NEET | ‘ಒಂದು ರಾಷ್ಟ್ರ, ಒಂದು ಪರೀಕ್ಷೆ’ – ದೇಶಕ್ಕಂಟಿದ ವಿಪತ್ತು

Date:

ಕಳೆದ ಐದು ವರ್ಷಗಳಲ್ಲಿ 15 ರಾಜ್ಯಗಳಲ್ಲಿ ಕನಿಷ್ಠ 48 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಈ ಸೋರಿಕೆಗಳು ಸುಮಾರು 1.2 ಲಕ್ಷ ಹುದ್ದೆಗಳಿಗಾಗಿ ಪರೀಕ್ಷೆ ಪಡೆದ ಕನಿಷ್ಠ 1.4 ಕೋಟಿ ಅಭ್ಯರ್ಥಿಗಳ ಭವಿಷ್ಯವನ್ನು ಆತಂಕ ಮತ್ತು ಅತಂತ್ರಗೊಳಿಸಿವೆ

ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿರುತ್ತದೆ ಎಂದು ಹೇಳಲಾಗುತ್ತಿರುವ ಆಧುನಿಕ ಪರೀಕ್ಷಾ ವ್ಯವಸ್ಥೆಯು ಭಾರತದಲ್ಲಿ ಅವ್ಯವಸ್ಥೆ, ಅಕ್ರಮಗಳಿಂದ ಕೂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್‌ ಅಂಕ, ಅಕ್ರಮಗಳ ಆರೋಪದ ಹೊರತಾಗಿಯೂ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು (NEET) ಇನ್ನೂ ರದ್ದುಗೊಳಿಸಿಲ್ಲ. ಆ ನಂತರ, ನಡೆದ ಮತ್ತು ನಡೆಯಬೇಕಿದ್ದ ನಾಲ್ಕು ಪರೀಕ್ಷೆಗಳು ಪರೀಕ್ಷೆ ಆರಂಭವಾಗುವ ಹಿಂದಿನ ದಿನ ರದ್ದಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳು/ಅಭ್ಯರ್ಥಿಗಳ ಭವಿಷ್ಯ ಅತಂತ್ರ ಮತ್ತು ಆತಂಕದಲ್ಲಿದೆ. ಇದೆಲ್ಲದರ ನಡುವೆಯೂ, ಪ್ರಶ್ನೆಪತ್ರಿಕೆ ಸೋರಿಕೆ ಗ್ಯಾಂಗ್‌ಗಳು ಸಕ್ರಿಯವಾಗಿ ಅಕ್ರಮಗಳಲ್ಲಿ ತೊಡಗಿವೆ.

ಹಲವಾರು ಅಭ್ಯರ್ಥಿಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ಅರ್ಜಿಗಳ ಸುರಿಮಳೆಯನ್ನು ಎದುರಿಸುತ್ತಿದೆ. ತಂತ್ರಜ್ಞರ ತನಿಖಾ ಸಮಿತಿ ರಚನೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರನ್ನು ವಜಾಗೊಳಿಸುವುದು, ಕೆಲವು ಆಕಾಂಕ್ಷಿಗಳ ಮರುಪರೀಕ್ಷೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೆಲವು ಭರವಸೆಗಳ ಮೂಲಕ ಕೇಂದ್ರ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹರಸಾಹಸ ಪಡುತ್ತಿದೆ.

