ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣವು ದೇಶಾದ್ಯಂತ ಸುದ್ದಿಯಲ್ಲಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿಗಳೇ, ಸಾವಿರಾರು ಮಹಿಳೆಯರ ಅತ್ಯಾಚಾರವೆಸಗಿ ವಿದೇಶಕ್ಕೆ ಓಡಿ ಹೋದವನನ್ನು ಕರೆತಂದ ಬಳಿಕ ಮಂಗಳಸೂತ್ರದ ಬಗ್ಗೆ ಮಾತನಾಡಿ” ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿಯ ಸೇಡಂನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಮೋದಿ ಅವರ ಮೈತ್ರಿ ಅಭ್ಯರ್ಥಿ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿದೇಶಕ್ಕೆ ಓಡಿ ಹೋಗಿದ್ದಾನೆ. ವಿರೋಧ ಪಕ್ಷದ ನಾಯಕರು ವಿದೇಶಕ್ಕೆ ಹೋಗುವಾಗ ಮಾಹಿತಿ ಪಡೆದುಕೊಳ್ಳುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಈತ ಓಡಿ ಹೋಗಿದ್ದು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ, ‘ಆ ವ್ಯಕ್ತಿಯನ್ನು ಮರಳಿ ದೇಶಕ್ಕೆ ಕರೆತಂದ ಬಳಿಕವೇ ಮಂಗಳಸೂತ್ರದ ಬಗ್ಗೆ ಮಾತನಾಡಿ” ಎಂದು ವಾಗ್ದಾಳಿ ನಡೆದಿದರು.
प्रधानमंत्री जी आजकल महिलाओं के मंगलसूत्र और गहनों की बातें करते हैं। कर्नाटका में मोदी जी ने जिसके लिए वोट मांगा, उन्होंने हजारों महिलाओं के साथ दुष्कर्म किया। मैं पूछना चाहती हूं कि हमारे प्रधानमंत्री और गृहमंत्री इस बारे में क्या कहते हैं?
मोदी जी, देश की करोड़ों महिलाएं… pic.twitter.com/sJSIYwhyMl
— Priyanka Gandhi Vadra (@priyankagandhi) April 29, 2024
“ನಾನು ನನ್ನ ಮಗಳನ್ನು ನೋಡಲು ವಿದೇಶಕ್ಕೆ ಹೋದರೆ ಮೋದಿ – ಅಮಿತ್ ಶಾ ಅವರು ಪ್ರಿಯಾಂಕ ಗಾಂಧಿ ಬೇರೆ ದೇಶಕ್ಕೆ ಹೋದರು ಎಂದು ಆಡಿಕೊಂಡರು. ನಾನು ವಿದೇಶಕ್ಕೆ ಹೋಗುವುದು ಮೋದಿ, ಅಮಿತ್ ಶಾ ಅವರಿಗೆ ತಿಳಿಯುತ್ತದೆ. ಆದರೆ ಒಬ್ಬ ರಾಕ್ಷಸ ಅವರ ಮೂಗಿನ ನೇರದಲ್ಲೇ ದೇಶ ಬಿಟ್ಟು ಹೋಗುವುದು ಅವರಿಗೆ ಗೊತ್ತಾಗಲಿಲ್ಲವೇ? ಇದನ್ನ ಯಾರಾದರೂ ನಂಬಲು ಸಾಧ್ಯವೇ? ಮೋದಿಯವರನ್ನ ಪ್ರಶ್ನಿಸಿ, ಎಲ್ಲಿಯವರೆಗೂ ಅಪರಾಧಿ ವಾಪಸ್ ಬರುವುದಿಲ್ಲವೋ ಅಲ್ಲಿಯವರೆಗೂ ಅವರಿಗೆ ನಮ್ಮ ತಾಯಂದಿರ ಮಂಗಳಸೂತ್ರದ ಬಗ್ಗೆ ಮಾತನಾಡುವ ಧೈರ್ಯ ಬರಬಾರದು” ಎಂದು ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ನೂರಾರು ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ ವ್ಯಕ್ತಿಯ ಭುಜದ ಮೇಲೆ ಪ್ರಧಾನಿ ಮೋದಿ ಕೈಯಿಟ್ಟು ಫೋಟೋಗೆ ಫೋಸ್ ನೀಡಿದ್ದರು. 10 ದಿನಗಳ ಹಿಂದೆ ಆ ನಾಯಕನನ್ನೇ ಮೋದಿ ಹಾಡಿ ಹೊಗಳಿದ್ದರು. ಈಗ ಅದೇ ನಾಯಕ ದೇಶದಿಂದ ಪರಾರಿಯಾಗಿದ್ದಾನೆ. ಅವನ ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಕಂಪಿಸುತ್ತದೆ. ಅವನು ನೂರಾರು ಮಹಿಳೆಯರ ಬದುಕನ್ನೇ ಹಾಳು ಮಾಡಿದ್ದಾನೆ. ಮೋದಿಜಿ ಇನ್ನೂ ಸುಮ್ಮನಿರುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
“ನಾನು ಪ್ರಧಾನಮಂತ್ರಿಗಳನ್ನು ಕೇಳುತ್ತೇನೆ, ಅವರ ಪಕ್ಕದಲ್ಲೇ ಕುಳಿತು ವೇದಿಕೆ ಹಂಚಿಕೊಂಡವರು, ಮೋದಿಯವರು ಅವರ ಪರವಾಗಿ ಮತಯಾಚನೆ ಮಾಡಿದ್ದ ವ್ಯಕ್ತಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೋದಿಯವರು ಏನು ಹೇಳುತ್ತಾರೆ? ಗೃಹ ಸಚಿವರು ಏನು ಹೇಳುತ್ತಾರೆ?” ಎಂದು ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.





