ಮುಂದುವರೆದ ಮೋದಿ ಮುಸ್ಲಿಂ ದ್ವೇಷ ಭಾಷಣ; ವಿಪಕ್ಷಗಳ ಟೀಕೆಗೆ ರಾಮನ ಎಳೆದುತಂದ ಮೋದಿ

Date:

ಹ್ಯೂಮನ್ ರೈಟ್ಸ್ ವಾಚ್ (HRW) ಸಂಸ್ಥೆಯ ವರದಿ ಪ್ರಕಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಡಿದ 175 ಭಾಷಣಗಳಲ್ಲಿ ಕನಿಷ್ಠ 110 ಮುಸ್ಲಿಂ ವಿರೋಧಿ ಭಾಷಣ! ಇಂದಿಗೂ ಪ್ರಧಾನಿ ಚಾಳಿ ಬದಲಾಗಿಲ್ಲ. ಬಿಹಾರದಲ್ಲಿ ವೋಟ್‌ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಆರ್‌ಜೆಡಿ ರಾಮನ ದ್ವೇಷ ಮಾಡುತ್ತಿದೆ ಎಂದಿದ್ದಾರೆ. ಮುಸ್ಲಿಮರನ್ನು ಈ ದೇಶದ ಪ್ರಜೆ ಎಂದು ಪ್ರಧಾನಿ ಪರಿಗಣಿಸಿದಂತಿಲ್ಲ 

ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದಾರೆ. ಆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಅವರ ದ್ವೇಷದ, ಅಪ್ರಸ್ತುತ-ತಲೆಬುಡವಿಲ್ಲದ ಮಾತುಗಳು ಮಿತಿ ಮೀರಿ ಸಾಗಿತ್ತು. ಬಿಜೆಪಿ ಬಹುಮತ ಪಡೆಯಲು ತಿಣುಕಾಡಿ ಕೊನೆಗೆ ಮೈತ್ರಿ ಸರ್ಕಾರದ ಮೊರೆ ಹೋಗಬೇಕಾದ ಸ್ಥಿತಿ ಬರಲು ಮೋದಿಯ ಈ ಎಡವಟ್ಟೂ ಕಾರಣವಾಗಿತ್ತು. ಇವುಗಳಿಂದ ಬುದ್ಧಿ ಕಲಿಯದ ಮೋದಿ ಮತ್ತೆ ಮತ್ತೆ ವಾಲುವುದು ಕೋಮು ದ್ವೇಷದತ್ತ. ಜತೆಗೆ ವಿಪಕ್ಷಗಳ ಬಗ್ಗೆ ಅಪಪ್ರಚಾರ, ಅನವಶ್ಯಕ ಹೇಳಿಕೆಗಳೂ ಪ್ರಧಾನಿ ಮೋದಿಗೇನೂ ಹೊಸದಲ್ಲ. ಇದೀಗ ಬಿಹಾರ ಚುನಾವಣೆ ವೇಳೆಯೂ ಪ್ರಧಾನಿ ವರಸೆ ಹಾಗೆಯೇ ಇದೆ.

