ಕ್ಷೀಣಿಸುತ್ತಿದೆ ಮೋದಿ ಜನಪ್ರಿಯತೆ – ಪ್ರಜಾಪ್ರಭುತ್ವದ ಆಶಯಗಳು ಮತ್ತೆ ಪುಟಿದೇಳುತ್ತಿವೆ

Date:

2024ರ ವರ್ಷವನ್ನು ಜಾಗತಿಕವಾಗಿ ನಿರ್ಣಾಯಕ ಚುನಾವಣೆಗಳ ವರ್ಷವೆಂದು ಗುರುತಿಸಲಾಗಿದೆ. ಜಗತ್ತಿನಾದ್ಯಂತ ಸುಮಾರು 64 ಪ್ರಜಾಪ್ರಭುತ್ವ ದೇಶಗಳು ಗಮನಾರ್ಹವಾಗಿ ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು 49% ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಸದ್ಯ, ಈ ಎಲ್ಲ ರಾಷ್ಟ್ರಗಳು ಚುನಾವಣೆಯ ಹೊಸ್ತಿಲಿನಲ್ಲಿವೆ. ಅವುಗಳ ಫಲಿತಾಂಶಗಳು ಭವಿಷ್ಯದ ಜಾಗತಿಕ ಕ್ರಮ ಮತ್ತು ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ.

ಚುನಾವಣೆಗೆ ಸಿದ್ದವಾಗಿರುವ ಬಹುತೇಹ ದೇಶಗಳ ನಾಗರಿಕರು ಬದಲಾವಣೆಗೆ ಕರೆಕೊಟ್ಟಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವವರು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವ ಶಕ್ತಿಗಳನ್ನು ಕೆಳಗಿಳಿಸಲು ಕರೆ ಕೊಡುತ್ತಿದ್ದಾರೆ. ಭಾರತದ ರಾಜಕೀಯದಲ್ಲೂ 2024, ಅದರಲ್ಲೂ ಜೂನ್‌ ಮೊದಲ ವಾರ ನಿರ್ಣಾಯಕ ವಾರವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಕೂಟದ ನಡುವೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಹೋರಾಟ ನಡೆಯುತ್ತಿದೆ. ಮೋದಿ ನೇತೃತ್ವದ ಬಿಜೆಪಿ 3ನೇ ಅವಧಿಗೆ ಅಧಿಕಾರ ಹಿಡಿಯಲು ಹಪಹಪಿಸುತ್ತಿದೆ. ಬಿಜೆಪಿಯನ್ನು ಮಣಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುತ್ತೇವೆಂದು ‘ಇಂಡಿಯಾ’ ಕೂಟ ಹೇಳುತ್ತಿದೆ. ಮತದಾನದ ಸಮಯದಲ್ಲಿ ನಡೆಯುತ್ತಿರುವ ವಿಶ್ಲೇಷಣೆಗಳಲ್ಲಿ ಕೆಲವು ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸುತ್ತದೆ ಎಂದು ಹೇಳುತ್ತಿದ್ದರೆ, ಮತ್ತೂ ಕೆಲ ವಿಶ್ಲೇಷಣೆಗಳು ಬಿಜೆಪಿ 2019ಕ್ಕಿಂತ ಈ ಬಾರಿ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಮತ್ತೆ ಮೋದಿ ಪ್ರಧಾನಿ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎನ್‌ಡಿಎ ಗೆಲ್ಲುವ ಸಾಧ್ಯತೆಗಳಿವೆ ಎಂಬುದರ ಹೊರತಾಗಿಯೂ, ಕಳೆದ ಹತ್ತು ವರ್ಷಗಳಲ್ಲಿ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದ ಮೋದಿ-ಶಾ ಜನಪ್ರಿಯತೆ ಕ್ಷೀಣಿಸುತ್ತಿದೆ. ನಿರಂತರ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಸರ್ಕಾರಿ ಸ್ವತ್ತುಗಳ ಖಾಸಗೀಕರಣ, ವೇತನದಲ್ಲಿ ನಿಶ್ಚಲತೆ, ಸಂಪತ್ತು ಮತ್ತು ಆದಾಯ ಅಸಮಾನತೆ, ಮನರೇಗಾ ರೀತಿಯ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಕಡಿಮೆಯಾಗುತ್ತಿರುವ ಆರ್ಥಿಕ ಹಂಚಿಕೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿನ ಪೌಷ್ಟಿಕತೆ ಕಾರ್ಯಕ್ರಮಗಳ ಕಳಪೆ ಪ್ರದರ್ಶನವು ಜನರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಆಳವಾದ ಪರಿಣಾಮ ಬೀರಿವೆ. ಮೋದಿ ಅವರ ‘ಸಬ್‌ಕಾ ಸಾತ್ – ಸಬ್‌ಕಾ ವಿಕಾಸ್’ ಘೋಷಣೆಯ ವೈಫಲ್ಯವು ದೇಶದಲ್ಲಿ ಅಸಮಾಧಾನ ಸೃಷ್ಟಿಸಿದೆ.

