ರಾಜ್ಯ ಕಾಂಗ್ರೆಸ್ ಬಿಕ್ಕಟ್ಟು | ರಾಜಕೀಯ ಕಟ್ಟುವಿಕೆಯಲ್ಲಿ ರಾಹುಲ್ ಗಾಂಧಿ ಹೊಸ ತಂತ್ರ

Date:

ದೇಶದಲ್ಲಿ ಅಹಿಂದ ರಾಜಕಾರಣವನ್ನು ವಿಶಿಷ್ಟ ಹಾದಿಯಲ್ಲಿ ರಾಹುಲ್ ಗಾಂಧಿ ಅವರು ಕಟ್ಟುತ್ತಿದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಲು, ಫ್ಯಾಸಿಸ್ಟ್ ಆಡಳಿತದ ವಿರುದ್ಧ ಜನಾಂದೋಲನ ಕಟ್ಟುವ ಪ್ರಯತ್ನದಲ್ಲಿದ್ದಾರೆ. ಆದರೆ, ಇದೇ ಸಮಯದಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿವೆ. ಬಣ ರಾಜಕಾರಣ ಮತ್ತೆ ಮುನ್ನೆಲೆಯಲ್ಲಿದೆ. ಇದು, ತಾವು ಹೋಗುತ್ತಿರುವ ದಾರಿಗೆ ಮುಳುವಾಗಬಹುದಾ ಎಂಬ ಆತಂಕ ರಾಹುಲ್ ಗಾಂಧಿ ಅವರಲ್ಲಿದೆ.

ಹೌದು, ರಾಹುಲ್ ಗಾಂಧಿ ಅವರಿಗೆ ರಾಷ್ಟ್ರ ರಾಜಕಾರಣ ಎಷ್ಟು ಮುಖ್ಯವೋ, ಕರ್ನಾಟಕ ರಾಜಕಾರಣವೂ ಅಷ್ಟೇ ಮುಖ್ಯ. ಆರ್ ಎಸ್ ಎಸ್‌ನ ಕೋಮುವಾದಿ ದ್ವೇಷ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ರಾಜಿಯೇ ಇಲ್ಲ ಎನ್ನುತ್ತಿರುವ ರಾಹುಲ್ ಗಾಂಧಿ, ಸಂಘಪರಿವಾರದ ಆಲೋಚನೆಯುಳ್ಳವರು ಕಾಂಗ್ರೆಸ್ ತೊರೆಯಬಹುದು. ಅಂತಹವರನ್ನು ಹೊರಗೆ ಹಾಕಿ ಪಕ್ಷವನ್ನು ಸ್ವಚ್ಛಗೊಳಿಸಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಧಿಕಾರ ಲಾಲಸೆ, ಹೊಂದಾಣಿಕೆ ರಾಜಕಾರಣಕ್ಕಿಂತ ಬದ್ಧತೆ ಮುಖ್ಯವೆಂದು ಪ್ರತಿಪಾದಿಸಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ.

