ವಿಷಪೂರಿತ ನೀರಿಗೆ 10 ಬಲಿ : ಡಬಲ್ ಇಂಜಿನ್ ಸರ್ಕಾರ ಪೇಚಿನಲ್ಲಿರುವಾಗ ನಾಯಕರುಗಳ ಶೀತಲ ಸಮರ

Date:

ವಿಷಪೂರಿತ ನೀರಿನಿಂದಾಗಿ ಪ್ರಾಣಹೋಗಿರುವುದು ಮಧ್ಯಪ್ರದೇಶ ಡಬಲ್ ಇಂಜಿನ್ ಸರ್ಕಾರದತ್ತ ವಿಪಕ್ಷಗಳು ವಾಗ್ದಾಳಿ ನಡೆಸಲು ಅವಕಾಶ ನೀಡಿದೆ. ಆದರೆ ಬಿಜೆಪಿ ನಾಯಕರೇ ತಮ್ಮ ಸರ್ಕಾರವನ್ನು ಟೀಕಿಸಿರುವುದು ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇವುಗಳ ನಡುವೆಯೇ ಸಿಎಂ ಮೋಹನ್ ಯಾದವ್, ಸಚಿವ ಕೈಲಾಶ್ ಶೀತಲ ಸಮರವೂ ನಡೆಯುತ್ತಿದೆ.

ಕಲಬೆರಕೆ ಸಿರಪ್ ಸೇವನೆಯಿಂದ ಸುಮಾರು 24 ಮಕ್ಕಳು ಸಾವನ್ನಪ್ಪಿದ್ದ ಮಧ್ಯಪ್ರದೇಶದಲ್ಲಿಯೇ ವಿಷಪೂರಿತ ಕುಡಿಯುವ ನೀರಿನಿಂದಾಗಿ 10 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ನಡುವೆ ವಿಷಪೂರಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳು ಮೃತಪಟ್ಟಿವೆ. ಇವೆಲ್ಲವುದರ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯನ್ನು ವಿಪಕ್ಷಗಳು ನಾಯಕರುಗಳು ತರಾಟೆಗೆ ತೆಗೆದುಕೊಳ್ಳುತ್ತಿರುವ ನಡುವೆಯೇ ಮಧ್ಯಪ್ರದೇಶದ ಬಿಜೆಪಿ ನಾಯಕರುಗಳ ತೆರೆಮರೆಯ ಸಮರ ಬಯಲಾಗುತ್ತಿದೆ, ಗೋಚರಕ್ಕೆ ಬರುತ್ತಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.

ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಕೋಲ್ಡ್‌ರಿಫ್(Coldrif) ಕೆಮ್ಮಿನ ಸಿರಪ್ ಸೇವಿಸಿ 24ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಿರಪ್‌ನಲ್ಲಿ ಡೈಎಥಿಲೀನ್ ಗ್ಲೈಕಾಲ್ (Diethylene Glycol – DEG) ಎಂಬ ಅಪಾಯಕಾರಿ ರಾಸಾಯನಿಕ ಶೇ.48.6ರಷ್ಟು ಇರುವುದು ಪ್ರಯೋಗಾಲಯದಲ್ಲಿ ಪತ್ತೆಯಾಗಿತ್ತು. 0.1% ರಾಸಾಯನಿಕ ಬಳಕೆ ಅನುಮತಿಯಿದ್ದು, ಅದಕ್ಕೂ ತೀವ್ರ ಪ್ರಮಾಣದಲ್ಲಿ ಅಧಿಕ ರಾಸಾಯನಿಕ ಬಳಸಿರುವುದು ಪತ್ತೆಯಾಗಿತ್ತು.

