ಮರೆಯಬಾರದ ದಲಿತದನಿ ‘ಪಂಚಮ’ಕ್ಕೆ 50 ವರ್ಷ

Date:

ಬದ್ಧತೆಯುಳ್ಳ ಪತ್ರಿಕೆಯೊಂದು ಹೇಗೆ ಸಾಮಾಜಿಕ ಬದಲಾವಣೆಯ ಎಚ್ಚರದ ಶಕ್ತಿಯಾಗಬಲ್ಲದು ಹಾಗೂ ದನಿ ಇಲ್ಲದವರಿಗೆ ದನಿಯಾಗಬಲ್ಲದು ಎಂಬುದಕ್ಕೆ 'ಪಂಚಮ' ಪತ್ರಿಕೆಯು ಇಂದಿಗೂ ಮಾದರಿಯಂತಿದೆ.

ಎಪ್ಪತ್ತರ ದಶಕವು ಕೇವಲ ರಾಜಕೀಯ ಪಲ್ಲಟಗಳಿಗೆ ಮಾತ್ರವಲ್ಲ, ತಳಸಮುದಾಯಗಳ ಜಾಗೃತಿಗೂ ಸಾಕ್ಷಿಯಾದ ಕಾಲಘಟ್ಟ. ಭೂಸುಧಾರಣಾ ನೀತಿಗಳು, ಬೂಸಾ ಚಳವಳಿ, ರಾಷ್ಟ್ರಮಟ್ಟದಲ್ಲಿ ತುರ್ತುಪರಿಸ್ಥಿತಿ ಹಾಗೂ ಮೀಸಲಾತಿ ರಾಜಕಾರಣದಂತಹ ವಿದ್ಯಮಾನಗಳು ಸೃಷ್ಟಿಸಿದ ಸಾಮಾಜಿಕ ಸಂಘರ್ಷದ ವಾತಾವರಣದಲ್ಲಿ ದಲಿತ ಸಮುದಾಯವು ತನ್ನ ಅಸ್ಮಿತೆಯನ್ನು ಮತ್ತು ಹಕ್ಕುಗಳನ್ನು ಪ್ರತಿಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿತ್ತು. ಈ ಐತಿಹಾಸಿಕ ಸಂದರ್ಭದಲ್ಲಿ ದಲಿತ ಚಳವಳಿಯ ಸೈದ್ಧಾಂತಿಕ ದನಿಯಾಗಿ, ಸಾಂಸ್ಕೃತಿಕ ಪ್ರಜ್ಞೆಯಾಗಿ ‘ಪಂಚಮ’ ಪತ್ರಿಕೆಯು ಆರಂಭವಾಯಿತು. ‘ಶೋಷಿತ’ ಹೆಸರಿನಲ್ಲಿ ಖಾಸಗಿ ಪ್ರಸಾರಕ್ಕಾಗಿ ಆರಂಭಗೊಂಡ ‘ಪಂಚಮ’ ಪತ್ರಿಕೆಗೆ 2025ರ ಡಿಸೆಂಬರ್ 6ಕ್ಕೆ 50 ವರ್ಷ.

ದಲಿತ ಚಳವಳಿಯು ತನ್ನ ಸೈದ್ಧಾಂತಿಕ ನೆಲೆಗಳನ್ನು ಕಂಡುಕೊಳ್ಳುತ್ತಾ, ಸಾಂಸ್ಥಿಕ ರೂಪವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಲಿತರ ನೋವು, ಆಕ್ರೋಶ, ಪ್ರತಿರೋಧ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಒಂದು ಸಮರ್ಥ ವೇದಿಕೆಯಾಗಿದ್ದು ‘ಪಂಚಮ’ ಪತ್ರಿಕೆ. ‘ಪಂಚಮ’ ಕೇವಲ ಒಂದು ಪತ್ರಿಕೆಯಾಗಿ ಉಳಿಯದೆ, ದಲಿತ ಚಳವಳಿಯ ಮುಖವಾಣಿಯಾಗಿ, ದಲಿತ ಸಾಹಿತ್ಯದ ದಿಕ್ಕನ್ನೇ ನಿರ್ಧರಿಸಿದ ಪ್ರಭಾವಿ ಶಕ್ತಿಯಾಗಿ ಚಾರಿತ್ರಿಕ ಮಹತ್ವವನ್ನು ಪಡೆದಿದೆ. 1975ರಿಂದ 1990ರವರೆಗೆ 15 ವರ್ಷಗಳ ಕಾಲ ಪ್ರಕಟಗೊಂಡ ‘ಪಂಚಮ’ ಪತ್ರಿಕೆಯು ಮಧ್ಯೆ ಮಧ್ಯೆ ಹಲವು ಬಾರಿ ಸಂಪನ್ಮೂಲದ ಕೊರತೆ ಸೇರಿದಂತೆ ಹಲವು ಕಾರಣಕ್ಕೆ ನಿಂತಿದೆ, ಹಲವು ಬಾರಿ ಸಂಪಾದಕರು, ಪ್ರಕಾಶಕರು ಬದಲಾಗಿದ್ದಾರೆ. ಆದರೆ, ಈ 15 ವರ್ಷಗಳಲ್ಲಿ ‘ಪಂಚಮ’ ಉಂಟು ಮಾಡಿರುವ ಪ್ರಭಾವ ಮಹತ್ವವಾದುದು.