ಇತ್ತೀಚೆಗೆ, ನಡೆದ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ರಾಹುಲ್ ಗಾಂಧಿ ಅವರಿಗೆ ನಿರಾಶೆಯಾಗದೆ ಇರಲಾರದು. ಯಾಕೆಂದರೆ, ವೊಟ್ ಚೋರಿ, ಭ್ರಷ್ಟಾಚಾರ, ನಿರುದ್ಯೋಗ, ಆಡಳಿತ ವೈಫಲ್ಯಗಳ ಕುರಿತು ರಾಜ್ಯದ ಎದುರು ಎಳೆಎಳೆಯಾಗಿ ಸತ್ಯಾಂಶಗಳನ್ನು ತೆರೆದಿಟ್ಟರೂ, ಬಿಹಾರದ ಜನರು ಮಹಾಘಟಬಂಧನ್‌ಗೆ ಮತ ಕೊಡಲಿಲ್ಲ. ಆಡಳಿತ ಸಂಬಂಧಿತ ಕೆಲಸಗಳು, ಯೋಜನೆಗಳು ಬಿಹಾರದಲ್ಲಿ ವರ್ಕ್ ಆಗಲಿಲ್ಲ. ಇದು ಈಗ ರಾಹುಲ್ ಗಾಂಧಿಗೆ ಮನವರಿಕೆ ಆಗಿದೆ. ಆದರೂ, ಅವರು ಈ ವಿಚಾರಗಳನ್ನು ಕೈಬಿಟ್ಟಿಲ್ಲ. ಹೋರಾಟ ಇಂದಲ್ಲ ನಾಳೆ ಫಲ ನೀಡುತ್ತದೆ ಎಂಬ ಅಚಲ ನಂಬಿಕೆ ರಾಹುಲ್ ಗಾಂಧಿ ಅವರಲ್ಲಿದೆ. ಚುನಾವಣಾ ಆಯೋಗ ಮತ್ತು ಬಿಜೆಪಿಯ ಕಳ್ಳಾಟಗಳು ಜನರಿಗೆ ಅರ್ಥವಾಗುವ ಸಮಯ ಬರುತ್ತದೆ ಎಂದು ನಂಬಿದ್ದಾರೆ. ಹೀಗಾಗಿ, ತಾಳ್ಮೆಯಿಂದ ರಾಹುಲ್ ಗಾಂಧಿ ಅವರು ಕಾಯುತ್ತಿದ್ದಾರೆ ಹೊರತು, ಅಧಿಕಾರ ಈಗಲೇ ಹಿಡಿಯಬೇಕೆಂಬ ಧಾವಂತವಂತೂ ರಾಹುಲ್ ಗಾಂಧಿ ಅವರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸದ್ಯ, ಬಿಜೆಪಿಯಲ್ಲಿ ಮೋದಿ ಅವರು ಗುಜರಾತ್ ಮಾಡೆಲ್, ಹಿಂದು ರಾಜಕಾರಣದ ಪ್ರಚಾರರೊಂದಿಗೆ ಮುನ್ನೆಲೆಗೆ ಬಂದರು. ಅದರಿಂದಲೇ ಪ್ರಧಾನಿಯೂ ಆದರು. ಅವರನ್ನು ಮಣಿಸಿ, ತಮ್ಮ ಪಕ್ಷವನ್ನು ಅಧಿಕಾರಕ್ಕೆ ಕೊಂಡೊಯ್ಯಲು ರಾಹುಲ್ ಗಾಂಧಿ ಅವರು ಪ್ರಸ್ತುತ ರಾಜಕಾರಣದಲ್ಲಿ ಏನು ಅವಶ್ಯಕ ಎಂಬ ವಿಚಾರವಾಗಿ ಚಿಂತನೆ ನಡೆಸಿದ್ದಾರೆ. ಸಂವಿಧಾನವನ್ನು ಮುನ್ನೆಲೆಗೆ ತಂದಿದ್ದಾರೆ.

ಸಂವಿಧಾನದ ಆಶಯವನ್ನು ಮುಂದೆ ಮಾಡಿ, ಸಂವಿಧಾನದ ಅಡಿಯಲ್ಲಿ ಪ್ರಭುತ್ವ, ಸರ್ಕಾರಗಳು ಜನಪರವಾಗಿ ಕಾರ್ಯನಿರ್ವಹಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಸಂವಿಧಾನದ ಹೆಸರಿನಲ್ಲಿಯೇ ಅಹಿಂದ ಸಮುದಾಯಗಳನ್ನು ಒಗ್ಗೂಡಿಸಿ, ಅಹಿಂದ ರಾಜಕಾರಣ ಮಾಡಬೇಕೆಂದು ನೋಡುತ್ತಿದ್ದಾರೆ. ಆದರೆ, ಇದು ಯಶಸ್ವಿಯಾಗುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ, ಅಹಿಂದ ವರ್ಗ ನಮ್ಮ ದೇಶದಲ್ಲಿ ಬೃಹತ್ ಸಂಖ್ಯೆಯಲ್ಲಿದೆ. ಕೆಲವು ಪ್ರಬಲ ಜಾತಿಗಳಲ್ಲದೆ, ಬಹುತೇಕ ಅಹಿಂದ ಸಮುದಾಯಗಳು ಬಿಡಿಬಿಡಿಯಾಗಿವೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ದೂರ – ದೂರ ಉಳಿದಿವೆ. ಒಟ್ಟಾರೆಯಾಗಿ, ಹೇಳಬೇಕೆಂದರೆ ದೇಶದಲ್ಲಿ ಅಹಿಂದ ರಾಜಕಾರಣವನ್ನು ಕಟ್ಟುವುದು ಸುಲಭದ ಮಾತಲ್ಲ. ಬಿಡಿಬಿಡಿಯಾಗಿ ಚದುರಿ ಹೋಗಿರುವ ಆ ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಲು ಕನಿಷ್ಠ 10 ರಿಂದ 15 ವರ್ಷಗಳ ನಿರಂತರ ಶ್ರಮ ಬೇಕಾಗಬಹುದು. ಇದಕ್ಕೆಲ್ಲ ಬುನಾದಿಯಾಗಿ ಅಹಿಂದ ರಾಜಕಾರಣಿಗಳನ್ನು ರಾಹುಲ್ ತಮ್ಮೊಂದಿಗೆ ಭದ್ರವಾಗಿ ಉಳಿಸಿಕೊಳ್ಳಬೇಕಾಗುತ್ತದೆ.