ನೀಟ್ ಅಕ್ರಮ ಹೊರಬಂದ ಸಮಯದಲ್ಲಿ ನಡೆದಿದ್ದ ಯುಜಿಸಿ-ನೆಟ್ ಪರೀಕ್ಷೆಯನ್ನು ಹಾಗೂ ಮುಂದಿನ ದಿನಗಳಲ್ಲಿ ನಡೆಯಬೇಕಿದ್ದ ಸಿಎಸ್ಐಆರ್-ಯುಜಿಸಿ-ನೆಟ್ ಮತ್ತು ನೀಟ್-ಪಿಜಿ ಪರೀಕ್ಷೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ, ಈ ರದ್ದತಿಗೆ ಕಾರಣವೇನು ಎಂಬುದನ್ನು ಹೇಳಿಲ್ಲ. ತನಿಖೆಯು ಪ್ರಶ್ನೆಪತ್ರಿಕೆಗಳು ಹೇಗೆ ಸೋರಿಕೆಯಾದವು ಎಂಬುದು ಸೇರಿದಂತೆ ಅಕ್ರಮದಲ್ಲಿನ ಕೆಲವು ಮಾಹಿತಿಗಳನ್ನು ಪತ್ತೆ ಮಾಡಿ, ಬಹಿರಂಗ ಪಡಿಸಬಹುದು. ಬಹುಶಃ ತನಿಖಾ ತಂಡ ಹೇಳುವ ಕಾರಣಗಳನ್ನು ಜನರು ನಂಬಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ವಿದ್ಯಾರ್ಥಿಗಳು/ಅಭ್ಯರ್ಥಿಗಳು ಹಾಗೂ ಅವರ ಕುಟುಂಬಗಳು ಕೆಲವು ಪ್ರಶ್ನೆಗಳನ್ನು ಎತ್ತಿವೆ. ಅವುಗಳಿಗೂ ಉತ್ತರಗಳು ಬೇಕಾಗುತ್ತವೆ. ಸದ್ಯ, ಚರ್ಚೆಯಲ್ಲಿರುವ ಕೆಲ ಪ್ರಶ್ನೆಗಳು ಹೀಗಿವೆ:

* ಪರೀಕ್ಷಾ ಪ್ರಕ್ರಿಯೆಯ ಹೊರಗುತ್ತಿಗೆಯನ್ನು ಖಾಸಗಿ ಕಂಪನಿಗಳಿಗೆ ನೀಡಿರುವುದು ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಿಲ್ಲವೇ?

* ಕಂಪ್ಯೂಟರ್ ಆಧಾರಿತ ಪರೀಕ್ಷೆ ನ್ಯಾಯೋಚಿತವೇ ಮತ್ತು ಅಗತ್ಯವೇ? ಬಹು ಆಯ್ಕೆ ಪ್ರಶ್ನೆಗಳ (MCQ) ವ್ಯವಸ್ಥೆಯು ಶೈಕ್ಷಣಿಕ ಮಟ್ಟವನ್ನು ಪರೀಕ್ಷಿಸುವ ನ್ಯಾಯೋಚಿತ ಮತ್ತು ಮಾನ್ಯವಾದ ಸಾಧನವೇ?

* ಕೇಂದ್ರೀಕೃತ ಪರೀಕ್ಷೆಯ (ಒಂದು ರಾಷ್ಟ್ರ – ಒಂದು ಪರೀಕ್ಷೆ) ನಡೆಸುವುದು ತಮ್ಮದೇ ಆದ ವಿಶಾಲವಾದ, ವೈವಿಧ್ಯಮಯ ಹಾಗೂ ಬಹುತ್ವದ ದೇಶದಲ್ಲಿ ನ್ಯಾಯೋಚಿತ ಮತ್ತು ಮಾನ್ಯವಾದ ವಿಧಾನವೇ?

ಈ ಮೂರು ಪ್ರಶ್ನೆಗಳು ಗಂಭೀರವಾದವು. ಇವುಗಳ ತನಿಖಿಸಲು ಮತ್ತು ಉತ್ತರ ಕಂಡುಕೊಳ್ಳಲು ಭಾರೀ ಶ್ರಮ ಹಾಕಬೇಕು. ಇದಕ್ಕೆ ಸರ್ಕಾರ ಮುಂದಾಗುವುದೇ? ಉತ್ತರಿಸುವುದೇ? ಗೊತ್ತಿಲ್ಲ. ಮುಂದುವರೆದು ಹೇಳಬೇಕೆಂದರೆ ಸರ್ಕಾರ ಉತ್ತರಿಸುವುದಿಲ್ಲ!

