ಅಸ್ಸಾಂ ಚುನಾವಣೆ ಸಮೀಪಿಸುತ್ತಿದ್ದಂತೆ ಸುಳ್ಳಿನ ಮೊರೆ ಹೋದ ಮೋದಿ; ಮತ್ತೆ ನೆಹರು ನಾಮ ಜಪ

Date:

ಚುನಾವಣೆ ಬಂದಾಗ ಅಥವಾ ತಮ್ಮ ಕಾಲಡಿಗೆ ನೀರು ಬಂದಾಗ ಪ್ರಧಾನಿ ಮೋದಿ ನೆಹರು ವಿರುದ್ಧ ವಾಗ್ದಾಳಿ ನಡೆಸುವುದು, ಇತಿಹಾಸ ತಿರುಚುವುದು ಹಲವು ಬಾರಿ ನಡೆದಿದೆ. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಸುಳ್ಳು ಹೇಳುವುದು ಆ ಸ್ಥಾನಕ್ಕೆ ಶೋಭೆ ನೀಡುತ್ತದೆಯೇ ಎಂಬುದನ್ನು ಬಿಜೆಪಿಗರು ಅವಲೋಕಿಸಬಲ್ಲರೇ?

2026ರ ಏಪ್ರಿಲ್‌ನ ಒಳಗೆ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಕೆಲವೇ ತಿಂಗಳು ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ ಸುಳ್ಳಿನ ಮೊರೆ ಹೋಗಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ನಾಮ ಜಪವೂ ನಡೆಸಿದ್ದಾರೆ. “ಸ್ವಾತಂತ್ರ್ಯಕ್ಕೂ ಮುನ್ನ ಅಸ್ಸಾಂ ಅನ್ನು ಪೂರ್ವ ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಮತ್ತು ಮುಸ್ಲಿಂ ಲೀಗ್ ಜೊತೆ ಪಿತೂರಿ ನಡೆಸಿತ್ತು” ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಹೇಳಿದ್ದು ಸುಳ್ಳಾದರೂ ಜನರು ನಂಬುತ್ತಾರೆ ಎಂಬ ಆತ್ಮವಿಶ್ವಾಸದಿಂದಲೋ ಏನೋ, ಗುವಾಹಟಿಯಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೊಲೊಯ್ ಪ್ರಾಂತ್ಯವನ್ನು ಪೂರ್ವ ಪಾಕಿಸ್ತಾನವಾಗಿ ಪರಿವರ್ತಿಸುವುದನ್ನು ತಡೆಯಲು ತಮ್ಮ ಸ್ವಂತ ಪಕ್ಷದ ವಿರುದ್ಧ ನಿಲ್ಲಬೇಕಾಯಿತು ಎಂದೂ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಇತಿಹಾಸಕಾರರು ಹೇಳುವಂತೆ ಅಂತಿಮವಾಗಿ ಕಾಂಗ್ರೆಸ್‌ನ ವಿರೋಧದಿಂದಲೇ ಅಸ್ಸಾಂ ಪಾಕಿಸ್ತಾನಕ್ಕೆ ಸೇರುವುದು ತಪ್ಪಿತ್ತು.

ಇದನ್ನು ಓದಿದ್ದೀರಾ? ವಂದೇ ಮಾತರಂ | ಲೋಕಸಭೆಯ ಬಿಜೆಪಿ ನಿಲುವಿನಿಂದ ಅಂತರ ಕಾಯ್ದುಕೊಂಡ ಜೆಡಿಯು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏನಿದು ಬಿಕ್ಕಟ್ಟು, ನಡೆದಿದ್ದೇನು?

1946ರ ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಯೋಜನೆಯು ಭಾರತವನ್ನು ಮೂರು ಗುಂಪುಗಳಾಗಿ (Sections) ವಿಂಗಡಿಸಲು ಪ್ರಸ್ತಾಪಿಸಿತ್ತು. ಇದರಲ್ಲಿ ಅಸ್ಸಾಂ ಅನ್ನು ಮುಸ್ಲಿಂ ಬಹುಸಂಖ್ಯಾತ ಬಂಗಾಳದೊಂದಿಗೆ ‘ಗ್ರೂಪ್ ಸಿ’ನಲ್ಲಿ ಸೇರಿಸಲಾಗಿತ್ತು. ಈ ಯೋಜನೆಯು ಅಸ್ಸಾಂ ಭವಿಷ್ಯದಲ್ಲಿ ಪೂರ್ವ ಪಾಕಿಸ್ತಾನದ ಭಾಗವಾಗಬಹುದು ಎಂಬ ಆತಂಕ ಮೂಡಿಸಿತ್ತು. ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ನೇತೃತ್ವದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಆರಂಭದಲ್ಲಿ ದೇಶದ ಒಗ್ಗಟ್ಟನ್ನು ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡಿತ್ತು. ಆದರೆ, 1946ರಲ್ಲಿ ನೆಹರು ಅವರು ಈ ಗುಂಪುಗಾರಿಕೆಯು ಕಡ್ಡಾಯವಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ಆ ಯೋಜನೆ ವಿಫಲವಾಗಿತ್ತು.

