ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಹಾಕಿರುವ ಛೀಮಾರಿ, ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಈ ಹೇಯ ಕೃತ್ಯ ನಡೆಯಲು ಅಲ್ಲಿನ ರಾಜ್ಯ ಸರ್ಕಾರದ ಎಷ್ಟು ಪಾಲಿದೆಯೋ ಕೇಂದ್ರದ ಪಾಲೂ ಅಷ್ಟೇ ಇದೆ. ಮಣಿಪುರದ ಗಲಭೆಯನ್ನು ಆರಂಭದಲ್ಲೇ ನಿಯಂತ್ರಿಸಿದ್ದರೆ ಈ ಘಟನೆ ನಡೆಯುತಿತ್ತೆ” ಎಂದು ಪ್ರಶ್ನಿಸಿದ್ದಾರೆ.
“ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ್ದು ಮೇ 4 ರಂದು. ಆಗ ನಮ್ಮ ಘನವೆತ್ತ ಪ್ರಧಾನಿ ಮೋದಿ ರೋಡ್ ಶೋ ಮಾಡಲು ಕರ್ನಾಟಕದಲ್ಲಿದ್ದರು. ಇದಕ್ಕೂ ಮೊದಲೇ ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿತ್ತು. ಮೋದಿಯವರಿಗೆ ಚುನಾವಣಾ ಪ್ರಚಾರದಲ್ಲಿ ಇದ್ದ ಆಸಕ್ತಿ ಮಣಿಪುರದ ಗಲಭೆ ಬಗ್ಗೆ ಇದ್ದಿದ್ದರೆ ಇಂತಹ ಹೇಯ ಕೃತ್ಯ ತಡೆಯಬಹುದಿತ್ತಲ್ಲವೆ?” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾರೊಂದಿಗೂ ಮೈತ್ರಿ ಇಲ್ಲ, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಸಮರ: ಎಚ್ ಡಿ ದೇವೇಗೌಡ
“ಮಣಿಪುರದ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ಈ ದೇಶ ಸಾಕ್ಷಿಯಾಗಿದ್ದು, ಈ ನೆಲದ ದುರಂತ. ಬಿಜೆಪಿಯ ಫ್ಯಾಸಿಸ್ಟ್ ಮನಸ್ಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದ ಫಲವಿದು. ಮೋದಿಯವರೇ, ಈಗಲಾದರೂ ನೀವು ನಿಮ್ಮ ಪರಿವಾರದವರು ಮನಸ್ಸು ಬದಲಾಯಿಸಿಕೊಳ್ಳಿ. ಪ್ರೀತಿ ಹಂಚಲು ಪ್ರಯತ್ನಿಸಿ.




