ಬಿಹಾರ ಚುನಾವಣೆಯ ಸಾಧ್ಯತೆಗಳಾಗಬಹುದಾದ ಸಾಧ್ಯತೆಗಳು

Date:

ಸ್ವತಃ ನಿತೀಶ್ ಕುಮಾರ್ ಅವರ ಇಮೇಜ್ ಮುಸುಕಾಗುತ್ತಿರುವ ಈ ದಿನಗಳಲ್ಲಿ ಬಿಹಾರದಲ್ಲಿ ಫಲ ಈ ಬಾರಿ ಇಂಡಿಯಾ ಒಕ್ಕೂಟಕ್ಕೆ ದೊರಕುವ ಸಾಧ್ಯತೆಗಳಿವೆಯೇ? ಒಂದು ವೇಳೆ ಹೌದಾದರೂ, ಇಲ್ಲವಾದರೂ‌ ಎರಡಕ್ಕೂ ರಾಗಾ ಉತ್ತರದಾಯಿಯಾಗಬೇಕೇ?

ಆಡಳಿತ ವಿರೋಧಿ ಅಲೆ- ಖಂಡಿತವಾಗಿ ದೊಡ್ಡ ಸಾಧ್ಯತೆ ಇದೆ ಅಂತ ಹೇಳಬೇಕೇ? ಇತ್ತು ಅಂತ ಹೇಳಬೇಕೇ? ಎರಡಕ್ಕೂ ಸ್ಪಷ್ಟ ಉತ್ತರವಿಲ್ಲ. ಮೊದಲನೆಯದು ನಿಜವಾಗಿರಬೇಕಿತ್ತು. ಒಂದು ವೇಳೆ ಆಗದಿದ್ದರೆ ಅದಕ್ಕೆ ಇಂಡಿಯಾ ಒಕ್ಕೂಟ ಉತ್ತರಿಸಬೇಕು.

ಯುವ ಜನತೆ ಮತ್ತು ನಿರುದ್ಯೋಗ- ಇದಂತೂ ಎನ್‌ಡಿಎ ಸರ್ಕಾರದ ವಿರುದ್ಧ ದೊಡ್ಡ ಅಲೆಯಾಗುವ ಸಾಧ್ಯತೆ ಇದೆ ಅಥವಾ ಇತ್ತು. ಬಹುಶಃ ನಾಳೆ ನಡೆಯುವ ಮೊದಲ ಹಂತದ ಮತದಾನದಲ್ಲಿ ಯುವಜನತೆಯ ಭಾಗವಹಿಸುವಿಕೆ ಇದನ್ನು ನಿರ್ಧರಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬಂದರೆ ‘ಸಾಧ್ಯತೆ ಇದೆಯಂತಲೂ’ ಕಡಿಮೆ ಪ್ರಮಾಣದಲ್ಲಿ ಬಂದರೆ ‘ಸಾಧ್ಯತೆ ಕಳೆದುಕೊಂಡರು’ ಅಂತಲೂ ಹೇಳಬಹುದೇ? ಎರಡೂ ಸಂದರ್ಭದಲ್ಲಿಯೂ ಇಂಡಿಯಾ ಒಕ್ಕೂಟದ ತೇಜಸ್ವಿ ಯಾದವ್ ಅವರ ಉತ್ತರದಾಯಿತ್ವ ಇದೆ.

ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಗೇಮ್ ಚೇಂಜರ್ ಆಗ್ತಾರಾ ಪ್ರಶಾಂತ್ ಕಿಶೋರ್?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅತಿ ಹಿಂದುಳಿದ ವರ್ಗಗಳ ಒಲವು ನಿಲುವು- ಇದು ಕಳೆದ ಇಪ್ಪತ್ತು ವರ್ಷಗಳಿಂದ ‘ಪಲ್ಟೂ ಚಾಚಾ’ ಕಡೆಗೆ ವಾಲುತ್ತಿರುವುದ್ದಕ್ಕೆ ಲಾಲೂಜೀಯವರ ಯಾದವ್ ರಾಜಕಾರಣದ ಧಾಡಸೀತನ ಮುಖ್ಯ ಕಾರಣವೇ? ಮತ್ತು ಕರ್ಪೂರಿ ಠಾಕೂರ್ ಅವರ ಸಾಮಾಜಿಕ ನ್ಯಾಯದ ಸೋಲೇ? ಈ ಬಾರಿಯೂ ಅದೇ ಪುನರಾವರ್ತನೆಯಾದರೆ ಇದಕ್ಕೂ ಇಂಡಿಯಾ ಒಕ್ಕೂಟ ಉತ್ತರಿಸಬೇಕಲ್ಲವೇ?

