ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ವ್ಯಕ್ತಿ ಯಕ್ಷಿತ್ ರಾಜ್ ಎಂಬ ಯುವಕ ರಾಮನಗರ ಮೂಲದವನು, ಈ ಕುರಿತು ಮೂಡಿಗೆರೆ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಕಾಮೆಂಟ್ ಬಗ್ಗೆ ಶಾಸಕಿ ನಯನ ಮೋಟಮ್ಮ ಪ್ರತಿಕ್ರಿಯೆ: ಸಮಾಜದ ಮಹಿಳಾ ವಿರೋಧಿ ಮನೋಭಾವದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ‘ನಾವು ಸ್ಲೀವ್‌ಲೆಸ್ ಬಟ್ಟೆ, ಜೀನ್ಸ್ ಅಥವಾ ಪ್ಯಾಂಟ್ ಧರಿಸಿದರೆ ನಮ್ಮನ್ನು ‘ಕೆಲಸ ಮಾಡದ ರಾಜಕಾರಣಿ’ ಎಂದು ಕರೆಯುತ್ತಾರೆ. ನಮ್ಮ ಉಡುಪಿನ ಆಧಾರದ ಮೇಲೆ ನಮ್ಮ ಕೆಲಸವನ್ನು ಅಳೆಯುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಪುರುಷ ರಾಜಕಾರಣಿಗಳಿಗೆ ಯಾರೂ ಕೇಳುವುದಿಲ್ಲವೇಕೆ?’ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ರಾಜಕೀಯ ಮತ್ತು ನನ್ನ ಪರ್ಸನಲ್ ಗಾಗಿ ಎರಡು ಇನ್ಸ್ಟಾಗ್ರಾಮ್ ಖಾತೆ ಇದೆ. ಆದರೇ, ಈ ನಡುವೆ ಪರ್ಸನಲ್ ಇನ್ಸ್ಟಾಗ್ರಾಮ್ ಖಾತೆಗೆ ಕಾಮೆಂಟ್ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ಹೇಗಿದ್ದೆ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ನಾನು ನನ್ನ ಜೀವನವನ್ನು ಪಾರದರ್ಶಕವಾಗಿ ನಡೆಸಬೇಕು. ಹಾಗೆಯೇ, ರಾಜಕೀಯವಾಗಿ ಯಾವುದೇ ಮುಚ್ಚುಮರೆ ಇರಬಾರದು ನಮ್ಮ ವೈಯಕ್ತಿಕ ಜೀವವನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದು ಪೋಸ್ಟ್ ಮಾಡುವುದು ತಪ್ಪ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.
ನನಗೂ ಗಂಡ, ಮಕ್ಕಳಿದ್ದಾರೆ, ಫ್ರೆಂಡ್ಸ್ ಇದ್ದಾರೆ. ಬಟ್ಟೆಗಳ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಎಂಎಲ್ಎ, ಗುಂಡಿ ಮುಚ್ಚಿಲ್ಲ ಎಂದು ಪರ್ಸನಲ್ ಆಗಿ ಟಾರ್ಗೆಟ್ ಮಾಡಿ ಕಾಮೆಂಟ್ ಮಾಡುತ್ತಾರಂದ್ರೆ ಮಹಿಳೆಯರ ಬಗ್ಗೆ ಯಾವ ರೀತಿ ಸಮಾಜದಲ್ಲಿ ಕಾಳಜಿ ಇದೆ. ರಾಜ್ಯದಲ್ಲಿ 11 ಜನ ಮಹಿಳಾ ಶಾಸಕರಿದ್ದೇವೆ. ನನ್ನ ಎರಡು ಇನ್ಸ್ಟಾಗ್ರಾಮ್ , ಫೇಸ್ಬುಕ್ ಖಾತೆಯನ್ನ ಪಬ್ಲಿಕ್ ನಲ್ಲಿ ಇಟ್ಟಿದ್ದೇನೆ ಇದು ತಪ್ಪಾ? ಪಾರದರ್ಶಕವಾಗಿ ಜೀವನ ಮಾಡುವುದು ತಪ್ಪಾ? ಇದೆ ಕಾರಣಕ್ಕೆ ರಾಜಕಾರಣಿಗಳು ಅವರ ವೈಯಕ್ತಿಕ ಜೀವನವನ್ನು ಮುಚ್ಚಿಡುತ್ತಾರೆಂದು ಶಾಸಕಿ ನಯನ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಕಳಸ | ಜನವಿರೋಧಿ ಅರಣ್ಯ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ
ನಮಗೆ ನಮ್ಮ ಪರ್ಸನಲ್ ಜೀವನ ಇರುವುದಿಲ್ಲ, ನಾವು ಸಾರ್ವಜನಿಕ ಜೀವನದಲ್ಲಿರೋದೆ ನಮಗೆ ಜಿಗುಪ್ಸೆ ಹಿಂಸೆ ,ಆಗುತ್ತಿದೆ, ನಾವು ಏನು ತಪ್ಪು ಮಾಡುತ್ತಿದ್ದೇವೆ ಅನ್ನಿಸುತ್ತದೆ. ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿಯೆತ್ತಿದೇನೆ. ಅಶ್ಲೀಲ ಕಾಮೆಂಟ್ ಸಂಬಂಧ ನಮ್ಮ ಕಾರ್ಯಕರ್ತರು ದೂರು ನೀಡಿದ್ರು, ಬಂಧನ ಕೂಡ ಮಾಡಿದ್ರು, ನಾನು ಧೈರ್ಯವಾಗಿ ಜೀವನ ಮಾಡುತ್ತೇನೆ ನನಗೆ ಯಾರ ಭಯವಿಲ್ಲ ಎಂದು ಮೂಡಿಗೆರೆ ಕ್ಷೇತ್ರ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.





