ಗಾಝಾ ಬಗ್ಗೆ ಇಸ್ರೇಲ್ ತೀರ್ಮಾನ ತಿರುಗುಬಾಣವಾಗಬಹುದು: ಬರಾಕ್ ಒಬಾಮಾ ಎಚ್ಚರಿಕೆ

Date:

ಇಸ್ರೇಲ್-ಹಮಾಸ್ ನಡುವಿನ ಸದ್ಯ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮೌನ ಮುರಿದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಮನುಕುಲದ ಮೇಲಿನ ಪರಿಣಾಮಗಳನ್ನು ನಿರ್ಲಕ್ಷಿಸುವ ಮಿಲಿಟರಿ ತಂತ್ರಗಾರಿಕೆಯು ಅಂತಿಮವಾಗಿ ಇಸ್ರೇಲ್‌ಗೆ ತಿರುಗುಬಾಣವಾಗಲೂಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘರ್ಷದ ಬಗ್ಗೆ ಸುದೀರ್ಘವಾದ ಪೋಸ್ಟ್ ಹಾಕಿರುವ ಒಬಾಮಾ, ‘ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಗಾಝಾದ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಆ ನಗರಕ್ಕೆ ನೀರು, ಆಹಾರ ಮುಂತಾದ ಮೂಲಭೂತ ಸೌಕರ್ಯಗಳ ಪೂರೈಕೆ ಸ್ಥಗಿತಗೊಳಿಸಿರುವುದು, ಫೆಲೆಸ್ತೀನೀಯರ ಧೋರಣೆಯನ್ನು ತಲೆಮಾರುಗಳ ಕಾಲ ಇನ್ನಷ್ಟು ಕಠಿಣವಾಗಿಸಲೂಬಹುದು ಮತ್ತು ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಬೆಂಬಲ ಕಡಿಮೆಗೊಳಿಸಬಹುದು’ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಸ್ರೇಲ್ ದಾಳಿಯಿಂದಾಗಿ ಗಾಝಾದಲ್ಲಿ ಕನಿಷ್ಠ 5,087 ಜನರು ಸಾವನ್ನಪ್ಪಿದ್ದು, 15,273 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿನ ಆರೋಗ್ಯ ಅಧಿಕಾರಿಗಳು ತಿಳಿಸುತ್ತಿದ್ದಂತೆ ಒಬಾಮಾ ಅವರಿಂದ ಈ ಹೇಳಿಕೆ ಬಂದಿದೆ.

“ಗಾಝಾದ ಜನರಿಗೆ ಆಹಾರ, ನೀರು, ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುವ ಇಸ್ರೇಲ್‌ನ ನಿರ್ಧಾರವು ಅಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಬಹುದು. ಈ ಪ್ರಾಂತ್ಯದಲ್ಲಿ ಶಾಂತಿ-ಸ್ಥಿರತೆ ಕಾಪಾಡುವ ಯತ್ನಕ್ಕೆ ಮತ್ತಷ್ಟು ತೊಡಕಾಗಬಹುದು” ಎಂದು ಒಬಾಮ ಹೇಳಿದ್ದಾರೆ.

ಹಮಾಸ್‌ನ ದಾಳಿಯನ್ನು ಖಂಡಿಸಿರುವ ಒಬಾಮಾ, ಇಸ್ರೇಲ್‌ನ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಆದರೆ ಯುದ್ಧಗಳಲ್ಲಿ ನಾಗರಿಕರಿಗೆ ಆಗುತ್ತಿರುವ ಅಪಾಯಗಳ ಬಗ್ಗೆಯೂ ಗಮನ ಹರಿಸಬೇಕಾದುದು ಯುದ್ಧದ ನಿಯಮ ಎಂದು ಅವರು ಎಚ್ಚರಿಕೆ ನೀಡಿದರು.

35 ಮಂದಿ ವಿಶ್ವಸಂಸ್ಥೆ ಸಿಬ್ಬಂದಿ ಬಲಿ

ವಿಶ್ವಸಂಸ್ಥೆಯ ವರದಿಯಂತೆ ಅಕ್ಟೋಬರ್  ರಿಂದ ಪ್ಯಾಲೇಸ್ತೀನಿಯನ್ ನಿರಾಶ್ರಿತರೊಂದಿಗೆ ಕೆಲಸ ಮಾಡುವ ಕನಿಷ್ಠ 35 ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

ಈ ನಡುವೆ 200ಕ್ಕೂ ಅಧಿಕ ಒತ್ತೆಯಾಳುಗಳ ಪೈಕಿ, ಹಮಾಸ್ ಇಬ್ಬರು ಹಿರಿಯ ಇಸ್ರೇಲಿ ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದೆ. ಹಮಾಸ್‌ನವರು ಒತ್ತೆಯಾಳುಗಳೊಂದಿಗೆ ಕರುಣೆಯಿಂದ ವರ್ತಿಸಿದರು ಎಂದು ಬಿಡುಗಡೆಗೊಂಡ ಮಹಿಳೆಯ ಪೈಕಿ 85ರ ಹರೆಯದ ಹಿರಿಯ ಮಹಿಳೆ ಲಿಫ್‌ಶಿಟ್ಜ್ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಹಮಾಸ್‌ನವರು ಒತ್ತೆಯಾಳುಗಳೊಂದಿಗೆ ಕರುಣೆಯಿಂದ ವರ್ತಿಸಿದರು: ಬಿಡುಗಡೆಗೊಂಡ ಹಿರಿಯ ಮಹಿಳೆ

ಏತನ್ಮಧ್ಯೆ, ಇಸ್ರೇಲಿ ರಕ್ಷಣಾ ಪಡೆಗಳ (ಐಡಿಎಫ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ, ಇಸ್ರೇಲ್ ಹಮಾಸ್ ವಿರುದ್ಧದ ವೈಮಾನಿಕ ದಾಳಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

RSS, BJP ವಿರುದ್ಧ ಹೋರಾಡುವ ದೇಶದ ಏಕೈಕ ನಾಯಕ ರಾಹುಲ್‌ ಗಾಂಧಿ : RS MP ಕ್ರಿಸ್ಟೋಫರ್ ತಿಲಕ್

ಸೋನಿಯಾ ಗಾಂಧಿ ಅವರು ಕಂಡ ರಾಜಕೀಯದ ಪರಿಸ್ಥಿತಿಯೇ ಬೇರೆ, ರಾಹುಲ್‌ ಗಾಂಧಿ...

ಅಮೆರಿಕ ವಿಮಾನ ನಿಲ್ದಾಣ: ಏರ್ ಕೆನಡಾ ವಿಮಾನಕ್ಕೆ ಅಪ್ಪಳಿಸಿದ ಟ್ರಕ್

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಜನನಿಬಿಡ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ...

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...