ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ‘ಅಬ್ ಕಿ ಬಾರ್ 400 ಪಾರ್’ ಎಂಬ ಹೇಳಿಕೆ ಈಗಾಗಲೇ ಹುಸಿಯಾಗುವ ಎಲ್ಲ ಸಾಧ್ಯತೆಗಳಿರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಲಿದ್ದಾರಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಹಾಗೆಯೇ ನಿತೀಶ್ ಕಿಂಗ್‌ಮೇಕರ್ ಆಗಲಿದ್ದಾರೆ ಎಂದಿದ್ದಾರೆ.
Nitish Kumar right now#ElectionsResults pic.twitter.com/ivgquELMpD
— chacha monk (@oldschoolmonk) June 4, 2024
ಪ್ರಮುಖ ಕ್ಷಣಗಳಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಇತಿಹಾಸವನ್ನು ಹೊಂದಿರುವ ನಿತೀಶ್ ಕುಮಾರ್ ಈಗ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ. ಇಂಡಿಯಾ ಒಕ್ಕೂಟವು 230ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಮ್ಯಾಜಿಕ್ ಫಿಗರ್ 272ರಿಂದ ದೂರವಿದೆ. ಬಿಜೆಪಿಗೆ 272ಕ್ಕೂ ಅಧಿಕ ಸ್ಥಾನ ಬಂದರೂ ಕೂಡಾ ನಿತೀಶ್ ಕುಮಾರ್ ಇಂಡಿಯಾ ಕೂಟ ಸೇರಿದರೆ ಫಲಿತಾಂಶವೇ ಬದಲಾಗುವ ಸಾಧ್ಯತೆಯಿದೆ ಎನ್ನುತ್ತಾರೆ ನೆಟ್ಟಿಗರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 4,000ಕ್ಕಿಂತ ಹೆಚ್ಚು ಸ್ಥಾನ: ಟ್ರೋಲ್ ಆದ ಬಿಹಾರ ಸಿಎಂ ನಿತೀಶ್ ಕುಮಾರ್
Rahul Gandhi to Nitish Kumar right now pic.twitter.com/XwxHKF5g2N
— Facts (@BefittingFacts) June 4, 2024
ಸಾಮಾಜಿಕ ಮಾಧ್ಯಮದಲ್ಲಿ ನಿತೀಶ್ ಕುಮಾರ್ ಬಗ್ಗೆ ಸಾಕಷ್ಟು ಮೀಮ್ಸ್‌ಗಳು ಹರಿದಾಡುತ್ತಿದೆ. ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ಮತ್ತೆ ಪಕ್ಷ ಬದಲಾಯಿಸಬಹುದು. ರಾಹುಲ್ ಗಾಂಧಿಯ ಕಾಂಗ್ರೆಸ್ ಕೈ ಹಿಡಿಯಬಹುದು, ಹೀಗಾದರೆ ನಿತೀಶ್ ಕುಮಾರ್‌ಗೆ ಪ್ರಧಾನಿ ಹುದ್ದೆ ನೀಡಲಾಗುವುದು ಎಂದು ನೆಟ್ಟಿಗರು ಊಹಿಸಿದ್ದಾರೆ.
Nitish Kumar to #INDIAALIANCE : pic.twitter.com/A4yOpfkEim
— Tarun Gautam (@TARUNspeakss) June 4, 2024
“ಬಿಜೆಪಿ ಏಕಾಂಗಿಯಾಗಿ 272 ದಾಟದಿದ್ದರೆ ಎನ್‌ಡಿಎ ಸರ್ಕಾರ ಅಸ್ಥಿರವಾಗಲಿದೆ. ನಿತೀಶ್, ನಾಯ್ಡು ಅವರಂತಹವರನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ಇಂಡಿಯಾ ಒಕ್ಕೂಟವು ‘ನಿತೀಶ್ ಜೀ ಬನ್ನಿ ನಿಮ್ಮನ್ನು ನಾವು ಪಿಎಂ ಮಾಡುತ್ತೇವೆ’ ಎಂದು ಹೇಳಬೇಕಾಗುತ್ತದೆ. ಆಗ ನಿತೀಶ್ ಹಿಂದಿರುಗಿ ನೋಡದೆ ಇಂಡಿಯಾ ಒಕ್ಕೂಟ ಸೇರುತ್ತಾರೆ. ಬಹುಶಃ ಈಗಾಗಲೇ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸಭೆ ಸೇರಿರಬಹುದು” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
🧵 Big News from Sources
Nitish Kumar and Chandrababu Naidu have been contacted by India Alliance.
India Alliance is confident of its majority and can offer a big post to Nitish Kumar.#ElectionsResults pic.twitter.com/GiTW08MTuB
— Harsh Tiwari (@harsht2024) June 4, 2024
“ಎನ್‌ಡಿಎ ಸಂಖ್ಯೆಗಳು ಅರ್ಥಹೀನವಾದುದ್ದು, ಬಿಜೆಪಿಗೆ 272 ಬರದಿದ್ದರೆ, ನಿತೀಶ್ ಕುಮಾರ್, ಅಜಿತ್ ಪವಾರ್, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ ಅವರಂತಹವರು ಪಕ್ಷವನ್ನು ಬದಲಾಯಿಸುವುದಿಲ್ಲ ಎಂದು ನೀವು ಭಾವಿಸುತ್ತೀರಾ” ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನಿಸಿದ್ದಾರೆ.





