ತಮಿಳುನಾಡಿನ ಸೇಲಂನಲ್ಲಿ ಶುಕ್ರವಾರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರ ರ‍್ಯಾಲಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೊದಲು ಬಿಸಿಲಿನ ತಾಪದಿಂದ ಮೂರ್ಛೆ ಹೋದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆ ವ್ಯಕ್ತಿ ಹೃದಯಸಂಬಂಧಿ ಕಾಯಿಲೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಕರೂರು ಕಾಲ್ತುಳಿತ ದುರಂತ ರಾಷ್ಟ್ರೀಯ ಆತ್ಮಸಾಕ್ಷಿಗೆ ಆಘಾತ; ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಕರೂರಿನಲ್ಲಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 41 ಮಂದಿ ಸಾವನ್ನಪ್ಪಿದ್ದರು. ಆದ್ದರಿಂದ ಸೇಲಂ ರ‍್ಯಾಲಿಯಲ್ಲಿ ಕರೂರಿನಂತಹ ದುರಂತ ಸಂಭವಿಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.
ಜನದಟ್ಟಣೆಯನ್ನು ತಡೆಯಲು ಭಾರೀ ಪೊಲೀಸ್ ನಿಯೋಜನೆ, ಪ್ರತಿ ಪ್ರವೇಶ ದಾರಿಯಲ್ಲಿ ವಾಹನ ತಪಾಸಣೆ ಮತ್ತು ಸಂಚಾರ ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸಲಾಗಿತ್ತು.