ದಲಿತ ಸಮುದಾಯದ ನಿಲುವು- 2023ರ ಕರ್ನಾಟಕ ಚುನಾವಣೆಯಲ್ಲಿ ಆದಂತೆ ಬಿಹಾರದಲ್ಲಿಯೂ ಆಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಮೂರು ವರ್ಷಗಳ ಹಿಂದಿನ ಜಾತಿ ಸಮೀಕ್ಷೆಯಲ್ಲಿ ಹೆಚ್ಚಿನವರು ಭೂರಹಿತರು, ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಮತ್ತು ಅಧಿಕಾರ ಮತ್ತು ಸವಲತ್ತುಗಳ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯವು ತುಂಬಾ ವಿರಳ.

ಮುಖ್ಯವಾಗಿ ಎಸ್‌ಐಆರ್ ವಿರುದ್ಧ ರಾಗಾ ನಡೆಸಿದ ಪ್ರತಿಭಟನೆ ಈ ಬಾರಿ ಫಲ ಕೊಡುತ್ತದೆಯೇ? ಯಾಕೆಂದರೆ ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಸಮೀಕ್ಷೆಯು ‘ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಜುಲೈ 2025ರಲ್ಲಿ, ಶೇ. 71ಕ್ಕಿಂತ ಹೆಚ್ಚು ದಲಿತ ಮತದಾರರು ಪರಿಷ್ಕರಣೆಗಳಲ್ಲಿ ತಮ್ಮ ಹೆಸರುಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ’ ಎಂದು ವರದಿ ಮಾಡಿದೆ. ಬಹುಶಃ ದಲಿತರ ನಿಲುವು ನಿರ್ಣಾಯಕ ವಾಗಬಹುದೇ? ಇಲ್ಲಿ ರಾಗಾ ಅವರ ಉತ್ತರ ದಾಯಿತ್ವ ಇದೆಯೇ?

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ‘ಸುಶಾಸನ್ ಬಾಬು’ ಇಮೇಜ್ ಈ ಬಾರಿ ಕೈ ಕೊಡಲಿದೆಯೇ?- ಇದಂತೂ ಕಳೆದ ಇಪ್ಪತ್ತು ವರ್ಷಗಳಿಂದ ಕಣ್ಣಾ ಮುಚ್ಚಾಲೆ ಆಟ ಆಡುತ್ತಲೇ ಇದೆ. ಇನ್ನೇನು ಮುಗೀತು ಕತೆ ಅನ್ನುವಷ್ಟರಲ್ಲಿ ‘ಹಮ್ ಬೀ ಕುಚ್ ಕಾಮ್ ನಹೀ ಹೈ ಭಾಯಿ’ ಎಂಬಂತೆ ‘ಪಲ್ಟೂ ಚಾಚಾ’ ಫೀನಿಕ್ಸ್ ಹಕ್ಕಿಯಂತೆ ಎದ್ದು ಬರುವುದು ಸಾಮಾನ್ಯವಾಗಿದೆ. ಈ ಬಾರಿ ಯುವಜನತೆ ಈ ಫೀನಿಕ್ಸ್ ನೆರೇಶನ್ ಕೊನೆಗೊಳಿಸುವರೇ? ಹೌದಾದರೆ ಅದು ತೇಜಸ್ವಿ ಯಾದವ್ ಅವರ ಗೆಲುವು, ಇಲ್ಲವಾದರೆ ಅವರ ಸೋಲು. ಬಹುಶಃ ಈ ಬಾರಿಯ ಚುನಾವಣೆಯಲ್ಲಿ ಇದೊಂದೇ ಅತ್ಯಂತ ನೇರಾನೇರ ಲೆಕ್ಕಾಚಾರ.

ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಆಡಳಿತ ವಿರೋಧಿ ಅಲೆ ದಾಟಿ ದಡ ಸೇರುವರೇ ನಿತೀಶ್-ಮೋದಿ?

