರೌಂಡ್‌ ಸೆಟ್’ ಮಾಡುತ್ತವೆ. 2014ರಲ್ಲಿ ಗುಜರಾತ್ ಮಾಡೆಲ್, ಭ್ರಷ್ಟಾಚಾರದ ಬಗ್ಗೆ ಇಡೀ ದೇಶ ಮಾತನಾಡುವಂತೆ ಹಾಗು ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಕರೆಯುವಂತೆ ಗ್ರೌಂಡ್‌ ಸೆಟ್ ಮಾಡಲಾಗಿತ್ತು. 2019ರ ವೇಳೆಗೆ, ನೋಟ್‌ ಬ್ಯಾನ್, ಜಿಎಸ್‌ಟಿಯಂತಹ ಜನವಿರೋಧಿ ಧೋರಣೆಯ ಬಗ್ಗೆಯೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುವಂತೆ ಬಿಜೆಪಿ-ಆರ್‌ಎಸ್‌ಎಸ್‌ ಮಾಡಿದ್ದವು. ಅಲ್ಲದೆ, ಚುನಾವಣೆ ವೇಳೆಗೆ, ಪುಲ್ವಾಮ ದಾಳಿಯ ಸಂದರ್ಭವನ್ನೂ ತಮ್ಮ ಗೆಲುವಿಗಾಗಿ ಬೇಕಾದ ರೀತಿಯಲ್ಲಿ ನರೇಟಿವ್ ಕಟ್ಟಲಾಗಿತ್ತು. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಒಗ್ಗಟ್ಟನ್ನೇ ಒಡೆಯುವ ತಂತ್ರವನ್ನು ಬಿಜೆಪಿ ರೂಪಿಸಿತು.

ಅಷ್ಟೇ ಯಾಕೆ, ಪ್ರಸ್ತುತ ಚುನಾವಣೆಯಲ್ಲಿಯೇ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ವಿರುದ್ಧ ಹಿಂದು ವಿರೋಧಿ ನರೇಟಿವ್‌ಅನ್ನು ಹೆಗ್ಗಿಲ್ಲದೆ ಸೃಷ್ಟಿಸಿ, ತನಗೆ ಬೇಕಾದಂತೆ ಬಿಜೆಪಿ ‘ಗ್ರೌಂಡ್ ಸೆಟ್‌’ ಮಾಡಲು ಯತ್ನಿಸಿತ್ತು. ಹಿಂದು ಮಾಂಗಲ್ಯ, ಸಂಪತ್ತಿನ ಹಂಚಿಕೆ, ಮೀಸಲಾತಿ ಹಂಚಿಕೆಯಲ್ಲಿ ಕಾಂಗ್ರೆಸ್‌ ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಮೋದಿ ಸೇರಿದಂತೆ ಹಲವರು ಮತ್ತೆ ಮತ್ತೆ ಹೇಳಿದ್ದರು. ಆ ಮೂಲಕ, ಇದೇ ವಿಚಾರಗಳ ಬಗ್ಗೆ ಎಲ್ಲ ಪಕ್ಷಗಳು ಮಾತನಾಡುವಂತೆ – ಪ್ರತಿಕ್ರಿಯಿಸುವಂತೆ ಮಾಡಿದ್ದವು. ತಮ್ಮ ಪ್ರಣಾಳಿಕೆಯಲ್ಲಿ ಇಂತಹ ವಿಚಾರಗಳನ್ನೇ ಪ್ರಸ್ತಾಪಿಸದಿದ್ದ ಕಾಂಗ್ರೆಸ್‌, ಆದರೂ, ಬಿಜೆಪಿ ದಾಳಿಯನ್ನು ಹೊಡೆದುರುಳಿಸುವಲ್ಲಿ ಹರಸಾಹಸ ಪಡುತ್ತಿತ್ತು.

