ಜನರ ಇಚ್ಛೆಯೇ ಪ್ರಜಾತಂತ್ರದ ಅಂತಿಮ ಆಯ್ಕೆ ಆಗಬೇಕು: ಪರಕಾಲ ಪ್ರಭಾಕರ್

Date:

ಚುನಾವಣಾ ಆಯೋಗದ ವರ್ತನೆ, ನ್ಯಾಯಾಂಗದ ಪ್ರತಿಕ್ರಿಯೆ, ರಾಜ್ಯಗಳಲ್ಲಿ ಮತದಾನದ ವೇಳೆ ಮತದಾರರನ್ನು ತಡೆಯುವಿಕೆ, ಮತದಾನದ ಅಂಕಿಅಂಶಗಳಲ್ಲಿ ವ್ಯತ್ಯಾಸ ಇತ್ಯಾದಿಗಳು ಬಹಳಷ್ಟು ಅನುಮಾನಗಳನ್ನು ಹುಟ್ಟಿಸಿವೆ. ಆಳುತ್ತಿರುವ ಪಕ್ಷವು ಜನಾಭಿಪ್ರಾಯವನ್ನೇ ಬುಡಮೇಲು ಮಾಡಬಹುದು. ಯಂತ್ರಗಳನ್ನು ಹಾಳುಮಾಡುವ ಮೂಲಕ ಜನಾಭಿಪ್ರಾಯವನ್ನು ಪಾರದರ್ಶಕಗೊಳಿಸದೆ ಮೋಸಗೊಳಿಸುವ ಆತಂಕವಿದೆ. ಜನರ ಇಚ್ಛೆಯೇ ಪ್ರಜಾತಂತ್ರದ ಅಂತಿಮ ಆಯ್ಕೆಯಾಗಬೇಕು ಎಂದು ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ‘ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು’ ಎಂಬ ಹೆಸರನಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ”ಜನಾಭಿಪ್ರಾಯವನ್ನು ಬುಡಮೇಲು ಮಾಡುವುದು ಭಾರತ ಮತ್ತು ದೇಶದ ಪ್ರಜಾತಂತ್ರಕ್ಕೆ ಅಪಾಯಕಾರಿ. ಚುನಾವಣೆಯ ನಂತರ ಅಥವಾ ಅದಕ್ಕೆ ಮೊದಲು ಈ ಅಪಾಯ ನಮ್ಮ ಎದುರಿದೆ. ಇದರ ಬಗ್ಗೆ ನಾವು ಬಹಳ ಎಚ್ಚರಿಕೆ ವಹಿಸಬೇಕಿದೆ. ಆಳುವ ಪಕ್ಷವು ಹೊರತರುವ ಫಲಿತಾಂಶವನ್ನೇ ಜನರ ನಡುವೆ ಮಾನ್ಯಗೊಳಿಸಲು ಬಹಳಷ್ಟು ನರೇಟಿವ್‌ಗಳನ್ನು ಮಾಧ್ಯಮಗಳ ಮೂಲಕ ತಳ್ಳಲ್ಪಡುತ್ತವೆ. ಆಶ್ಚರ್ಯಕರವಾಗಿ ಮತ್ತೆ ಆಳುವ ಪಕ್ಷವೇ ಅಧಿಕರಕ್ಕೆ ಬರುತ್ತದೆ ಎಂದು ಫಲಿತಾಂಶಕ್ಕೂ ಮುನ್ನ, ಎಕ್ಸಿಟ್‌ ಪೋಲ್‌ ಮೂಲಕ ನಿರೂಪಣೆಯನ್ನು ಜನರ ನಡುವೆ ಹರಡಲಾಗುತ್ತಿದೆ. ಜನರು ನಿಧಾನವಾಗಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

”ಇಂತಹ ಆತಂಕಕಾರಿ ಸನ್ನಿವೇಶವನ್ನು ನಿಭಾಯಿಸಲು ರಾಜಕೀಯ ವಿಪಕ್ಷಗಳು ಸಿದ್ಧರಿಲ್ಲ. ಇದನ್ನು ನಾಗರಿಕ ಸಮಾಜದ ಜಾಲವೇ ನಿಭಾಯಿಸಬೇಕು. ಅಂತಿಮವಾಗಿ ಇದೆಲ್ಲವೂ ಬೀದಿಗಳಲ್ಲ ನಿರ್ಧಾರವಾಗಬೇಕು. ಆದರೆ, ಜನರು ಬೀದಿಗೆ ಬರುವುದನ್ನು ಮರೆತಿದ್ದಾರೆ. ಕೇವಲ ದೆಹಲಿಯಲ್ಲಿ ಅಲ್ಲ, ದೇಶದ ಬೇರೆ ಬೇರೆ ಭಾಗಗಳಲ್ಲಿ ಜನರು ಬೀದಿಗೆ ಬಂದು ಪ್ರಶ್ನಿಸುವ ಕೆಲಸ ಮಾಡಬೇಕು” ಎಂದು ಕರೆಕೊಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ಜೋಸೆಫ್ ಸ್ಟಾಲಿನ್, ”ಮತ ಪ್ರಮಾಣವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ಯಾಕೆ ಪೂರ್ತಿಯಾಗಿ ಮುಂದಿಡುತ್ತಿಲ್ಲ… ಅವರು ವ್ಯವಸ್ಥಿತವಾಗಿ ಜೂನ್ 4ರಂದು ಹೊರಬರುವ ಫಲಿತಾಂಶವನ್ನು ಮ್ಯಾನಿಪ್ಯುಲೇಟ್ ಮಾಡುವ ಸಿದ್ಧತೆ ಮಾಡಿದ್ದರೆ, ಅದನ್ನು ಪ್ರಶ್ನಿಸದ ಸರ್ವೋಚ್ಚ ನ್ಯಾಯಾಲಯವೂ ಇದರಲ್ಲಿ ಕೈಜೋಡಿಸಿದೆ. ಮತದಾನ ಅಂಕಿಅಂಶಗಳಲ್ಲಿ ತಮಿಳುನಾಡಿನಲ್ಲಿ 7.53% ವ್ಯತ್ಯಾಸವಿದೆ, ಅರುಣಾಚಲ ಪ್ರದೇಶ 1.22%, ಲಕ್ಷದ್ವೀಪ 25.4%, ಸಿಕ್ಕಿಂ 11.2% ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಚುನಾವಣಾ ಆಯೋಗ ಸಮರ್ಥಿಸಿಕೊಳ್ಳಲು ಸಾಧ್ಯವೇ” ಎಂದರು.

”ಮೂರು ಬಗೆಯ ಮೋಸ ನಡೆಯುತ್ತಿದೆ. 1. ಮತದಾರರ ಪಟ್ಟಿಯಲ್ಲೇ ಮೋಸ. 2. ಮತದಾನದಲ್ಲಿ ಮೋಸ – ಇವಿಎಂ ಮೂಲಕ ಮತಗಳನ್ನು ಬದಲಿಸುವುದು. 3. ಮತದಾನ ಅಂಕಿಅಂಶ ಪ್ರಕಟಿಸುವಲ್ಲಿ ಮೋಸ. ಚುನಾವಣಾ ಆಯೋಗವು ನಿಖರವಾಗಿ ಎಷ್ಟು ಮತದಾನವಾಗಿದೆ ಎಂಬುದನ್ನು ಸರಿಯಾಗಿ ಪ್ರಕಟಿಸದೆ ಮೋಸ ಮಾಡುತ್ತಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...