ಮೋದಾನಿ ಮೆಗಾ ಸ್ಕ್ಯಾಮ್: ಎಲ್ಐಸಿಯ 30 ಸಾವಿರ ಕೋಟಿ ಹಣ ಅದಾನಿ ಕಂಪನಿಗಳಿಗೆ ಹೋಗಿದ್ದು ಹೇಗೆ?

Date:

'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ವರದಿಯು ಭಾರತದ ಕ್ರೋನಿ ಕ್ಯಾಪಿಟಲಿಸ್ಟ್ ಮತ್ತು ಕೇಂದ್ರ ಸರ್ಕಾರದ ಸಂಬಂಧದ ಗಾಢತೆಯನ್ನು ಎತ್ತಿ ತೋರಿಸುತ್ತದೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಬಹಿರಂಗಪಡಿಸುತ್ತದೆ.

2023ರಲ್ಲಿ ಯುಎಸ್ ಶಾರ್ಟ್-ಸೆಲ್ಲರ್ ಹಿಂಡನ್‌ಬರ್ಗ್‌ನ ವರದಿಯು, ಅದಾನಿ ಗ್ರೂಪ್‌ನ ಮೇಲೆ ಶೇರು ಮಾರುಕಟ್ಟೆ ಕುಶಲತೆ ಮತ್ತು ಆರ್ಥಿಕ ಅಕ್ರಮಗಳ ಆರೋಪವನ್ನು ಮಾಡಿತ್ತು. ಇದು ಭಾರತದ ಅತಿಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರ ಜಾಗತಿಕ ವ್ಯಾಪಾರ-ವಹಿವಾಟುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು.

ಆದರೆ, ಪ್ರಧಾನಿ ಮೋದಿಯವರ ಮೂಗಿನ ಕೆಳಗಿರುವ, ಹಣಕಾಸು ಇಲಾಖೆಯ ಅಡಿಯಲ್ಲಿ ಬರುವ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ತನಿಖೆಯು ಕಳೆದ ಸೆಪ್ಟೆಂಬರ್‌ನಲ್ಲಿ ಗೌತಮ್ ಅದಾನಿ ಮೇಲಿನ ಆರೋಪಗಳನ್ನು ತಿರಸ್ಕರಿಸಿತು. ಇದರ ಪರಿಣಾಮವಾಗಿ ಹಿಂಡನ್‌ಬರ್ಗ್ ತನ್ನ ಕಾರ್ಯಾಚರಣೆಯನ್ನು ಮುಚ್ಚಿತು.

ಆದರೆ, ಅದಾನಿ ಗ್ರೂಪ್ ಮೇಲೆ ಮಾಡಿದ ಆರೋಪಗಳಿಂದಾಗಿ ಅದರ ಜಾಗತಿಕ ವ್ಯಾಪಾರ-ವಹಿವಾಟುಗಳ ಮೇಲೆ ಗುರುತರ ಪರಿಣಾಮಗಳನ್ನು ಬೀರಿತು. ಬೇರೆ ಬೇರೆ ರೀತಿಯಲ್ಲಿ ಅದಾನಿ ವ್ಯವಹಾರಕ್ಕೆ ತೊಡಕುಂಟುಮಾಡಿತು. ಅದಾನಿಗೆ ಸಾಲ ನೀಡಲು ಯೋಚಿಸಿದ್ದ ಹಲವಾರು ಪ್ರಮುಖ ಅಮೆರಿಕನ್ ಮತ್ತು ಯುರೋಪಿಯನ್ ಬ್ಯಾಂಕ್‌ಗಳು ಈ ಸಂದರ್ಭದಲ್ಲಿ ಸಹಾಯ ಮಾಡಲು ಹಿಂಜರಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೊರದೇಶದ ಬ್ಯಾಂಕ್‌ಗಳು ಸಹಾಯ ಮಾಡಲು ಹಿಂಜರಿದದ್ದರಿಂದ, ಅದಾನಿ ಕಂಪನಿಗಳು ಸಾಲದ ಸುಳಿಗೆ ಸಿಲುಕಿದವು. ಬಂಡವಾಳದ ಕೊರತೆಯಿಂದ ಕಂಗಾಲಾದವು. ಆ ಕೊರತೆಯನ್ನು ನೀಗಲು ಅದಾನಿಯ ಆಪ್ತಸ್ನೇಹಿತರಾದ ಪ್ರಧಾನಿ ಮೋದಿಯವರು ನೇರವಾಗಲ್ಲ, ಪರೋಕ್ಷವಾಗಿ ಮುಂದಾದರು.

ಇದನ್ನು ಓದಿದ್ದೀರಾ?: ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ಥರವೇ?

ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ತನಿಖಾ ವರದಿಯ ಪ್ರಕಾರ, ಮೇ 2025ರಲ್ಲಿ, ಕೇಂದ್ರ ಹಣಕಾಸು ಸಚಿವಾಲಯ, ಆರ್ಥಿಕ ಸೇವೆಗಳ ಇಲಾಖೆ(DFS), ಭಾರತೀಯ ಜೀವವಿಮಾ ನಿಗಮ(LIC) ಮತ್ತು ನೀತಿ ಆಯೋಗದ ಅಧಿಕಾರಿಗಳು ಒಂದು ಪ್ರಸ್ತಾವನೆ ರೂಪಿಸಿದರು. ಅದು, ಎಲ್ಐಸಿಯ ಸುಮಾರು 30 ಸಾವಿರ ಕೋಟಿ ರೂ. ಹಣವನ್ನು ಅದಾನಿ ಸಮೂಹದ ವಿವಿಧ ಕಂಪೆನಿಗಳಲ್ಲಿ- ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಟೋಟಲ್ ಗ್ಯಾಸ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ಗಳಲ್ಲಿ ಹೂಡಿಕೆ ಮಾಡುವುದಾಗಿತ್ತು. ಈ ಯೋಜನೆಯ ಗುರಿಯು ಅದಾನಿ ಕಂಪನಿಗಳ ಬಗ್ಗೆ ಸಾರ್ವಜನಿಕ ವಿಶ್ವಾಸ ಹೆಚ್ಚಿಸುವುದು ಮತ್ತು ಇತರ ಹೂಡಿಕೆದಾರರನ್ನು ಆಕರ್ಷಿಸುವುದು ಆಗಿತ್ತು.

ಈ ಮಹತ್ವದ ದಾಖಲೆಗಳನ್ನು ‘ವಾಷಿಂಗ್ಟನ್ ಪೋಸ್ಟ್’ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಇದಕ್ಕೆ ಪೂರಕವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಂತೂ, ಕಳೆದ ಕೆಲವು ವರ್ಷಗಳಿಂದ ಅದಾನಿಗೂ ಪ್ರಧಾನಿಗೂ ಇರುವ ಸಂಬಂಧ ಕುರಿತು ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ. ಆದರೆ ಪ್ರಧಾನಿ ಮೋದಿಯಾಗಲೀ, ಅದಾನಿಯಾಗಲೀ ಇದಕ್ಕೆ ಉತ್ತರಿಸುವ ‘ಧೈರ್ಯ’ ತೋರಲಿಲ್ಲ. ಆದರೂ ರಾಹುಲ್ ಗಾಂಧಿಯವರು ಪ್ರಶ್ನಿಸುವುದನ್ನು ನಿಲ್ಲಿಸಲಿಲ್ಲ.

ಕಳೆದವರ್ಷ ಎಲ್ಐಸಿಯು ವಿಮಾ ಪ್ರೀಮಿಯಂಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣವನ್ನು ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದೆ. ಎಲ್ಐಸಿ ಸರಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಯಾಗಿದ್ದು, ಭಾರತೀಯ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ದೇಶದ ಜನತೆಗೆ ಬಗೆದ ದ್ರೋಹ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದರು. ಇದನ್ನೇ ಈಗ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ದಾಖಲೆಗಳ ಸಮೇತ ಹೊರಗೆಳೆದಿರುವುದು. ಪತ್ರಿಕೆ ಮಾಡಿರುವ ವರದಿ, ರಾಹುಲ್ ಗಾಂಧಿಯವರ ಆರೋಪಗಳಿಗೆ ಪುಷ್ಟಿ ನೀಡಿದೆ.

jairam ramesh rahul gandhi

ಅಲ್ಲದೆ, ಈಗ ಕಾಂಗ್ರೆಸ್‌ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಇದು ಭಾರತೀಯ ಜೀವ ವಿಮಾ ನಿಗಮದ(LIC) 30 ಕೋಟಿ ಬಡ-ಮಧ್ಯಮವರ್ಗದ ಪಾಲಿಸಿದಾರರ ಉಳಿತಾಯವನ್ನು ಅದಾನಿ ಸಮೂಹಕ್ಕೆ ಲಾಭವಾಗುವಂತೆ ಯೋಜಿತವಾಗಿ ದುರುಪಯೋಗ ಮಾಡಲಾಗಿದೆ. ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ನೀತಿ ಆಯೋಗದ ಅಧಿಕಾರಿಗಳು ಯಾವ ಒತ್ತಡದಡಿ ಖಾಸಗಿ ಕಂಪೆನಿಗೆ ನೆರವು ನೀಡಲು ನಿರ್ಧರಿಸಿದರು? ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದ ಕಂಪನಿಗೆ ಸರಕಾರ ಸಹಾಯ ಮಾಡುವುದು ‘ಮೊಬೈಲ್ ಫೋನ್ ಬ್ಯಾಂಕಿಂಗ್’ನ ಮಾದರಿ ಉದಾಹರಣೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಹಣದ ದುರುಪಯೋಗ ಮತ್ತು ಕ್ರೋನಿ ಕ್ಯಾಪಿಟಲಿಸ್ಟ್‌ಗಳತ್ತ ಒಲವು ಎಂದು ಆರೋಪಿಸಿದ್ದಾರೆ. ಎಲ್ಐಸಿಯನ್ನು ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಬಲವಂತ ಮಾಡಿರುವ ಬಗ್ಗೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(PAC) ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮುಂದುವರೆದ ಜೈರಾಮ್ ರಮೇಶ್, 2024ರ ಸೆಪ್ಟೆಂಬರ್ 21ರಂದು ಅಮೆರಿಕದಲ್ಲಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ದೋಷಾರೋಪಣೆ ಬಳಿಕ ಕೇವಲ ನಾಲ್ಕು ಗಂಟೆಗಳ ವ್ಯವಹಾರದಲ್ಲಿ ಎಲ್ಐಸಿಗೆ 7,850 ಕೋಟಿ ನಷ್ಟವಾಯಿತು. ಅದಾನಿಯವರ ಮೇಲೆ ಭಾರತದಲ್ಲಿ ಸೌರ ವಿದ್ಯುತ್ ಒಪ್ಪಂದ ಪಡೆಯಲು 2 ಸಾವಿರ ಕೋಟಿ ಲಂಚ ನೀಡಿದ ಆರೋಪವಿದೆ. ಮೋದಿ ಸರಕಾರ ಸುಮಾರು ಒಂದು ವರ್ಷದಿಂದ ಅದಾನಿ ಸಮೂಹಕ್ಕೆ ಅಮೆರಿಕ ಎಸ್ಇಸಿ ಸಮನ್ಸ್ ನೀಡಲು ನಿರಾಕರಿಸಿದೆ ಎಂದು ರಮೇಶ್ ದೂರಿದ್ದಾರೆ.

