ಮಹಾರಾಷ್ಟ್ರ ಲೋಕಸಭೆ | ಹೋಳಾದ ಪಕ್ಷಗಳಿಂದ ಅಸ್ತಿತ್ವಕ್ಕಾಗಿ ಹೋರಾಟ; ಅಸ್ಸೆಂಬ್ಲಿಗೂ ‌ಇದೇ ಸೆಮಿಫೈನಲ್

Date:

‘ಇಂಡಿಯಾ’ ಕೂಟದ ಭಾಗವಾಗಿರುವ ಮಹಾರಾಷ್ಟ್ರದಲ್ಲಿ ‘ಮಹಾ ವಿಕಾಸ್‌ ಅಘಾಡಿ’ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟದ ನಡುವೆ ತೀವ್ರ ಹಣಾಹಣಿ ಕದನ ಏರ್ಪಟ್ಟಿದೆ. ಅಷ್ಟೇ ಅಲ್ಲದೇ ಎರಡು ಒಕ್ಕೂಟದಲ್ಲಿರುವ ಪಕ್ಷಗಳ ಹೋರಾಟ ರಾಜಕೀಯ ಅಸ್ತಿತ್ವದ ಪ್ರತೀಕವಾಗಿ ಕಾಣುತ್ತಿದೆ.

 

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಬಳಿಕ ಆರು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿಯ ಬಾರಿಯ ಲೋಕಸಭಾ ಚುನಾವಣೆ ಮುಂದಿನ ಅಸೆಂಬ್ಲಿ ಚುನಾವಣೆಯ ಸಮರಕ್ಕೆ ಒಂದು ರೀತಿಯಲ್ಲಿ ವೇದಿಕೆಯಂತೆ ಕಾಣುತ್ತಿದೆ.

ಐದು ಹಂತಗಳಲ್ಲಿ ಮಹಾರಾಷ್ಟ್ರದ ಮತದಾನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮತಗಳ ಎಣಿಕೆ ಜೂನ್ 4 ರಂದು ನಿಗದಿಯಾಗಿದೆ. (ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13 ಹಾಗೂ ಮೇ 20 ಮತದಾನ ನಡೆದ ಹಂತಗಳು) ಮಹಾರಾಷ್ಟ್ರದ ಲೋಕಸಭೆ ಚುನಾವಣೆ ಫಲಿತಾಂಶ ಮುಂದಿನ ಅಸೆಂಬ್ಲಿ ಚುನಾವಣೆ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದ್ದು, ಈ ಕಾರಣಕ್ಕಾಗಿಯೇ ಮಹಾರಾಷ್ಟ್ರ ಫಲಿತಾಂಶದ ಮೇಲೆ ದೇಶದ ರಾಜಕೀಯ ಆಸಕ್ತರ ಕಣ್ಣು ನೆಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಇಂಡಿಯಾ’ ಕೂಟದ ಭಾಗವಾಗಿರುವ ಮಹಾರಾಷ್ಟ್ರದಲ್ಲಿ ‘ಮಹಾ ವಿಕಾಸ್‌ ಅಘಾಡಿ’ ಮೈತ್ರಿ ಕೂಟ ಮತ್ತು ಎನ್‌ಡಿಎ ಮೈತ್ರಿ ಕೂಟದ ನಡುವೆ ತೀವ್ರ ಹಣಾಹಣಿ ಕದನ ಏರ್ಪಟ್ಟಿದೆ. ಅಷ್ಟೇ ಅಲ್ಲದೇ ಎರಡು ಒಕ್ಕೂಟದಲ್ಲಿರುವ ಪಕ್ಷಗಳ ಹೋರಾಟ ರಾಜಕೀಯ ಅಸ್ತಿತ್ವದ ಪ್ರತೀಕವಾಗಿ ಕಾಣುತ್ತಿದೆ.

ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಿಗೆ ‘ಮಹಾ ವಿಕಾಸ್‌ ಅಘಾಡಿ’ ಮೈತ್ರಿ ಕೂಟದಿಂದ ಉದ್ದವ್‌ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 21 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹುರಿಯಾಳಾಗಿಸಿದೆ. ಉಳಿದ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಸ್ಥಾನಗಳನ್ನು ಹಂಚಲಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಬಿಜೆಪಿ 28 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಏಕನಾ‌ಥ್‌ ಶಿಂದೆ ನೇತೃತ್ವದ ಶಿವಸೇನೆಯಿಂದ 14 ಅಭ್ಯರ್ಥಿಗಳು, ಅಜಿತ್‌ ಪವಾರ ನೇತೃತ್ವದ ಎನ್‌ಸಿಪಿಯಿಂದ 5 ಹಾಗೂ ಆರ್‌ಎಸ್‌ಪಿ ಒಂದು ಸ್ಥಾನದಲ್ಲಿ ಸ್ಪರ್ಧೆ ಮಾಡಿವೆ.