ಹೊರಗುತ್ತಿಗೆ ದುಷ್ಟರು
ಮಾಧ್ಯಮ ವರದಿಗಳ ಪ್ರಕಾರ, ಎನ್‌ಟಿಎ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತದೆ. 2023ರಲ್ಲಿ 1.23 ಕೋಟಿ ವಿದ್ಯಾರ್ಥಿಗಳು ಎನ್‌ಟಿಎ ನಡೆಸುವ ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ, NEET-UG, JEE, UGC-NET, CUET ಸೇರಿದಂತೆ 15 ಪ್ರಮುಖ ಪರೀಕ್ಷೆಗಳನ್ನು ಎನ್‌ಟಿಎ ನಡೆಸುತ್ತದೆ. ಪ್ರಾಯೋಗಿಕವಾಗಿ ದೇಶಾದ್ಯಂತ ಈ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಕೆಲಸಗಳನ್ನು ಹೊರಗುತ್ತಿಗೆ ನೀಡಲಾಗುತ್ತದೆ. ಎನ್‌ಟಿಎ ನೀಡಿದ ಟೆಂಡರ್‌ಗಳ ಪಟ್ಟಿ ಅವರ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದು ಈ ಪರೀಕ್ಷೆಗಳ ಕುರಿತು ಒಂದು ನೋಟವನ್ನು ನೀಡುತ್ತದೆ.

ಖಾಸಗಿ ಸೇವಾ ಪೂರೈಕೆದಾರರು ತಮ್ಮ ಸಿಬ್ಬಂದಿಯೊಂದಿಗೆ ಪರೀಕ್ಷೆಗಳನ್ನು ನಡೆಸುತ್ತಾರೆ. ಐಟಿ ವ್ಯವಸ್ಥೆಗಳು ಮತ್ತು ಕ್ಯೂಆರ್ ಕೋಡ್-ಸಂಬಂಧಿತ ಕೆಲಸಗಳಂತಹ ಎಲ್ಲ ತಾಂತ್ರಿಕ ಕೆಲಸಗಳನ್ನು ಅವರು ನಿರ್ವಹಿಸುತ್ತಾರೆ. ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಹೆಸರಿಸಲಾಗದ ವಿಷಯ ಪರಿಣಿತರು/ತಜ್ಞರು ಸಿದ್ದಪಡಿಸುತ್ತಾರೆ. ಅವುಗಳನ್ನು ಪರೀಕ್ಷಾ ಅಭಿವೃದ್ಧಿ ಸಮಿತಿಯು ಅಂತಿಮಗೊಳಿಸುತ್ತದೆ. ಇದರಲ್ಲಿ ಖಾಸಗಿ ಸಂಸ್ಥೆಗಳು ಹೆಚ್ಚಿನ ಪಾತ್ರ ನಿರ್ವಹಿಸುತ್ತಿವೆ. ಹಣಕ್ಕಾಗಿ, ಲಾಭಕ್ಕಾಗಿ ನಡೆಯುವ ಈ ಖಾಸಗಿ ಸಂಸ್ಥೆಗಳು ಮತ್ತು ಅಲ್ಲಿನ ವ್ಯಕ್ತಿಗಳು ಅಕ್ರಮಕ್ಕೆ ನೆರವು ನೀಡಬಹುದು ಎಂಬ ಗಂಭೀರ ಆರೋಪವೂ ಇದೆ.

ಅಂದಹಾಗೆ, ಈ ಪ್ರಮುಖ ಪರೀಕ್ಷೆಗಳ ಜವಾಬ್ದಾರಿಯನ್ನು ಎನ್‌ಟಿಎ ವಹಿಸಿಕೊಳ್ಳುವ ಮೊದಲು, CBSE ಮತ್ತು AICTE ನಂತಹ ಸರ್ಕಾರಿ ಸಂಸ್ಥೆಗಳು ಪರೀಕ್ಷೆಗಳನ್ನು ನಡೆಸುತ್ತಿದ್ದವು. ಆದರೆ, ಈ ಜವಾಬ್ದಾರಿಯು ಎನ್‌ಟಿಎಗೆ ಹಸ್ತಾಂತರವಾಗಿ, ಹೊರಗುತ್ತಿಗೆ ಆಧಾರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒಡ್ಡಿಕೊಳ್ಳುವುದು ಸಿಸ್ಸಂಶಯವಾಗಿ ದುಷ್ಕೃತ್ಯಗಳಿಗೆ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ. ಈ ಹೊರಗುತ್ತಿಗೆ ವ್ಯವಸ್ಥೆಯಲ್ಲಿ ಖಾಸಗಿ ಸಂಸ್ಥೆಗಳು ಪರೀಕ್ಷಾ ಕೆಲಸವನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂಬ ನಂಬಿಕೆಯನ್ನು ಹೇರಲಾಗುತ್ತಿದೆ.