ನವೆಂಬರ್ 6ರಂದು ಬಿಹಾರದ ಭಾಗಲ್‌ಪುರ ಮತ್ತು ಅರರಿಯಾ ಜಿಲ್ಲೆಗಳಲ್ಲಿ ನಡೆದ ಪ್ರಚಾರದಲ್ಲಿ ಪ್ರಧಾನಿ ಮೋದಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಅನ್ನು ಟೀಕಿಸುತ್ತಾ, ಮತ್ತೆ ರಾಮನ ಜಪಕ್ಕೆ ಇಳಿದಿದ್ದಾರೆ. ಅದಲ್ಲದೆ ಮತ್ತೆ ಮುಸ್ಲಿಮರನ್ನು ನುಸುಳುಕೋರರು ಎಂದು ಪರೋಕ್ಷವಾಗಿ ಹೇಳುತ್ತಾ, ಕೋಮು ದ್ವೇಷದ ಚಾಳಿ ಮುಂದುವರೆಸಿದ್ದಾರೆ. “ಆರ್‌ಜೆಡಿ, ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ರಾಮನನ್ನು, ಛಟ್‌ ಪೂಜಾ ದೇವತೆಯನ್ನು ದ್ವೇಷಿಸುತ್ತಿದೆ. ಅಕ್ರಮವಾಗಿ ದೇಶಕ್ಕೆ ಒಳಬಂದ ಒಳನುಸುಳುಕೋರರನ್ನು ರಕ್ಷಿಸುತ್ತಿದೆ” – ಇದು ಪ್ರಧಾನಿ ಮೋದಿ ಅವರ ಆಧಾರರಹಿತ, ಅಸಂಬದ್ಧ ಹೇಳಿಕೆ. ಆದರೆ ಮುಗ್ಧ ಜನರಿಗೆ ಪ್ರಧಾನಿ ಹೇಳಿದರೆ ನಿಜವಾಗಿರಬಹುದು ಎಂಬ ಕಲ್ಪನೆ!

ಇದನ್ನು ಓದಿದ್ದೀರಾ? ’70 ಕೋಟಿ ಭಾರತೀಯರಿಗಿಂತ ಅಧಿಕ ಸಂಪತ್ತು 21 ಬಿಲಿಯನೇರ್‌ಗಳಲ್ಲಿದೆ ಅನ್ನೋದನ್ನ ಮೋದಿ ಹೇಳಲ್ಲ’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ನಮ್ಮ ಜೈವಿಕವಲ್ಲದ ಪ್ರಧಾನಿಯ ಕೆಲವು ಭಾಷಣಗಳತ್ತ ಗಮನಹರಿಸಿದರೆ ನಮಗೆ ಸಿಗುವುದು ಬಹುತೇಕ ಕೋಮು ದ್ವೇಷ, ರಾಜಕೀಯವಾಗಿ ವೈಯಕ್ತಿಕ ಟೀಕೆಯ ಭಾಷಣಗಳೇ. ಇದನ್ನು ಬಿಟ್ಟರೆ ನಮ್ಮ ಪ್ರಧಾನಿ ನಾಲೆಯ ಅನಿಲದಿಂದ ಚಹಾ ಮಾಡುವುದು, ರೇಡಾರ್‌ನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಮೋಡ, ಪಕೋಡಾ ಮಾರಾಟ ಮಾಡಿ-ರೀಲ್ಸ್ ಮಾಡಿ, ಛಾಯಾಗ್ರಹಣ ಕಲಿತ ಮೊದಲ ಪ್ರಧಾನಿ – ಹೀಗೆ ಹಲವು ಅವೈಜ್ಞಾನಿಕವಾದ, ನಮ್ಮನ್ನು ನಗೆ ಕಡಲಲ್ಲಿ ತೇಲಿಸುವ ಹೇಳಿಕೆಗಳನ್ನು ನೀಡಿದ ಶ್ರೇಯಸ್ಸು ನಮ್ಮ ಪ್ರಧಾನಿ ಮೋದಿ ಅವರಿಗೆ ಸಲ್ಲುವಂತದ್ದು.