ಕಳೆದ ಹತ್ತು ವರ್ಷಗಳಂತೆ ಈ ಬಾರಿಯೂ ಮೋದಿ ಇಮೇಜ್‌ಗೆ ಮಹತ್ವ ಇಲ್ಲ- ಈ‌ ಸಾಧ್ಯತೆಯೇ ಇದುವರೆಗೂ ನಿತೀಶ್ ಕುಮಾರ್ ಅವರ ದೊಡ್ಡ ಶಕ್ತಿಯಾಗಿತ್ತು. ಆದರೆ ಸ್ವತಃ ಅವರ ಇಮೇಜ್ ಮುಸುಕಾಗುತ್ತಿರುವ ಈ ದಿನಗಳಲ್ಲಿ ಇದರ ಫಲ ಈ ಬಾರಿ ಇಂಡಿಯಾ ಒಕ್ಕೂಟಕ್ಕೆ ದೊರಕುವ ಸಾಧ್ಯತೆಗಳಿವೆಯೇ? ಒಂದು ವೇಳೆ ಹೌದಾದರೂ, ಇಲ್ಲವಾದರೂ‌ ಎರಡಕ್ಕೂ ರಾಗಾ ಉತ್ತರದಾಯಿಯಾಗಬೇಕೇ?

ಬಿಹಾರದ 75 ಲಕ್ಷ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಮೂಲಕ ತಲಾ ₹10 ಸಾವಿರ ನೀಡುವ ನರೇಂದ್ರ ಮೋದಿ ಅವರ ರಾಜಕಾರಣವು ಫಲಿತಾಂಶದ ದಿಕ್ಕನ್ನು ಬದಲಿಸಲಿದೆಯೇ?- ಇದನ್ನು ‘ಮತಗಳ್ಳತನದ ಜತೆಗೆ, ಮತ ಖರೀದಿಗೂ ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದರೂ ಸಹ ಚುನಾವಣೆಗೂ ಮುನ್ನ ಈ ರೀತಿಯ ಘೋಷಣೆ ಸದ್ಯದ ರಾಜಕೀಯದ part and parcel ಆಗಿರುವ ಕಾರಣ ಯಾರೂ ಯಾರನ್ನೂ ಆರೋಪಿಸುವಂತಿಲ್ಲವೇನೋ? ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಎರಡು ವರ್ಷಗಳಿಂದ ಬದ್ಧತೆಯಿಂದ ಜಾರಿಗೊಳಿಸುತ್ತಿರುವುದನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಈ ವಿಚಾರದಲ್ಲಿ ವಂಚನೆ ಮಾಡಿರುವುದನ್ನು ದಾಖಲೆ ಸಮೇತ ವಿವರಿಸಬೇಕಾಗಿತ್ತು. ಎಂದಿನಂತೆ ಕಾಂಗ್ರೆಸ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದೆ.

ಆದರೆ ಮುಖ್ಯವಾಹಿನಿ ಮಾಧ್ಯಮಗಳು ಎಂದಿನಂತೆ ‘ಈ ಬಾರಿ ಬಿಜೆಪಿಗೆ ಹಿಂದಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಸಿಗುವುದೇ? ಮೋದಿ ಮ್ಯಾಜಿಕ್’ ಅಂತೆಲ್ಲಾ ತುತ್ತೂರಿ ಊದುತ್ತಾ ಇದ್ದಾರೆ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಅಂತ ಜನತೆ ನಿರ್ಧರಿಸುತ್ತಾರೆ ಎನ್ನುವ ನಂಬಿಕೆ ಮಾತ್ರ ಪ್ರತಿ ಬಾರಿ ನಮ್ಮೆಲ್ಲರದು. ಕಡೆಗೂ ಬಿಹಾರ ರಾಜಕಾರಣದ ಆಳ ಅಗಲದ ನಿಗೂಢತೆಯೂ ಚುನಾವಣಾ ಸಂದರ್ಭಕ್ಕೂ ನಿಜ. ಆ ರಾಜ್ಯದ ಹೊರಗಿನವರಿಗೆ ಸುಲಭವಾಗಿ ದಕ್ಕುವುದಿಲ್ಲ. ಏನೇ ಮಾತನಾಡಿದರೂ ಅದು ‘ರೆ’ಗಳ ಪ್ರಪಂಚ ಮಾತ್ರ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...