ಮೋದಾನಿ ಮೆಗಾ ಹಗರಣ ಬಹಳ ವ್ಯಾಪಕವಾಗಿದೆ. ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕೆಲ ಖಾಸಗಿ ಕಂಪೆನಿಗಳ ದಾಳಿ ಮಾಡಿಸುತ್ತದೆ. ಅವರು ಆ ದಾಳಿಯಿಂದ ಹೊರಬರುವ ಹಾದಿಯನ್ನು ಅವರೇ ಸೂಚಿಸುತ್ತಾರೆ. ಅವರ ಆಸ್ತಿಗಳನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡುವಂತೆ ಒತ್ತಾಯಿಸುತ್ತಾರೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಅದಾನಿ ಗುಂಪಿನ ಲಾಭಕ್ಕಾಗಿ ಖಾಸಗೀಕರಣ ಮಾಡಲಾಗಿದೆ. ಭಾರತದ ರಾಜತಾಂತ್ರಿಕ ಸಂಪನ್ಮೂಲಗಳನ್ನು ದುರುಪಯೋಗ ಮಾಡಿ ವಿಶೇಷವಾಗಿ ಭಾರತದ ನೆರೆ ಹೊರೆಯ ದೇಶಗಳಲ್ಲಿ ಅದಾನಿ ಸಮೂಹಕ್ಕೆ ಒಪ್ಪಂದಗಳು ಕುದುರುವಂತೆ ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಅದಾನಿ ಮೋದಿ

ಆದರೆ ವಿರೋಧ ಪಕ್ಷಗಳ ನಾಯಕರ ಆರೋಪಗಳನ್ನು ಅದಾನಿ ಸಮೂಹ ತಿರಸ್ಕರಿಸಿದೆ. ತಮ್ಮ ಕಂಪನಿಗಳ ವ್ಯವಹಾರ ಮತ್ತು ಏರಿಕೆ ಮೋದಿಯ ನಾಯಕತ್ವಕ್ಕಿಂತ ಮುಂಚಿನದು ಎಂದು ಹೇಳಿಕೊಂಡಿದೆ. ಇವುಗಳ ನಡುವೆಯೇ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ವರದಿಯು ಭಾರತದ ಕ್ರೋನಿ ಕ್ಯಾಪಿಟಲಿಸ್ಟ್ ಮತ್ತು ಕೇಂದ್ರ ಸರ್ಕಾರದ ಸಂಬಂಧದ ಗಾಢತೆಯನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ವಿಮಾ ಪ್ರೀಮಿಯಂಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣವನ್ನು ಹಾಗೂ ದೇಶದ ಜನರ ತೆರಿಗೆಯ ಪಾಲನ್ನು, ಅದಾನಿಯಂತಹ ಉದ್ಯಮಿಯ ಆರ್ಥಿಕ ಅಪಾಯವನ್ನು ಭರಿಸಲು ಬಳಸಿಕೊಳ್ಳುತ್ತಿರುವುದು- ದೇಶ ಯಾರ ಕೈವಶವಾಗುತ್ತಿದೆ ಎಂಬುದನ್ನು ತೆರೆದಿಡುವಂತಿದೆ.

ಸೋಜಿಗದ ಸಂಗತಿ ಎಂದರೆ, ಕೇಂದ್ರ ಸರಕಾರದ ಹಣಕಾಸು ಇಲಾಖೆ, ಪ್ರಧಾನಿ ಮೋದಿಯವರು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದು.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...