“ಮೊದಲನೆಯದಾಗಿ ನಾವು ಸಂವಿಧಾನ ಸಭೆಗೆ ಹೋಗಲು ಒಪ್ಪಿಕೊಂಡಿದ್ದೇವೆ ಮತ್ತು ನಾವು ಬೇರೆ ಯಾವುದಕ್ಕೂ ಒಪ್ಪಿಕೊಂಡಿಲ್ಲ. ನಾವು ಏನು ಮಾಡುತ್ತೇವೆ ಎಂದು ನಿರ್ಧರಿಸಲು ನಾವು ಸಂಪೂರ್ಣವಾಗಿ ಸ್ವತಂತ್ರರು” ಎಂದು ನೆಹರು ಸ್ಪಷ್ಟಪಡಿಸಿದ್ದರು. ನಿರ್ದಿಷ್ಟವಾಗಿ ಈಶಾನ್ಯವನ್ನು ಉದ್ದೇಶಿಸಿ ಮಾತನಾಡಿದ್ದ ನೆಹರು ಗುಂಪುಗಾರಿಕೆ ಯೋಜನೆಯ ವಿಫಲವಾಗುವುದಾಗಿ ಭವಿಷ್ಯ ನುಡಿದಿದ್ದರು. “ಯಾವುದೇ ಗುಂಪುಗಾರಿಕೆ ಇಲ್ಲದಿರುವ ದೊಡ್ಡ ಸಂಭವನೀಯತೆಯಿದೆ. ಅಸ್ಸಾಂ ಬಂಗಾಳದೊಂದಿಗೆ ಗುಂಪುಗಾರಿಕೆಯ ವಿರುದ್ಧ ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಸಂದರ್ಭದಲ್ಲೂ ಅಸ್ಸಾಂ ಅದನ್ನು ಸಹಿಸುವುದಿಲ್ಲ” ಎಂದೂ ಹೇಳಿದ್ದರು.

ನೆಹರು ಅವರ ಹೇಳಿಕೆಯ ಆರು ದಿನಗಳ ನಂತರ, ಅಸ್ಸಾಂ ಶಾಸಕಾಂಗ ಸಭೆಯು ಐತಿಹಾಸಿಕ ಸಾಂವಿಧಾನಿಕ ಉಲ್ಲಂಘನೆಗೆ ನಾಂದಿ ಹಾಡಿತು. ನೆಹರು ಅವರ ಹೇಳಿಕೆಯ ಆರು ದಿನಗಳ ನಂತರ, ಅಸ್ಸಾಂ ಶಾಸಕಾಂಗ ಸಭೆಯು ಐತಿಹಾಸಿಕ ಸಾಂವಿಧಾನಿಕ ಉಲ್ಲಂಘನೆಯ ದಂಗೆ ಎದ್ದರು, ಅವರಿಗೆ ಮಹಾತ್ಮ ಗಾಂಧಿ ಅವರೂ ಬೆಂಬಲಿಸಿದರು. ಯಾವುದೇ ಗುಂಪು ಅಥವಾ ವಿಭಾಗದಿಂದ ಸ್ವತಂತ್ರವಾಗಿ ಪ್ರಾಂತೀಯ ಸಂವಿಧಾನವನ್ನು ರೂಪಿಸಲು ಅಸ್ಸಾಂನ ಪ್ರತಿನಿಧಿಗಳಿಗೆ ನಿರ್ದೇಶನ ನೀಡುವ ನಿರ್ಣಯವನ್ನು ಬೋರ್ಡೊಲೊಯ್ ಮಂಡಿಸಿದ್ದರು.

