ಲೋಕಸಭಾ ಚುನಾವಣೆ | ಮೋದಿ ಕಿ ಗ್ಯಾರಂಟಿ v/s ಕಾಂಗ್ರೆಸ್ ನ್ಯಾಯ್ ಗ್ಯಾರಂಟಿ

Date:

ಚುನಾವಣೆ ಸಮಯದಲ್ಲಿ ಮತದಾರಿಗೆ ಎಲ್ಲ ರಾಜಕೀಯ ಪಕ್ಷಗಳು ನಾನಾ ರೀತಿಯ ಭರವಸೆಗಳನ್ನು ನೀಡುತ್ತವೆ. ಕರ್ನಾಟಕದ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಭರವಸೆಯ ಸಾಲಿಗೆ ಗ್ಯಾರಂಟಿಗಳನ್ನು ಸೇರಿಸಿತು. ಇದೀಗ, ಲೋಕಸಭಾ ಚುನಾವಣೆಗೂ ಗ್ಯಾರಂಟಿಗಳು ವಿಸ್ತರಿಸಿವೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯೂ ಕೂಡ 3ನೇ ಬಾರಿಗೆ ಗೆಲ್ಲುತ್ತೇವೆಂಬ ಉತ್ಸಾಹದೊಂದಿಗೆ ‘ಮೋದಿ ಕಿ ಗ್ಯಾರಂಟಿ’ ಎಂದು ಪ್ರಚಾರ ಮಾಡುತ್ತಿದೆ.

ಪ್ರಧಾನಿ ವೆಬ್‌ಸೈಟ್‌ನಲ್ಲಿ ವಿವರಿಸಿರುವಂತೆ ‘ಮೋದಿ ಕಿ ಗ್ಯಾರಂಟಿ’, ಯುವಕರ ಅಭಿವೃದ್ಧಿ, ಮಹಿಳೆಯರ ಸಬಲೀಕರಣ, ರೈತರ ಕಲ್ಯಾಣ ಮತ್ತು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿರುವ ಎಲ್ಲ ಸಮುದಾಯಗಳಿಗೂ ಖಾತರಿಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಎಲ್ಲ ಕಲ್ಯಾಣ ಯೋಜನೆಗಳ ಶುದ್ಧತ್ವವನ್ನು ಖಾತ್ರಿಪಡಿಸುವುದು ತಮ್ಮ ಸರ್ಕಾರದ ಗುರಿಯೆಂದು ಮೋದಿ ಹೇಳಿಕೊಂಡಿದ್ದಾರೆ.

ಆದರೆ, ಇದು ಚುನಾವಣೆಯಲ್ಲಿ ಬಿಜೆಪಿಯ ಕೈಹಿಡಿಯುತ್ತದೆಯೇ ಎಂಬ ಪ್ರಶ್ನೆ ಮುನ್ನೆಲೆ ಬಂದಿದೆ. 10 ವರ್ಷಗಳ ಆಡಳಿತದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕತೆ ಕುಸಿತ, ಮೂಲಸೌಕರ್ಯಗಳ ಕೊರತೆ ಜನರನ್ನು ಬಾಧಿಸುತ್ತಿದೆ. ಜನರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಜೊತೆಗೆ, ವಿಪಕ್ಷಗಳು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತಿವೆ. ಉದ್ಯೋಗದ ಕೊರತೆ ಒಂದೇ ದೊಡ್ಡ ಸಮಸ್ಯೆ ಎಂದು ಪ್ರತಿಪಕ್ಷಗಳು ಮತ್ತೆ-ಮತ್ತೆ ಒತ್ತಿ ಹೇಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇ ವೇಳೆ, ಕಾಂಗ್ರೆಸ್ ನ್ಯಾಯ್ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳು ಪಕ್ಷವು ಅಧಿಕಾರಕ್ಕೇರಲು ನೆರವಾಗಿವೆ. ಈಗ ಲೋಕಸಭೆ ಚುನಾವಣೆಗೆ ಯುವಜನರು, ರೈತರು, ಮಹಿಳೆಯರು, ಕಾರ್ಮಿಕರಿಗಾಗಿ ಮತ್ತು ಸಹಭಾಗಿತ್ವದ ನ್ಯಾಯವನ್ನು ಖಾತ್ರಿಪಡಿಸುವ 5 ಗ್ಯಾರಂಟಿಗಳನ್ನು ಪಕ್ಷವು ಘೋಷಿಸಿದೆ.

