ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಐಪಿಎಸ್ ಮಹಿಳಾ ಅಧಿಕಾರಿ ನಡುವೆ ತೀವ್ರ ವಾಗ್ವಾದ ನಡೆದಿದೆ.
ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ಐಪಿಎಸ್ ಅಧಿಕಾರಿಯೊಂದಿಗೆ ಫೋನ್‌ನಲ್ಲಿ ಅಜಿತ್ ಪವಾರ್ ಮಾತನಾಡಿದ್ದಾರೆ. ಇದೀಗ ಈ ವಾಗ್ವಾದದ ಸಂಭಾಷಣೆಯ
ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಜಿತ್ ಪವಾರ್, “ನಾನು ಉಪಮುಖ್ಯಮಂತ್ರಿಯಾಗಿದ್ದು, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು” ಎಂದು ಸೂಚನೆ ನೀಡಿದ್ದಾರೆ. ಆದರೆ ಪವಾರ್ ಧ್ವನಿಯನ್ನು ಗುರುತಿಸದ ಅಧಿಕಾರಿ ಅಂಜನಾ ಕೃಷ್ಣ “ನನ್ನ ಮೊಬೈಲ್‌ಗೆ ಕರೆ ಮಾಡಿ” ಎಂದು ಹೇಳುತ್ತಾರೆ.
“ನಾನು ಹೇಳಿದರೂ ನೀನು ಕೇಳುತ್ತಿಲ್ಲವಲ್ಲ? ನಿನಗೆಷ್ಟು ಧೈರ್ಯ? ನಿನ್ನ ನಂಬರ್ ಕೊಡು, ವಿಡಿಯೊ ಕರೆ ಮಾಡುವೆ” ಎಂದು ಪವಾರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ, ಅಂಜನಾ ಕೃಷ್ಣರಿಗೆ ವಿಡಿಯೊ ಕರೆ ಮಾಡಿರುವ ಅಜಿತ್ ಪವಾರ್, ಅಲ್ಲಿಂದ ತೆರಳುವಂತೆ ಗದರಿಸಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಎನ್‌ಸಿಪಿ ಸಂಸದ ಸುನಿಲ್ ತಟ್ಟರೆ, “ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ. ಅಜಿತ್ ಪವಾರ್ ಅವರ ಉದ್ದೇಶ ಅಧಿಕಾರಿಯ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿರಲಿಲ್ಲ; ಬದಲಿಗೆ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಅಧಿಕಾರಿಯೊಂದಿಗೆ ಕಠಿಣವಾಗಿ ಮಾತನಾಡಿರಬಹುದು” ಎಂದಿದ್ದಾರೆ.
𝐀𝐣𝐢𝐭 𝐏𝐚𝐰𝐚𝐫: This is the Deputy CM speaking. Stop your action.
— Mahua Moitra Fans (@MahuaMoitraFans) September 5, 2025
𝐈𝐏𝐒 𝐀𝐧𝐣𝐚𝐥𝐢: There was a complaint about illegal mining. Helping the complainant is our duty.
𝐀𝐣𝐢𝐭 𝐏𝐚𝐰𝐚𝐫: I’m telling you to stop the action. Otherwise, I will take action against you.… pic.twitter.com/Dr5u25PzHi