ಇದು ನಿಜವೆಂದು ಸಾಬೀತು ಮಾಡುವ ಯಾವುದೇ ಪುರಾವೆಗಳಿಲ್ಲ. ಆದರೆ ಇಡೀ ಆರ್ಥಿಕತೆಯು ಈಗ ಪ್ರಾಯೋಗಿಕವಾಗಿ ಗುತ್ತಿಗೆ ಅಥವಾ ಹೊರಗುತ್ತಿಗೆ ಕೆಲಸದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದು ಹೆಚ್ಚಿನ ದೇಶಗಳಲ್ಲಿ ನೀತಿ ನಿರೂಪಕರ ಕಣ್ಣಿಗೆ ಬಟ್ಟೆ ಕಟ್ಟುವ ನವ ಉದಾರವಾದಿ ಚಿಂತನೆಯ ಹೇರಿಕೆಗಳಲ್ಲಿ ಒಂದಾಗಿದೆ.

ಈಗ, ನೀಟ್‌ನಂತಹ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಕಂಡುಬರುವ ಅವ್ಯವಸ್ಥೆಯು ರಾಷ್ಟ್ರೀಯ ಪರೀಕ್ಷೆಗಳಲ್ಲಿನ ಅಕ್ರಮವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಈ ವರ್ಷದ ಆರಂಭದಲ್ಲಿ ಪ್ರಕಟವಾದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ನ ತನಿಖಾ ವರದಿಯು ಹಿಂದಿನ ಐದು ವರ್ಷಗಳಲ್ಲಿ 15 ರಾಜ್ಯಗಳಲ್ಲಿ ಕನಿಷ್ಠ 48 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಬಯಲುಗೊಳಿಸಿದೆ. ಈ ಸೋರಿಕೆಗಳು ಸುಮಾರು 1.2 ಲಕ್ಷ ಹುದ್ದೆಗಳಿಗಾಗಿ ಪರೀಕ್ಷೆ ಪಡೆದ ಕನಿಷ್ಠ 1.4 ಕೋಟಿ ಅಭ್ಯರ್ಥಿಗಳ ಭವಿಷ್ಯವನ್ನು ಆತಂಕ ಮತ್ತು ಅತಂತ್ರಗೊಳಿಸಿವೆ ಎಂದು ವರದಿ ಹೇಳಿದೆ.