ಈ ನಿರ್ಣಯಕ್ಕೆ ಮುಸ್ಲಿಂ ಲೀಗ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕ ಸೈಯದ್ ಸರ್ ಮುಹಮ್ಮದ್ ಸಾದುಲ್ಲಾ, ಬ್ರಿಟಿಷ್ ಆದೇಶವನ್ನು ಧಿಕ್ಕರಿಸುವುದು ಅಸ್ಸಾಂನ ಆರ್ಥಿಕ ಉಳಿವಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ವಾದಿಸಿದ್ದರು. ಅಸ್ಸಾಂ ಬಂಗಾಳಕ್ಕೆ ಆರ್ಥಿಕವಾಗಿ ಬಂಗಾಳಕ್ಕೆ ಬದ್ಧವಾಗಿದೆ. ಅಸ್ಸಾಂ ಪ್ರತ್ಯೇಕವಾಗಿದ್ದರೆ ಆರ್ಥಿಕ ಕುಸಿತ ಎದುರಾಗಬಹುದು ಎಂದು ಎಚ್ಚರಿಸಿದ್ದರು. ಆದರೆ ಬೋರ್ಡೊಲೊಯ್ ತಮ್ಮ ನಿಲುವಿನಲ್ಲಿ ದೃಢವಾಗಿದ್ದರು. ಈ ವೇಳೆ ಮಹಾತ್ಮ ಗಾಂಧಿಯವರೂ ಬೋರ್ಡೊಲೊಯ್ ಪರವಾಗಿ ನಿಂತರು. ನೆಹರು ಮತ್ತು ಸರ್ದಾರ್ ಪಟೇಲ್ ಸೇರಿದಂತೆ ರಾಷ್ಟ್ರೀಯ ನಾಯಕತ್ವವೂ ಅದೇ ಮಾರ್ಗವನ್ನು ಅನುಸರಿಸಿತು. 1946ರಲ್ಲಿ ಗಾಂಧಿಯವರು ಪ್ರಾಂತೀಯ ದಂಗೆಯನ್ನೂ ಬೆಂಬಲಿಸಿದ್ದರು.

ಇದನ್ನು ಓದಿದ್ದೀರಾ? ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಈ ಇತಿಹಾಸದ ಒಂದು ತುಣುಕನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಿತೂರಿ ಎಂಬ ಸುಳ್ಳನ್ನು ಸೇರಿಸಿ ಇದೀಗ ಪ್ರಧಾನಿ ಮೋದಿ ಅಸ್ಸಾಂ ಚುನಾವಣೆಯ ಪ್ರಚಾರಕ್ಕೆ ಇಳಿದಿರುವಂತಿದೆ. ಇತಿಹಾಸವನ್ನು ತಿರುವಿ ಹಾಕಿದಾಗ ಬೋರ್ಡೊಲೊಯ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಗಳು ರಾಜಕೀಯವಾಗಿ ನಡೆದಿದೆಯೇ ಹೊರತು ಅಲ್ಲಿ ಮೋದಿ ಹೇಳುವಂತೆ ಪಿತೂರಿ ಇಲ್ಲ, ಇವೆಲ್ಲವೂ ಚುನಾವಣೆಯ ರಾಜಕೀಯ ಎಂಬುದು ಸ್ಪಷ್ಟ. ಅದಕ್ಕೆ ಪ್ರಧಾನಿ ಮೋದಿ ಈ ಹಿಂದೆ ಮಾಡಿರುವ ನೆಹರು ಜಪವೂ ಪುಷ್ಠಿ ನೀಡುತ್ತದೆ.

ನೆಹರು ಜಪ ಮಾಡುವ ಮೋದಿ

ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ್’ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ನೆಹರು ಅವರ ಹೆಸರನ್ನು ಅನೇಕ ಬಾರಿ ಪ್ರಸ್ತಾಪಿಸಿ, ಕಾಂಗ್ರೆಸ್‌ನ ಐತಿಹಾಸಿಕ ನೀತಿಗಳನ್ನು ಟೀಕಿಸಿದ್ದರು. ಇದು ಮಾತ್ರವಲ್ಲದೆ ಹಲವು ಬಾರಿ ನೆಹರು ಬಗ್ಗೆ ಟೀಕೆ ಮಾಡುತ್ತಾ ಇತಿಹಾಸ ತಿರುಚಿದ್ದರು, ಸಂದರ್ಭರಹಿತವಾಗಿ ಮಾತನಾಡಿದ್ದರು. ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ ಅವರು, ನೆಹರು ಸೇರಿದಂತೆ ಯಾವ ಕಾಂಗ್ರೆಸ್ ನಾಯಕರು ಭಗತ್ ಸಿಂಗ್ ಅವರನ್ನು ಜೈಲಿನಲ್ಲಿ ಭೇಟಿಯಾಗಲಿಲ್ಲ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ ದಾಖಲೆಗಳ ಪ್ರಕಾರ ನೆಹರು ಅವರು 1929ರಲ್ಲಿ ಲಾಹೋರ್ ಜೈಲಿನಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ಅವರನ್ನು ಭೇಟಿಯಾಗಿದ್ದರು, ಅದರ ಬಗ್ಗೆ ಬರೆದಿದ್ದರು.

