ಕೇರಳ ಚುನಾವಣೆ | ಎಲ್‌ಡಿಎಫ್, ಯುಡಿಎಫ್‌ ಜತೆ ಸ್ಪರ್ಧೆಗೆ ಬಿಜೆಪಿಯೂ ಸಜ್ಜಾಗುತ್ತಿದೆ: ಯಾರ ತಂತ್ರ ಫಲಿಸುತ್ತೆ?

Date:

2026ರ ಚುನಾವಣೆ ಸಮೀಪಿಸುತ್ತಿರುವುದರಿಂದ, ಅನುಭವಿ ಶಾಸಕರನ್ನು ಉಳಿಸಿಕೊಳ್ಳುವುದು ನಿರ್ಣಾಯಕ ಎಂದು ಸಿಪಿಐಎಂನ ಕೆಲವು ನಾಯಕರು ವಾದಿಸಿದ್ದಾರೆ. ಪ್ರಮುಖ ನಾಯಕರನ್ನು ಲೋಕಸಭೆ ಚುನಾವಣೆಗೆ ಮಾತ್ರ ಕಣಕ್ಕಿಳಿಸುವ ಈ ಹಿಂದಿನ ಕಾರ್ಯತಂತ್ರವನ್ನು ಬದಲಾಯಿಸಲು ಕಾಂಗ್ರೆಸ್ ಮುಂದಾಗಿದೆ. ಇವೆಲ್ಲವುದರ ನಡುವೆ ಬಿಜೆಪಿ ಮಾತ್ರ ಕೋಮು ಆಧಾರದಲ್ಲಿ ಮತ ಗಳಿಸುವ ಸಿದ್ಧತೆಯಲ್ಲಿದೆ.

ಸತತ ಎರಡು ಬಾರಿ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ತೆಕ್ಕೆಗೆ ಸೇರಿದ ಕೇರಳದಲ್ಲಿ ಇದೇ ವರ್ಷ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್‌ನಿಂದ ಏಪ್ರಿಲ್ ನಡುವೆ ನಡೆಯಲಿರುವ ಚುನಾವಣೆಗಾಗಿ ಈ ಬಾರಿ ಎಲ್‌ಡಿಎಫ್, ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮಾತ್ರವಲ್ಲದೆ ಬಿಜೆಪಿಯು ಕಾರ್ಯತಂತ್ರ ರೂಪಿಸುತ್ತಿದೆ.

ಇತ್ತೀಚಿನ ಸ್ಥಳೀಯ ಚುನಾವಣೆ ಬಳಿಕ ಯುಡಿಎಫ್‌ ಮತ್ತೆ ಅಧಿಕಾರವನ್ನು ಪಡೆದುಕೊಳ್ಳುವ ಭರವಸೆಯಲ್ಲಿದ್ದರೆ, ಬಿಜೆಪಿ ಕೆಲ ಕ್ಷೇತ್ರಗಳನ್ನು ಬಾಚಿಕೊಳ್ಳುವ ನಿರೀಕ್ಷೆಯಲ್ಲಿದೆ. ಇವೆಲ್ಲವುದರ ನಡುವೆ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ ಮತ್ತೆ ತಳಮಟ್ಟದಲ್ಲಿ ಪ್ರಚಾರಕ್ಕೆ ಇಳಿದಿದೆ. ಯುಡಿಎಫ್ ಸಿಎಂ ಕುರ್ಚಿಯತ್ತ ಕಣ್ಣಾಯಿಸಿದ್ದರೆ, ಎಲ್‌ಡಿಎಫ್ ಅಧಿಕಾರ ಉಳಿಸಿಕೊಳ್ಳುವ ಕುಸ್ತಿಯಲ್ಲಿದೆ. ಬಿಜೆಪಿ ಮಾತ್ರ ನಿಧಾನವಾಗಿ ಕೋಮು ವಿಷಬೀಜ ಬಿತ್ತುತ್ತಲೇ ಕನಿಷ್ಠ 10 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲಲು ಯೋಜನೆ ರೂಪಿಸುತ್ತಿದೆ. ಇದಕ್ಕೆ ಹುರುಪು ನೀಡಿದ್ದು ಇತ್ತೀಚಿನ ಸ್ಥಳೀಯ ಚುನಾವಣೆ.

ಇದನ್ನು ಓದಿದ್ದೀರಾ? ತಿರುವನಂತಪುರಂ ಗೆದ್ದ ಆತ್ಮವಿಶ್ವಾಸ: ಕೇರಳದಲ್ಲಿ 10 ವಿಧಾನಸಭೆ ಗೆಲ್ಲಲು ಬಿಜೆಪಿ ತಯಾರಿ; ಗಂಭೀರ ವಿಚಾರವೇಕೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಥಳೀಯ ಚುನಾವಣೆಯಲ್ಲಿ ಯುಡಿಎಫ್‌ ಮೇಲುಗೈ