ಮಣಿಪುರದಿಂದ ಮುಂಬೈಗೆ ರಾಹುಲ್ ಗಾಂಧಿ ನೇತೃತ್ವದ ನಡೆದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಸಂದರ್ಭದಲ್ಲಿ ‘ನ್ಯಾಯ್ ಗ್ಯಾರಂಟಿ’ಗಳನ್ನು ಪಕ್ಷವು ಜನರ ಮುಂದೆ ಪ್ರಸ್ತುತಪಡಿಸಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಈ ಗ್ಯಾರಂಟಿಗಳ ಸುತ್ತ ಸಿದ್ದಪಡಿಸುವ ಸಾಧ್ಯತೆ ಇದೆ. ಈ ಗ್ಯಾರಂಟಿಗಳು ಕಾಂಗ್ರೆಸ್‌ ಮತ್ತೆ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯಲು ಮತ್ತು ಅಧಿಕಾರಕ್ಕೆ ಮರಳಲು ನೆರವಾಗುವುದೇ ಎಂಬುದನ್ನು ಕಾಲ ತಿಳಿಸಲಿದೆ.

ಈ ಚುನಾವಣೆಯಲ್ಲೂ ಬಿಜೆಪಿ ತನ್ನ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ದೂರದ ಬೆಟ್ಟವನ್ನು ತೋರಿಸುತ್ತದೆ. ಆ ಮೂಲಕ ‘ಬ್ರೆಡ್ ಅಂಡ್ ಬಟರ್’ (ಆಹಾರ, ಪೌಷ್ಠಿಕತೆ) ವಿಚಾರವನ್ನು ಪಕ್ಕಕ್ಕೆ ಸರಿಸಲು ಯತ್ನಿಸುತ್ತಿದೆ. ಆರ್ಟಿಕಲ್ 370 ರದ್ದತಿ, ಸಿಎಎ ಮತ್ತು ಏಕರೂಪ ನಾಗರಿಕ ಸಂಹಿತೆ: ಇವುಗಳು ಜನರಿಗೆ ಬಿಜೆಪಿಯ ದೀರ್ಘಕಾಲದ ಭರವಸೆಗಳ ಭಾಗವಾಗಿದೆ.

ಪೌರತ್ವ ತಿದ್ದುಪತಿ ಕಾಯ್ದೆ (ಸಿಎಎ): ಸಿಎಎ-2019ಅನ್ನು ಇದೀಗ ಅನುಷ್ಠಾನಗೊಳಿಸಲು ಅಧಿಸೂಚನೆಯನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ. ಸಿಎಎ ಸುತ್ತಲೇ ಚುನಾವಣೆಯ ಆಟ ಆಡಲು ಬಿಜೆಪಿ ಮುಂದಾಗಿದೆ. ಜೊತೆಗೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ತನ್ನ ಸಾಧನೆಯೆಂದು ಬಿಜೆಪಿ ಹೇಳಿಕೊಳ್ಳುತ್ತಿದೆ.

ಜೊತೆಗೆ, ಸಿಸಿಎ ಕಾನೂನನ್ನು ರಾಷ್ಟ್ರೀಯವಾಗಿ ರೂಪಿಸುವ ಉದ್ದೇಶದ ಭಾಗವಾಗಿ ಬಿಜೆಪಿ ಸರ್ಕಾರವು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕಾನೂನನ್ನು ಅಂಗೀಕರಿಸಿದೆ. ಆದರೆ, ಈ ನಡೆಗಳು ವಿಭಜಿಸುವ ಮತ್ತು ಹೇರುವ ಪ್ರಯತ್ನಗಳಾಗಿವೆ ಎಂದು ವಿಪಕ್ಷಗಳು ಟೀಕಿಸಿವೆ.

ರಾಮಮಂದಿರ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆದ ಪ್ರಾಣಪ್ರತಿಷ್ಠ ಕಾರ್ಯಕ್ರಮವನ್ನು ಬಿಜೆಪಿಯು ಪ್ರಚಂಡ ಉತ್ಸಾಹದಿಂದ ಗುರುತಿಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾರಂಭದಲ್ಲಿ ಮುಂಚೂಣಿಯಲ್ಲಿದ್ದರು. ಶತಮಾನದ ಕನಸನ್ನು ಈಡೇರಿಸಿದ್ದೇವೆಂದು ಬಿಜೆಪಿ ಹೇಳಿಕೊಳ್ಳುತ್ತಿದೆ.

