ಪ್ರಧಾನಿ ಮೋದಿ ಅವರು ಜುಲೈ ತಿಂಗಳಿನಲ್ಲಿ ಕೈಗೊಂಡಿದ್ದ ಎರಡು ದಿನಗಳ ಬ್ರಜಿಲ್ ಪ್ರವಾಸಕ್ಕೆ ಬರೋಬ್ಬರಿ 89 ಕೋಟಿ ರೂ. ವೆಚ್ಚವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಬೆಜಿಲ್‌ನಲ್ಲಿ ಜುಲೈ 6 ಮತ್ತು 7ರಂದು ಬ್ರಿಕ್ಸ್ ಶೃಂಗಸಭೆ ನಡೆಯಿತು. ಆ ಸಭೆಯಲ್ಲಿ ಭಾಗಿಯಾಗಲು ಮೋದಿ ಅವರು ಬ್ರೆಜಿಲ್‌ಗೆ ತೆರಳಿದ್ದರು. ಈ ಎರಡು ದಿನಗಳ ಬ್ರಜೆಲ್ ಪ್ರವಾಸಕ್ಕೆ ತಗುಲಿದ ವೆಚ್ಚದ ಕುರಿತು ಮಾಹಿತಿ ನೀಡುವಂತೆ ವ್ಯಕ್ತಿಯೊಬ್ಬರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಕೇಂದ್ರ ಸರ್ಕಾರವು ಉತ್ತರಿಸಿದೆ – ಅಂಕಿಅಂಶಗಳನ್ನು ಒದಗಿಸಿದೆ.
ವಿದೇಶಾಂಗ ಸಚಿವಾಲಯವು ಒದಗಿಸಿರುವ ಅಂಕಿಅಂಶದಂತೆ, ಮೋದಿ ಅವರ ಬ್ರೆಜಿಲ್ ಪ್ರವಾಸಕ್ಕೆ 89,00,96,770 ರೂ. ವೆಚ್ಚವಾಗಿದೆ. ಈ ಪೈಕಿ, ಹೋಟೆಲ್ ವ್ಯವಸ್ಥೆಗೆ 3,04,13,551 ರೂ., ಆಹಾರ ವೆಚ್ಚ 57,68,649 ರೂ., ಸಾರಿಗೆ ವೆಚ್ಚ 1,89,69,860 ರೂ., ಇತರ ವೆಚ್ಚಗಳು 3,39,44,710 ರೂ. ಎಂದು ಅಂಶಅಂಶಗಳು ವಿವರಿಸಿವೆ. ಗಮನಾರ್ಹವೆಂದರೆ, ಲೆಕ್ಕವಿಲ್ಲದ ಇತರ ವೆಚ್ಚವೇ 3.39 ಕೋಟಿ ರೂ. ಇದೆ.
SHOCKING 😱
— 🥇তন্ময় l T͞anmoy l (@tanmoyofc) October 16, 2025
₹89,096,770
PM Modi's Visit to Brazil for the #BRICS Summit on July 6-7, 2025 has cost ₹890,096,770.
i) Hotel Arrangements ₹3,04,13,551
ii) Venue Charges- ₹57,68,649
iii) Transport Arrangements- ₹1,89,69,860
iv) Miscellaneous Expenditure- ₹3,39,44,710
Prime… pic.twitter.com/lTa4hVumt5
ಎರಡು ದಿನಗಳ ಪ್ರವಾಸಕ್ಕೆ ಮೋದಿ ಅವರು 89 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದೇಶದ 80 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದು, ಇಂದಿಗೂ ತಮ್ಮ ಜೀವನಕ್ಕೆ ಉಚಿತ ಪಡಿತರ ಆಹಾರದ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಜನರ ಕಲ್ಯಾಣಕ್ಕಾಗಿ ಹಣವನ್ನು ವ್ಯಯಿಸಬೇಕಿದ್ದ ಪ್ರಧಾನಿ ಮೋದಿ ಅವರು ತಮ್ಮ ಐಷಾರಾಮಿ ಪ್ರವಾಸಕ್ಕಾಗಿ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ.