2016ರ ನಂತರ ನಿರಂತರವಾಗಿ ಎಡಪಂಥೀಯರ ಎದುರು ಚುನಾವಣಾ ಸೋಲು ಕಂಡಿದ್ದ ಯುಡಿಎಫ್‌ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಮತ್ತೆ ಪುಟಿದೆದ್ದಿದೆ. ಈ ಹಿಂದಿನ ತನ್ನ ಹಲವಾರು ಭದ್ರಕೋಟೆಗಳನ್ನು ಬಲಪಡಿಸಿಕೊಂಡ ಯುಡಿಎಫ್ ಮತ್ತೆ ತನ್ನ ಹತೋಟಿಗೆ ಪಡೆದುಕೊಂಡಿದೆ. ಈ ಪೈಕಿ ಅಲ್ಪಸಂಖ್ಯಾತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರಗಳೂ ಸೇರಿವೆ. ಈ ನಡುವೆ ಎನ್‌ಡಿಎ ಕೆಲವು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನಾವೀಗ ಸ್ಥಳೀಯ ಚುನಾವಣೆಯ ಆಧಾರದಲ್ಲಿ ನೋಡಿದಾಗ ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ 76ರಲ್ಲಿ ಯುಡಿಎಫ್ ಮುಂದಿದೆ. ಎಲ್‌ಡಿಎಫ್, 62 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ, ಎನ್‌ಡಿಎ ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಒಂದು ದಶಕದ ಅಧಿಕಾರದ ನಂತರ ಇದೀಗ ಎಲ್‌ಡಿಎಫ್‌ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ವಿಪಕ್ಷಗಳು ಹೇಳುತ್ತಿದ್ದರೂ ಎಲ್‌ಡಿಎಫ್ ಮಾತ್ರ ಅದನ್ನು ಒಪ್ಪಿಕೊಳ್ಳುವಂತಿಲ್ಲ. ಕೇರಳದಲ್ಲಿ ಜನರು ಬದಲಾವಣೆ ಬಯಸುವುದು ಸಹಜ ಎನ್ನುತ್ತಾರೆ.

ಬಿಜೆಪಿ, ಎಲ್‌ಡಿಎಫ್‌ ಮತ್ತು ಯುಡಿಎಫ್ ತಯಾರಿ ಹೇಗಿದೆ?

ಆಡಳಿತ ಮೈತ್ರಿಕೂಟದ ಪ್ರಮುಖ ಮಿತ್ರ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) (ಸಿಪಿಐಎಂ) ಆಡಳಿತ ವಿರೋಧಿ ಭಾವನೆ ಜನರಲ್ಲಿದೆ ಎಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಆದರೆ ಮಿತ್ರ ಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮಾತ್ರ ಹೇಳುವುದು ಬೇರೆಯೇ. ಸಿಪಿಐಎಂ ಆಡಳಿತ ವಿರೋಧಿ ಭಾವನೆ ಜನರಲ್ಲಿದೆ ಎಂಬುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲವಾದರೂ ಈಗ ಮತ್ತೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವುದನ್ನು ಆರಂಭಿಸಿದೆ. ಸ್ಥಳೀಯ ಚುನಾವಣೆಯಲ್ಲಿ ಹಿನ್ನಡೆ ಕಾಣುತ್ತಿದ್ದಂತೆ ಈಗ ಮನೆ-ಮನೆ ಅಭಿಯಾನಗಳನ್ನು ಆರಂಭಿಸಿದೆ.

ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ಆಂದೋಲನಕ್ಕೂ ಎರಡಂಗ ಸಜ್ಜಾಗುತ್ತಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ತನ್ನ ಅಭಿಯಾನದ ಕೇಂದ್ರ ವಿಷಯವನ್ನಾಗಿ ಮಾಡಿಕೊಂಡಿದೆ. ನಿಧಿ ಹಂಚಿಕೆ, ಹಣಕಾಸಿನ ನಿರ್ಬಂಧಗಳು ಮತ್ತು ರಾಜಕೀಯ ಪ್ರೇರಿತ ಮಧ್ಯಸ್ಥಿಕೆಗಳಲ್ಲಿ ಕೇಂದ್ರವು ಕೇರಳವನ್ನು ನಿರ್ಲಕ್ಷಿಸಿರುವುದನ್ನು ಮುನ್ನೆಲೆಗೆ ತಂದು ಪ್ರಚಾರ ನಡೆಸಲು ಎಲ್‌ಡಿಎಫ್ ಮುಂದಾಗಿದೆ.

2026ರ ಚುನಾವಣೆ ಸಮೀಪಿಸುತ್ತಿರುವುದರಿಂದ, ಅನುಭವಿ ಶಾಸಕರನ್ನು ಉಳಿಸಿಕೊಳ್ಳುವುದು ನಿರ್ಣಾಯಕ ಎಂದು ಸಿಪಿಐಎಂನ ಕೆಲವು ನಾಯಕರು ವಾದಿಸಿದ್ದಾರೆ. ಎಲ್‌ಡಿಎಫ್ ಫೆಬ್ರವರಿಯಲ್ಲಿ ಕೇರಳದಾದ್ಯಂತ ಉತ್ತರ, ಮಧ್ಯ ಮತ್ತು ದಕ್ಷಿಣ ಪ್ರದೇಶಗಳನ್ನು ಒಳಗೊಂಡಂತೆ ಮೂರು ಪ್ರದೇಶವಾರು ಮೆರವಣಿಗೆಗಳನ್ನು ಯೋಜಿಸುತ್ತಿದೆ.