ಇದನ್ನು ಓದಿದ್ದೀರಾ?: ದ್ವೇಷಭಾಷಣ ನಿಷೇಧ ಕಾನೂನು: ಟೀಕೆ-ವಿಮರ್ಶೆಗಳ ಬಾಯಿ ಬಡಿಯುವ ದುಷ್ಟ ಅಸ್ತ್ರವಾಗದಿರಲಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕನ್ನಡ ದಲಿತ ಸಾಹಿತ್ಯದ ಬೇರುಗಳನ್ನು ‘ಪಂಚಮ’ ಪತ್ರಿಕೆಯ ಮೂಲಕ ಗುರುತಿಸಬಹುದಾಗಿದೆ. ಸಾಹಿತಿಗಳಾದ ದೇವನೂರ ಮಹಾದೇವ, ಡಾ.ಸಿದ್ಧಲಿಂಗಯ್ಯ, ಎಚ್.ಗೋವಿಂದಯ್ಯ, ಕೆ.ಬಿ. ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಮುಂತಾದವರ ಬರವಣಿಗೆಗೆ ‘ಪಂಚಮ’ ಒಂದು ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ಮತ್ತು ರಾಜಕೀಯ ಪ್ರಜ್ಞೆಯನ್ನು ರೂಪಿಸಿತು. ದಲಿತರ ಮೇಲಿನ ದೌರ್ಜನ್ಯಗಳನ್ನು ವರದಿ ಮಾಡುವುದರಿಂದ ಹಿಡಿದು, ದಲಿತ ಸಂವೇದನೆಯ ಕಥೆ, ಕವಿತೆ, ಲೇಖನಗಳನ್ನು ಪ್ರಕಟಿಸುವ ಮೂಲಕ ‘ಪಂಚಮ’ವು ದಲಿತ ಸಾಹಿತ್ಯಕ್ಕೆ ಒಂದು ಸ್ಪಷ್ಟವಾದ ಹೆಗ್ಗುರುತನ್ನು ನೀಡಿತು.

4 1 300x172 1

‘ಪಂಚಮ’ ಪತ್ರಿಕೆಯು ದಲಿತರ ಮೇಲಿನ ದೌರ್ಜನ್ಯಗಳನ್ನು ದಾಖಲಿಸುವುದರ ಜೊತೆಗೆ, ದಲಿತ ಸಮುದಾಯದ ಒಳಗಿನ ಚಿಂತನೆಗಳಿಗೆ, ಸಾಂಸ್ಕೃತಿಕ ಸಂವಾದಗಳಿಗೆ ಹಾಗೂ ಹೊಸ ಸಾಹಿತಿಗಳಿಗೆ ವೇದಿಕೆಯಾಯಿತು. ಕಥೆ, ಕವನ, ಲೇಖನ, ವಿಮರ್ಶೆ ಮತ್ತು ಹೋರಾಟದ ಹಾಡುಗಳ ಮೂಲಕ ದಲಿತ ಪ್ರಜ್ಞೆಯನ್ನು ರೂಪಿಸುವಲ್ಲಿ ‘ಪಂಚಮ’ದ ಕೊಡುಗೆ ಅನನ್ಯವಾದುದು. ದೇವನೂರ ಮಹಾದೇವ, ಡಾ.ಸಿದ್ಧಲಿಂಗಯ್ಯ, ಎಚ್.ಗೋವಿಂದಯ್ಯ, ಇಂದೂಧರ ಹೊನ್ನಾಪುರ, ಕೋಟಿಗಾನಹಳ್ಳಿ ರಾಮಯ್ಯ ಅವರಂತಹ ಲೇಖಕರು, ಚಿಂತಕರು ಈ ಪತ್ರಿಕೆಯೊಂದಿಗಿದ್ದರು.

