ಹೊಟ್ಟೆಕಿಚ್ಚು ಗುಲಾಮರಾದವರ ದೇಹದ ಭಾಗ: ಸ್ವಾಮಿ ವಿವೇಕಾನಂದ

Date:

ಸ್ವಾಮಿ ವಿವೇಕಾನಂದ... ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿದ್ದರು. ಅವರ ಜನ್ಮದಿನವಿಂದು.

ಈ ಮಹಾನ್ ಇತಿಹಾಸದ, ಬೌದ್ಧಿಕತೆಯ ಪರಂಪರೆಯ ದೇಶ ಯಾಕೆ ಇವತ್ತು ಚಿಂದಿಯಾಗಿದೆ? ಈ ಪ್ರಶ್ನೆಗೆ ನನ್ನ ಉತ್ತರ, ಅಸೂಯೆ. ಬೇರೆಯವರ ನೆಮ್ಮದಿ ಕಂಡರೆ ಹೊಟ್ಟೆಕಿಚ್ಚಿನಿಂದ ಇಷ್ಟು ಉರಿದುಬೀಳುವ ಜನರನ್ನು ನಾನು ಯಾವ ದೇಶದಲ್ಲೂ ನೋಡಿಲ್ಲ…

ನಮ್ಮ ಜನ ಒಟ್ಟಿಗೇ ಸೇರಿ ಐದೇ ಐದು ನಿಮಿಷ ವಿಶ್ವಾಸದಿಂದ ಇರುವುದಿಲ್ಲ. ಅಸೂಯೆಯಿಂದ ಬಡಿದಾಡತೊಡಗುತ್ತಾರೆ. ಅವರ ಪಕ್ಷ ಅಥವಾ ಸಂಸ್ಥೆ ಮುಗ್ಗರಿಸತೊಡಗುತ್ತದೆ… ಇಲ್ಲಿಯ ಮೌಢ್ಯ, ನೀಚತನ, ಜಾತೀಯತೆ, ಮಂಗಾಟಗಳು, ಹೊಟ್ಟೆಕಿಚ್ಚು ಮತ್ತು ಇವೆಲ್ಲವುಗಳಿಗೆ ಕಾರಣವಾದ ಗುಲಾಮಗಿರಿಯನ್ನು ಮೆಟ್ಟಿ ಜನಸಮೂಹ ಬೆಳೆಯಬೇಕಾಗಿದೆ.

ಹೊಟ್ಟೆಕಿಚ್ಚು ಗುಲಾಮರಾದವರ ದೇಹದ ಭಾಗ. ಈ ಗುಲಾಮಗಿರಿ ಅಸೂಯೆಯಾಗಿ ಮುಂದುವರಿಯುತ್ತದೆ. ನೀನು ಭಾರತದಲ್ಲಿ ಸ್ವಲ್ಪ ಮೇಲೆ ಬರಲು ಯತ್ನಿಸು, ಗೊತ್ತಾಗುತ್ತದೆ. ನನ್ನ ಬಗ್ಗೆ ಭಾರತದಲ್ಲಿ ಒಂದು ಹೊಗಳಿಕೆಯ ಸಾಲು ಪ್ರಕಟವಾಗಲಿ; ಎಲ್ಲರೂ ನನ್ನ ಶತ್ರುಗಳಾಗುತ್ತಾರೆ, ಯಾಕೆ? ಅವರ ಮಟ್ಟ ಮೀರುವವನನ್ನು ಅವರು ಸಹಿಸುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೊಂದು ಸತ್ತುಹೋಗಿರುವ ದೇಶ. ಇಲ್ಲಿ ಏನೇನೂ ಚಲಿಸುತ್ತಿಲ್ಲ. ಧರ್ಮ ಬೋಧಿಸುವ ಸನ್ಯಾಸಿಗಳ ಸೋಗಿನ ಸಾವಿರಾರು ಜನರನ್ನುಳ್ಳ ಈ ದೇಶ ಮೃತ ಅವಸ್ಥೆಯಲ್ಲಿದೆ. ಈ ಸನ್ಯಾಸಿಗಳು, ಬಾಬಾಗಳಿಗೆ ಬದಲು ಲಕ್ಷಾಂತರ ಜನ ಅಧ್ಯಾಪಕರು ಇಡೀ ದೇಶವನ್ನು ಎಚ್ಚರಿಸಬೇಕಾಗಿದೆ, ಶಾಕ್ ಕೊಟ್ಟು ಜೀವ ತರಬೇಕಾಗಿದೆ.

ಸ್ವಾಮಿ ವಿವೇಕಾನಂದ

ಕೃಪೆ: ಪಿ. ಲಂಕೇಶ್ ‘ಟೀಕೆ-ಟಿಪ್ಪಣಿ’ (ಸಂಪುಟ-2, ಪುಟ: 152-154, 1998)

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...