ರೈತರನ್ನು ಕೊಲೆ ಅಪರಾಧಿಗಳು ಎಂದಿದ್ದ ಪೊಲೀಸ್‌ ಅಧಿಕಾರಿ; ಕ್ಷಮೆಯಾಚನೆ

Date:

ಅಪರಾಧಗಳ ಹಿಂದಿನ ಅಪರಾಧಿಗಳು ರೈತರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ಬಿಹಾರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿ) ಕುಂದನ್ ಕೃಷ್ಣನ್‌ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ರೈತರನ್ನು ದೂಷಿಸುವುದು ನನ್ನ ಉದ್ದೇಶವಾಗಿರಲಿಲ್ಲ. ರೈತರು ಗೌರವಾನ್ವಿತರು ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಹೆಚ್ಚು ಕೊಲೆಗಳು ನಡೆಯುತ್ತಿರುವ ಹಿನ್ನೆಲೆ, ಅಪರಾಧಗಳ ಕುರಿತು ಮಾತನಾಡಿದ್ದ ಎಡಿಜಿ, “ಇಡೀ ಬಿಹಾರದಲ್ಲಿ ಬಹಳಷ್ಟು ಕೊಲೆಗಳು ನಡೆದಿವೆ. ಹೆಚ್ಚಿನ ಕೊಲೆಗಳು ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ನಡೆಯುತ್ತವೆ. ಈ ಸಮಯದಲ್ಲಿ ಹೆಚ್ಚಿನ ರೈತರಿಗೆ ಕೆಲಸವಿಲ್ಲದ ಕಾರಣ ಮಳೆ ಬರುವವರೆಗೂ ಇದು ಮುಂದುವರಿಯುತ್ತದೆ. ಮಳೆ ಆರಂಭವಾದ ಬಳಿಕ, ರೈತ ಸಮುದಾಯದ ಜನರು ಕೆಲಸಗಳಲ್ಲಿ ನಿರತರಾಗುತ್ತಾರೆ. ಆಗ ಅಪರಾಧ ಕೃತ್ಯಗಳು ಕಡಿಮೆಯಾಗುತ್ತವೆ. ಆದ್ದರಿಂದ, ನಾವು ಈ ತಿಂಗಳುಗಳಲ್ಲಿ ಹೊಸ ಘಟಕವನ್ನು ರಚಿಸಿದ್ದೇವೆ. ಈ ಘಟಕವು ಎಲ್ಲ ಮಾಜಿ ಶೂಟರ್‌ಗಳು, ಗುತ್ತಿಗೆ ಹಂತಕರು ಸೇರಿದಂತೆ ಅಪರಾಧಿಗಳ ಡೇಟಾಬೇಸ್ಅನ್ನು ರಚಿಸುತ್ತದೆ ಮತ್ತು ಅವರ ಮೇಲೆ ನಿಗಾ ಇಡುತ್ತದೆ” ಎಂದು ಹೇಳಿದ್ದರು.

ಅವರ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧಗಳಿಗೂ ರೈತರಿಗೂ ಸಂಬಂಧ ಕಲ್ಪಿಸಲಾಗಿದೆ. ಪೊಲೀಸರು ರೈತರನ್ನು ಕೊಲೆಗಾರರು, ಹಂತಕರು ಎನ್ನುತ್ತಿದ್ದಾರೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬೆನ್ನಲ್ಲೇ ಎಡಿಜಿ ಕುಂದನ್ ಕೃಷ್ಣನ್ ಅವರು ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕುಂದನ್, “ನನ್ನ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ರೈತರನ್ನು ಅಪರಾಧದೊಂದಿಗೆ ತಳುಕುಹಾಕುವ ಉದ್ದೇಶ ನನಗಿಲ್ಲ. ಅಪರಾಧಗಳನ್ನು ಅಪರಾಧಿಗಳು ಮಾಡುತ್ತಾರೆ. ಅವರಿಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ” ಎಂದು ಹೇಳಿದ್ದಾರೆ.