1959ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನೆಹರು “ಭಾರತದಲ್ಲಿ ಕಠಿಣ ಪರಿಶ್ರಮದ ಅಭ್ಯಾಸ ಕಡಿಮೆ ಇದೆ, ಯೂರೋಪ್, ಜಪಾನ್, ಚೀನಾ ಮುಂತಾದ ದೇಶಗಳಂತೆ ನಾವು ಪರಿಶ್ರಮ ಮಾಡಬೇಕು” ಎಂದು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ತಿರುಚಿದ್ದ ಪ್ರಧಾನಿ ಮೋದಿ, “ನೆಹರು ಭಾರತೀಯರನ್ನು ಸೋಮಾರಿಗಳು ಎಂದು ಕರೆದಿದ್ದರು” ಎಂದು ಸುಳ್ಳು ಹೇಳಿದ್ದರು.

ಇದನ್ನು ಓದಿದ್ದೀರಾ? ಮೀಸಲಾತಿ ಬಗ್ಗೆ ನೆಹರು ಪತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಅಷ್ಟಕ್ಕೂ ನೆಹರು ಹೇಳಿದ್ದಾದರೂ ಏನು?

ಇತ್ತೀಚಿನ ಸಂಸತ್ ಚರ್ಚೆಯಲ್ಲಿ ಮೋದಿ ಅವರು ನೆಹರು ಮುಸ್ಲಿಂ ಲೀಗ್ ಮತ್ತು ಜಿನ್ನಾ ಒತ್ತಡಕ್ಕೆ ಮಣಿದು ವಂದೇ ಮಾತರಂನ ಮೊದಲ ಎರಡು ಸಾಲುಗಳನ್ನು ಮಾತ್ರ ಅಧಿಕೃತಗೊಳಿಸಿದರು ಎಂದು ಆರೋಪಿಸಿದ್ದರು. 1937ರಲ್ಲಿ ನೆಹರು-ಬೋಸ್ ಪತ್ರ ವ್ಯವಹಾರದ ಬಗ್ಗೆ ಚರ್ಚೆಯಾಗಿತ್ತು. ರವೀಂದ್ರನಾಥ ಟ್ಯಾಗೋರ್ ಅವರು ಸ್ವತಃ ನೆಹರು ಅವರಿಗೆ ಪತ್ರ ಬರೆದ ವಿಚಾರವನ್ನು ಪ್ರಸ್ತಾಪಿಸಿದ್ದ ವಿಪಕ್ಷಗಳು ಬಿಜೆಪಿ ಹೇಗೆ ಇತಿಹಾಸ ತಿರುಚುತ್ತಿದೆ ಎಂಬುದನ್ನು ಸಂಸತ್ತಿನಲ್ಲೇ ಬಹಿರಂಗಪಡಿಸಿತ್ತು.

ಹೀಗೆ ಚುನಾವಣೆ ಬಂದಾಗ ಅಥವಾ ತಮ್ಮ ಕಾಲಡಿಗೆ ನೀರು ಬಂದಾಗ ಪ್ರಧಾನಿ ಮೋದಿ ನೆಹರು ವಿರುದ್ಧ ವಾಗ್ದಾಳಿ ನಡೆಸುವುದು, ಇತಿಹಾಸ ತಿರುಚುವುದು ಹಲವು ಬಾರಿ ನಡೆದಿದೆ. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಸುಳ್ಳು ಹೇಳುವುದು ಆ ಸ್ಥಾನಕ್ಕೆ ಶೋಭೆ ನೀಡುತ್ತದೆಯೇ ಎಂಬುದನ್ನು ಬಿಜೆಪಿಗರು ಅವಲೋಕಿಸಬಲ್ಲರೇ? ಮುಸ್ಲಿಮರಿಗೆ ಒಬಿಸಿ ಮೀಸಲಾತಿ, ಮಹಿಳೆಯರ ತಾಳಿ ಕಿತ್ತುಕೊಳ್ಳುವುದು… ಹೀಗೆ ಹಲವು ಕೋಮು ಪ್ರಚೋದನಕಾರಿ ಹೇಳಿಕೆಯನ್ನು ದೇಶದ ಪ್ರಧಾನಿಯೇ ನೀಡಿರುವುದು ದೇಶಕ್ಕೆ ಕಳಂಕವಲ್ಲವೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...