ಈ ಭಯದಲ್ಲಿಯೇ, ಪ್ರಧಾನಿ ಮೋದಿಯವರ ಭಾಷಣಗಳ ವರಸೆ ಬದಲಾಗಿದೆ. ಅವರ ಭಾಷಣಗಳ ಸೂಕ್ಷ್ಮ ಅವಲೋಕನವು ಕೋಮುವಾದಿ (ಹಿಂದು ವರ್ಸಸ್ ಮುಸ್ಲಿಂ) ಅಜೆಂಡಾವನ್ನೇ ಬಿಜೆಪಿ ಮತ್ತೆ ಮುನ್ನೆಲೆಗೆ ತಂದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕೋಮುವಾದಿ ಅಜೆಂಡಾದ ಹೊರತಾಗಿಯೂ, ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರವು ತನ್ನ ಆರ್ಥಿಕ ಆಡಳಿತದ ದಾಖಲೆಯನ್ನು ತೋರಿಸಲು ಕೊಂಚವೂ ಪ್ರಯತ್ನಿಸಿಲ್ಲ. ಇದು, ಮೋದಿ ಆಡಳಿತದಲ್ಲಿ ಯಾವುದೇ ದಾಖಲೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಅದಾಗ್ಯೂ, ಬಿಜೆಪಿ ಒಂದು ಪಕ್ಷವಾಗಿ, ಉತ್ತರ ಭಾರತದಾದ್ಯಂತ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆ ಕಾಣಲು ಯತ್ನಿಸುತ್ತಿದೆ. ಆದರೆ, 2014 ಮತ್ತು 2019ರ ಕಾರ್ಯಕ್ಷಮತೆಗೆ ಹೋಲಿಸಿದರೆ 2024ರಲ್ಲಿ ಬಿಜೆಪಿಯ ಮತಗಳ ಪಾಲು ಕಡಿಮೆಯಾಗಬಹುದು. ಜೂನ್ 4ರಂದು ಹೊರಬರುವ ಫಲಿತಾಂಶವು ಮೋದಿ ವಿರುದ್ಧ ಮತದಾರರಲ್ಲಿ ಬೆಳೆಯುತ್ತಿರುವ ಅಸಮಾಧಾನ ಮತ್ತು ನಿರಾಶೆಯನ್ನು ಸೂಚಿಸಲಿದೆ.