CBT ಮತ್ತು MCQಗಳ ಪಾತ್ರ
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಅದರ ಫಲಿತಾಂಶ ಹಾಗೂ MCQ (ಬಹು ಆಯ್ಕೆಯ ಪ್ರಶ್ನೆಗಳು) ಈಗ ಉದ್ಯೋಗಾಕಾಂಕ್ಷಿಗಳ ಜ್ಞಾನ ಅಥವಾ ಅರ್ಹತೆಯನ್ನು ಪರೀಕ್ಷಿಸಲು ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೂ ಆದ್ಯತೆಯ ಆಯ್ಕೆಗಳಾಗಿವೆ. MCQ ಒಂದು ನೇರವಾದ ಪ್ರಶ್ನೆಯನ್ನು ಒಳಗೊಂಡಿರುತ್ತದೆ, ಅದಕ್ಕೆ ನಾಲ್ಕು ವಿಭಿನ್ನ ಉತ್ತರಗಳನ್ನೂ ಸೂಚಿಸಲಾಗುತ್ತದೆ. ಸರಿಯಾದುದ್ದನ್ನು ಆಯ್ಕೆ ಮಾಡುವುದು ಅಭ್ಯರ್ಥಿಗಳ ಕೆಲಸ. ಇದರಿಂದ, ಪರೀಕ್ಷಾರ್ಥಿಗಳು 180 ಪ್ರಶ್ನೆಗಳನ್ನು 200 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಇದನ್ನು ಅತ್ಯಂತ ವೇಗವಾಗಿ ಮಾಡುವ ಮಾರ್ಗವೆಂದರೆ OMR (ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್) ಶೀಟ್‌ಗಳನ್ನು ನೀಡುವುದು. ಅಲ್ಲಿ ಪರೀಕ್ಷಾರ್ಥಿಯು ಸರಿಯಾದ ಉತ್ತರದ ಮುಂದೆ ವೃತ್ತಗಳಲ್ಲಿ ಬಣ್ಣ ಹಾಕುತ್ತಾರೆ. ಈ ಹಾಳೆಯನ್ನು ನಂತರ ಗಣಕೀಕೃತ ಸಾಧನಗಳಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಇದು ವೇಗವಾಗಿ ಮೌಲ್ಯಮಾಪನ ಮುಗಿಸುವ ಮಾರ್ಗವಾಗಿದೆ. ಕೆಲವು ಸಂದರ್ಭದಲ್ಲಿ ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್‌ನಲ್ಲಿಯೇ ಪ್ರಶ್ನೆಪತ್ರಿಕೆ ನೀಡಿ, ಅಲ್ಲಿಯೇ ಉತ್ತರಿಸಲೂಬಹುದು.

ಈ ವ್ಯವಸ್ಥೆಯು ಎರಡು ಸ್ಪಷ್ಟ ಸಮಸ್ಯೆಗಳನ್ನು ಹೊಂದಿದೆ: ಒಂದು, ಪರೀಕ್ಷಾರ್ಥಿಯು ಕೆಲವು ರೀತಿಯ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಉತ್ತರಗಳನ್ನು ಕಂಡುಹಿಡಿಯುವಲ್ಲಿ ಪ್ರವೀಣನಾಗಬೇಕು. ಎರಡನೆಯದಾಗಿ, ಪರೀಕ್ಷಾರ್ಥಿಯು ಇಂಟರ್ನೆಟ್ ಮತ್ತು ಸೂಕ್ತವಾದ ಕಂಪ್ಯೂಟರ್ ಸಾಧನ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರಬೇಕು.

MCQಗಳಿಗೆ ವೇಗವಾಗಿ ಉತ್ತರಿಸಲು, ಅದಕ್ಕೆ ತಂಕ್ಕಂತೆ ಪ್ರವೀಣರಾಗಲು, ಅಗಾಧವಾದ ಮೌಖಿಕ ಅಭ್ಯಾಸದ ಅಗತ್ಯವಿದೆ. ಇದನ್ನು ಈಗ ದೇಶಾದ್ಯಂತ ಇರುವ ಕೋಚಿಂಗ್ ಸೆಂಟರ್‌ಗಳು ಒದಗಿಸುತ್ತವೆ. ಕೆಲವು ಸಾವಿರದಿಂದ ಲಕ್ಷಾಂತರ ರೂಪಾಯಿಗಳವರೆಗಿನ ಶುಲ್ಕದೊಂದಿಗೆ ಈ ಕೇಂದ್ರಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತವೆ.

ಇಡೀ ಪರೀಕ್ಷಾ ವ್ಯವಸ್ಥೆ ಮತ್ತು ಅದಕ್ಕೆ ತಳಕು ಹಾಕಿಕೊಂಡಿರುವ ಕೋಚಿಂಗ್ ವ್ಯವಸ್ಥೆಯು ಸಮಾಜದ ಬಡ ವರ್ಗಗಳು, ಅಂಚಿನಲ್ಲಿರುವ ಸಮುದಾಯಗಳು, ದೂರದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿರದೇ ಇರುವವರಿಗೆ ಕೈಗೆಟುಕದ ದೂರದ ಬೆಟ್ಟವಾಗಿದೆ.