ಇದನ್ನು ಓದಿದ್ದೀರಾ? ವಿಷಪೂರಿತ ಆಹಾರ ಸೇವಿಸಿ ಕನಿಷ್ಠ 200 ಗಿಳಿಗಳ ಸಾವು: ದೇಶದಲ್ಲಿ ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲಿ ಕುಸಿತ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಈ ಸಿರಪ್ ನಿಷೇಧಿಸಿದ್ದು ಮಾತ್ರವಲ್ಲದೆ ಭಾರತದಲ್ಲಿ ತಯಾರಾಗುವ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಆತಂಕ ವ್ಯಕ್ತಪಡಿಸಿತ್ತು, ಜಾಗತಿಕವಾಗಿ ಎಚ್ಚರಿಕೆ ನೀಡಿತ್ತು. ವಿಪಕ್ಷಗಳು ಮಧ್ಯಪ್ರದೇಶ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಘಟನೆ ನಡೆದ ಕೆಲವೇ ತಿಂಗಳುಗಳಲ್ಲಿ ಇದೀಗ ಮಧ್ಯಪ್ರದೇಶದ ಇಂದೋರ್‌ನ ಭಗೀರಥಪುರದಲ್ಲಿ ವಿಷಪೂರಿತ ನೀರು ಕುಡಿದು ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಕೆಲವು ಸ್ಥಳೀಯ ಮಾಧ್ಯಮಗಳು ಮೃತರ ಸಂಖ್ಯೆ 14 ದಾಟಿದೆ ಎಂದೂ ಅಂದಾಜಿಸಿದೆ. 2,500ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾದರೆ, ಸುಮಾರು 270ಕ್ಕೂ ಅಧಿಕ ಮಂದಿ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವೆಲ್ಲವುದರ ನಡುವೆ ಡಬಲ್ ಇಂಜಿನ್ ಸರ್ಕಾರದ ನಾಯಕರುಗಳ ನಡುವೆ ಅಧಿಕಾರದ ಶೀತಲ ಸಮರವೂ ಶುರುವಾಗಿದೆ. ಜತೆಗೆ ಎಂದಿನಂತೆ ಕೈಲಾಶ್ ವಿಜಯವರ್ಗೀಯ ಅವರಿಂದ ವಿವಾದವೂ ಸೃಷ್ಟಿಯಾಗಿದೆ.

ವಿವಾದ ಸೃಷ್ಟಿಸಿದ ಕೈಲಾಶ್ ವಿಜಯವರ್ಗೀಯ

ಮಹಿಳೆಯರ ಉಡುಗೆ, ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಬಗ್ಗೆ- ಹೀಗೆ ಹಲವು ವಿಚಾರಗಳಲ್ಲಿ ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಕೈಲಾಶ್ ವಿಜಯವರ್ಗೀಯ ಈ ಬಾರಿಯೂ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ಶುದ್ಧ ನೀರಿನ ವ್ಯವಸ್ಥೆಯ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಆಕ್ರೋಶಗೊಂಡ ಕೈಲಾಶ್, ಅನಗತ್ಯವಾಗಿ ಪ್ರಶ್ನೆ ಕೇಳಬೇಡಿ ಎನ್ನುತ್ತಾ ಅಸಭ್ಯವಾಗಿ ಮಾತನಾಡಿ ತಮ್ಮ ದುರಹಂಕಾರವನ್ನು ಪ್ರದರ್ಶಿಸಿದ್ದಾರೆ. ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.

ಇದನ್ನು ಓದಿದ್ದೀರಾ? ಸಿಂಗಲ್ ಇಂಜಿನ್ 40% ಆದರೆ ಡಬಲ್ ಇಂಜಿನ್ 80% ಆಯ್ತು : ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

ಇನ್ನೊಂದೆಡೆ ಡಬಲ್ ಇಂಜಿನ್ ಸರ್ಕಾರವೆಂದು ಎಲ್ಲೆಡೆ ಪ್ರಚಾರ ಮಾಡಿಕೊಂಡು ಬರುವ ಪ್ರಧಾನಿ ನರೇಂದ್ರ ಮೋದಿ ಮಾತ್ರ ಮಧ್ಯಪ್ರದೇಶ ಕಲುಷಿತ ನೀರು ವಿಚಾರದಲ್ಲಿ ‘ತುಟುಕ್-ಪಿಟಿಕ್’ ಎನ್ನದಿರುವುದೂ ಚರ್ಚೆಗೆ ಗ್ರಾಸವಾಗುತ್ತಿದೆ. “ದೇಶದಲ್ಲಿ ಬಡವರು ಸತ್ತಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ತಾಳುತ್ತಾರೆ” ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿಪಕ್ಷಗಳ ಟೀಕೆ ಸಾಮಾನ್ಯವಾದರೂ ಈ ಬಾರಿ ಮಧ್ಯಪ್ರದೇಶ ಸರ್ಕಾರವು ತಮ್ಮ ನಾಯಕರುಗಳ ವಾಗ್ದಾಳಿಗೂ ಗುರಿಯಾಗಿದೆ.

