ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ತಾಲಿಬಾನ್ ಸರ್ಕಾರ ಎಂದು ಅರೋಪಿಸಿದ್ದ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರೀಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, “ಸದನದಲ್ಲಿ ತಾಲಿಬಾನಿಗಳಿಗಿಂತ ಅಸಭ್ಯವಾಗಿ ಸ್ಪೀಕರ್ ಮೇಲೆಯೇ ಗೂಂಡಾಗಿರಿ ನಡೆಸಿದ್ದಾರೆ ಬಿಜೆಪಿಯವರು” ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, “ಬೊಮ್ಮಾಯಿಯವರು ನಮಗೆ ತಾಲಿಬಾನ್ ಸರ್ಕಾರ ಎಂದಿದ್ದಾರೆ. ಆದರೆ, ಬೊಮ್ಮಾಯಿಯವರು ಉತ್ತರಿಸಲೇಬೇಕಾದ ಪ್ರಶ್ನೆ ಒಂದಿದೆ. ಬೊಮ್ಮಾಯಿ ಅವರು ಪಾಕಿಸ್ತಾನದಲ್ಲಿ ಯಾವಾಗ ಮುಖ್ಯಮಂತ್ರಿಯಾಗಿದ್ದರು, ಯಾಕಾಗಿ ಆಗಿದ್ದರು? ಈ ಪ್ರಶ್ನೆ ನಾವು ಕೇಳುತ್ತಿರುವುದಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೊಮ್ಮಾಯಿಯವರ ಪ್ರತಿಸ್ಪರ್ಧಿಯಾಗಿರುವ ಅವರದ್ದೇ ಪಕ್ಷದ ಯತ್ನಾಳ್ ಅವರು ಕೇಳುತ್ತಿರುವುದು” ಎಂದು ಯತ್ನಾಳ್ ಭಾಷಣದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
“ಬೊಮ್ಮಾಯಿ ಅವರಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೇ ಲಾಹೋರ್ ಮುಖ್ಯಮಂತ್ರಿಯೇ ಎಂದು ಕೇಳಿದ್ದರಂತೆ, ಬೊಮ್ಮಾಯಿ ಅವರು ಯತ್ನಾಳ್ ಅವರ ಈ ಮಾತಿಗೆ ಏನು ಹೇಳುತ್ತಾರೋ ಅದನ್ನು ಮೊದಲು ಸ್ಪಷ್ಟಪಡಿಸಲಿ, ನಂತರ ತಾಲಿಬಾನ್ ಕಡೆ ಹೋಗಲಿ” ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವದ ಧ್ವನಿ ಹತ್ತಿಕ್ಕಲಾಗಿದೆ ಎಂದು ಆರೋಪಿಸಿ 10 ಪ್ರಶ್ನೆ ಸರ್ಕಾರದ ಮುಂದಿಟ್ಟ ಬಿಜೆಪಿ




