ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಎಲ್ಲವೂ ‘ಹಿಂದಿ’ಮಯ; ಹಿಂದಿ ಹೇರಿಕೆಯ ಹುನ್ನಾರ ಎಂದ ತಮಿಳು ಸಿಎಂ

Date:

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವೆಬ್‌ಸೈಟ್‌ನಲ್ಲಿ ಎಲ್ಲವನ್ನೂ ಹಿಂದಿ ಭಾಷೆಯಲ್ಲಿ ವಿವರಿಸಲಾಗಿದೆ. ವೆಬ್‌ಸೈಟ್‌ ಪೂರ್ತಿ ಹಿಂದಿ ಬಳಕೆ ಮಾಡಲಾಗಿದೆ. ಇದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಖಂಡಿಸಿದ್ದಾರೆ. ವೆಬ್‌ಸೈಟ್ಅನ್ನು ಹಿಂದಿ ಹೇರುವ ಪ್ರಚಾರ ಸಾಧನವಾಗಿ ಮಾರ್ಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿಯನ್ನು ಒಳಗೊಂಡಿರುವ ಎಲ್‌ಐಸಿ ವೆಬ್‌ಪುಟದ ಸ್ಕ್ರೀನ್‌ಶಾಟ್ಅನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಸ್ಟಾಲಿನ್, “ಎಲ್‌ಐಸಿ ವೆಬ್‌ಸೈಟ್ಅನ್ನು ಹಿಂದಿ ಹೇರಿಕೆಯ ಪ್ರಚಾರ ಸಾಧನವಾಗಿ ಮಾರ್ಪಡಿಸಲಾಗಿದೆ. ಇಂಗ್ಲಿಷ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ಹಿಂದಿಯಲ್ಲಿಯೇ ಪ್ರದರ್ಶಿಸಲಾಗುತ್ತಿದೆ! ಇದು ಭಾರತದ ಬಹುತ್ವವನ್ನು ಹಣಿದು, ಬಲವಂತವಾಗಿ ಸಾಂಸ್ಕೃತಿಕ ಮತ್ತು ಭಾಷಾ ಹೇರಿಕೆ ಮಾಡುವ ತಂತ್ರವೇ ಹೊರತು ಬೇರೇನೂ ಅಲ್ಲ” ಎಂದು ಕಿಡಿಕಾರಿದ್ದಾರೆ.

“ಎಲ್ಐಸಿ ಎಲ್ಲ ಭಾರತೀಯರ ಪ್ರೋತ್ಸಾಹದಿಂದ ಬೆಳೆದಿದೆ. ಅದು, ತನ್ನ ಬಹುಪಾಲು ಕೊಡುಗೆದಾರರಿಗೆ ದ್ರೋಹ ಮಾಡಲು ಹೇಗೆ ಧೈರ್ಯ ಮಾಡುತ್ತದೆ? ಈ ಭಾಷಾ ದೌರ್ಜನ್ಯವನ್ನು ತಕ್ಷಣವೇ ಹಿಂಪಡೆಯಬೇಕು. #ಹಿಂದಿ ಹೇರಿಕೆ ನಿಲ್ಲಿಸಿ” ಎಂದು ಟ್ವೀಟ್‌ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...