“ನನ್ನ ಹೇಳಿಕೆಗಳನ್ನು ತಿರುಚಿ ಪ್ರಸಾರ ಮಾಡಲಾಗಿದ್ದು, ವಿವಾದ ಹುಟ್ಟುಕೊಂಡಿದೆ. ನಮ್ಮ ರೈತರು ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಅಪರಾಧಗಳೊಂದಿಗೆ ಯಾವುದೇ ಸಂಬಂಧ ಹೊಂದಿದ್ದಾರೆ ಎಂಬ ಯಾವುದೇ ಭಾವನೆ ನನಗಿಲ್ಲ. ಹಾಗೆ ಹೇಳಲು ನಾವು ಬಯಸಿಲ್ಲ. ಅವರು ಯಾವಾಗಲೂ ಗೌರವಾನ್ವಿತರು. ನನ್ನ ಪೂರ್ವಜರು ಸಹ ರೈತರಾಗಿದ್ದರು. ಹೀಗಾಗಿ, ನಾನು ರೈತರೊಂದಿಗೆ, ವಿಶೇಷವಾಗಿ ನನ್ನ ಹಳ್ಳಿಯಲ್ಲಿರುವ ರೈತರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಅಪರಾಧಗಳನ್ನು ಅಪರಾಧಿಗಳು ಮಾಡುತ್ತಾರೆ. ಅವರಿಗೆ ಜಾತಿ ಅಥವಾ ಧರ್ಮವಿಲ್ಲ. ನಾನು ರೈತರನ್ನು ಗೌರವಿಸುತ್ತೇನೆ. ಆದರೆ, ನನ್ನ ಹೇಳಿಕೆಗಳು ಯಾರಿಗಾದರೂ ನೋವುಂಟುಮಾಡಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದು ಎಡಿಜಿ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?; ರಷ್ಯಾ ತೈಲ ಖರೀದಿಸಿದರೆ 500% ಸುಂಕ ಬೆದರಿಕೆ: ಭಾರತದ ಮೇಲೆ ಅಮೆರಿಕ-ನ್ಯಾಟೋ ‘ಇಬ್ಬಂದಿ ನೀತಿ’

ಬಿಹಾರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಕುಮಾರ್ ಝಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಮೋದಿ ‘ಸುಳ್ಳಿನ ಬೆಟ್ಟವನ್ನೇ’ ನಿರ್ಮಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

“ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳ ವಿಚಾರದಲ್ಲಿ ಮೋದಿ ಮೌನವಾಗಿದ್ದಾರೆ. ಕಳೆದ 15 ದಿನಗಳಲ್ಲಿ ಬಿಹಾರದಲ್ಲಿ 37 ಕೊಲೆ ಘಟನೆಗಳು ನಡೆದಿವೆ. ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮತ್ತು ತೆಲಂಗಾಣಕ್ಕೆ ಸತ್ಯಶೋಧನಾ ತಂಡವನ್ನು ಕಳುಹಿಸುತ್ತಾರೆ. ಆದರೆ, ಬಿಹಾರಕ್ಕೆ ಬಂದಾಗ ‘ಸೆಲ್ಲೋ ಟೇಪ್’ ಅಂಟಿಸಿಕೊಂಡಿರುತ್ತಾರೆ” ಎಂದು ಆರ್‌ಜೆಡಿ ನಾಯಕ ಹೇಳಿದ್ದಾರೆ.

“ಮೋದಿ ಅವರೇ, ನೀವು ಸುಳ್ಳಿನ ಬೆಟ್ಟವನ್ನೇ ಕಟ್ಟಿದ್ದೀರಿ. ನೀವು ಮಣಿಪುರ ಮತ್ತು ಬಿಹಾರವನ್ನು ನೋಡುವುದಿಲ್ಲ. 15 ದಿನಗಳಲ್ಲಿ ಬಿಹಾರದಲ್ಲಿ 37 ಕೊಲೆ ಘಟನೆಗಳು ನಡೆದಿವೆ. ಮುಜಫರ್‌ಪುರದ ಮಗಳಿಗೆ ಏನಾಯಿತು? ನೀವು ಪಶ್ಚಿಮ ಬಂಗಾಳ ಮತ್ತು ತೆಲಂಗಾಣಕ್ಕೆ ಸತ್ಯಶೋಧನಾ ತಂಡವನ್ನು ಕಳುಹಿಸಿದಂತೆ ಬಿಹಾರಕ್ಕೆ ತಂಡವನ್ನು ಕಳಿಸಲಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿರುವ ರಾಜ್ಯಗಳಿಗೆ ಪ್ರಧಾನಿ ಸತ್ಯಶೋಧನಾ ತಂಡಗಳನ್ನು ಕಳುಹಿಸಬೇಕು. ಬಿಹಾರದಲ್ಲಿ ಏನಾದರೂ ಸಂಭವಿಸಿದಾಗಲೆಲ್ಲ ನೀವು ಬಾಯಿಗೆ ‘ಸೆಲ್ಲೋ ಟೇಪ್’ ಹಾಕಿಕೊಳ್ಳುತ್ತೀರಿ” ಎಂದು ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...