ಲೋಕಸಭಾ ಚುನಾವಣೆ | ಜಾರ್ಖಂಡ್-ಛತ್ತೀಸ್‌ಗಢ ರಾಜಕೀಯದಲ್ಲಿ ಬುಡಕಟ್ಟು ಜನಾಂಗ ನಿರ್ಣಾಯಕ; ಬಿಜೆಪಿ ಗೆಲುವು ಸಾಧ್ಯವೇ?

Date:

2011ರ ಜನಗಣತಿಯ ಪ್ರಕಾರ, ಜಾರ್ಖಂಡ್‌ನ ಜನಸಂಖ್ಯೆಯ ಶೇ.26.21ರಷ್ಟು ಮತ್ತು ಛತ್ತೀಸ್‌ಗಢದ ಶೇ.34ರಷ್ಟು ಜನಸಂಖ್ಯೆ ಪರಿಶಿಷ್ಟ ಪಂಗಡಗಳದು. ಪರಸ್ಪರ ಗಡಿಗಳನ್ನು ಹಂಚಿಕೊಂಡರೂ ಈ ಎರಡೂ ರಾಜ್ಯಗಳಲ್ಲಿ ಕೆಲವು ಗಮನಾರ್ಹ ವ್ಯತ್ಯಾಸಗಳಿವೆ.

 

ಉತ್ತರ ಭಾರತದ ರಾಜ್ಯಗಳಾದ ಜಾರ್ಖಂಡ್ ಮತ್ತು ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಒಟ್ಟಾರೆಯಾಗಿ, ಎರಡೂ ರಾಜ್ಯಗಳು 25 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಜಾರ್ಖಂಡ್‌ನದಲ್ಲಿ ಐದು ಮತ್ತು ಛತ್ತೀಸ್‌ಗಢದಲ್ಲಿ ನಾಲ್ಕು ಕ್ಷೇತ್ರಗಳು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲು.

2011ರ ಜನಗಣತಿಯ ಪ್ರಕಾರ, ಜಾರ್ಖಂಡ್‌ನ ಜನಸಂಖ್ಯೆಯ ಶೇ.26.21ರಷ್ಟು ಮತ್ತು ಛತ್ತೀಸ್‌ಗಢದ ಶೇ.34ರಷ್ಟು ಜನಸಂಖ್ಯೆ ಪರಿಶಿಷ್ಟ ಪಂಗಡಗಳದು. ಪರಸ್ಪರ ಗಡಿಗಳನ್ನು ಹಂಚಿಕೊಂಡರೂ ಈ ಎರಡೂ ರಾಜ್ಯಗಳಲ್ಲಿ ಕೆಲವು ಗಮನಾರ್ಹ ವ್ಯತ್ಯಾಸಗಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

jharkhandmapstory

ಛತ್ತೀಸ್‌ಗಢದ ರಾಜಕೀಯವು ಬಹುಪಾಲು ಕಾಂಗ್ರೆಸ್ ಮತ್ತು ಬಿಜೆಪಿಯ ಸುತ್ತ ಸುತ್ತಿದರೆ, ಜಾರ್ಖಂಡ್ ಸದಾ ಬಹುಪಕ್ಷೀಯ. ಇಲ್ಲಿ ಪಕ್ಷಗಳ ಮೈತ್ರಿಗಳು ಚುನಾವಣಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ರಾಜಕೀಯ ಶಕ್ತಿಯನ್ನು ನಿರ್ಧರಿಸುವ ಪ್ರಬಲ ಎಸ್‌ಟಿ ಸಮುದಾಯಗಳ ವಿಷಯದಲ್ಲಿ ಎರಡೂ ರಾಜ್ಯಗಳು ವಿಭಿನ್ನ. ಗಾಂಡೇ, ಕನ್ವರ್ ಹಾಗೂ ಛತ್ರಾ ಛತ್ತೀಸ್‌ಗಢದ ಅತ್ಯಂತ ಪ್ರಭಾವಿ ಬುಡಕಟ್ಟು ಸಮುದಾಯಗಳು. ಜಾರ್ಖಂಡ್‌ ರಾಜಕಾರಣವನ್ನು ಸಂತಾಲ್, ಮುಂಡಾ ಮತ್ತು ಹೋ ಬುಡಕಟ್ಟುಗಳು ನಿಯಂತ್ರಿಸುತ್ತವೆ. ಎರಡೂ ರಾಜ್ಯಗಳಲ್ಲಿ ಕಂಡುಬರುವ ಬುಡಕಟ್ಟು ಓರಾನ್.