ಐತಿಹಾಸಿಕವಾಗಿಯೂ ಸಹ, ಸ್ವಾತಂತ್ರ್ಯ ನಂತರದ ಭಾರತೀಯ ರಾಜಕೀಯದಲ್ಲಿ ಯಾವುದೇ ಪ್ರಬಲ ರಾಷ್ಟ್ರೀಯ ನಾಯಕ, ಅವರ ಮೂರನೇ ಅವಧಿಯಲ್ಲಿ ಸಂಪೂರ್ಣ ದುರ್ಬಲವಾಗಿದ್ದಾರೆ. ಇದು 1960ರ ದಶಕದಲ್ಲಿ ಜವಾಹರಲಾಲ್ ನೆಹರು, ನಂತರ 1980ರ ದಶಕದಲ್ಲಿ ಇಂದಿರಾ ಗಾಂಧಿಯವರ ವಿಚಾರದಲ್ಲಿ ಇದು ಸ್ಪಷ್ಟವಾಗಿದೆ. ಈಗ, 2024ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ, ಅವರ ವಿಷಯದಲ್ಲಿಯೂ ಇದು ನಿಜವಾಗಬಹುದು. ಈಗಾಗಲೇ ಹಲವರು ಮೋದಿ ಈ ಬಾರಿ ಅಧಿಕಾರ ಪಡೆದರೆ, ಅವರು ದುರ್ಬಲ ಪ್ರಧಾನಿಯಾಗಿರುತ್ತಾರೆ ಎಂದು ಹೇಳುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯ ಮುಂದಿನ ರಾಷ್ಟ್ರೀಯ ಮುಖವೆಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ. ಆದರೆ, ಮೋದಿ-ಶಾಗೆ ಯೋಗಿಯನ್ನು ಮುಂದೆ ತರುವುದು ಇಷ್ಟವಿಲ್ಲ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಯೋಗಿಯನ್ನು ಹೆಚ್ಚಾಗಿ ರಾಷ್ಟ್ರೀಯ ಮಟ್ಟದ ಪ್ರಚಾರಕ್ಕೆ ಕಳಿಸಲಾಗಿಲ್ಲ. ಅಮಿತ್ ಶಾ ಬಿಜೆಪಿ ರಾಷ್ಟ್ರ ನಾಯಕನಾಗಬೇಕೆಂಬ ಇರಾದೆ ಮೋದಿ-ಶಾರಲ್ಲಿದೆ. ಹೀಗಾಗಿ, ಮೋದಿ ನಂತರದ ಬಿಜೆಪಿ ರಾಜಕೀಯವು ಅಸ್ಪಷ್ಟವಾಗಿದೆ.

ಒಂದು ವೇಳೆ, ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ, ಭವಿಷ್ಯದ ರಾಜಕೀಯ ಸನ್ನಿವೇಶಗಳು, ಅಂತಾರಾಷ್ಟ್ರೀಯ ದೃಷ್ಟಿಕೋನಗಳ ಕಾರಣದಿಂದ ಮೋದಿ ಎದುರು ಕೆಲವು ಗಂಭೀರ ಸವಾಲುಗಳಿವೆ. ಭಾರತದ ಆರ್ಥಿಕತೆಯ ದರವು ಬೆಳೆಯುತ್ತಿರುವ ಸಮಯದಲ್ಲಿ, ದೇಶದ 40% ಯುವಜನರು ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗ ದರವು ಹೆಚ್ಚುತ್ತಲೇ ಇದೆ. ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಪೌಷ್ಟಿಕಾಂಶ ಕೊರತೆ, ಬೆಲೆ ಏರಿಕೆ ಸವಾಲಾಗಿ ನಿಂತಿದೆ.

ಮೋದಿ ಸರ್ಕಾರದ ಗೊಂದಲಮಯ ವಿದೇಶಾಂಗ ನೀತಿ, ಪೂರ್ವ, ಪಶ್ಚಿಮ, ಉತ್ತರ ಭಾಗಗಳಲ್ಲಿ ಹೆಚ್ಚುತ್ತಿರುವ ಗಡಿ ಭದ್ರತಾ ಬಿಕ್ಕಟ್ಟು, ಬೆಳೆಯುತ್ತಿರುವ ಸರ್ಕಾರಿ-ಸಾಲದ ಸಮಸ್ಯೆ, ಹೂಡಿಕೆ-ವ್ಯವಹಾರದ ಸಮಸ್ಯೆಗಳನ್ನು ಮೋದಿ ಸರ್ಕಾರ ನಿರ್ವಹಿಸಬೇಕಿದೆ. ಆದರೆ, ಈಗಿರುವ ಮೋದಿ ಕ್ಯಾಬಿನೆಟ್ ಮಂತ್ರಿಗಳ ತಂಡ, ವಿಶೇಷವಾಗಿ ಹಣಕಾಸು ಸಚಿವಾಲಯವು ಈ ಕೆಲವು ಸಮಸ್ಯೆಗಳನ್ನು ನಿಭಾಯಿಸಲು ಸಶಕ್ತವಾಗಿಲ್ಲ.

