ಅಕ್ಟೋಬರ್ 17, 24 ಮತ್ತು 31ರಂದು ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವ ಮೂಲಕ ಬಿಹಾರದ ಎನ್‌ಡಿಎ ಸರ್ಕಾರ ಬಿಹಾರ ಚುನಾವಣೆಗೂ ಮುನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಆರ್‌ಜೆಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಬಗ್ಗೆ ಹಿರಿಯ ಆರ್‌ಜೆಡಿ ಸಂಸದ ಮನೋಜ್ ಕೆ ಝಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಹಣ ಬಿಡುಗಡೆ ಮಾಡಿರುವುದು ಅಕ್ಟೋಬರ್ 6ರಂದು ಜಾರಿಗೆ ಬಂದ ನೀತಿ ಸಂಹಿತೆಯ ಸ್ಪಷ್ಟ ಮತ್ತು ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ. ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ನಾಲ್ಕು ದಿನಗಳ ಮೊದಲು ನವೆಂಬರ್ 7ರಂದು ಮತ್ತೆ ಹಣ ಬಿಡುಗಡೆ ಮಾಡಲಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆ 2023 | ಕಣದಲ್ಲಿದ್ದಾರೆ ಕ್ರಿಮಿನಲ್ ಕೇಸುಗಳ ನೂರಾರು ಆಪಾದಿತರು
“ಈ ಅವಧಿಯಲ್ಲಿ ಯಾವುದೇ ಯೋಜನೆಯ ಹಣವನ್ನು ವಿತರಿಸುವುದು, ಸಂಹಿತೆಯ ಉಲ್ಲಂಘಟನೆಯಾಗಿದೆ. ವಿಶೇಷವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನೀತಿ ಸಂಹಿತೆ ಜಾರಿಯಾದ ಮತ್ತು ಮತದಾನಕ್ಕೆ ಕೆಲವೇ ವಾರಗಳು ಇರುವಾಗ ನಗದು ವರ್ಗಾವಣೆ ಮಾಡಿರುವುದು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದೆ” ಎಂದು ಪತ್ರದಲ್ಲಿ ದೂರಲಾಗಿದೆ.
चुनाव आयोग की अनुमति से बिहार सरकार चुनाव के मध्य महिलाओं को 10 हज़ार की रिश्वत रूपी कर्जा दे रही है। pic.twitter.com/HlRO75CxWu
— Rashtriya Janata Dal (@RJDforIndia) November 1, 2025
ಇನ್ನು ಈ ಬಗ್ಗೆ ತಕ್ಷಣ ಮತ್ತು ಬಲವಾದ ಕ್ರಮ ಕೈಗೊಳ್ಳುವಂತೆಯೂ ಮನೋಜ್ ಕೆ ಝಾ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ತ್ವರಿತವಾಗಿ ಕ್ರಮಕೈಗೊಳ್ಳುವುದು ಚುನಾವಣೆ ವೇಳೆ ಯಾವುದೇ ಬೆಲೆ ತೆತ್ತಾದರೂ ಸಾಂವಿಧಾನಿಕ ಆದೇಶವನ್ನು ಎತ್ತಿ ಹಿಡಿಯಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದಂತಾಗುತ್ತದೆ” ಎಂದು ತಿಳಿಸಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಮುಖ್ಯಮಂತ್ರಿ ‘ಮಹಿಳಾ ರೋಜ್‌ಗಾರ್ ಯೋಜನೆ’ಯನ್ನು ಪ್ರಾರಂಭಿಸಿದ್ದು, ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಹತ್ತು ಸಾವಿರ ರೂಪಾಯಿ ಆರಂಭಿಕ ಆರ್ಥಿಕ ಅನುದಾನವನ್ನು ನೀಡುತ್ತದೆ. ಸದ್ಯ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸರ್ಕಾರ ಯಾವುದೇ ಹೊಸ ಯೋಜನೆಗಳ ಹಣ ಬಿಡುಗಡೆ ಮಾಡುವಂತಿಲ್ಲ. ಮಹಿಳಾ ರೋಜ್‌ಗಾರ್ ಯೋಜನೆಯೂ ಹೊಸ ಯೋಜನೆಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿದೆ.