ಈಗ ಕರ್ನಾಟಕದಲ್ಲಿ ಅಹಿಂದ ರಾಜಕಾರಣಿಯಾಗಿ ಮುನ್ನೆಲೆಯಲ್ಲಿ ಇರುವ ಏಕೈಕ ವ್ಯಕ್ತಿ ಎಂದರೆ ಅದು ಸಿದ್ಧರಾಮಯ್ಯ ಅವರು ಮಾತ್ರ. ಅಹಿಂದ ಬಿಟ್ಟರೇ ಕಾಂಗ್ರೆಸ್ ಇರಲ್ಲ. ಇದು ಗೊತ್ತಿರುವ ಕಾರಣಕ್ಕಾಗಿಯೇ ಡಿ ಕೆ ಶಿವಕುಮಾರ್ ಅವರು ಸೈಲೆಂಟ್ ಆಗಿದ್ದಾರೆ.

dk shivakumar siddaramaiah rahul gandhi 1684302150

ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿಸಲು ಬಿಜೆಪಿ ನಿರಂತರವಾಗಿ ಯತ್ನಿಸುತ್ತಲೇ ಇದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಎನ್ನುವುದೇ ಇಲ್ಲ, ಸಿದ್ಧರಾಮಯ್ಯ ಅವರೇ ಹೈಕಮಾಂಡ್ ಎಂದು ಭಿನ್ನಮತ ಸೃಷ್ಟಿಸಲು ಹವಣಿಸಿತ್ತು. ಈಗಲೂ ಹವಣಿಸುತ್ತಿದೆ. ಇನ್ನು, ಖರ್ಗೆ ಅವರ ಹೇಳಿಕೆಯನ್ನು ತಮಗೆ ಬೇಕಾದಂತೆ ಆರ್ಥೈಸಿ, ಕಾಂಗ್ರೆಸ್ ನಾಯಕತ್ವದ ಕುರಿತು ಚರ್ಚೆಯನ್ನು ಸೃಷ್ಟಿಸಿತ್ತು. ಜೊತೆಗೆ, ಈಗ ಚಳಿಗಾಲದ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕಸರತ್ತಿಗೂ ಮುಂದಾಗಿದೆ. ಇದೆಲ್ಲವೂ, ಕಾಂಗ್ರೆಸ್‌ಗೆ ಹೊಡೆತ ಕೊಡಲಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ರಾಹುಲ್ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ, ಎರಡು ಬ್ರೇಕ್ ಫಾಸ್ಟ್ ಮೀಟಿಂಗ್‌ಗಳೂ ನಡೆದಿವೆ.

ಸದ್ಯ ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್‌ಗೆ ಡಿ ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಇಬ್ಬರೂ ಅತ್ಯವಶ್ಯಕ ನಾಯಕರು. ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಸಿದ್ಧರಾಮಯ್ಯ ಏನು? ಅವರ ಶಕ್ತಿ ಏನು ಎಂಬುದು ರುಜುವಾತಾಗಿತ್ತು. ಕಾಂಗ್ರೆಸ್‌ನ ಶಕ್ತಿ ಸಿದ್ದರಾಮಯ್ಯ ಆಗಿದ್ದಾರೆ. ಅಂತೆಯೇ, ಡಿ ಕೆ ಶಿವಕುಮಾರ್ ಅವರು ಅಧ್ಯಕ್ಷಗಿರಿ ಹಿಡಿದಾಗಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಇಬ್ಬರೂ ಪಕ್ಷದಲ್ಲಿ ದೃಢವಾಗಿದ್ದರೆ, ಪಕ್ಷವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ. ಇಲ್ಲವಾದಲ್ಲಿ, ಪಕ್ಷವು ಭಾರೀ ಹಿನ್ನಡೆ ಅನುಭವಿಸುತ್ತದೆ ಎಂಬುದು ರಾಹುಲ್ ಗಾಂಧಿ ಅವರ ಅರಿವಿನಲ್ಲಿದೆ. ಹೀಗಾಗಿಯೇ, ಇಬ್ಬರನ್ನು ತಾಳ್ಮೆಯಿಂದ ಸಂಭಾಳಿಸಲು ಹೈಕಮಾಂಡ್ ಯತ್ನಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ಅಯೋಧ್ಯೆ|ಕಾಗದದಲ್ಲೇ ಉಳಿದಿದೆ ಬದಲಿ’ಬಾಬರಿ’ಮಸೀದಿ ನಿರ್ಮಾಣ