ಮಧ್ಯಪ್ರದೇಶದಲ್ಲಿ 2003ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ, 2014ರಿಂದ-2019ರವರೆಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವೆಯಾಗಿ ಕೆಲಸ ಮಾಡಿದವರು. ಇದೀಗ ಇಂದೋರ್‌ನಲ್ಲಿ ವಿಷಪೂರಿತ ನೀರಿನ ವಿಚಾರದಲ್ಲಿ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮದೇ ಸರ್ಕಾರದ ವಿರುದ್ಧ ಉಮಾ ಭಾರತಿ ಆಕ್ರೋಶ

ವಿಷಪೂರಿತ ನೀರಿನಿಂದಾಗಿ ಜನರು ಸಾವನ್ನಪ್ಪಿರುವುದು ಇಡೀ ರಾಜ್ಯ, ಸರ್ಕಾರ ಮತ್ತು ವ್ಯವಸ್ಥೆಗೆ ಅವಮಾನ, ಕಳಂಕ ಎಂದು ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಘಟನೆಯನ್ನು ‘ಮಹಾ ಪಾಪ’, ಸರ್ಕಾರ ಸಂತ್ರಸ್ತ ಕುಟುಂಬಗಳ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಘೋಷಿಸಿರುವ 2 ಲಕ್ಷ ರೂಪಾಯಿ ಪರಿಹಾರವನ್ನೂ ಟೀಕಿಸಿರುವ ಉಮಾಭಾರತಿ, “ಮಾನವನ ಜೀವಕ್ಕೆ 2 ಲಕ್ಷ ರೂಪಾಯಿ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದಿದ್ದಾರೆ. ಇದು ಸಿಎಂ ಮೋಹನ್ ಯಾದವ್‌ ನಾಯಕತ್ವಕ್ಕೆ ಎದುರಾಗಿರುವ ‘ಪರೀಕ್ಷೆಯ ಸಮಯ’ ಎಂದು ಬಣ್ಣಿಸಿರುವ ಉಮಾಭಾರತಿ, ಉನ್ನತ ಮಟ್ಟದಿಂದ ಕೆಳಹಂತದವರೆಗೂ ಎಲ್ಲಾ ತಪ್ಪಿತಸ್ಥರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು “ಸಾಮಾನ್ಯ ಜನರಿಗೆ ವಿಷಪೂರಿತ ನೀರು ಸಿಗುವಾಗ ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಬಾಟಲಿ ನೀರು ಕುಡಿಯುತ್ತಾ ಕುಳಿತಿದ್ದಾರೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಹೀಗೆ ಮಧ್ಯಪ್ರದೇಶ ಸರ್ಕಾರವು ತಮ್ಮ ನಾಯಕರುಗಳಿಂದಲೂ ವಿಪಕ್ಷ ನಾಯಕರುಗಳಿಂದಲೂ ವಾಗ್ದಾಳಿ ತುತ್ತಾಗಿದೆ, ಪೇಚಿಗೆ ಸಿಲುಕಿದೆ. ಇವೆಲ್ಲವುದರ ನಡುವೆ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಸಚಿವ ಕೈಲಾಶ್ ವಿಜಯವರ್ಗೀಯ ನಡುವೆ ತೆರೆಮರೆಯ ಸಮರ ನಡೆಯುತ್ತಿದೆ. ಮೃತರ ಸಂಖ್ಯೆಗೆ ಸಂಬಂಧಿಸಿದಂತೆ ಸಿಎಂ, ಕೈಲಾಶ್ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಸಿಎಂ ಯಾದವ್ ನಾಲ್ವರು ಮೃತಪಟ್ಟಿದ್ದಾರೆ ಎಂದರೆ ಕೈಲಾಶ್ ಮಾತ್ರ 8ರಿಂದ 9 ಮಂದಿ ಮೃತಪಟ್ಟಿದ್ದಾರೆ ಎಂಬ ವಿಭಿನ್ನ ಮಾಹಿತಿ ನೀಡಿದ್ದಾರೆ.