ಎರಡು ವರ್ಷದಲ್ಲಿ ಬದಲಾವಣೆ

2019ರ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಆಗಿನ ಸಂಯುಕ್ತ ಶಿವಸೇನೆ ಎನ್‌ಡಿಎ ಕೂಟದಿಂದ ಹೊರಬಂದು ಕಾಂಗ್ರೆಸ್‌ ಮತ್ತು ಎನ್‌ಸಿಪಿಯೊಂದಿಗೆ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟ ಸರ್ಕಾರ ರಚಿಸಿತ್ತು. 2022ರಲ್ಲಿ ಶಿವಸೇನೆಯಲ್ಲಿ ಒಡಕು ಉಂಟಾಗಿ ಏಕನಾಥ್‌ ಶಿಂದೆ ಅವರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದರು. ಕೊನೆಗೆ 2022ರಲ್ಲಿ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೈತ್ರಿಕೂಟದ ‘ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ’ ಸರ್ಕಾರವನ್ನು ಪತನಗೊಳಿಸಿ ಶಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು.

ಏಕನಾಥ್ ಶಿಂದೆ ಸರ್ಕಾರ ಸ್ಥಾಪಿಸಿದ ನಂತರ, ಉದ್ಧವ್ ಠಾಕ್ರೆ ಅವರ ಅನುಮತಿಯಿಲ್ಲದೆ ಶಿವಸೇನೆ ಹೆಸರು ಮತ್ತು ಚಿಹ್ನೆ ಬಳಸಲು ಪ್ರಾರಂಭಿಸಿದರು. ಇದು ಕೊನೆಗೆ ವಿವಾದಕ್ಕೂ ಕಾರಣವಾಯಿತು. ಉದ್ಧವ್ ಅವರ ಬಣ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತು, ಅಂತಿಮವಾಗಿ ಅದನ್ನು ಭಾರತದ ಚುನಾವಣಾ ಆಯೋಗಕ್ಕೆ ವರ್ಗಾಯಿಸಲಾಯಿತು. ಆಯೋಗವು ಏಕನಾಥ್ ಶಿಂದೆ ಬಣವನ್ನು ನಿಜವಾದ ಶಿವಸೇನೆ ಪಕ್ಷವೆಂದು ಗುರುತಿಸಿತು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದು ಉದ್ದವ್‌ ಠಾಕ್ರೆ ಟೀಕಿಸಿದರು.

ಉದ್ದವ್‌ ಠಾಕ್ರೆ ಸವಾಲು

ಅಷ್ಟಕ್ಕೆ ಸುಮ್ಮನಾಗದ ಉದ್ದವ್‌ ಠಾಕ್ರೆ ಶಿವಸೇನೆ(ಯುಬಿಟಿ) ಸ್ಥಾಪಿಸಿ, ತಮ್ಮ ಪಕ್ಷದ ಚುನಾವಣಾ ಚಿಹ್ನೆ ‘ಉರಿಯುವ ಜ್ಯೋತಿ’ ಆಯ್ಕೆ ಮಾಡಿಕೊಂಡು, “ದೇಶದಲ್ಲಿನ ನಿರಂಕುಶ ಆಡಳಿತವನ್ನು ಸುಟ್ಟು ಬೂದಿ ಮಾಡಲಿದೆ. ಉರಿಯುವ ಜ್ಯೋತಿ ಚಿಹ್ನೆಯು ಮಹಾರಾಷ್ಟ್ರದ ಮೂಲೆ ಮೂಲೆಗಳನ್ನು ತಲುಪಿದೆ” ಎಂದು ಸಾರಿದ್ದಾರೆ. ಈ ಮೂಲಕ ಎನ್‌ಸಿಪಿ (ಶರದ್ ಪವಾರ್‌) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷಗಳ ಕೂಟದೊಂದಿಗೆ ಎನ್‌ಡಿಎ ಕೂಟವನ್ನು ಸೋಲಿಸಲು ಠಾಕ್ರೆ ಪಣತೊಟ್ಟು ನಿಂತಿದ್ದಾರೆ.

2023ರಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಮತ್ತು ಹಿರಿಯ ನಾಯಕ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ತಮ್ಮ ಪಕ್ಷವಾದ ಎನ್‌ಸಿಪಿಯನ್ನು ವಿಭಜಿಸಿ, ಈಗ ಅವರು ಎನ್‌ಡಿಎ ಭಾಗವಾಗಿದ್ದಾರೆ. ಶರದ್ ಪವಾರ್ ಈ ಸೇಡು ತೀರಿಸಿಕೊಳ್ಳಲು ಕಾದುಕುಳಿತಿದ್ದಾರೆ.