ಈ ಭಿನ್ನ ಲಕ್ಷಣಗಳ ಹೊರತಾಗಿಯೂ, ಉತ್ತರ ಭಾರತ ಅಥವಾ ಹಿಂದಿ ಪಟ್ಟಿಯಲ್ಲಿ ಈ ಎರಡೂ ರಾಜ್ಯಗಳು ಬುಡಕಟ್ಟು ರಾಜಕಾರಣದ ಅಳತೆಗೋಲುಗಳೆಂದು ಪರಿಗಣಿಸಲಾಗುತ್ತದೆ.

2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಈ ರಾಜ್ಯಗಳಲ್ಲಿನ ಎಸ್‌ಟಿ ಮತದಾರರ ಮನಸ್ಥಿತಿ ಏನು?

2019ರಲ್ಲಿ ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಈ ಎರಡೂ ರಾಜ್ಯಗಳಲ್ಲಿ ಜಯಭೇರಿ ಬಾರಿಸಿತ್ತು. 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು  ಮತ್ತು ಛತ್ತೀಸ್‌ಗಢದಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಛತ್ತೀಸ್‌ಗಢದಲ್ಲಿ 11 ಸ್ಥಾನಗಳನ್ನು ಗೆದ್ದದ್ದು ಗಮನಾರ್ಹ. ಆದರೆ, ಕ್ಷೇತ್ರವಾರು ಲೆಕ್ಕಾಚಾರ ಆಸಕ್ತಿಕರ. ಜಾರ್ಖಂಡ್-ರಾಜಮಹಲ್ ಮತ್ತು ದುಮ್ಕಾದ ಸಂತಾಲ್ ಪ್ರಾಬಲ್ಯದ ಸಂತಾಲ್ ಪರಗಣ ಪ್ರದೇಶದಲ್ಲಿ ಎರಡು ಎಸ್‌ಟಿ ಸ್ಥಾನಗಳಿವೆ.

ದೇಶದ ಎಸ್‌ಟಿ ಮತದಾರರನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕತ್ವವು ಒಡಿಶಾ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ಬಿಹಾರದ ಸೀಮಾಂಚಲ್ ಪ್ರದೇಶದ ಕೆಲವು ಭಾಗಗಳಲ್ಲಿ ಗಣನೀಯ ಪ್ರಭಾವ ಹೊಂದಿರುವ ಸಂತಾಲ್ ಬುಡಕಟ್ಟಿನಿಂದ ಬಂದ ಮುರ್ಮು ಅವರು ಚುನಾವಣೆಯಲ್ಲಿ ಸುಲಭವಾಗಿ ಗೆದ್ದರು. ವಾಸ್ತವವಾಗಿ, ಒಡಿಶಾ ಮತ್ತು ಜಾರ್ಖಂಡ್‌ನ ವಿರೋಧ ಪಕ್ಷದ ನಾಯಕರೂ ಕೂಡಾ ಮುರ್ಮು ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದರಿಂದ ಬಿಜೆಪಿಯು ಈ ರಾಜ್ಯಗಳಲ್ಲಿ ಸಂತಾಲ್ ಮತದಾರರ ಅಭಿಮಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು.

