ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 19 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಕಲಬುರಗಿ ಮತ್ತು ಬೆಂಗಳೂರಿಗೆ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ, ‘ನಿದ್ದೆಯಿಂದ ಎದ್ದೇಳಿ ಮೋದಿ’ ಎಂಬ ಟ್ಯಾಗ್‌ಲೈನ್ ಜೊತೆಗೆ ಹಲವಾರು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕರ್ನಾಟಕಕ್ಕೆ ಬರಲಿರುವ ಮೋದಿ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಯಲ್ಲಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ರೋಡ್‌ಶೋ ನಡೆಸುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.
ಬರದ ಸಮಯದಲ್ಲಿಯೂ ರಾಜ್ಯಕ್ಕೆ ಬಾರದ ಮೋದಿ ಅವರು ಇದೀಗ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಅವರು ವಿರುದ್ಧ ಪೋಸ್ಟರ್‌ಗಳು ವೈರಲ್ ಅಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೋದಿ ಅವರು ನಿದ್ರಿಸುತ್ತಿರುವಂತೆ ವ್ಯಂಗ್ಯವಾಗಿ ಚಿತ್ರಿಸಲಾಗಿರುವ ಪೋಸ್ಟರ್‌ಗಳಲ್ಲಿ, “ಬಿಜೆಪಿ ಸಚಿವರ ಕಮಿಷನ್ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ. ಬೇಸತ್ತ ಜೀವವೊಂದು ಕೊನೆಯಾಯ್ತು. ಪ್ರಧಾನಿ ಪ್ರತಿಕ್ರಿಯೆ ಎಂಬುದು ಹಾರಿಹೋಯ್ತು” ಎಂದು ಬರೆಯಲಾಗಿದೆ.
ಮತ್ತೊಂದರಲ್ಲಿ, “ಕೋವಿಡ್-19 ನಿರ್ವಹಣೆ ವೇಳೆ 40,000 ಕೋಟಿ ರೂ. ಅವ್ಯವಹಾರ ನಡೆದಿದೆ. 45 ರೂ. ಮಾಸ್ಕ್‌ಅನ್ನು 485 ರೂ.ಗೆ ಮಾರಾಟ ಮಾಡಿದ್ದಾರೆ. ಪ್ರಧಾನಿಗಳು ಪ್ರತಿಕ್ರಿಯಿಸದೆ ಗೊರಕೆ ಹೊಡೆಯುತ್ತಿದ್ದಾರೆ” ಎಂದು ವ್ಯಂಗ್ಯ ಮಾಡಲಾಗಿದೆ.
ಪ್ರಧಾನಿಯ ಗಾಢ ನಿದ್ರೆ
ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ.
ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ
– ಕೇಂದ್ರವು… pic.twitter.com/q37nCcijbn— Siddaramaiah (@siddaramaiah) January 16, 2024
ಇನ್ನೊಂದರಲ್ಲಿ, “ಕರ್ನಾಟಕವು ಬಾಯಾರಿಕೆಯಿಂದ ಮನವಿ ಮಾಡಿದರೂ ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಮತ್ತು ಮಹದಾಯಿ ಬರಿದಾಗಿಯೇ ಉಳಿದವು. ಪ್ರಧಾನಿ ಪರಿಹಾರಗಳನ್ನು ತಲೆಯಡಿಗಿಟ್ಟುಕೊಂಡು ಮಲಗಿದರು” ಎಂದು ಕಿಡಿಕಾರಲಾಗಿದೆ.
ಈ ಸುದ್ದಿ ಓದಿದ್ದೀರಾ?: ಮೋದಿ ಪದವಿ ಪ್ರಕರಣ: ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ತಡೆ
ಮತ್ತೊಂದೆಡೆ, “47 ವರ್ಷಗಳ ಇತಿಹಾಸದಲ್ಲೇ ಕರ್ನಾಟಕವು ಅತ್ಯಂತ ಕೆಟ್ಟ ಬರ ಪರಿಸ್ಥಿತಿ ಎದುರಿಸುತ್ತಿದೆ. 30,000 ಕೋಟಿ ರೂ. ನಷ್ಟವಾಗಿದೆ. ಕರ್ನಾಟಕದ ಬರ ಪರಿಸ್ಥಿತಿಗೆ ಸ್ಪಂದಿಸುವ ಬದಲು ಪ್ರಧಾನಿ ಗಾಢ ನಿದ್ರೆಗೆ ಜಾರಿದ್ದಾರೆ” ಎಂದು ಟೀಕಿಸಲಾಗಿದೆ.
ಸದ್ಯ ಈ ಪೋಸ್ಟರ್‌ಗಳನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪೋಸ್ಟರ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಈ ಸುದ್ದಿ ಓದಿದ್ದೀರಾ?: ‘ಹಸಿದ ಹೊಟ್ಟೆಯಲ್ಲಿ ಭಜನೆ ಮಾಡಲಾರೆವು’: ಅಯೋಧ್ಯೆಯ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡವರ ಅಳಲು




