ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಮೋದಿ ಉತ್ತರ : ಖಾರಕ್ಕಿಂತ ‘ಕಹಿ’ಯೇ ಹೆಚ್ಚು

Date:

ಪ್ರಧಾನಮಂತ್ರಿಗಳ ಭಾಷಣದ ಉದ್ದಕ್ಕೂ ಪ್ರತಿಪಕ್ಷಗಳು ಮಣಿಪುರದ ಕುರಿತು ಘೋಷಣೆ ಕೂಗಿದರು. ಆದರೆ ಪ್ರಧಾನಮಂತ್ರಿಗಳು ಆ ಕುರಿತು ಚಕಾರ ಎತ್ತಲಿಲ್ಲ. NEET ಕುರಿತು ಗಂಭೀರ ಕ್ರಮ ಎಂದರೇ ಹೊರತು ಸಮಸ್ಯೆಯ ಆಳಕ್ಕೆ ಇಳಿಯಲಿಲ್ಲ. ಅಗ್ನಿವೀರ್/OROPಗಳು ಸೇನೆಯ ವಿರುದ್ಧ ಷಡ್ಯಂತ್ರ ಎಂದರು. ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ನ 10 ವರ್ಷಕ್ಕಿಂತಲೂ ಹಳೆಯ ಹಗರಣಗಳನ್ನೇ ಪ್ರಸ್ತಾಪಿಸಿದರು. ಮಾತುಗಳಲ್ಲಿ ಕಹಿ ಹೆಚ್ಚಿತ್ತು.

ಇಂದು ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಮಂತ್ರಿ ಮೋದಿಯವರ ಉತ್ತರ ‘ಖಾರ’ ಇರದೇ ಬೇರೆ ಹಾದಿ ಇಲ್ಲ ಎಂದುಕೊಂಡಿದ್ದೆ. ಆದರೆ ಅದು ಖಾರದ ಬದಲು ಹೆಚ್ಚು ʼಕಹಿʼಯೇ ತುಂಬಿತ್ತು.

ಇನ್ನೊಂದು ಸಂಗತಿ: ʼಆನ್ ಪೇಪರ್ʼ ಆಟಗಳಲ್ಲಿ ಈ ಸರ್ಕಾರದ ಪರಿಣತಿ ಈಗಾಗಲೇ ಸಾಬೀತಾಗಿದೆ ಎಂದುಕೊಂಡಿದ್ದೆ. ಅದನ್ನು ಸರ್ಕಾರ ಇಂದು ಸೆಷನ್ ಕೊನೆಯಲ್ಲಿ ಸಾಬೀತುಪಡಿಸಿತು. ರಕ್ಷಣಾ ಮಂತ್ರಿಗಳು ಸದನದಲ್ಲಿ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳ ವರ್ತನೆಯನ್ನು ಖಂಡಿಸುವ ನಿರ್ಣಯ ಮಂಡಿಸಿದರು. ಅದನ್ನು ಮೊದಲಿಗೆ ಸ್ಪೀಕರ್ ನಿರ್ಲಕ್ಷಿಸಿದರಾದರೂ, ಗೃಹಸಚಿವರು ಅದನ್ನು ಅನುಮೋದಿಸಿ ನಿರ್ಣಯ ಸ್ವೀಕರಿಸಲು ಹೇಳಿದಾಗ ಸ್ಪೀಕರ್ ಅದನ್ನು ಮಾಡಿದರು. ಹೀಗೆ ಪ್ರತಿಪಕ್ಷಗಳ ʼವರ್ತನೆʼ ಕಡತಕ್ಕೆ ಹೋಯಿತು. ನಿನ್ನೆ ಇಡೀ ದಿನ ಆಡಳಿತ ಪಕ್ಷಗಳ ಗದ್ದಲ ಗಾಳಿಯಲ್ಲಿ ಹಾರಿ ಹೋಯಿತು ಮತ್ತು ಪ್ರತಿಪಕ್ಷಗಳ ಖಡಕ್ ಮಾತುಗಳನ್ನೆಲ್ಲ ಸದನದ ಕಡತಗಳಿಂದ ʼಕಿತ್ತುಹಾಕಲಾಯಿತುʼ. ಇನ್ನು ಹತ್ತು ವರ್ಷ ಬಿಟ್ಟು ಸದನದ ದಾಖಲೆ ತೆಗೆದರೆ, ಆಡಳಿತ ಪಕ್ಷದವರದು ದೇವರಂತಹ ವರ್ತನೆ; ಪ್ರತಿಪಕ್ಷಗಳದು ದುರ್ವರ್ತನೆ! ಇದು ದೇಶದ ಚರಿತ್ರೆ ಆಗಲಿದೆ.