ಇಂತಹ ಸಂದರ್ಭದಲ್ಲಿ, ಬಿಜೆಪಿಯ ನರೇಟಿವ್ಅನ್ನು ಬುಡಮೇಲು ಮಾಡಿ, ಹೊಸ ನರೇಟಿವ್ ಹುಟ್ಟು ಹಾಕಿದ್ದು ಕೇಜ್ರಿವಾಲ್. ಕೇಜ್ರಿವಾಲ್ ಸೆಟ್‌ ಮಾಡಿದ ರಾಜಕೀಯದ ಬೆಸ್‌ಮೆಟ್‌ ಈಗ ಬಿಜೆಪಿಗೆ, ಮತ್ತೊಬ್ಬರು ರಚಿಸಿದ ಗ್ರೌಂಡ್‌ನಲ್ಲಿ ಆಟ ಆಡಬೇಕಾ, ಪ್ರತಿಕ್ರಿಯಿಸಬೇಕಾದ, ಉತ್ತರಿಸಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈವರೆಗೆ ಇನ್ನೊಬ್ಬರು ಉತ್ತರಿಸುವಂತೆ, ಪ್ರತಿಕ್ರಿಯಿಸುವಂತೆ, ಸಮರ್ಥಿಸಿಕೊಳ್ಳುವಂತೆ ಮಾಡುತ್ತಿದ್ದ ಬಿಜೆಪಿಗೆ ತಾನೇ ಉತ್ತರಿಸಬೇಕಾದ್ದು ಕಷ್ಟವಾಗುತ್ತಿದೆ.

ಕೇಜ್ರಿವಾಲ್ ವಿಚಾರದಲ್ಲಿ ದುಡುಕು ಹೆಜ್ಜೆ ಇಟ್ಟೆವೇ ಎಂಬ ಪ್ರಶ್ನೆಯನ್ನು ಬಿಜೆಪಿಗರಲ್ಲಿ ಹುಟ್ಟಿಸಿದೆ. 50 ದಿನಗಳ ಕಾಲ ಜೈಲಿನಲ್ಲಿದ್ದ ಕೇಜ್ರಿವಾಲ್, ದೇಶದ ರಾಜಕೀಯದಲ್ಲಿ ಯಾವೆಲ್ಲ ನರೇಟಿವ್‌ಗಳನ್ನು ಕಟ್ಟಬಹುದು. ಯಾವ ರೀತಿಯ ಬಿಜೆಪಿಯನ್ನು ಕಟ್ಟಿ ಹಾಕಬಹುದು. ಹೇಗೆ ಬಿಜೆಪಿಗರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬುದರ ಬಗ್ಗೆ ಭಾರೀ ಯೋಜಿಸಿ, ಸಿದ್ದರಾಗಿ ಹೊರಬಂದಿದ್ದಾರೆ.

ಬರಬರುತ್ತಲೇ ಒಂದೊಂದೇ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಅದೂ, ಮೋದಿ ಬುಡಕ್ಕೆ ಗುರಿಯಿಟ್ಟು ಹೊಡೆಯುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರೂ ಸೇರಿದಂತೆ ದೇಶದ ಜನರನ್ನು ಹೊಸ ಚಿಂತನೆಗೆ ದೂಡುತ್ತಿದ್ದಾರೆ.

ಕೇಜ್ರಿವಾಲ್‌ರನ್ನು ಜೈಲಿಗೆ ಹಾಕಿದರೆ, ನಾವು ಯಾರನ್ನೂ ಬಿಡುವುದಿಲ್ಲ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಸಂದೇಶ ದೇಶದೆಲ್ಲೆಡೆ ಹರಡುತ್ತದೆ ಎಂಬುದು ಬಿಜೆಪಿಗರು ಉದ್ದೇಶವಾಗಿತ್ತು. ಆದರೆ, ಕೇಜ್ರಿವಾಲ್ ಬಂಧನವು ದೆಹಲಿಯೂ ಸೇರಿದಂತೆ ದೇಶಾದ್ಯಂತ ಬಿಜೆಪಿಗೆ ತಿರುಗು ಬಾಣವಾಗಿದೆ. ಈ ನಡುವೆ, ಹೊರಬಂದಿರುವ ಕೇಜ್ರಿವಾಲ್ ಅವರ ದಾಳಿ ಬಿಜೆಪಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಜ್ರಿವಾಲ್‌ರನ್ನು ಬಂಧಿಸಿ, ಅವರಿಗೆ ಯೋಜಿಸಲು ಸಮಯಕೊಟ್ಟು ‘ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡ’ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ.

ಲೋಕಸಭಾ ಚುನಾವಣೆಯ ಆಟ ಇನ್ನೂ 20 ದಿನಗಳಿವೆ. ಈ 20 ದಿನಗಳಲ್ಲಿ ಕೇಜ್ರಿವಾಲ್ ಬಿಜೆಪಿಗೆ ಹೇಗೆಲ್ಲಾ ನುಂಗಲಾದರ ತುತ್ತಾಗಿ, ಅರಗಿಸಿಕೊಳ್ಳಲಾಗದ ಆಹಾರವಾಗಿ ಎದುರಾಗುತ್ತಾರೆ. ಕಾದು ನೋಡೋಣ..

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...