ಈ ಎಂಸಿಕ್ಯೂ ಆಧಾರದಲ್ಲಿ ನಡೆಯುವ ಪರೀಕ್ಷೆಯಿಂದ ಜ್ಞಾನ ಮತ್ತು ಯೋಗ್ಯತೆಯನ್ನು ನಿಜವಾಗಿಯೂ ಮೌಲ್ಯಮಾಪನ ಮಾಡಬಹುದೇ? ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಇದು ಸಹಾಯ ಮಾಡುತ್ತದೆಯೇ? ಎಂಬ ಪ್ರಶ್ನೆಗಳೂ ನಮ್ಮ ಮುಂದಿವೆ. ವಾಸ್ತವವಾಗಿ, ಯೋಗ್ಯತೆಯನ್ನು ಅಳೆಯಲು, ಆಯ್ಕೆ ಮಾಡಲು ಈ ಪರೀಕ್ಷೆಗಳಿಂದ ಸಾಧ್ಯವಿಲ್ಲ ಎನ್ನುತ್ತಾರೆ ಅನೇಕ ಶೈಕ್ಷಣಿಕ ತಜ್ಞರು.

ಈ ವರದಿ ಓದಿದ್ದೀರಾ?: ‘ಶಿಕ್ಷಣ ಮಾಫಿಯಾ ಎದುರು ಸಂಪೂರ್ಣ ಅಸಹಾಯಕರಾಗಿದ್ದಾರೆ ಮೋದಿ’

ಪರೀಕ್ಷೆಗಳು ವಾಸ್ತವವಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ/ಅರ್ಜಿದಾರರನ್ನು ಹೊರದೂಡುವ ಸಾಧನಗಳಾಗಿವೆ. ಉದಾಹರಣೆಗೆ, ಈ ವರ್ಷ 23 ಲಕ್ಷ NEET ಅರ್ಜಿದಾರರಲ್ಲಿ, ಕೇವಲ ಒಂದು ಲಕ್ಷ ಮಂದಿಯನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು. CBT ಅಥವಾ MCQ ವ್ಯವಸ್ಥೆಯು ಉಳಿದ 22 ಲಕ್ಷ ಅಭ್ಯರ್ಥಿಗಳನ್ನು ಸುಗಮವಾಗಿ ಹೊರಹಾಕಬಹುದು ಎಂಬುದನ್ನು ಖಚಿತಪಡಿಸುತ್ತವೆ. ಇಡೀ ವ್ಯವಸ್ಥೆಯು ಅರ್ಹರನ್ನು ಆರಿಸಲು ಸಜ್ಜುಗೊಂಡಿದೆ ಎಂಬುದನ್ನು ಸೂಚಿಸಿದರೂ, ಭ್ರಷ್ಟಾಚಾರದ ಮುಸುಕಿನಲ್ಲಿ ಪಕ್ಷಪಾತಿಯಾಗಿದೆ.

ಕೇಂದ್ರೀಕೃತ ಪರೀಕ್ಷೆಗಳು ಏಕೆ?
ಕಳೆದ ಹಲವು ವರ್ಷಗಳಿಂದ ಭಾರತೀಯರ ಜೀವನ ವ್ಯವಸ್ಥೆಯ ಹಲವು ಅಂಶಗಳನ್ನು ಕೇಂದ್ರೀಕರಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಪ್ರಯತ್ನ ನಡೆಯುತ್ತಿದೆ ಎಂದು ಭಾವಿಸಲಾಗಿದ್ದರೂ, ಬಿಜೆಪಿ ಆಡಳಿತದಲ್ಲಿ ಅದು ತನ್ನ ಸಿದ್ದಾಂತವನ್ನು ಹೇರುವ ಹುನ್ನಾರದ ಭಾಗವಾಗಿದೆ ಎಂಬುದು ಸ್ಪಷ್ಟವಾಗಿತ್ತು. ಇನ್ನು, ಪರೀಕ್ಷೆಗಳನ್ನು ನಡೆಸಲು ಕೇಂದ್ರೀಯ ಪರೀಕ್ಷಾ ಏಜೆನ್ಸಿಯನ್ನು ರಚಿಸುವುದು 1990ರ ದಶಕದ ಆರಂಭದಲ್ಲಿಯೇ ಚರ್ಚೆಯಲ್ಲಿತ್ತು. ಅದು, ದೊಡ್ಡ ವ್ಯಾಪಾರಸ್ಥರಿಗೆ ಅನುಕೂಲ ಮತ್ತು ಲಾಭ ತಂದುಕೊಡುವ ಉದ್ದೇಶವಿದೆ ಎಂಬ ವಿರೋಧದ ಕಾರಣಕ್ಕೆ ಹಿಂದೆ ಸರಿದಿತ್ತು. ಆದರೆ, 2016ರಲ್ಲಿ ಪ್ರಧಾನಿ ಮೋದಿ ಸರ್ಕಾರ ರಾಷ್ಟ್ರೀಯ ಪರೀಕ್ಷೆಗಳನ್ನು ಜಾರಿಗೊಳಿಸಿತು.

