ಶಿವಮೊಗ್ಗ, ಭದ್ರಾವತಿ, ನರಸಿಂಹರಾಜಪುರ ಮಾರ್ಗವಾಗಿ ಮಂಗಳೂರಿಗೆ ರೈಲು ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ, ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಮನವಿ ಸಲ್ಲಿಸಿದರು.
ನರಸಿಂಹರಾಜಪುರ: ಶಿವಮೊಗ್ಗ- ಮಂಗಳೂರಿಗೆ ಭದ್ರಾವತಿ- ನರಸಿಂಹರಾಜಪುರ ಕೊಪ್ಪ- ಶೃಂಗೇರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಶಾಸಕ ಟಿ.ಡಿ. ರಾಜೇಗೌಡ ಮನವಿ ಸಲ್ಲಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜಪುರ ತಾಲ್ಲೂಕಿನಲ್ಲಿ 1917ರಲ್ಲಿಯೇ ತರೀಕೆರೆ- ಹೊಸಳ್ಳಿ-ತಡಸ ಮಾರ್ಗವಾಗಿ ನರಸಿಂಹರಾಜ-ಪುರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಭದ್ರಾನದಿಗೆ ನಿರ್ಮಾಣವಾದ ಅಣೆಕಟ್ಟಿನಿಂದ ಸದರಿ ರೈಲ್ವೆ ಮಾರ್ಗವು ಮುಳುಗಡೆಯಾಗಿ ಈ ಭಾಗದ ಜನರು ರೈಲ್ವೆ ಸಂಪರ್ಕದಿಂದ ವಂಚಿ-ತರಾಗಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರವೂ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರು ವುದರಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲವಾಗುವಂತೆ ಶಿವಮೊಗ್ಗ, ಭದ್ರಾವತಿ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ರೈಲು ಸಂಪರ್ಕ ಕಲ್ಪಿಸಿಕೊಡುವಂತೆ ಶಾಸಕ ಟಿ ಡಿ ರಾಜೇಗೌಡ ಮನವಿ ಸಲ್ಲಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಂವಿಧಾನ, ನ್ಯಾಯ ಮೂರ್ತಿ ಬಿ.ಆರ್ ಗವಾಯಿ ಮೇಲಿನ ಅವಮಾನ ಖಂಡಿಸಿ; ಎದ್ದೇಳು ಕರ್ನಾಟಕ ಪ್ರತಿಭಟನೆ
ಈ ಸಂದರ್ಭದಲ್ಲಿ ಪಟ್ಟಣ ನರಸಿಂಹರಾಜಪುರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್. ಸುಬ್ರಹ್ಮಣ್ಯ, ಮುಖಂಡ ಹುಯಿಗೆರೆ ಕಾಫಿ ಗಿರೀಶ್ ಇದ್ದರು.