ಈ ಸಂದರ್ಭದಲ್ಲಿ ನಾವು ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷ ಭಾಷಣಗಳತ್ತ ಕಣ್ಣಾಯಿಸಿದರೆ ಸಿಗುವುದು ‘ನುಸುಳುಕೋರರು’ ಎಂಬ ಹೇಳಿಕೆಗಳು. ಎಪಿಸಿಆರ್‌ ಮತ್ತು ಕ್ವಿಲ್ ಫೌಂಡೇಶನ್ ವರದಿಯ ಪ್ರಕಾರ, 2024ರ ಜೂನ್‌ನಿಂದ 2025ರ ಜೂನ್‌ವರೆಗೆ ಬರೋಬ್ಬರಿ 947 ಕೋಮು ದ್ವೇಷ ಸಂಬಂಧಿತ ಘಟನೆಗಳು ನಡೆದಿವೆ. ಈ ಪೈಕಿ 602 ಅಪರಾಧಗಳು, 345 ಕೋಮು ದ್ವೇಷ ಭಾಷಗಳಾಗಿವೆ. ಈ ಪೈಕಿ 178 ಪ್ರಕರಣಗಳು ಬಿಜೆಪಿಗೆ ಸಂಬಂಧಿಸಿದ್ದು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಅಧಿಕವಾಗಿ ಕೋಮು ದ್ವೇಷ ಭಾಷಣಗಳು ಮಾಡಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯೂ ಅಗಾಧ! ಹ್ಯೂಮನ್ ರೈಟ್ಸ್ ವಾಚ್ (HRW) ಸಂಸ್ಥೆಯ ವರದಿ ಪ್ರಕಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಡಿದ 175 ಭಾಷಣಗಳಲ್ಲಿ ಕನಿಷ್ಠ 110 ಮುಸ್ಲಿಂ ವಿರೋಧಿ ಭಾಷಣ!

ಪ್ರಧಾನಿ ಮೋದಿ ಕೋಮುದ್ವೇಷಗಳು

2024ರ ಏಪ್ರಿಲ್‌ನಲ್ಲಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮುಸ್ಲಿಮರನ್ನು ನುಸುಳುಕೋರರು ಎಂದು ಕರೆದಿದ್ದರು. “ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಗಳ ತಾಳಿ, ಆಸ್ತಿಯನ್ನು ಮುಸ್ಲಿಮರಿಗೆ ನೀಡುತ್ತದೆ” ಎಂದು ಹೇಳಿದ್ದರು. ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆದರೆ ಆಯೋಗ ಕ್ರಮ ಮಾತ್ರ ಕೈಗೊಂಡಿಲ್ಲ. ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಮೋದಿ ಹೇಳಿಕೆಯನ್ನು ಟೀಕಿಸಿ ವರದಿ ಮಾಡಿತ್ತು.

2024ರ ಮೇ 14ರಂದು ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಮತ್ತು ಇತರ ರ‍್ಯಾಲಿಗಳಲ್ಲಿ ‘ವೋಟ್ ಜಿಹಾದ್’ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿ ನೀಡಿದ್ದರು. ಕಾಂಗ್ರೆಸ್ ಮುಸ್ಲಿಮರ ಹಕ್ಕುಗಳನ್ನು ಮಾತ್ರ ರಕ್ಷಿಸುತ್ತದೆ ಎಂದು ಹೇಳಿದ್ದ ಮೋದಿ ಮುಸ್ಲಿಮರು ದೇಶಕ್ಕೆ ಬೆದರಿಕೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ 20,000ಕ್ಕೂ ಹೆಚ್ಚು ದೂರುಗಳನ್ನು ನೀಡಲಾಗಿದೆ. ಆದರೆ ಈ ಪ್ರಕರಣದಲ್ಲೂ ಆಯೋಗ ಯಾವುದೇ ಕ್ರಮಕೈಗೊಳ್ಳದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?

2024ರ ಮೇ 10ರಂದು ತೆಲಂಗಾಣದ ಹೈದರಾಬಾದ್‌ನ ರ‍್ಯಾಲಿಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರ ಹಕ್ಕುಗಳನ್ನು ಮಾತ್ರ ಚಿಂತಿಸುವವರು ಎಂದು ಟೀಕಿಸಿದ್ದರು. ಅವರಿಂದಾಗಿ ಹಿಂದುಗಳಿಗೆ ಅಪಾಯವಿದೆ ಎಂಬಂತಹ ಹೇಳಿಕೆಗಳನ್ನು ನೀಡಿದ್ದರು. 2024ರ ಏಪ್ರಿಲ್ 19ರಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್‌ನ ಪ್ರಣಾಳಿಕೆ ಎಂದಿದ್ದರು. ಹಾಗೆಯೇ ವಿಪಕ್ಷ ನಾಯಕರನ್ನು ಮೊಘಲರು ಎಂದು ಹೇಳಿದ್ದರು. ಹಾಗೆಯೇ ಇತ್ತೀಚೆಗೆ ವಿರೋಧ ಪಕ್ಷದವರು ಮೊಘಲರ ಚಿಂತನೆಯವರು, ಶ್ರಾವಣದಲ್ಲಿ ಮಾಂಸ ತಿನ್ನುತ್ತಾರೆ ಎಂದು ಟೀಕಿಸಿದ್ದರು.

