6-7 ವರ್ಷದಲ್ಲಿ ಆರು ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದ ಮೋದಿ!

Date:

ಕಳೆದ 6-7 ವರ್ಷದಲ್ಲಿ ಆರು ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ನೆಟ್ಟಿಗರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಆರರಿಂದ ಏಳು ವರ್ಷಗಳಲ್ಲಿ 6 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅಂಕಿ ಅಂಶ ಹೇಳುತ್ತದೆ” ಎಂದರು.

ತನ್ನ ಹೇಳಿಕೆಯನ್ನು ಪಿಎಲ್‌ಎಫ್‌ಎಸ್‌ ಡೇಟಾವನ್ನು ಉಲ್ಲೇಖಿಸಿ ಸಮರ್ಥಿಸಿಕೊಂಡ ಪ್ರಧಾನಿ, ನಿರುದ್ಯೋಗ ಅರ್ಧದಷ್ಟು ಕಡಿಮೆಯಾಗಿದೆ ಎಂದು ವಾದಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...


“ಪಿಎಲ್‌ಎಫ್‌ಎಸ್ ಅಂಕಿಅಂಶಗಳು ಆರರಿಂದ ಏಳು ವರ್ಷಗಳಲ್ಲಿ 6 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಹೇಳುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಕೂಡ ಇದನ್ನೇ ಹೇಳಿದೆ. ನಾನು ಸರ್ಕಾರಿ ಉದ್ಯೋಗಗಳಿಗಾಗಿ ದೊಡ್ಡ ಅಭಿಯಾನವನ್ನು ನಡೆಸಿದ್ದೇನೆ ಮತ್ತು ಈ ಜನರು (ಪ್ರತಿಪಕ್ಷಗಳು ) ಉದ್ಯೋಗದ ಬಗ್ಗೆ ಕೂಗಾಡುತ್ತಾರೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ʼಈ ದಿನʼ ಸಮೀಕ್ಷೆ | ನಿರುದ್ಯೋಗವೇ ಮೂಲ ಸಮಸ್ಯೆ ಎಂದ ಉತ್ತರ ಕರ್ನಾಟಕದ ಮಂದಿ

ಎಸ್‌ಕೆಒಸಿಎಚ್‌ ಗ್ರೂಪ್ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, “ಕಳೆದ 10 ವರ್ಷಗಳಿಂದ ಪ್ರತಿ ವರ್ಷ 5 ಕೋಟಿ ವ್ಯಕ್ತಿ-ವರ್ಷಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳಿದೆ. ಇದು ಸಂಶೋಧನೆಯಿಂದ ಬೆಂಬಲಿತವಾಗಿದೆ. ಇದು ಕೇವಲ ಡೇಟಾ ಅಲ್ಲ ನೈಜತೆ” ಎಂದು ಸಮರ್ಥಿಸಿಕೊಂಡರು.

ನಿರುದ್ಯೋಗ ದರ ಏನು ಹೇಳುತ್ತೆ?

ಪೋರ್ಬ್ಸ್ ವರದಿ ಪ್ರಕಾರ ಜನವರಿ 2024ರಲ್ಲಿ ನಿರುದ್ಯೋಗ ದರವು ಕಳೆದ 16 ತಿಂಗಳುಗಳಲ್ಲಿ ಅತ್ಯಂತ ಕಡಿಮೆಯಾಗಿ ಶೇಕಡ 6.57ಕ್ಕೆ ತಲುಪಿದೆ. ಆದರೆ 20ರಿಂದ 30ರ ನಡುವಿನ ವಯಸ್ಸಿನ ಯುವಕರಲ್ಲಿ ನಿರುದ್ಯೋಗವು 2023ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಳವಾಗಿದೆ.

20 ಮತ್ತು 24 ವರ್ಷದ ನಡುವಿನ ಯುವಕರಲ್ಲಿ ನಿರುದ್ಯೋಗವು 44.49 ಶೇಕಡಕ್ಕೆ ಏರಿದೆ. 25 ಮತ್ತು 29ರ ನಡುವಿನ ವಯಸ್ಸಿನ ಯುವಕರಲ್ಲಿ ನಿರುದ್ಯೋಗವು 2023ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 14.33ಕ್ಕೆ ಏರಿಕೆಯಾಗಿದೆ.

ಯಾವುದೇ ದೇಶವಾದರೂ ಯುವಕರು ಆರ್ಥಿಕ ಬೆಳವಣಿಗೆಗೆ ಅಧಿಕ ಕೊಡುಗೆಯನ್ನು ನೀಡುವವರು. ಆದರೆ ಭಾರತದಲ್ಲಿ ಒಟ್ಟು ನಿರುದ್ಯೋಗಿಗಳಲ್ಲಿ ಶೇಕಡ 83ರಷ್ಟು ನಿರುದ್ಯೋಗಿಗಳು ಯುವಕರಾಗಿರುವುದು ಆಘಾತಕಾರಿ.

ಇದನ್ನು ಓದಿದ್ದೀರಾ?  ಮೋದಿ ಮೋಸ 2 | ಯುವಜನರಿಗೆ ಉದ್ಯೋಗ ಕೊಡುವಲ್ಲಿ ಮೋದಿ ವಿಫಲ; ಹೆಚ್ಚಿದ ನಿರುದ್ಯೋಗ!

ನಾವು ಕಳೆದ 15 ವರ್ಷಗಳ ನಿರುದ್ಯೋಗ ದರವನ್ನು ಗಮನಿಸಿದಾಗ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಕಾಣಬಹುದು. 2008ರಿಂದ 2019ರವರೆಗೂ ಶೇಕಡ 5.40 ಆಸುಪಾಸಿನಲ್ಲಿದ್ದ ನಿರುದ್ಯೋಗ ದರವು 2020ರ ವೇಳೆಗೆ ದಿಡೀರ್ ಆಗಿ ಶೇಕಡ 8ಕ್ಕೆ ಏರಿಕೆಯಾಗಿದೆ.

2021ರಲ್ಲಿ ಶೇಕಡ 5.98ಕ್ಕೆ ಇಳಿದಿದೆಯಾದರೂ ಅದಾದ ಬಳಿಕ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇಕಡ 5ರ ಆಸುಪಾಸಿಗೆ ತಲುಪಿಲ್ಲ. 2023ರಲ್ಲಿ ಶೇಕಡ 8ರಷ್ಟಿದ್ದ ನಿರುದ್ಯೋಗ ದರ 2024ರ ಜನವರಿ ವೇಳೆಗೆ ಶೇಕಡ 6.57 ಇದ್ದು, ಮೊದಲ ತ್ರೈಮಾಸಿಕದಲ್ಲಿ ಶೇಕಡ 6.7ರಷ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...