ಯಾರು ಹೈಕಮಾಂಡ್ ಮಾತನ್ನು ನಿರ್ಲಕ್ಷಿಸಿ ನಡೆಯುತ್ತಿದ್ದರೋ ಅವರ ಬಾಯಿಯಿಂದಲೇ “ಹೈಕಮಾಂಡ್ ಮುಖ್ಯ, ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಹೇಳಿಸುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ. ಈ ಯಶಸ್ಸಿನ ಹಿಂದೆ ನಾಯಕತ್ವ ಬದಲಾವಣೆಯಲ್ಲಿ ಮೂರನೆಯ ಹೆಸರು ಇದ್ದದ್ದು ಕಾರಣವೆಂದು ಹೇಳಲಾಗುತ್ತಿದೆ.

ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ, ಆಡಳಿತ ಚುಕ್ಕಾಣಿ ಸಿದ್ದರಾಮಯ್ಯ ಅವರ ಕೈಯಲ್ಲಿರಬೇಕು ಎಂಬುದು ರಾಹುಲ್ ಗಾಂಧಿ ಅವರ ಇರಾದೆ. ಯಾಕೆಂದರೆ, ಸಿದ್ದರಾಮಯ್ಯ ಅಹಿಂದ ನಾಯಕ, ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುವವರು, ಜನರ ಅಳಲನ್ನು ಬಲ್ಲವರು. ಆದರೆ, ಡಿಕೆ ಶಿವಕುಮಾರ್ ಕಾರ್ಪೋರೇಟ್ ರೀತಿಯ ರಾಜಕಾರಣಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಡಿಕೆಶಿ ಬಿಟ್ಟು ಬೇರೆ ಯಾರಿಗೂ ಕೊಟ್ಟಿಲ್ಲ.

2026ರ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳು ಪ್ರಾರಂಭವಾಗುತ್ತದೆ. ಬಹುಶಃ, ಈಗ ನಾಯಕತ್ವ ಬದಲಾವಣೆ ಆಗದಿದ್ದರೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು. ಪಕ್ಷವನ್ನು ಗೆಲ್ಲಿಸಿ, ಮುಖ್ಯಮಂತ್ರಿಯಾಗುವಂತೆ ಕಾಂಗ್ರೆಸ್ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರಿಗೆ ಸೂಚಿಸಬಹುದು. ಸದ್ಯಕ್ಕೆ, ರಾಜ್ಯ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟನ್ನು ಶಮನ ಮಾಡುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ.

ತಮ್ಮ ಪಕ್ಷವನ್ನು ಉಳಿಸಿ ಬೆಳೆಸುವಲ್ಲಿ ರಾಹುಲ್ ಗಾಂಧಿ ಅವರು ಉತ್ತಮ ನಾಯಕನ ಹಾದಿಯಲ್ಲಿದ್ದಾರೆ. ಆದರೆ, ಬಿಜೆಪಿ ತಮ್ಮದೇ ಪಕ್ಷದವರು ಹಾದಿ ಬೀದಿಯಲ್ಲಿ ರಂಪಾಟ ಮಾಡಿದಾಗ ಬಿಜೆಪಿ ಹೈಕಮಾಂಡ್ ಕರೆದು ಮಾತಾಡುವ ಪ್ರಯತ್ನ ಮಾಡಲಿಲ್ಲ. ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷನ ತೇಜೋವಧೆಯನ್ನು ಬೀದಿಯಲ್ಲಿ ನಿಂತು ಮಾಡುವಾಗ ಬಿಜೆಪಿ ನೋಟಿಸ್ ನೀಡುತ್ತ ಕುಳಿತಿತ್ತು. ದೌರ್ಬಲ್ಯದ ನಡುವೆಯೂ ಮನುಷ್ಯನನ್ನು ಗೌರವಿಸಬೇಕು ಎಂಬುದನ್ನು ಬಿಜೆಪಿ ಮರೆತಿದೆ. ಆದರೆ, ಕಾಂಗ್ರೆಸ್ ಸಭ್ಯತೆಯಿಂದ ನಡೆಯುತ್ತಿದೆ ಎಂಬುದಕ್ಕೆ ಸದ್ಯ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿಯಾಗಿದೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...