ಸಂತಾಲ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಅವರು ಭೂ ಹಗರಣ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ. ಈ ಬೆಳವಣಿಗೆಯು ಮತದಾರರ ಮನಸ್ಥಿತಿಯನ್ನು ಸಂಪೂರ್ಣ ಬದಲಿಸಿದೆ. ರಾಜ್ಯಾದ್ಯಂತ ಬುಡಕಟ್ಟು ಹಕ್ಕುಗಳ ಸಂಘಟನೆಗಳು ಮತ್ತು ಗುಂಪುಗಳು ಸೊರೇನ್ ಬಂಧನವನ್ನು ಬುಡಕಟ್ಟು ಜನಾಂಗಗಳ ಮೇಲಿನ ಹಲ್ಲೆ ಎಂದೇ ಬಿಂಬಿಸಿವೆ. ಪರಿಣಾಮವಾಗಿ, ಈ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದಲ್ಲಿ ಬಿಜೆಪಿ ಹಿನ್ನಡೆ ಎದುರಿಸುವ ದಟ್ಟ ಸಂಭವ ಇದೆ.

“ಹೇಮಂತ್ ಸೊರೇನ್ ಅವರ ಸೆರೆವಾಸವನ್ನು ಜೆಎಂಎಂ ಸಾಮಾನ್ಯವಾಗಿ ಎಸ್‌ಟಿ ಮತದಾರರನ್ನು ಮತ್ತು ವಿಶೇಷವಾಗಿ ಸಂತಾಲರನ್ನು ಬಿಜೆಪಿ ವಿರುದ್ಧ ಯಶಸ್ವಿಯಾಗಿ ಸಂಘಟಿಸಲಾಗಿದೆ. ಈ ಕಾರಣದಿಂದಾಗಿ, ಜಾರ್ಖಂಡ್‌ನ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯ ಮಂಕಾದಂತೆ ಕಾಣುತ್ತಿದೆ. 2019ರ ಚುನಾವಣೆಯಲ್ಲಿಯೂ ಈ ಸ್ಥಾನಗಳಲ್ಲಿ ಕೇಸರಿ ಪಕ್ಷದ ಗೆಲುವಿನ ಅಂತರ ಉತ್ತಮವಾಗಿರಲಿಲ್ಲ” ಎಂಬುದು ರಾಂಚಿ ಮೂಲದ ಹಿರಿಯ ಪತ್ರಕರ್ತ ದಿವ್ಯಾಂಶು ಕುಮಾರ್ ಅಭಿಪ್ರಾಯ.

ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿ, ಬಿಜೆಪಿ ಬಳಸಿದ ವಿಭಿನ್ನ ತಂತ್ರಗಳು ಆಸಕ್ತಿದಾಯಕ. ಸದಾ ಎಸ್‌ಟಿ ಮುಖ್ಯಮಂತ್ರಿಯನ್ನು ಹೊಂದಿದ್ದ ಜಾರ್ಖಂಡ್‌ನಲ್ಲಿ 2014ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಬುಡಕಟ್ಟು ಅಲ್ಲದ ರಘುಬರ್ ದಾಸ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಹೊಸಪ್ರಯೋಗ ನಡೆಸಿತು ಬಿಜೆಪಿ. 2019ರ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಯೋಗ ತಿರುಗುಬಾಣವಾಯಿತು.

ಅದರಿಂದ ಪಾಠ ಕಲಿತು ಈ ಬಾರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಛತ್ತೀಸ್‌ಗಢದಲ್ಲಿ ಕನ್ವರ್ ಬುಡಕಟ್ಟು ಜನಾಂಗದ ವಿಷ್ಣು ದೇವ್ ಸಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ಈ ನಿರ್ಧಾರವು ಉತ್ತರ ಛತ್ತೀಸ್‌ಗಢದಲ್ಲಿ ರಾಜಕೀಯ ಯಶಸ್ಸಿನ ಪ್ರಾಮುಖ್ಯತೆ ಹೊಂದಿರುವ ಕನ್ವರ್ ಮತ ಬ್ಯಾಂಕ್ ಗಳಿಸಲು ಪಕ್ಷಕ್ಕೆ ನೆರವಾಗಿದೆ. ಅಲ್ಲದೆ 2024ರ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದ ಇತರ ಎಸ್‌ಟಿ ಸಮುದಾಯಗಳನ್ನೂ ತಲುಪುವ ದಾರಿಗಳನ್ನು ತೆರೆದಿದೆ.