ಈ ನಡುವೆ ಸ್ಥಳೀಯ ಚುನಾವಣೆಯಲ್ಲಿ ಬಲವಾದ ಪ್ರದರ್ಶನ ತೋರಿದ ಯುಡಿಎಫ್ ಆತ್ಮವಿಶ್ವಾಸದಿಂದ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಇತ್ತೀಚಿನ ಚುನಾವಣೆಯ ಫಲಿತಾಂಶವು ಆಡಳಿತ ವಿರೋಧಿ ಅಲೆ ಎನ್ನುವ ಕಾಂಗ್ರೆಸ್ ನಾಯಕರು, ಇದೀಗ ತಳಮಟ್ಟದಲ್ಲಿ ಸಂಘಟನೆಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಈ ಹಿಂದಿನ ತಪ್ಪುಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳಲು ಸೀಟು ಹಂಚಿಕೆ ವ್ಯವಸ್ಥೆಗಳನ್ನು ಶೀಘ್ರವೆ ಅಂತಿಮಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಆಂತರಿಕವಾಗಿ ಚರ್ಚೆಗಳನ್ನು ಈಗಾಗಲೇ ಪ್ರಾರಂಭಿಸಿದೆ.

ಇದನ್ನು ಓದಿದ್ದೀರಾ? ಕೇರಳದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಕೇಂದ್ರ ಕೃತಕವಾಗಿ ಸೃಷ್ಟಿಸಿದೆ: ವಿತ್ತ ಸಚಿವ ಆರೋಪ

ನಾಯಕತ್ವದ ವಿಶ್ವಾಸಾರ್ಹತೆ ಮತ್ತು ಆಡಳಿತಕ್ಕೆ ಸಿದ್ಧತೆಯನ್ನು ಬಲಪಡಿಸಲು ಪ್ರಮುಖ ಕ್ಷೇತ್ರಗಳಲ್ಲಿ ಹಿರಿಯ ನಾಯಕರನ್ನು ಕಣಕ್ಕಿಳಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಪ್ರಮುಖ ನಾಯಕರನ್ನು ಲೋಕಸಭೆ ಚುನಾವಣೆಗೆ ಮಾತ್ರ ಕಣಕ್ಕಿಳಿಸುವ ಈ ಹಿಂದಿನ ಕಾರ್ಯತಂತ್ರವನ್ನು ಬದಲಾಯಿಸಲು ಕಾಂಗ್ರೆಸ್ ಮುಂದಾಗಿದೆ. ಈ ನಡುವೆಯೇ ಯುಡಿಎಫ್ ತನ್ನ ಅಭ್ಯರ್ಥಿಗಳಲ್ಲಿ ಶೇಕಡ 50ರಷ್ಟು ಮಹಿಳೆಯರು ಮತ್ತು ಯುವಕರು ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದೆ.

ಈ ನಡುವೆ ಇತ್ತೀಚೆಗೆ ನಡೆದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. 10 ವಾರ್ಡ್‌ಗಳಿರುವ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 50 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. ಇದೀಗ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 10 ವಿಧಾನಸಭೆ ಕ್ಷೇತ್ರಗಳನ್ನಾದರೂ ಗೆಲ್ಲಬೇಕು ಎಂದು ಬಿಜೆಪಿ ಯೋಜಿಸುತ್ತಿದೆ.

ಈ ಬಾರಿ ಚುನಾವಣೆಗೆ ಯುಡಿಎಫ್ ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣವನ್ನು ರಾಜಕೀಯ ಚರ್ಚೆಯ ಕೇಂದ್ರವಾಗಿ ಇರಿಸಿಕೊಕೊಳ್ಳುವ ಮೂಲಕ ಎಲ್‌ಡಿಎಫ್ ಆಡಳಿತದ ಮೇಲೆ ದಾಳಿ ನಡೆಸುತ್ತಿದೆ. ಆದರೆ ಈಗಾಗಲೇ ದೇಶದ ‘ಕಡು ಬಡತನ ಮುಕ್ತ’ ರಾಜ್ಯ ಎನಿಸಿಕೊಂಡಿರುವ ಕೇರಳ, ಬಜೆಟ್ ಮೂಲಕ ಜನರ ಮತ ಗೆಲ್ಲುವ ನಿರೀಕ್ಷೆಯಲ್ಲಿದೆ. ಇವೆಲ್ಲವುದರ ನಡುವೆ ಬಿಜೆಪಿ ಮಾತ್ರ ಜನರನ್ನು ಕೋಮು ಆಧಾರದಲ್ಲಿ ವಿಂಗಡಿಸಿ ಮತವನ್ನು ಸೆಳೆಯುವ ತನ್ನ ತಂತ್ರವನ್ನೇ ನೆಚ್ಚಿಕೊಂಡಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...