ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ, ಇಲ್ಲದಿದ್ದರೆ ಯತ್ನಾಳ್ ನಿವೃತ್ತರಾಗಲಿ: ಸಚಿವ ಶಿವಾನಂದ ಪಾಟೀಲ್‌ ಸವಾಲು

Date:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ನನ್ನ ಮೇಲೆ ಮಗಳ ಚುನಾಚಣೆಗಾಗಿ ಸಕ್ಕರೆ ಕಾರ್ಖಾನೆಗಳಿಂದ ಹಣ ಕೇಳಿರುವ ಆರೋಪ ಮಾಡಿದ್ದು, ಅದನ್ನು ಅವರು ಸಾಬೀತು ಮಾಡಿದರೆ‌ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸಚಿವ ಶಿವಾನಂದ ಪಾಟೀಲ್ ಸವಾಲು ಹಾಕಿದ್ದಾರೆ.

ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಹಣ ಕೇಳಿರುವುದನ್ನು ಅವರು ಸಾಬೀತು ಮಾಡಬೇಕು. ಇಲ್ಲವೇ ಅವರು ‌ರಾಜಕೀಯದಿಂದ ನಿವೃತ್ತರಾಗಬೇಕು” ಎಂದು ಹೇಳಿದರು.

“ಗಂಡಸ್ಸಾಗಿದ್ದರೆ ಯತ್ನಾಳ್ ಅವರು ವಿಜಯಪುರ ನಗರದಿಂದ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ನಿಲ್ಲುತ್ತೇನೆ. ನನಗಿಂತ‌ ಅವರು ಒಂದು ಮತ ಹೆಚ್ಚಿಗೆ ಪಡೆದರೂ ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲದಿದ್ದರೆ, ಅವರು ನಿವೃತ್ತರಾಗಲಿ” ಎಂದು ಸವಾಲು ಹಾಕಿದರು.

“ಬೇರೆಯವರ ತರ ಚಿಲ್ಲರೆ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಬಿಜೆಪಿ ಅನ್ನು ಹೆಚ್ಚು ಬೈದವರು ಯಾರಾದರೂ ಇದ್ದರೆ, ಅದು ಯತ್ನಾಳ್” ಎಂದು ಟೀಕಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...