ತಳಮಟ್ಟದಲ್ಲಿ, ಪ್ರಸ್ತುತ ಚುನಾವಣೆಯಲ್ಲೂ ಈ ಕೆಲವು ಸಮಸ್ಯೆಗಳನ್ನು ಮತದಾರರು ಅರ್ಥಮಾಡಿಕೊಳ್ಳುತ್ತಾರೆ. ಅದಾಗ್ಯೂ, ಅಸಮಾನತೆ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ‘ಅನಾರೋಗ್ಯ’ಕರ ಪರಿಸ್ಥಿತಿಯು ಹೆಚ್ಚಿನ ಜನರಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಅರ್ಥೈಸುತ್ತಿದೆ. ಮೋದಿ ಸರ್ಕಾರವನ್ನು ಹಲವು ಜನರು ದೂಷಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಇತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಿತ್ರಪಕ್ಷಗಳೊಂದಿಗೆ ಮೈತ್ರಿಯನ್ನು ಗಟ್ಟಿಗೊಳಿಸುತ್ತಿದೆ. ಆದರೆ, ಅವರ ಮಿತ್ರಪಕ್ಷಗಳೂ ಕೂಡ ಸ್ಥಳೀಯವಾಗಿ ವಿರೋಧವನ್ನು ಎದುರಿಸುತ್ತಿವೆ.

ಇದೇ ಹೊತ್ತಿನಲ್ಲಿ, ರಾಹುಲ್‌ ಗಾಂಧಿ ಪ್ರಬಲ ನಾಯಕನಾಗಿ ದೇಶದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ವರ್ಷದಿಂದ ಈಚೆಗೆ ದೇಶದಲ್ಲಿ ರಾಹುಲ್ ವರ್ಚಸ್ಸು ಜನರಲ್ಲಿ ಅವರ ಬಗೆಗಿದ್ದ ‘ಪಪ್ಪು’ ಎಂಬ ಭಾವನೆಯನ್ನು ತೊಡೆದು ಹಾಕಿದೆ. 2014 ಮತ್ತು 2019ರಲ್ಲಿ ರಾಹುಲ್ ವಿರುದ್ಧ ಬಿಜೆಪಿ ಹೆಣೆದ ತಂತ್ರ ಈ ಬಾರಿ ಫಲಿಸಿಲ್ಲ. ಅವರ ಇಮೇಜ್ ಪ್ರಬಲವಾಗಿದೆ. ರಾಹುಲ್ ಅವರನ್ನು ಮೋದಿಗೆ ಸರಿಸಾಟಿಯಾಗಿ ನೋಡಲಾಗುತ್ತಿದೆ.

ಆದರೆ, ಚುನಾವಣೆಯಲ್ಲಿ ರಾಹುಲ್ ಅವರನ್ನು ಕಾಂಗ್ರೆಸ್‌ನ ಮುಖ್ಯ ಮುಖವೆಂದು ಹೇಳುವುದು ಅಥವಾ ಗ್ರಹಿಸಲು ಸಾಧ್ಯವಾಗಿಲ್ಲ. ಜೊತೆಗೆ, ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಹುಮತ ಸಾಧಿಸಿದರೆ, ಸರ್ಕಾರದ ನೇತೃತ್ವವನ್ನು ವಹಿಸುವವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ವರದಿ ಓದಿದ್ದೀರಾ?: ಹಿಂದುತ್ವ | ಭಾರತೀಯ ಸಮಾಜವನ್ನು ಒಳಗಿನಿಂದಲೇ ವಂಚಿಸುವ ‘ಗೋಮುಖ ವ್ಯಾಘ್ರ’

ಅದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ನಡೆದ, ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟ, ರೈತರ ಆಂದೋಲನ ಹಾಗೂ ಬಿಜೆಪಿ ಸೈದ್ಧಾಂತಿಕ ನೀತಿಗಳ ವಿರುದ್ಧದ ಪ್ರಮುಖ ಹೋರಾಟಗಳು ರಾಜಕೀಯದ ಮೇಲೆ ಪರಿಣಾಮ ಬೀರಿವೆ. ಇದು, ‘ಇಂಡಿಯಾ’ ಕೂಟದ ಶಕ್ತಿ ಹೆಚ್ಚಾಗಲು ನೆರವಾಗಿದೆ.

ಈ ಹೋರಾಟಗಳು ಮುಂದಿನ ಸರ್ಕಾರವು ಕ್ರೋನಿ-ಬಂಡವಾಳಶಾಹಿಗಳಿಂದ ದೂರ ಉಳಿಯಬೇಕು. ಜನರ ಪ್ರಗತಿ, ಯೋಗಕ್ಷೇಮ ಮತ್ತು ಅಭಿವೃದ್ಧಿಗೆ ಒತ್ತು ಕೊಡಬೇಕು. ಸೂಕ್ಷ್ಮ ಮತ್ತು ಸಮಗ್ರವಾದ ಬದಲಾವಣೆಗೆ ಅವಕಾಶ ನೀಡಬೇಕೆಂಬುದನ್ನು ಇದು ಒತ್ತಿ ಹೇಳಿವೆ. ಇದರ ಆಧಾರದ ಮೇಲೆಯೇ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಐದು ಜನಪರವಾದ ಗ್ಯಾರಂಟಿಗಳನ್ನು ನೀಡಿದೆ.

ಒಟ್ಟಿನಲ್ಲಿ ಮೋದಿ ಜನಪ್ರಿಯತೆ ಕುಸಿತ, ಮೂಲಭೂತ ಸಮಸ್ಯೆಗಳ ಸವಾಲುಗಳಿಂದಾಗಿ ಮೋದಿ ನೇತೃತ್ವದ ಎನ್‌ಡಿಎ ಸೋಲು ಖಚಿತ ಎಂಬುದು ಸ್ಪಷ್ಟವಾಗಿತ್ತು. ಅದಾಗ್ಯೂ ಕೆಲವು ರಾಜಕೀಯ ವಿಶ್ಲೇಷಕರು ಮೋದಿ ಮತ್ತೆ ಪ್ರಧಾನಿ ಆಗಬಹುದು ಎನ್ನುತ್ತಿದ್ದಾರೆ. ಅಂತಿಮವಾಗಿ ಇನ್ನು ನಾಲ್ಕು ದಿನಗಳಲ್ಲಿ ಫಲಿತಾಂಶ ಹೊರಬರಲಿದೆ. ಒಂದು ವೇಳೆ, ಮೋದಿ ಆಡಳಿತ ಮತ್ತೆ ರಚನೆಯಾದರೆ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಎಎಪಿ ನಾಯಕ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ಮುಂದಿನ ಐದು ವರ್ಷಗಳ ರಾಜಕೀಯ ದೃಷ್ಟಿಕೋನ ಹೇಗಿರಲಿದೆ ಎಂಬುದು ಮುಖ್ಯವಾಗುತ್ತದೆ. ಇವರೆಲ್ಲರ ದೃಷ್ಟಿಕೋನವು ಮೋದಿ-ಶಾ ಬ್ರಾಂಡ್‌ ಹಿಮ್ಮೆಟ್ಟಲು ಅತಿ ಮುಖ್ಯವಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...