ಈ ರಾಮಮಂದಿರವು ಉತ್ತರ ಭಾರತದಲ್ಲಿ ಬಿಜೆಪಿಗೆ ಲಾಭವನ್ನು ತಂದುಕೊಟ್ಟಿದೆ ಎಂದು ವಿರೋಧ ಪಕ್ಷದ ನಾಯಕರೂ ಒಪ್ಪಿಕೊಳ್ಳುತ್ತಾರೆ. ಹಾಗಾಗಿಯೇ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವ ಮಾತನಾಡುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ, ರಾಮಮಂದಿರದ ವಿಚಾರ ಹೆಚ್ಚಾಗಿ ಬಿಜೆಪಿಯ ಕೈಹಿಡಿಯುವ ಕಾಲ ಕಳೆದುಹೋಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಎಲೆಕ್ಟೋರಲ್ ಬಾಂಡ್‌ಗಳ ಡೇಟಾ: ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದೆ. ಈ ಬಾಂಡ್‌ಗಳ ಮೂಲಕ ಬರೋಬ್ಬರಿ 6,060 ಕೋಟಿ ರೂ. ಹಣವನ್ನು ಬಿಜೆಪಿ ಪಡೆದುಕೊಂಡಿದೆ. ಇದು ಬಾಂಡ್‌ಗಳ ಒಟ್ಟು ಮೊತ್ತದ ಶೇ.48ಕ್ಕೂ ಹೆಚ್ಚಿನ ಪ್ರಮಾಣವಾಗಿದೆ. ಹೀಗಾಗಿ, “ಆಡಳಿತಾರೂಢ ಬಿಜೆಪಿ ವಿರುದ್ಧ ಸುಪ್ರೀಂ ಕೋರ್ಟ್‌ ಉನ್ನತ ಮಟ್ಟದ ತನಿಖೆ ನಡೆಸಬೇಕು. ಎಲೆಕ್ಟೋರಲ್ ಬಾಂಡ್‌ಗಳ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು” ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಚುನಾವಣೆಗೂ ಮುನ್ನವೇ ಈ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ, ಚುನಾವಣಾ ಬಾಂಡ್‌ ಹಗರಣವನ್ನು ಬಿಜೆಪಿ ವಿರುದ್ಧದ ಬೃಹತ್ ದಾಳವಾಗಿ ಬಳಿಸಿಕೊಳ್ಳುವಲ್ಲಿ ವಿಪಕ್ಷಗಳು ವಿಫಲವಾದಂತೆ ಕಾಣುತ್ತಿದೆ. ಆದರೆ, ಕೆಲ ಪುಟ್ಟ ಮಾಧ್ಯಮಗಳು ಹಾಗೂ ಒಂದಷ್ಟು ಮಂದಿ ‘ಚುನಾವಣಾ ಬಾಂಡ್’ ವಿಚಾರವನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಡುತ್ತಿದ್ದಾರೆ. ಪರಿಣಾಮ, ಈ ವಿಚಾರ ನೆಲಮಟ್ಟದಲ್ಲಿ ಜನರನ್ನು ತಲುವ ಸಾಧ್ಯತೆ ಇದೆ.

‘ಅಮೃತ್ ಕಾಲ್’ ವರ್ಸಸ್ ‘ಅನ್ಯಯ್ ಕಾಲ್’: ಚುನಾವಣಾ ಸಮಯದಲ್ಲಿ ಮೋದಿ ಅವರ ಪುನಾರಾವರ್ತಿತ ಪ್ರಚಾರದ ವಿಷಯವೆಂದರೆ, ‘ಉತ್ತಮ ಆಡಳಿತ, ವೇಗದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಕೋನ’. ಈ ವಿಚಾರಗಳಲ್ಲಿ ಮೋದಿ ಸರ್ಕಾವನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಕೊರೊನಾ ನಿರ್ವಹಣೆ, ಬಡತನ ಪ್ರಮಾಣ ಇಳಿಕೆ, ಉಚಿತ ಪಡಿತರ ಯೋಜನೆಯಂತಹ ಬಡವರ ಕಲ್ಯಾಣ ಕ್ರಮಗಳನ್ನು ತಂದಿದ್ದೇವೆಂದು ಹೇಳಿಕೊಳ್ಳುತ್ತಿದೆ.

ಆದರೆ, ಮತ್ತೊಂದೆಡೆ ಕಾಂಗ್ರೆಸ್, ಮೋದಿ ಸರ್ಕಾರದ 10 ವರ್ಷಗಳನ್ನು ‘ಅನ್ಯಾಯ ಕಾಲ’ ಎಂದು ಕರೆದಿದೆ. ಇದು ನಿರುದ್ಯೋಗ, ಬೆಲೆ ಏರಿಕೆ, ಸಂಸ್ಥೆಗಳ ವಶ, ಸಂವಿಧಾನದ ಮೇಲಿನ ದಾಳಿ ಮತ್ತು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳನ್ನು ಗುರುತಿಸಿ, ‘ಅನ್ಯಾಯ ಕಾಲ’ವೆಂದು ವಿವರಿಸುತ್ತಿದೆ.