ಇವಿಷ್ಟು ಬರೀ ಮೋದಿ ಹೇಳಿಕೆಗಳ ಝಲಕ್ ಅಷ್ಟೇ. ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ದ್ವೇಷ ಭಾಷಣಗಳ ರೂಪ ತಾಳುವಂತೆ ಸದ್ಯ ಸಾಮಾನ್ಯ. ಪ್ರಧಾನಿ ಒಂದು ದಿನದಲ್ಲೇ ಎರಡು ರೂಪ ತಾಳುವುದು ಅದಕ್ಕೂ ವಿಚಿತ್ರ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಿಂದೂಗಳು ಅಧಿಕವಾಗಿರುವ ಸ್ಥಳದಲ್ಲಿ ಮುಸ್ಲಿಂ ವಿರೋಧಿ ಭಾಷಣವನ್ನು ಮಾಡುತ್ತಿದ್ದ ಪ್ರಧಾನಿ ಮೋದಿ ಅವರು, ಅದೇ ದಿನ ಮುಸ್ಲಿಮರು ಅಧಿಕವಾಗಿರುವ ಸ್ಥಳದಲ್ಲಿ ಮುಸ್ಲಿಮರ ಓಲೈಕೆಗೆ ಇಳಿಯುತ್ತಿದ್ದರು. ಒಂದು ದಿನದಲ್ಲೇ ಪದೇ ಪದೇ ವರಸೆ ಬದಲಾಯಿಸಿಕೊಳ್ಳುವುದು ಪ್ರಧಾನಿ ಮೋದಿ ಅವರಿಗೆ ಸಾಮಾನ್ಯವಾಗಿತ್ತು. ಆದರೆ ಓರ್ವ ದೇಶದ ಪ್ರಧಾನಿಯಾಗಿ ವಿಶ್ವ ಮೋದಿಯನ್ನು ಕಂಡ ನೋಟ ಭಾರತದ ಘನತೆಗೆ ಚ್ಯುತಿ.

ಮೊದಲಾಗಿ ಕೋಮು ದ್ವೇಷ ಭಾಷಣಗಳು ಇಡೀ ದೇಶಕ್ಕೆ ಮಾರಕವಾದದ್ದು. ಅದೆಷ್ಟೋ ಬಿಜೆಪಿ ನಾಯಕರುಗಳು ಭಾಷಣಗಳಲ್ಲಿ ನಿಪುಣರು. ಪ್ರಕರಣಗಳ ಮೇಲೆ ಪ್ರಕರಣ ದಾಖಲಾದರೂ ದೇಶವನ್ನು ಕೋಮು ಆಧಾರದಲ್ಲಿ ವಿಭಜಿಸಿದ್ದೇ ನಮ್ಮ ಸಾಧನೆ ಎಂಬಂತೆ ಬೀಗಿಕೊಳ್ಳುವವರು. ಅವರುಗಳು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುವುದೆನ್ನುವುದಾದರೂ ಪ್ರಜಾಪ್ರಭುತ್ವ ದೇಶದ ಪ್ರಧಾನಿ ಆಗಿದ್ದುಕೊಂಡು ಮೋದಿ ಕೋಮು ದ್ವೇಷ ಹರಡುವುದು ಎಷ್ಟು ಸರಿ? ಇದು ಮೋದಿಗಲ್ಲ, ಪ್ರಧಾನಿ ಹುದ್ದೆಗೆ ಶೋಭೆ ನೀಡುತ್ತದೆಯೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...