ಬಿಜೆಪಿ ನಾಯಕ ಕಿರೋಡಿ ಲಾಲ್ ಮೀನಾ ರಾಜಸ್ಥಾನ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. 72 ವರ್ಷ ಪ್ರಾಯದ ಕಿರೋಡಿ ಲಾಲ್ ಮೀನಾ ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ಉಸ್ತುವಾರಿಯಲ್ಲಿರುವ ಏಳು ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಒಂದು ಕ್ಷೇತ್ರದಲ್ಲಿ ಬಿಜೆಪಿ ಸೋತರೆ ಸಚಿವ ಸ್ಥಾನವನ್ನು ತ್ಯಜಿಸುವುದಾಗಿ ಹೇಳಿದ್ದರು.
ಮೀನಾ ಉಸ್ತುವಾರಿಯ ಸ್ಥಳೀಯ ದೌಸಾ ಸೇರಿದಂತೆ ಕೆಲವು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದ್ದು, ಇದೀಗ ಕಿರೋಡಿ ಲಾಲ್ ಮೀನಾ ರಾಜೀನಾಮೆ ನೀಡಿದ್ದಾರೆ.
“ಕಿರೋಡಿ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 10 ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಿದ್ದಾರೆ” ಎಂದು ಮೀನಾ ಆಪ್ತರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಸುಮಾರು ಒಂದು ತಿಂಗಳುಗಳ ನಂತರ ಕಿರೋಡಿ ಲಾಲ್ ರಾಜೀನಾಮೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಜಾರ್ಖಂಡ್: ಮುಖ್ಯಮಂತ್ರಿ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ
ರಾಜೀನಾಮೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಿರೋಡಿ ಲಾಲ್ ಮೀನಾ, “ರಘುಕುಲ ಸಂಪ್ರದಾಯವನ್ನು ಯಾವಾಗಲೂ ಅನುಸರಿಸುತ್ತಿದ್ದರು ನಾವು ಜೀವನ ಹೋದರೂ ಕೂಡಾ ವಚನವನ್ನು ತಪ್ಪುವುದಿಲ್ಲ” ಎಂದು ಶ್ರೀ ರಾಮಚರಿತ ಮಾನಸದ ಉಲ್ಲೇಖ ಮಾಡಿದ್ದಾರೆ.
रघुकुल रीति सदा चलि आई।
प्राण जाई पर बचन न जाई।।(श्रीरामचरितमानस)
— Dr.Kirodi Lal Meena (@DrKirodilalBJP) July 4, 2024
ಇನ್ನು ಕಿರೋಡಿ ಲಾಲ್ ಮೀನಾ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರ, “ಕೆಲವು ಬಿಜೆಪಿ ನಾಯಕರು ಕೆಲವು ಸ್ಥಾನಗಳನ್ನು ತಮ್ಮ ಅರಿವಿಲ್ಲದೆ (ಅಭ್ಯರ್ಥಿಗಳಿಗೆ) ಮಾರಾಟ ಮಾಡಲಾಗಿದೆ, ಆದರೆ ಈ ಸ್ಥಾನಗಳಲ್ಲಿ ಗೆಲ್ಲಲು ನಾಯಕರುಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಅವರು ಈ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವಂತೆ ಮಾಡುವುದು ಹೇಗೆ?” ಎಂದು ಪ್ರಶ್ನಿಸಿದರು.
“ಕಿರೋಡಿ ಲಾಲ್ ಮೀನಾ ಅವರಂತಹವರು ತಮಗೆ ಕೆಲವು ಸ್ಥಾನಗಳ ಜವಾಬ್ದಾರಿ ನೀಡಲಾಗಿದೆ. ಆದರೆ ತಮ್ಮ ಗಮನಕ್ಕೆ ತರದೆ ಕೆಲವು ಸ್ಥಾನಗಳನ್ನು (ಅಭ್ಯರ್ಥಿಗಳಿಗೆ) ಮಾರಾಟ ಮಾಡಲಾಗಿದೆ ಎಂದು ಹೇಳುತ್ತಾರೆ. ಬಿಜೆಪಿ ಕೇಂದ್ರ ನಾಯಕತ್ವವು ಮೀನಾ ಅವರನ್ನು ಭೇಟಿ ಮಾಡುತ್ತಿಲ್ಲ. ಮೀನಾ ಕೊಡುಗೆ ನೀಡಿದರೂ ಅವರಿಗೆ ಗೌರವ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಉಳಿಯುತ್ತದೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಿದೆ” ಎಂದು ಹೇಳಿದರು.
#WATCH | On Rajasthan minister Kirodi Lal Meena resigning taking responsibility for BJP’s defeat on some parliamentary seats under his responsibility, State Congress chief Govind Singh Dotasara says, “Few BJP leaders are making allegations that some seats were sold (to… pic.twitter.com/zs7tEzFm1d
— ANI MP/CG/Rajasthan (@ANI_MP_CG_RJ) July 4, 2024