ಜಾರ್ಖಂಡ್ ಮತ್ತು ಛತ್ತೀಸ್‌ಗಢ ಎರಡರ ರಾಜಕೀಯದಲ್ಲಿ ಬುಡಕಟ್ಟು ಜನಾಂಗದವರು ನಿರ್ಣಾಯಕ ಪಾತ್ರ ವಹಿಸುವುದೇನೋ ವಾಸ್ತವ. ಆದರೂ, ಗಮನಾರ್ಹ ವ್ಯತ್ಯಾಸಗಳನ್ನು ಗುರುತಿಸಬಹುದು. ಚುನಾವಣೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು ಮತ್ತು ಅಂಶಗಳು ಒಂದಕ್ಕಿಂತ ಒಂದು ಭಿನ್ನ.

Chhattisgarh

ಜಾರ್ಖಂಡ್‌ನ ಬಹುಕೋನಗಳ ರಾಜಕೀಯದಲ್ಲಿ ಮೈತ್ರಿಗಳು ಮುಖ್ಯವಾಗಿದ್ದರೂ, ಛತ್ತೀಸ್‌ಗಢದ ಜೋಡಿ ಪಕ್ಷಗಳ ರಾಜಕೀಯದಲ್ಲಿ, ಬುಡಕಟ್ಟು ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ಮತ್ತು ಗೆಲುವಿನ ಸಮೀಕರಣಗಳು ಹೆಚ್ಚು ಮುಖ್ಯವಾಗುತ್ತವೆ. ಜಾರ್ಖಂಡ್‌ನ ಎಸ್‌ಟಿ ಸ್ಥಾನಗಳ ಮೇಲಿನ ತನ್ನ ಈ ಹಿಂದಿನ ದಾಖಲಾತಿ ಹಿಡಿತವನ್ನು ಉಳಿಸಿಕೊಳ್ಳಲು ಎನ್‌ಡಿಎ ತೀವ್ರವಾಗಿ ಹೆಣಗಾಡುತ್ತಿರುವಂತೆ ಮೇಲುನೋಟಕ್ಕೆ ಕಂಡುಬರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಛತ್ತೀಸ್‌ಗಢದ ಎಸ್‌ಟಿ ಸ್ಥಾನಗಳ ಮೇಲೆ ಬಿಜೆಪಿ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದೆ.

ಜೈಲಿನಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಮುರ್ಮು ಸೊರೆನ್ ಅವರು ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಮೇ 20ರಂದು ಗಾಂಡೇ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆದ ವೇಳೆ  ಸೊರೆನ್ ಕುಟುಂಬದ ರಾಜಕೀಯ ಖ್ಯಾತಿಯನ್ನು ಎತ್ತಿ ಹಿಡಿದಿದ್ದಾರೆ.

ಕಲ್ಪನಾ ಸೊರೆನ್, ಸಂದರ್ಭ ಸೃಷ್ಟಿಸಿದ ನಾಯಕಿ

Kalpana Soren TDG

ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಪತ್ನಿ ಕಲ್ಪನಾ ಸೊರೆನ್ ಅವರು ಪತಿಯ ಬಂಧನದ ಬಳಿಕೆ ರಾಜಕೀಯ ಪ್ರವೇಶಿಸಿ, ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗಾಂಡೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಪನಾ ಸೊರೆನ್‌ ಸ್ಪರ್ಧೆ  ಪ್ರಾಮುಖ್ಯತೆ ಪಡೆದುಕೊಂಡಿದೆ. ಈವರೆಗೂ ಗೃಹಿಣಿಯಾಗಿದ್ದ ಕಲ್ಪನಾ ರಾಜಕೀಯ ಜೀವನದಿಂದ ದೂರ ಉಳಿದಿದ್ದರು. ಆದರೆ ಜಾರಿ ನಿರ್ದೇಶನಾಲಯವು ಅವರ ಪತಿ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ಬಳಿಕದ ಸಂದರ್ಭಗಳು ಅವರನ್ನು ರಾಜಕೀಯಕ್ಕೆ ಧುಮುಕುವಂತೆ ಮಾಡಿವೆ. ಇದೇ ಮೊದಲ ಬಾರಿಗೆ ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ಅವರು, ತಮ್ಮ ಪತಿಯ ಅನುಕಂಪದ ಮತದ ಮೇಲೆ ಅವಲಂಬಿತರಾಗಿದ್ದಾರೆ.