2014 ರಲ್ಲಿ ಬಿಜೆಪಿ ಮಹಾರಾಷ್ಟ್ರದಲ್ಲಿ 23 ಸ್ಥಾನಗಳನ್ನು ಗೆದ್ದುಕೊಂಡರೆ, ಅದರ ಮೈತ್ರಿ ಪಾಲುದಾರ ಪಕ್ಷವಾಗಿದ್ದ ಶಿವಸೇನೆ 18 ಸ್ಥಾನಗಳನ್ನು ಪಡೆದುಕೊಂಡಿತು. ಎನ್‌ಸಿಪಿ 4, ಕಾಂಗ್ರೆಸ್‌ 2 ಸ್ಥಾನಗಳಲ್ಲಿ ಗೆದ್ದಿತ್ತು. 2019ರಲ್ಲಿ ಬಿಜೆಪಿ 23, ಶಿವಸೇನೆ 18 ಹಾಗೂ ಎನ್‌ಸಿಪಿ 4 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೊದಲು ಎನ್‌ಡಿಎ ಭಾಗವಾಗಿದ್ದ ಶಿವಸೇನೆ ಮತ್ತು ಎನ್‌ಸಿಪಿ ಒಡೆದ ಮನೆಯಾಗಿದೆ. ಶಿವಸೇನೆ ಮತ್ತು ಎನ್‌ಸಿಪಿಯ ಮೂಲ ನಾಯಕರಾದ ಉದ್ದವ್‌ ಠಾಕ್ರೆ ಮತ್ತು ಶರದ್‌ ಪವಾರ್ ಈಗ ಇಂಡಿಯಾ ಕೂಟದ ಭಾಗವಾಗಿ ಮತ್ತೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದ್ದಾರೆ.

ಮಿಂಚಿನ ವೇಗದಲ್ಲಿ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾಗುವ ಮಹಾರಾಷ್ಟ್ರ ರಾಜಕಾರಣದ ಚದುರಂಗ ಆಟದಲ್ಲಿ ಲೋಕಸಭೆ ಎಂದರೆ ಸೆಮಿಫೈನಲ್. ಪ್ರಧಾನಿ ನರೇಂದ್ರ ಮೋದಿಯವರು ಈ ರಾಜ್ಯವನ್ನು ನಂಬಿಕೊಂಡು ತಮ್ಮ ಮೂರನೇ ಅಧಿಕಾರಾವಧಿಗಾಗಿ ಹೋರಾಡುತ್ತಿದ್ದಾರೆ. ಈ ಬಾರಿಯ ಸ್ಥಳೀಯ ರಾಜಕಾರಣದ ದ್ವೇಷಗಳು ಮತ್ತು ಒಳಒಪ್ಪಂದಗಳು ಮೋದಿಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ರಾಜಕೀಯ ಸೇಡು

ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳ ಸೋಲು-ಗೆಲುವಿನ ಪರಾಮರ್ಶೆಯಲ್ಲಿ ಅನೇಕ ದಿಗ್ಗಜ ರಾಜಕೀಯ ನಾಯಕರ ಭವಿಷ್ಯ ಅಡಗಿದೆ. ಒಂದು ಕಡೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂದೆ ಮತ್ತು ಮತ್ತೊಂದೆಡೆ ಪವಾರ್ ಕುಟುಂಬವನ್ನು ಒಳಗೊಂಡ ರಾಜಕೀಯ ಸೇಡು ಇತ್ಯರ್ಥಗೊಳ್ಳಲಿದೆ.

ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಹೇಳಿಕೊಳ್ಳಲು ಬೇರೆ ಮುಖಗಳಿದ್ದರೂ ಅದರಲ್ಲಿ ಫಡ್ನವೀಸ್‌ ಮೊದಲಿಗರು. ಅವರೇ ಆ ರಾಜ್ಯದ ಬಿಜೆಪಿ ಮುಖ. ಫಡ್ನವೀಸ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲವಾದರೂ ಅವರ ರಾಜಕೀಯ ಜೀವನ ಅಪಾಯದಲ್ಲಿದೆ. 2014 ಮತ್ತು 2019 ರ ಚುನಾವಣೆಯಲ್ಲಿ ಬಿಜೆಪಿ 23 ಮತ್ತು 22 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಈಗ ಈ ಲೆಕ್ಕಾಚಾರವನ್ನು ಉಳಿಸಿಕೊಳ್ಳಲು ಫಡ್ನವೀಸ್ ಮುಂದೆ ದೊಡ್ಡ ಸವಾಲು ಇದೆ. ಹೀಗಾಗಿ ಬಿಜೆಪಿಗೆ ಈ ಚುನಾವಣೆ ದೇವೇಂದ್ರ ಫಡ್ನವೀಸ್ ಅವರ ರಾಜಕೀಯ ಗ್ರಾಫ್ ಅನ್ನು ನಿರ್ಧರಿಸಲಿದೆ.