ರೈತರ ಸಮಸ್ಯೆಗಳು ಮತ್ತು ಎಂಎಸ್‌ಪಿ: ಬೆಳೆಗಳಿಗೆ ಎಂಎಸ್‌ಪಿಯನ್ನು ಕಾನೂನು ಬದ್ದವಾಗಿ ಖಾತ್ರಿ ಪಡಿಸಬೇಕೆಂದು ದೆಹಲಿ ಗಡಿಯಲ್ಲಿ ರೈತರು ಮತ್ತೆ ಹೋರಾಟ ಆರಂಭಿಸಿದ್ದಾರೆ. ಅನ್ನದಾತನಿಗೆ ಸರ್ಕಾರ ‘ದ್ರೋಹ’ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ‘ಇಂಡಿಯಾ ಒಕ್ಕೂಟ’ ಅಧಿಕಾರಕ್ಕೆ ಬಂದರೆ, ಎಂಎಸ್‌ಪಿಗೆ ಕಾನೂನು ಖಾತರಿ ಕೊಡುವುದಾಗಿ ಘೊಷಿಸಿದೆ.

ಇದೇ ವೇಳೆ, ಪಿಎಂ-ಕಿಸಾನ್ ಯೋಜನೆಯು ರೈತರಿಗೆ ಯಾವ ರೀತಿ ನೆರವಾಗಿ ಎಂಬ ಕುರಿತು ಬಿಜೆಪಿ ಭಾರೀ ಪ್ರಚಾರ ಮಾಡುತ್ತಿದೆ. ಆದರೆ, ರೈತ ಹೋರಾಟವು ಬಿಜೆಪಿ ಪ್ರಚಾರಕ್ಕೆ ತಣ್ಣೀರು ಎರಚುತ್ತಿದೆ.

ವಿಕ್ಷಿತ್ ಭಾರತ್: ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದೇ ದೇಶದ ಗುರಿ. 2024ರ ವೇಳೆಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸಲು ತಮ್ಮ ಸರ್ಕಾರವು ಬದ್ಧವಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳು ಇದು ‘ಮತ್ತೊಂದು ಜುಮ್ಲಾ’ ಎಂದಿವೆ.

ಮೋದಿ ಕಿ ಗ್ಯಾರಂಟಿಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್‌ ತನ್ನ ‘ನ್ಯಾಯ್‌ ಗ್ಯಾರಂಟಿ’ಗಳನ್ನು ಮುನ್ನೆಲೆ ತಂದಿದೆ.  ರೈತರಿಗೆ 5, ಮಹಿಳೆಯರಿಗೆ 5, ಯುವಜನರಿಗೆ 5, ಕಾರ್ಮಿಕರಿಗೆ 5 ಹಾಗೂ ಪರಿಶಿಷ್ಟ ಸಮುದಾಯಕ್ಕೆ 5 ಗ್ಯಾರಂಟಿಗಳನ್ನು ಕಾಂಗ್ರೆಸ್‌ ಘೋಷಿಸಿದೆ.

1. ಕಿಸಾನ್ ನ್ಯಾಯ:
a. ಸ್ವಾಮಿನಾಥನ್ ಆಯೋಗದ ಸೂತ್ರದ ಅಡಿಯಲ್ಲಿ MSPಗೆ ಕಾನೂನು ಸ್ಥಾನಮಾನ.
b. ರೈತರ ಸಾಲ ಮನ್ನಾ ಮಾಡಲು ಮತ್ತು ಸಾಲ ಮನ್ನಾ ಪ್ರಮಾಣವನ್ನು ನಿರ್ಧರಿಸಲು ಶಾಶ್ವತ ‘ಕೃಷಿ ಸಾಲ ಮನ್ನಾ ಆಯೋಗ’ ರಚನೆ.
c. ವಿಮಾ ಯೋಜನೆಯನ್ನು ಬದಲಾಯಿಸುವ ಮೂಲಕ ಬೆಳೆ ನಷ್ಟವಾದಲ್ಲಿ 30 ದಿನಗಳೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಪರಿಹಾರ ಪಾವತಿ.
d. ರೈತರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಹೊಸ ಆಮದು-ರಫ್ತು ನೀತಿ ರಚನೆ.
e. ಕೃಷಿ ಉತ್ಪನ್ನಗಳಿಂದ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ರೈತರನ್ನು ಜಿಎಸ್‌ಟಿ ಮುಕ್ತವನ್ನಾಗಿ ಮಾಡುವುದು.

