ಮೇಜಿನ ಮೇಲೆ ಹಣದ ಬಂಡಲ್‌ಗಳ ರಾಶಿ, ಅದರ ಹಿಂದೆ ಟಿಎಂಸಿ ನಾಯಕ ಕುಳಿತಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಸೃಷ್ಟಿಸಿದೆ.
ಈ ವಿಡಿಯೋದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬರಾಸತ್ I ಪಂಚಾಯತ್ ಸಮಿತಿಯ ಉಪಾಧ್ಯಕ್ಷ ಮೊಹಮ್ಮದ್ ಗಿಯಾಸುದ್ದೀನ್ ಮೊಂಡಲ್, ಸ್ಥಳೀಯ ಉದ್ಯಮಿ ರಕಿಬುಲ್ ಇಸ್ಲಾಂ ಜೊತೆಗೆ ಕುಳಿತಿರುವುದು ಕಾಣುತ್ತದೆ. ಜತೆಗೆ ಅವರ ಮೇಜಿನ ಮೇಲೆ ಹಣದ ಬಂಡಲ್‌ಗಳೂ ಇರುವುದು ವಿಡಿಯೋದಲ್ಲಿ ಕಾಣಬಹುದು. “ನಗದು ರೂಪದಲ್ಲಿ ಅಥವಾ ಇತರೆ ರೂಪದಲ್ಲಿಯೇ” ಎಂದು ಫೋನ್‌ನಲ್ಲಿ ಕೇಳುವ ಧ್ವನಿ ವಿಡಿಯೋದಲ್ಲಿದೆ.
ಇದನ್ನು ಓದಿದ್ದೀರಾ? ಮನೆಯಲ್ಲಿ ಹಣ ಪತ್ತೆ: ನ್ಯಾ. ವರ್ಮಾ ವಿಚಾರಣೆ ನಡೆಸಿದ್ದ 52 ಪ್ರಕರಣಗಳ ಮರುವಿಚಾರಣೆಗೆ ದೆಹಲಿ ಹೈಕೋರ್ಟ್ ನಿರ್ಧಾರ
ಈ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಕ್ರಮ ನಗದು ವಹಿವಾಟಿನ ಆರೋಪಗಳು ಕೇಳಿಬಂದಿವೆ. ಆದರೆ ಈ ವಿಡಿಯೋ 2022ರ ಹಿಂದಿನದ್ದು ಈ ವಹಿವಾಟಿನಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿಕೊಂಡು ಮೊಂಡಲ್ ಆರೋಪವನ್ನು ತಳ್ಳಿಹಾಕಿದ್ದಾರೆ. “ನಾನು ಅಲ್ಲಿ ಕುಳಿತಿದ್ದೆ. ಅದು ಹಳೆಯ ವಿಡಿಯೋ. ಕೆಲವು ಸ್ನೇಹಿತರು ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದರು. ನನಗೆ ತಿಳಿದಿರುವುದು ಇಷ್ಟೇ” ಎಂದು ವರದಿಗಾರರಿಗೆ ತಿಳಿಸಿದ್ದಾರೆ.
টাকার পাহাড়ের সামনে বসে গিয়াসউদ্দিন মণ্ডল,
— Tarunjyoti Tewari (@tjt4002) January 4, 2026
বারাসাত-১ পঞ্চায়েত সমিতির সহ-সভাপতি।
যদিও গিয়াসউদ্দিনের বক্তব্য ২০২২ সালের ভিডিও, জমি কেনা-বেচার Cash টাকা গোনা হচ্ছে।
কিন্তু দেশের আইন অনুযায়ী
এভাবে নগদে জমি লেনদেন অসম্ভব ও বেআইনি।
তাহলে প্রশ্ন একটাই—
এই টাকার উৎস কী?
তৃণমূল… pic.twitter.com/xuWUONj3GU
ವಿಡಿಯೋದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿರುವ ರಕೀಬುಲ್ ಇಸ್ಲಾಂ, “ಇದು ಅಕ್ರಮವಲ್ಲ. ನಗದು ಭೂ ವ್ಯವಹಾರಕ್ಕೆ ಸಂಬಂಧಿಸಿದ್ದು. ಇದು ಎರಡು ವರ್ಷಗಳ ಹಿಂದಿನ ವಿಡಿಯೋ. ನನಗೆ ನೆನಪಿರುವಂತೆ, ಭೂ ವ್ಯವಹಾರದಿಂದ ಬಂದ ಹಣವನ್ನು ಎಣಿಕೆ ಮಾಡಲಾಗುತ್ತಿದೆ. ಭೂಮಿಯಲ್ಲಿ ಹೂಡಿಕೆ ಮಾಡಲಾಗಿತ್ತು” ಎಂದು ಹೇಳಿದ್ದಾರೆ. ಹಾಗೆಯೇ ಭೂ ವ್ಯವಹಾರದಲ್ಲಿ ಮೊಂಡಲ್ ಪಾಲುದಾರರಾಗಿದ್ದರು ಮತ್ತು ತೋರಿಸಿರುವ ಆವರಣವು ಅವರ ಕಚೇರಿಯಲ್ಲ ಎಂದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ತಪ್ಪು ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಬರಾಸತ್ ಐ ಬ್ಲಾಕ್ ಟಿಎಂಸಿ ಸಂಚಾಲಕ ಮೊಹಮ್ಮದ್ ಇಶಾ ಸರ್ಕಾರ್ ತಿಳಿಸಿದ್ದಾರೆ. “ವಿಡಿಯೋದ ಸತ್ಯಾಸತ್ಯತೆ ಸಾಬೀತಾದರೆ ಮತ್ತು ಅಪರಾಧ ಸಾಬೀತಾದರೆ, ಕ್ರಮ ಕೈಗೊಳ್ಳಲಾಗುವುದು. ಇಷ್ಟು ದೊಡ್ಡ ಪ್ರಮಾಣದ ಹಣದ ಮೂಲದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತವೆ” ಎಂದಿದ್ದಾರೆ.
ಪಶ್ಚಿಮ ಬಂಗಾಳದ ಪ್ರಸ್ತುತ ವಿಧಾನಸಭೆಯ ಅವಧಿಯು 2026ರ ಮೇ 7ಕ್ಕೆ ಮುಕ್ತಾಯವಾಗಲಿದೆ. ಮುಂದಿನ ವಿಧಾನಸಭೆ ಚುನಾವಣೆಯು ಮಾರ್ಚ್-ಏಪ್ರಿಲ್ ಅವಧಿಯಲ್ಲಿ ನಡೆಯುವ ಸಾಧ್ಯತೆಯಿದೆ. ಈ ನಡುವೆ ಟಿಎಂಸಿ ನಾಯಕರ ಹಳೆಯ ವಿಡಿಯೋ ವೈರಲ್ ಆಗಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಈ ವಿಡಿಯೊವನ್ನು ಮುಂದಿಟ್ಟುಕೊಂಡು ಆಡಳಿತರೂಢ ಪಕ್ಷದ ಮೇಲೆ, ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದೆ.