ಈ ‘ಒಂದು ರಾಷ್ಟ್ರ – ಒಂದು ಎಲ್ಲವೂ’ (ಒಂದು ಚುನಾವಣೆ, ಒಂದು ಪಡಿತರ ಚೀಟಿ, ಒಂದು ಆರೋಗ್ಯ ಕಾರ್ಡ್, ಇತ್ಯಾದಿ) ಎಂಬ ಸಿದ್ದಾಂತವನ್ನು ನರೇಂದ್ರ ಮೋದಿ ಸರ್ಕಾರವು ರಾಷ್ಟ್ರೀಯತೆಯ ಪ್ರತಿಪಾದನೆಯ ಮೇಲೆ ಜನರಲ್ಲಿ ಹೇರುತ್ತಿದೆ. ರಾಷ್ರೀಯ ಪರೀಕ್ಷೆಯು ಪ್ರಾದೇಶಿಕತೆ ಮತ್ತು ವೈವಿಧ್ಯತೆಯನ್ನು ಮೊಟಕುಗೊಳಿಸಿದೆ. ಒಂದು ಪ್ರದೇಶದ ಮತ್ತು ಉಳ್ಳವರಿಗೆ ಪ್ರವೇಶ ನೀಡುತ್ತಿದೆ.

ಹೀಗಿದ್ದರೂ, ಹೆಚ್ಚಿನ ರಾಜಕೀಯ ಪಕ್ಷಗಳು (ಕೆಲವು ಪ್ರಾದೇಶಿಕ ಪಕ್ಷಗಳು ಮತ್ತು ಎಡಪಕ್ಷಗಳನ್ನು ಹೊರತುಪಡಿಸಿ) ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಭಾವಿಸಿವೆ. ಈ ವ್ಯವಸ್ಥೆಯ ವೈಫಲ್ಯದ ಹಿಂದಿನ ಪ್ರಮುಖ ಕಾರಣಗಳನ್ನು ನೋಡದೆ, ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಮಾತ್ರವೇ ಮಾತನಾಡುತ್ತಿವೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಸಿ, ಸೋರಿಕೆ ಮಾಡುವ ಗ್ಯಾಂಗ್‌ಗಳನ್ನು ಬಂಧಿಸಿ, ಅದನ್ನೇ ದೊಡ್ಡ ಸುದ್ದಿ ಮಾಡಬಹುದು.

ಆದಾಗ್ಯೂ, ಪರೀಕ್ಷೆಗಳ ವ್ಯವಸ್ಥೆಯ ಬಗ್ಗೆಯೇ ಸಂಪೂರ್ಣ ಸ್ವತಂತ್ರ ತನಿಖೆಯ ಅಗತ್ಯವಿದೆ. ಜೊತೆಗೆ, ಗಂಭೀರವಾದ ಮರುಚಿಂತನೆ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಇಲ್ಲದಿದ್ದರೆ, ದೇಶದ ಭವಿಷ್ಯದ ಪ್ರಜೆಗಳು ಅಜ್ಞಾನದ ನೆರಳಿನಲ್ಲೇ ಬದುಕಬೇಕಾಗುತ್ತದೆ. ಇದು, ದೇಶದವನ್ನು ವಿಪತ್ತಿಗೆ ದೂಡುತ್ತದೆ.

ಮೂಲ: ನ್ಯೂನ್‌ ಕ್ಲಿಕ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...