ಮೈಸೂರು ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ

Date:

  • ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಮೈಲಾರಿ ಹೋಟೆಲ್
  • ಸಾಂಪ್ರದಾಯಿಕ ರುಚಿಗೆ ಹೆಸರಾಗಿರುವ ಮೈಸೂರಿನ ದೋಸೆ ಹೋಟೆಲ್

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಪ್ರಿಯಾಂಕಾಗಾಂಧಿ ತಮ್ಮ ಅಣ್ಣ ರಾಹುಲ್ ಗಾಂಧಿ ಸರಳತೆ ಮೆರೆದು ಸುದ್ದಿಯಾದರು.

ಮೈಸೂರಿನ ಪ್ರಸಿದ್ದ ವಿನಾಯಕ ಮೈಲಾರಿ ಹೋಟೆಲ್‌ಗೆ ತೆರಳಿದ ಪ್ರಿಯಾಂಕಾ ಅಲ್ಲಿ ಜನಮನ್ನಣೆಯ ಮಸಾಲೆ ದೋಸೆ ಸವಿದರು.

ದೋಸೆ ರುಚಿ ನೋಡುವ ಮೊದಲು ಹೋಟೆಲ್ ಅಡುಗೆ ಕೋಣೆ ಹೊಕ್ಕ ಇಂದಿರಮ್ಮನ ಮೊಮ್ಮಗಳು ಅಲ್ಲಿ ದೋಸೆ ಕೈ ಹಿಡಿದು ಕಾದ ಹೆಂಚಿನ ಮೇಲೆ ಹಿಟ್ಟು ಸುರಿದು ತಾವೇ ದೋಸೆ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೊತೆ ತಮ್ಮ ಕೈರುಚಿಯ ದೋಸೆಯನ್ನು ಜೊತೆಯಲ್ಲಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಹಿಳಾ ಯುವ ಮುಖಂಡೆ ಐಶ್ವರ್ಯ ಮಂಚನಹಳ್ಳಿಯವರಿಗೂ ಹಂಚಿದರು.ಮೈಲಾರಿ ಹೊಟೇಲ್‌

ಪ್ರಿಯಾಂಕಾ ಗಾಂಧಿಯವರ ಈ ನಡೆ ಹೋಟೆಲ್ ನವರನ್ನೂ ಒಳಗೊಂಡಂತೆ ಎಲ್ಲರ ಮನಸೂರೆಗೊಂಡಿತು. ಅವರ ಸರಳತೆಯನ್ನು ಜನ ಕೊಂಡಾಡಿದರು. ತಿಂಡಿ ವೇಳೆ ತಮಗೆ ಜೊತೆಯಾದ ಕೆಲ ಮಕ್ಕಳೊಂದಿಗೂ ಪ್ರಿಯಾಂಕ ಕೆಲಕಾಲ ಸಮಯ ಕಳೆದರು.

ಹೊರಡುವ ಮುನ್ನ ಹೋಟೆಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ನಾನಿಲ್ಲಿ ದೋಸೆ ಜೊತೆಗೆ ಇಡ್ಲಿಯನ್ನೂ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು.

ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ಊರಿಗೆ ಹೋದ ಮೇಲೆ ನಾನು ಇದನ್ನು ಟ್ರೈ ಮಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ರೌಡಿಶೀಟರ್‌ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ ಹಳೆ ಗುಜರಾತ್ ನೆನಪಾಗಿರಬೇಕು ಎಂದ ಜೆಡಿಎಸ್‌

ಈ ಹಿಂದೆ ರಾಜ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಹಾಗೂ ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ಇದೇ ರೀತಿ ಸರಳತೆ ಮೆರೆದಿದ್ದರು.

ರಸ್ತೆ ಬದಿಯ ಗೂಡಂಗಡಿಗಳಲ್ಲಿ ಬಜ್ಜಿ ಚಹಾ ಸೇವನೆ, ಹೊಲಕ್ಕೆ ತೆರಳಿ ಕಬ್ಬು, ಸೌತೇಕಾಯಿ ಕಿತ್ತು ತರುವ, ಜನಸಾಮಾನ್ಯರೊಂದಿಗೆ ಬೆರೆತು ತೋರಿಸಿದ್ದರು.

ಮೈಲಾರಿ ದೋಸೆ :

80 ವರ್ಷ ಹಳೆಯದಾದ ವಿನಾಯಕ ಮೈಲಾರಿ ದೋಸೆ ಹೋಟೆಲ್ ಮೈಸೂರಿನಲ್ಲಿದೆ. ಸಾಂಪ್ರದಾಯಿಕ ಸೌದೇ ಒಲೆ ದೋಸೆಗಳಿಗೆ ಇದು ಇಂದಿಗೂ ಹೆಸರುವಾಸಿ. ವಿದೇಶಗಳಲ್ಲೂ ಇದರ ಸ್ವಾದ ಪಸರಿಸಿರುವುದು ಇಲ್ಲಿನ ಶುಚಿ ರುಚಿಗೆ ಸಿಕ್ಕ ಮನ್ನಣೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...