ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದು ಭಾರೀ ಪೊಲೀಸ್ ಭದ್ರತೆ ಮಾಡಲಾಗಿದೆ. ಬರೋಬ್ಬರಿ ಎರಡು ಸಾವಿರ ಪೊಲೀಸ್ ಸಿಬ್ಬಂದಿಗಳು ಪ್ರಧಾನಿ ಧ್ಯಾನದ ವೇಳೆ ಕಾವಲು ಕಾಯಲಿದ್ದಾರೆ ಎಂದು ವರದಿಯಾಗಿದೆ.
2019ರ ಚುನಾವಣಾ ಪ್ರಚಾರದ ನಂತರ ಕೇದಾರನಾಥ ಗುಹೆಯಲ್ಲಿ ಧ್ಯಾನ ಕುಳಿತ ಪ್ರಧಾನಿ ಮೋದಿ ಈಗ ಐದು ವರ್ಷಗಳ ನಂತರ ಮತ್ತೆ ಧ್ಯಾನ ಕೂರಲಿದ್ದಾರೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಆಯೋಗ ಪ್ರಧಾನಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್‌ನ ತಮಿಳುನಾಡು ಘಟಕ ಹೇಳಿದೆ. ಇದು ಪರೋಕ್ಷ ಪ್ರಚಾರದ ಭಾಗ ಎಂದು ಹೇಳಿದೆ.
In the culmination of his election campaign, PM Modi will visit Kanyakumari from 30th May to 1st June
In Kanyakumari, PM Modi will visit the Rock Memorial and will meditate day and night at the same place where Swami Vivekanand did meditation, at the Dhyan Mandapam from 30th May… pic.twitter.com/o4d7e6abGd
— ANI (@ANI) May 28, 2024
ಮೇ 30ರಂದು ಲೋಕಸಭಾ ಚುನಾವಣಾ ಪ್ರಚಾರದ ಅಂತ್ಯದ ಬಳಿಕ ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಅವರು ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪ್ರಧಾನಿ ಕನ್ಯಾಕುಮಾರಿ ಭೇಟಿಗೆ ತಮಿಳುನಾಡು ಕಾಂಗ್ರೆಸ್ ವಿರೋಧ
ಪ್ರಧಾನಿ ಮೋದಿ ಭೇಟಿ ಕಾರಣದಿಂದಾಗಿ ಕನ್ಯಾಕುಮಾರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ತಿರುನಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ ಸುಂದರವತನಂ ಅವರೊಂದಿಗೆ ಕನ್ಯಾಕುಮಾರಿಯ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಪ್ರಧಾನಿಯವರ ಪ್ರಮುಖ ಭದ್ರತಾ ತಂಡವು ಸ್ಥಳಕ್ಕೆ ತಲುಪಿದ ನಂತರವೂ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರಯೋಗವನ್ನು ನಡೆಸಲಾಗಿದೆ. ಕನ್ಯಾಕುಮಾರಿ ಮತ್ತು ಸುತ್ತಮುತ್ತ ಸುಮಾರು 2,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.