2. ನಾರಿ ನ್ಯಾಯ
a. ಮಹಾಲಕ್ಷ್ಮೀ: ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ.
b. ಅರ್ಧದಷ್ಟು ಜನಸಂಖ್ಯೆ, ಸಂಪೂರ್ಣ ಹಕ್ಕು: ಕೇಂದ್ರ ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲು.
c. ಶಕ್ತಿಗೆ ಗೌರವ: ಆಶಾಗಳು, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ದುಪ್ಪಟ್ಟು.
d. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್.
e. ಅಧಿಕಾರ ಮೈತ್ರಿ – ಎಲ್ಲಾ ಪಂಚಾಯತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅವರು ಈ ಹಕ್ಕುಗಳನ್ನು ಪಡೆಯಲು ಸಹಾಯ.

3. ಶ್ರಮಿಕ ನ್ಯಾಯ
a. ಆರೋಗ್ಯ ಹಕ್ಕುಗಳು:
ಉಚಿತ ಅಗತ್ಯ ಔಷಧಿಗಳು, ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ಆರೋಗ್ಯ ಹಕ್ಕು.
b. ಕಾರ್ಮಿಕರಿಗೆ ಗೌರವ:
ಎಲ್ಲ ಮನರೇಗಾ ಕಾರ್ಮಿಕರನ್ನು ಒಳಗೊಂಡಂತೆ ರಾಷ್ಟ್ರೀಯ ಕನಿಷ್ಠ ವೇತನ 2400/ದಿನ.
c. ನಗರ ಉದ್ಯೋಗ ಖಾತರಿ:
ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ಕಾಯಿದೆ
d. ಸಾಮಾಜಿಕ ಭದ್ರತೆ:
ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆ
e. ಸುರಕ್ಷಿತ ಉದ್ಯೋಗ:
ಪ್ರಮುಖ ಸರ್ಕಾರಿ ಕಾರ್ಯಗಳಲ್ಲಿ ಉದ್ಯೋಗದ ಗುತ್ತಿಗೆ ಪದ್ದತಿ ರದ್ದು.

4. ಯುವ ನ್ಯಾಯ
a. 30 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ.
b. ಯುವಜನರಿಗೆ ಶಿಷ್ಯವೇತನ.
c. ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾನೂನು.
d. ಗಿಗ್ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಖಾತರಿ
e. ಸ್ಟಾರ್ಟ್​ ಅಪ್​​ ಉದ್ಯಮಿಗಳಿಗೆ ಸಹಾಯ ಮಾಡಲು 5,000 ಕೋಟಿ ರೂ. ಸ್ಟಾರ್ಟಪ್ ಕಾರ್ಪಸ್.

5. ಸಾಮಾಜಿಕ ನ್ಯಾಯ
a. ಸಾಮಾಜಿಕ ಹಕ್ಕು:
ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ
b. ಮೀಸಲಾತಿ ಹಕ್ಕು:
SC/ST/OBC ಮೀಸಲಾತಿಯ ಮೇಲಿನ 50% ಮಿತಿಯನ್ನು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತೆಗೆದುಹಾಕಲಾಗುತ್ತದೆ.
c. SC/ST ಉಪ ಯೋಜನೆ:
SC/ST ಗಾಗಿ ವಿಶೇಷ ಬಜೆಟ್, (ಅವರ ಜನಸಂಖ್ಯೆಯ ಪಾಲಿಗೆ ಸಮನಾಗಿ)
d. ನೀರು, ಅರಣ್ಯ ಮತ್ತು ಭೂಮಿಯ ಕಾನೂನು ಹಕ್ಕುಗಳು: ಅರಣ್ಯ ಹಕ್ಕುಗಳ ಕಾಯಿದೆಯಡಿ ಅರ್ಜಿಗಳನ್ನು 1 ವರ್ಷದಲ್ಲಿ ಇತ್ಯರ್ಥಗೊಳಿಸಲಾಗುವುದು
e. ನಮ್ಮ ಭೂಮಿ, ನಮ್ಮ ನಿಯಮ:
ST ಜನಸಂಖ್ಯೆ ಹೆಚ್ಚಾಗಿರುವ ಎಲ್ಲ ವಸತಿ ಪ್ರದೇಶಗಳನ್ನು ಪರಿಶಿಷ್ಟ ಪ್ರದೇಶಗಳೆಂದು ಘೋಷಣೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...