ಇನ್ನು ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಸಿಎಂ ಶಿಂದೆ ಯಶಸ್ವಿಯಾದರೆ, ಅವರಿಗೂ ಪಕ್ಷದಲ್ಲಿ ಅಸ್ತಿತ್ವ ಉಳಿಯಲಿದೆ. ಒಂದು ವೇಳೆ ಬಿಜೆಪಿ ಕಣದಲ್ಲಿ ಭಾರೀ ಕುಸಿತ ಕಂಡರೆ ರಾಜ್ಯ ನಾಯಕತ್ವ ಬದಲಾವಣೆ ಗಾಳಿ ಖಚಿತ. ಫಡ್ನವೀಸ್ ಅವರ ಪ್ರತಿಸ್ಪರ್ಧಿಗಳಾದ ಪಂಕಜಾ ಮುಂಡೆ, ವಿನೋದ್ ತಾವ್ಡೆ ಮತ್ತು ಏಕನಾಥ್ ಖಾಡ್ಸೆ ಅವರು ಮುನ್ನೆಲೆಗೆ ಬಂದುಬಿಡುವ ಸಾಧ್ಯತೆ ದಟ್ಟವಾಗಿದೆ.

ಅಜಿತ್ ಪವಾರ್

ಅಜಿತ್ ಪವಾರ್ ಎಲ್ಲ ಕಾರ್ಡ್‌ಗಳನ್ನು ತೆರೆಯುವ ಮೂಲಕ ಎಲ್ಲವನ್ನೂ ಪಣಕ್ಕಿಟ್ಟಿದ್ದಾರೆ. ಅವರು ಬಾರಾಮತಿ ಕ್ಷೇತ್ರದಿಂದ ತಮ್ಮ ಸೋದರ ಸಂಬಂಧಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಸಂಗಾತಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಿದ್ದಾರೆ. ಪವಾರ್ ವರ್ಸಸ್ ಸುಳೆ ಪವಾರ್ ಸ್ಪರ್ಧೆಯೊಂದಿಗೆ, ಬಾರಾಮತಿ ಮಹಾರಾಷ್ಟ್ರದ ಪ್ರಮುಖ ರಣರಂಗವಾಗಿ ಬದಲಾಗಿದೆ. ಗೆಲುವು ಮತ್ತು ಸೋಲು ಕಿರಿಯ ಮತ್ತು ಹಿರಿಯ ಪವಾರ್ ಹೆಸರಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ ಅಸ್ತಿತ್ವವಾದದ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಅವರ ಪುತ್ರ ಆದಿತ್ಯನ ಭವಿಷ್ಯವೂ ಅತಂತ್ರವಾಗಿದೆ. ಶಿಂದೆಯನ್ನು ಮೂಲೆಗುಂಪು ಮಾಡಿ ರಾಜಕೀಯ ಅಸ್ತಿತ್ವಕ್ಕಾಗಿ ಉದ್ಧವ್ ಠಾಕ್ರೆ ಹೋರಾಟ ರೋಚಕಥೆಯಿಂದ ಕೂಡಿದೆ.

ವಿದರ್ಭ ಮತ್ತು ಮರಾಠವಾಡದಲ್ಲಿ, ದಲಿತ ಮತ್ತು ಮರಾಠ ಮತದಾರರ ಹೆಚ್ಚಿನ ಸಂಖ್ಯೆಯೊಂದಿಗೆ ದೊಡ್ಡ ಮತ್ತು ಸಣ್ಣ-ಪ್ರಮಾಣದ ರೈತರು ವಾಸಿಸುತ್ತಿದ್ದಾರೆ. ಅವರಿಗೆ ಮೀಸಲಾತಿ ಸೇರಿದಂತೆ ವಿವಿಧ ಸಮಸ್ಯೆಗಳು ಆಡಳಿತಾರೂಢ ಸರ್ಕಾರದ ಮೇಲೆ ಕಣ್ಣು ಕೆಂಪಾಗಿಸಿದೆ. ಇದೆಲ್ಲವೂ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ. ಕಾಂಗ್ರೆಸ್‌ ಗ್ಯಾರಂಟಿಗಳು ಕೂಡ ಮಹಿಳಾ ಮತದಾರರನ್ನು ಸೆಳೆದಿದ್ದು, ಬಿಜೆಪಿಗೆ ಈ ಮತಗಳು ಬಹಳ ದುಬಾರಿಯಾಗಲಿವೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...