ರಾಜ್ಯದ ಲೋಕಸಭಾ ಸ್ಥಾನಗಳಿಗಿಂತ ಹೆಚ್ಚಾಗಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖಂಡ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಭಾರತೀಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಇಂಡಿಯಾ) ಬಣದ ಅನೇಕ ದೊಡ್ಡ ನಾಯಕರು ಅವರ ಪರವಾಗಿ ಪ್ರಚಾರ ನಡೆಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ಜೆಎಂಎಂ ಅಭ್ಯರ್ಥಿ ಕಲ್ಪನಾ ಸೊರೆನ್ ಪರವಾಗಿ ಗಾಂಡೇಯಲ್ಲಿ ಪ್ರಚಾರ ನಡೆಸಿದ್ದಾರೆ.

ತನ್ನ ಪತಿಯ ಬಂಧನದ ವಿರುದ್ಧ ಆಂದೋಲನ ನಡೆಸಿದ ಅವರು, ಇದು ರಾಜಕೀಯ ಸೇಡಿನ ಆರೋಪವಾಗಿದೆ ಎಂದ ಅವರು ಜಲ, ಅರಣ್ಯ ಮತ್ತು ಜಮೀನ್‌ನ ಆದಿವಾಸಿ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದು ಮಾತ್ರವಲ್ಲದೆ, ಹೇಮಂತ್ ಸೊರೆನ್ ಅವರ ಅನುಪಸ್ಥಿತಿಯಲ್ಲಿ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದರು.

ರಾಜ್ಯ ರಚನೆಯಾದಾಗಿನಿಂದ, ಗೊಂಡ್ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಎಂಎಂ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ. 2019ರಲ್ಲಿ, ಎಜೆ‌ಎಸ್‌ಯು ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಜೆಎಂಎಂ ಸ್ಥಾನಗಳನ್ನು ಗೆಲ್ಲುವ ಮೂಲಕ ಲಾಭ ಪಡೆದಾಗ ಈ ಸಮೀಕರಣವು ಬದಲಾಗಿದೆ.

ಉಪಚುನಾವಣೆಯಲ್ಲಿ ಗೆದ್ದರೆ ಸೊರೆನ್ ಸಿಎಂ ಆಗುವ ಸಾಧ್ಯತೆಯ ಬಗ್ಗೆ ಜೆಎಂಎಂ ವಕ್ತಾರ ಮನೋಜ್ ಪಾಂಡೆ, “ಅವರು ಯಾವುದೇ ಹುದ್ದೆಯನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಮತ್ತು ಜೆಎಂಎಂ ನಾಯಕತ್ವವು ಹಾಗೆ ನಿರ್ಧರಿಸಿದರೆ, ಸೂಚನೆಗಳನ್ನು ಅನುಸರಿಸಬೇಕು. ಆದರೆ, ಪ್ರಸ್ತುತ ಅಂತಹ ಯಾವುದೇ ಮಾತುಕತೆ ಇಲ್ಲ” ಎಂದು ಅವರು ಹೇಳಿದ್ದಾರೆ.

“ವಾಸ್ತವವಾಗಿ, ನಾವು ಲೋಕಸಭಾ ಸ್ಥಾನಗಳ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಏಕೆಂದರೆ ಅವರು ಭರ್ಜರಿ ಗೆಲುವು ಸಾಧಿಸುತ್ತಾರೆ. ಹಾಗಾಗಿ ಉಪಚುನಾವಣೆಯ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಗೊಂಡ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳಲಿದ್ದಾರೆ” ಎಂದು ಪಾಂಡೆ ಹೇಳಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...