ಆರ್‌ಎಸ್‌ಎಸ್‌ನಷ್ಟು ‘ಭ್ರಷ್ಟರು’ ಯಾರೂ ಇಲ್ಲ – ಅಡ್ವಾಣಿಯನ್ನೇ ಹೊಡೆದ್ರು: ಬಿಜೆಪಿ ಶಾಸಕ ಸುರೇಶ್‌ ಗೌಡ ವಿಡಿಯೋ ವೈರಲ್

Date:

ಆರ್‌ಎಸ್‌ಎಸ್‌ನಷ್ಟು ಭ್ರಷ್ಟರು ಯಾರೂ ಇಲ್ಲ. ಸುಮ್ಮನೆ ದೇಶಪ್ರೇಮ ಅಂತ ಹೇಳ್ತಾರೆ. ಅವರು ಅಷ್ಟೇ ಭ್ರಷ್ಟರು ಕೂಡ. ಅಂತ ಅಡ್ವಾಣಿಯನ್ನೇ ಹೊಡೆದು, ಕೆಳಗೆ ಹಾಕಿದ್ರು ಎಂದು ಬಿಜೆಪಿ ಶಾಸಕ ಸುರೇಶ್‌ ಗೌಡ ಹೇಳಿದ್ದ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ ಕುರಿತು ಚರ್ಚೆ ಆಗುವಂತೆ ಮಾಡಿದೆ.

ಈ ಹಿಂದೆ, ಗೌಪ್ಯ ಸಭೆಯೊಂದರಲ್ಲಿ ಸುರೇಶ್‌ ಗೌಡ ಮಾತನಾಡಿದ್ದರು. ಅವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದನ್ನು ಸಭೆಯಲ್ಲಿದ್ದವರೇ ವಿಡಿಯೋ ಮಾಡಿ, ಹರಿಬಿಟ್ಟಿದ್ದರು. ಆ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ವಿಡಿಯೋದಲ್ಲಿ, “ಯಡಿಯೂರಪ್ಪಗೆ ಹೈಕಮಾಂಡ್‌ ಹೊಡೆದಿದ್ದು ಯಾಕೆ? ಬಲಿಷ್ಟ ಆದ ತಕ್ಷಣ ಹೈಕಮಾಂಡ್‌ಗೆ ಗೌರವ ಕೊಡಲಿಲ್ಲ ಅಂದ್ರೆ ಯಾರು ಅಂತನೂ ನೋಡದೆ ಹೊಡೆದು ಕಳೆಗೆ ಹಾಕ್ತಾರೆ. ಅಂತ ಅಡ್ವಾಣಿಗೆ ಹೊಡೆದರು ಆರ್‌ಎಸ್‌ಎಸ್‌ನವರು. ಇದು ಕಾಮನ್ ಫೆನಾಮಿನ, ಸಂಘಟನೆಯಲ್ಲಿ ಯಾವಾಗ ಒಬ್ಬ ನಾನು ಅಂತ ಮುಂದೆ ಹೋಗ್ತಾನೆ, ಅವನನ್ನು ಹೊಡೆದು ಕೆಳಗೆ ಹಾಕ್ತಾರೆ. ನಾನು ಅಂತ ಅನ್ನೋಕೆ ಯಾವಾಗಲೂ ಬಿಡಲ್ಲ” ಎಂದು ಸುರೇಶ್‌ ಗೌಡ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಆರ್‌ಎಸ್‌ಎಸ್‌ನಷ್ಟು ಕರಪ್ಟು (ಭ್ರಷ್ಟರು) ಯಾರೂ ಇಲ್ಲ. ಸುಮ್ನೆ ಹೇಳ್ತಾರೆ ದೇಶಪ್ರೇಮ ಅಂತ. ಅವರು ಅಷ್ಟೇ ಭ್ರಷ್ಟರು. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ನವರು ನಂಬರ್‌ಗಳನ್ನೇ ತೆಗಿರೀ. ಬೇಕಿದ್ರೆ ಯಡಿಯೂರಪ್ಪನೇ ಹೆಸರುಗಳ ಪಟ್ಟಿ ಕೊಡ್ತಾರೆ. ಜಮೀನ್ ಯಾರಿಗೆ ಎಷ್ಟ್‌ ಕೊಟ್ಟೆ, ಹೊಸದಿಗಂತಕ್ಕೆ ಎಷ್ಟ್‌ ಕೊಟ್ಟೆ ಅಂತ ಯಡಿಯೂರಪ್ಪ ಹೇಳ್ತಾರೆ. ಹೊಸದಿಗಂತಕ್ಕೆ ಯಡಿಯೂರಪ್ಪ 5 ಕೋಟಿ ರೂ. ಕೊಟ್ಟಿದ್ದಾರೆ” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, “ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ. ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು ಬುಡಮೇಲು ಮಾಡಿದ ಕುತಂತ್ರಗಾರಿಕೆಯ ಪರಂಪರೆಯನ್ನು ಹಾಡಿ ಹೊಗಳಿದ್ದಾರೆ. ಇಡೀ ಜಗತ್ತಿನಲ್ಲೇ ಶ್ರೀಮಂತ ಸಂಘವಾಗಲು  ಆರ್ ಎಸ್ ಎಸ್ ತಾನು ಮಾಡುವ ಭ್ರಷ್ಟಾಚಾರಗಳಿಗೆ ಎಲ್ಲೇ ಇಲ್ಲ. ಬಿಜೆಪಿ ಪಕ್ಷದ ನಾಯಕರೇ ಸಂಘ ಪರಿವಾರದ ಅಸಲಿ ಮುಖವಾಡಗಳನ್ನು ಬಿಚ್ಚಿಡಬೇಕು. ಸತ್ಯ ಕಹಿ ಆಗಿರುತ್ತೆ, ಸ್ವಲ್ಪ ಅರಗಿಸಿಕೊಳ್ಳಬೇಕು” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...