ಪ್ರಧಾನಮಂತ್ರಿಗಳು ತಮ್ಮ ಎರಡುಗಂಟೆ ಹದಿನಾಲ್ಕು ನಿಮಿಷಗಳ ಭಾಷಣದಲ್ಲಿ ರಾಷ್ತ್ರಪತಿಗಳ ಭಾಷಣದ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದು ಕೇವಲ 20-25 ನಿಮಿಷ ಮಾತ್ರ. ನಾನು ಅರ್ಥ ಮಾಡಿಕೊಂಡಿರುವಂತೆ, ರಾಷ್ಟ್ರಪತಿಗಳ ಭಾಷಣ ಎಂಬುದು ವರ್ಷಾರಂಭದಲ್ಲಿ ಸರ್ಕಾರದ ನೀತಿಗಳು- ಕಾರ್ಯಕ್ರಮಗಳ ಚೌಕಟ್ಟನ್ನು ವಿವರಿಸುವ ಭಾಷಣ. ಅದಕ್ಕೆ ಸದನದಲ್ಲಿ ಪ್ರತಿಪಕ್ಷಗಳು ತಮ್ಮ ಆಕ್ಷೇಪಗಳನ್ನು ದಾಖಲಿಸುವುದು ಮತ್ತು ಕೊನೆಯಲ್ಲಿ ಪ್ರಧಾನಮಂತ್ರಿಗಳು ಆ ಆಕ್ಷೇಪಗಳಿಗೆ ತಮ್ಮ ಸ್ಪಷ್ಟೀಕರಣ ನೀಡುವುದು ಮತ್ತು ಸದನ ರಾಷ್ಟ್ರಪತಿಗಳ ಭಾಷಣವನ್ನು ಅಂಗೀಕರಿಸುವ ಮೂಲಕ ಆ ವರ್ಷದ ಸರ್ಕಾರದ ಕಾರ್ಯಕ್ರಮಗಳಿಗೆ ಸಂಸದೀಯ ಚಟುವಟಿಕೆಗಳಿಗೆ ಆರಂಭ ನೀಡುವುದು ಈ ಪ್ರಕ್ರಿಯೆಯ ಮೂಲ ಉದ್ದೇಶ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಸದನದಲ್ಲಿ ನಡೆದದ್ದೇನು? ಪ್ರತಿಪಕ್ಷಗಳು ತಮ್ಮ ಆಕ್ಷೇಪಗಳನ್ನು ಎತ್ತಿದರು. ಉದಾರೀಕರಣದ ಹೆಸರಲ್ಲಿ ಸಂಪತ್ತಿನ ಕ್ರೋಡೀಕರಣ, NEET ಪರೀಕ್ಷೆ, ಅಗ್ನಿವೀರ್, ಮಣಿಪುರದ ನಿರ್ಲಕ್ಷ್ಯ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೊದಲಾದ ಹಲವು ಪ್ರಶ್ನೆಗಳನ್ನು ವಿವಿಧ ಪ್ರತಿಪಕ್ಷ ನಾಯಕರು ಎತ್ತಿದರು. ಆದರೆ, ಪ್ರಧಾನಮಂತ್ರಿಗಳು ಇವುಗಳಲ್ಲಿ ಎಷ್ಟಕ್ಕೆ ತಮ್ಮ ಉತ್ತರ ನೀಡಿದರು?