ಇದಾದ ಬಳಿಕ ಸಿಎಂ ಮತ್ತು ತಮ್ಮ ನಡುವಿನ ಸಮನ್ವಯದ ಕೊರತೆಯತ್ತ ಗಮನಹರಿಸದೆ ಇಂದೋರ್ ಮೇಯರ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್ (IMC) ಅಧಿಕಾರಿಗಳ ನಡುವ ಸಮನ್ವಯದ ಕೊರತೆಯಿದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇವೆಲ್ಲವುದರ ನಡುವೆ ಪತ್ರಕರ್ತರ ಜತೆ ಅಸಭ್ಯವಾಗಿ ಮಾತನಾಡಿದ ಸಚಿವ ಕೈಲಾಶ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಯಾದವ್ ಭರವಸೆ ನೀಡಿದ್ದಾರೆ.

ಇದನ್ನು ಓದಿದ್ದೀರಾ? ಡಬಲ್ ಇಂಜಿನ್ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ‘ಡಬಲ್ ಹೊಡೆತ’: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

ಇಬ್ಬರೂ ನಾಯಕರು ಒಂದೇ ಪ್ರದೇಶದ ಹಿರಿಯ ನಾಯಕರುಗಳು. ಕಳೆದ ವಿಧಾನಸಭಾ ಚುನಾವಣೆಯ ನಂತರ ಕೈಲಾಶ್ ವಿಜಯವರ್ಗೀಯ ಮತ್ತು ಪ್ರಹ್ಲಾದ್ ಪಟೇಲ್ ಸೇರಿದಂತೆ ಇತರ ಹಿರಿಯ ನಾಯಕರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಇದರಿಂದಾಗಿ ಇಂದಿಗೂ ಇಬ್ಬರ ನಡುವೆ ರಾಜಕೀಯ ಪೈಪೋಟಿ, ಶೀತಲ ಸಮರ ಜೀವಂತವಾಗಿದೆ. ಇದು ಹಲವು ಬಾರಿ ಕಣ್ಣಿಗೆ ರಾಚುವಂತೆ ಕಂಡಿರುವುದೂ ಇದೆ.

ಮಧ್ಯಪ್ರದೇಶ ವಿಧಾನಸಭೆಯ 69 ವರ್ಷಗಳ ಸಂಭ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಸಿಎಂ ಮೋಹನ್ ಯಾದವ್ ಅವರ ಔಪಚಾರಿಕ ಉಡುಪನ್ನು ಕೈಲಾಶ್ ವ್ಯಂಗ್ಯವಾಗಿ ಟೀಕಿಸಿದ್ದರು. “ಅಧ್ಯಕ್ಷರೇ ನೋಡಿ, ನಮ್ಮ ನಾಯಕರು ಇಂದು ಸೂಟ್-ಬೂಟ್ ಧರಿಸಿ ಬಂದಿದ್ದಾರೆ. ಆದರೆ ನಾವೆಲ್ಲರೂ ಬಡವರಂತೆ ಹೀಗೆಯೇ ಕುಳಿತಿದ್ದೇವೆ” ಎಂದಿದ್ದರು. ಈ ಹೇಳಿಕೆ ಹಾಸ್ಯದಂತೆ ಕಂಡರೂ ಇಬ್ಬರು ನಾಯಕರುಗಳ ನಡುವಿನ ಶೀತಲ ಸಮರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಕೆಲವು ಸಭೆಗಳಿಗೆ ಕೈಲಾಶ್ ಗೈರಾಗುವುದು ಇವೆಲ್ಲವುದಕ್ಕೆ ಪುಷ್ಠಿ ನೀಡಿತ್ತು. ಇವೆಲ್ಲವೂ ಸದ್ಯ ಮಧ್ಯಪ್ರದೇಶದ ಡಬಲ್ ಇಂಜಿನ್ ಸರ್ಕಾರವನ್ನು ಕೊಂಚ ಅಲುಗಾಡಿಸುತ್ತಿರುವಂತಿದೆ. ಈ ಶೀತಲ ಸಮರವು ಇನ್ನೆರಡು ವರ್ಷದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ನೇರ ಯುದ್ಧವಾದೀತು ಎಂಬ ಅಭಿಪ್ರಾಯಗಳೂ ಇವೆ!

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...