ಪ್ರಧಾನಮಂತ್ರಿಗಳ ಭಾಷಣದ ಉದ್ದಕ್ಕೂ ಪ್ರತಿಪಕ್ಷಗಳು ಮಣಿಪುರದ ಕುರಿತು ಘೋಷಣೆ ಕೂಗಿದರು. ಆದರೆ ಪ್ರಧಾನಮಂತ್ರಿಗಳು ಆ ಕುರಿತು ಚಕಾರ ಎತ್ತಲಿಲ್ಲ. NEET ಕುರಿತು ಗಂಭೀರ ಕ್ರಮ ಎಂದರೇ ಹೊರತು ಸಮಸ್ಯೆಯ ಆಳಕ್ಕೆ ಇಳಿಯಲಿಲ್ಲ. ಅಗ್ನಿವೀರ್/OROPಗಳು ಸೇನೆಯ ವಿರುದ್ಧ ಷಡ್ಯಂತ್ರ ಎಂದರು. ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ನ 10 ವರ್ಷಕ್ಕಿಂತಲೂ ಹಳೆಯ ಹಗರಣಗಳನ್ನೇ ಪ್ರಸ್ತಾಪಿಸಿದರು. ಮಾತುಗಳಲ್ಲಿ ಕಹಿ ಹೆಚ್ಚಿತ್ತು. ಹತ್ತು ವರ್ಷಗಳಲ್ಲಿ ಹಗರಣಕ್ಕೆ ಕಾರಣರಾದವರನ್ನು ಶಿಕ್ಷಿಸಿದ ಬಗ್ಗೆ ಹೇಳುವುದಕ್ಕೆ ಅವರಲ್ಲಿ ಏನೂ ಇರಲಿಲ್ಲ. ತಮ್ಮ ಹತ್ತು ವರ್ಷಗಳ ಬಗ್ಗೆ ಅವರು ಹೇಳಿದ್ದು ಅತ್ಯಲ್ಪ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

ರಾಹುಲ್ ಗಾಂಧಿ ಅವರ ಇಡೀ ಭಾಷಣವನ್ನು ʼಬಾಲಬುದ್ಧಿʼ ಅನ್ನುವ ಮೂಲಕ ತಳ್ಳಿಹಾಕಿದ ಪ್ರಧಾನಮಂತ್ರಿಗಳು, ಹಳೆಯ ಕಾಂಗ್ರೆಸ್ ಕಾಲದಲ್ಲಿದ್ದ ʼವಿದೇಶೀ ಶಕ್ತಿಗಳ ಷಡ್ಯಂತ್ರʼ ವಾದವನ್ನು ಮುಂದಿಟ್ಟರು. ತಮಾಷೆ ಎಂದರೆ, ಎಲ್ಲದಕ್ಕೂ ʼಅಥೆಂಟಿಕೇಟ್ ಮಾಡಬೇಕುʼ ಎನ್ನುವ ಸ್ಪೀಕರ್ ಸಾಹೇಬರು ಮುಗುಳು ನಗುತ್ತಾ ಭಾಷಣ ಎಂಜಾಯ್ ಮಾಡುತ್ತಿದ್ದರೆ, ಪ್ರತಿಪಕ್ಷಗಳು ʼನಾರಾಬಾಜಿʼ ನಿರತರಾಗಿದ್ದರು. ಈ ʼಬಾಲಬುದ್ಧಿʼ ಈಗ ಪ್ರಬಲ ಪ್ರತಿಪಕ್ಷದ ನಾಯಕ ಎಂದು ಪ್ರಧಾನಮಂತ್ರಿಯವರು ಮರೆತಂತಿತ್ತು.

ಇದರ ಜೊತೆ ಪ್ರತಿಪಕ್ಷದ ಹೊಸದೊಂದು ʼಶಕ್ತಿʼಯನ್ನು ಅವರು ಗುರುತಿಸಿದ್ದಾರೆ. ಕಾಂಗ್ರೆಸ್‌ನ ʼಇಕೊ ಸಿಸ್ಟಮ್!ʼ ಈ ಇಕೊಸಿಸ್ಟಮ್‌ಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುವ ʼಚೇತಾವನಿʼಯನ್ನೂ ಪ್ರಧಾನಿ ಸದನದಲ್ಲಿ ನೀಡಿದ್ದಾರೆ.

ಅಂತೂ ಅಧಿವೇಶನ ಮುಗಿದಿದೆ. ಮುಂದಿನ ʼಬಜೆಟ್ʼ ಅಧಿವೇಶನದ ತನಕ ರಾಜಕೀಯ ಯಾವ ರೂಪ ತಳೆಯಲಿದೆ ಎಂಬುದನ್ನು ಈಗ ಊಹಿಸುವುದು ಕಷ್ಟ. ಈ ಅಧಿವೇಶನದಲ್ಲಿ ಪ್ರಧಾನಮಂತ್ರಿಗಳ ಒಂದು ಯಶಸ್ಸು ಎಂದರೆ, ತನ್ನ ಎರಡು ಊರುಗೋಲುಗಳ ಅಸ್ತಿತ್ವ ʼಅದೃಶ್ಯ ರೂಪದಲ್ಲಿʼ ಇದ್ದು, ಎದುರು ಎದ್ದು ಕಾಣಿಸದಂತೆ ಸ್ಟೇಜ್ ಮ್ಯಾನೇಜ್ ಮಾಡಿದ್ದು.

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...