‘ಪಂಚಮ’ ಕೇವಲ ಸುದ್ದಿ ಪತ್ರಿಕೆಯಾಗಿರಲಿಲ್ಲ, ಅದೊಂದು ಸಾಂಸ್ಕೃತಿಕ ಆಂದೋಲನವಾಗಿತ್ತು. ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಸಾಹಿತ್ಯ ನಿಯತಕಾಲಿಕೆಗಳು ಕಡೆಗಣಿಸುತ್ತಿದ್ದ ಅಥವಾ ಅನುಕಂಪದಿಂದ ಮಾತ್ರ ನೋಡುತ್ತಿದ್ದ ದಲಿತರ ಬದುಕಿನ ಸಂಕಟಕ್ಕೆ ‘ಪಂಚಮ’ ತಾತ್ವಿಕ ಸ್ವರೂಪ ನೀಡಿತು. ದಲಿತರ ಸಿಟ್ಟು, ಪ್ರತಿರೋಧಗಳು ಸೃಜನಶೀಲ ಅಭಿವ್ಯಕ್ತಿಯಾಗಲು ಹಾಗೂ ಯಾವುದೇ ಮುಲಾಜಿಲ್ಲದೆ ತಮ್ಮದೇ ಆದ ಭಾಷೆಯಲ್ಲಿ ತಮ್ಮ ಅನುಭವಗಳನ್ನು ದಾಖಲಿಸಲು ‘ಪಂಚಮ’ ನೆರವಾಯಿತು. ಹಲವು ದಲಿತ ಲೇಖಕರ ಬರಹಗಳು ‘ಪಂಚಮ’ದಲ್ಲಿ ಕೇವಲ ಪ್ರಕಟವಾಗಲಿಲ್ಲ, ಬದಲಾಗಿ ಹೊಸ ‘ದಲಿತ ಸೌಂದರ್ಯ ಪ್ರಜ್ಞೆ’ಯನ್ನು (Dalit Aesthetics) ರೂಪಿಸಿದವು. ‘ಅನುಭವ’ವೇ ಜ್ಞಾನದ ಮೂಲ ಮತ್ತು ಸೃಜನಶೀಲತೆಯ ಮಾನದಂಡ ಎಂಬ ತಾತ್ವಿಕತೆಯನ್ನು ‘ಪಂಚಮ’ ಪತ್ರಿಕೆಯು ಎತ್ತಿಹಿಡಿಯಿತು.

”1975ರ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ವಿವಿಧ ದಲಿತ ಗುಂಪುಗಳು ಒಗ್ಗೂಡಿಸುವ ಪ್ರಯತ್ನವಾಗಿ ಮೈಸೂರಿನ ಸಿದ್ಧಾರ್ಥ ಹಾಸ್ಟೆಲ್‌ನಲ್ಲಿ ಸಭೆಯೊಂದು ನಡೆಯಿತು. ಪರಸ್ಪರರಲ್ಲಿ ಒಮ್ಮತ ಮೂಡದ ಕಾರಣ ಸಭೆ ಯಶಸ್ವಿಯಾಗಲಿಲ್ಲ. ಇದರಿಂದ ನೊಂದ ನಾವುಗಳು ದಲಿತರಿಗಾಗಿ ಪತ್ರಿಕೆಯೊಂದನ್ನು ಆರಂಭ ಮಾಡಬೇಕೆಂದು ನಿರ್ಧರಿಸಿದೆವು. ಆ ಪ್ರಯತ್ನದ ಭಾಗವಾಗಿ 1975ರ ಡಿಸೆಂಬರ್ 6ನೇ ತಾರೀಖು (ಬಾಬಾ ಸಾಹೇಬರ ಪರಿನಿಬ್ಬಾಣ ದಿನ) ‘ಶೋಷಿತ’ ಎಂಬ ಪತ್ರಿಕೆಯನ್ನು ಶುರು ಮಾಡಿದೆವು” ಎಂದು ‘ಪಂಚಮ’ ಪತ್ರಿಕೆಯ ಆರಂಭದ ದಿನಗಳನ್ನು ‘ಸಂವಾದ’ ಮಾಸಿಕದ 2025ರ ಏಪ್ರಿಲ್ ತಿಂಗಳ ಸಂಚಿಕೆಯಲ್ಲಿ ನೆನೆದಿದ್ದಾರೆ ‘ಪಂಚಮ’ ಪತ್ರಿಕೆಯ ಮೊದಲ ಸಂಪಾದಕರಾಗಿದ್ದ ಇಂದೂಧರ ಹೊನ್ನಾಪುರ.

”ಕೋಟಿಯವರು (ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿ) ಕನ್ನೇಗೌಡನ ಕೊಪ್ಪಲಿನಲ್ಲಿ ಸಣ್ಣ ಪ್ರಿಂಟಿಂಗ್ ಯಂತ್ರವನ್ನು ಇಟ್ಟುಕೊಂಡಿದ್ದರು. ನಾವು ‘ಆಂದೋಲನ’ದಲ್ಲಿ ಕೆಲಸ ಮಾಡುತ್ತಿದ್ದುದರಿಂದ ನಮಗೆ ಅಚ್ಚುಮೊಳೆ ಜೋಡಿಸುವುದು ಗೊತ್ತಿತ್ತು. ಪ್ರಿಂಟ್ ಮಾಡುವುದು ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಯೋಗಕ್ಕೆ ಮುಂದಾದೆವು. ದೇವನೂರ ಮಹಾದೇವ ಅವರು ಮಾರ್ಗದರ್ಶಕರಾಗಿದ್ದರು. ನಾನು ಸಂಪಾದಕನಾದೆ. ಗೋವಿಂದಯ್ಯ ಪ್ರಕಾಶಕರಾದರು. ಶಿವಾಜಿ ಗಣೇಶನ್, ರಾಮದೇವ ರಾಕೆ, ದೇವನೂರು ಶಿವಮಲ್ಲು ಸಂಪಾದಕೀಯ ಬಳಗದಲ್ಲಿ ಜೊತೆಗೆ ನಿಂತರು. ನಾವು ಐದೂ ಜನ ಪತ್ರಿಕೆಯನ್ನು ನಿರ್ವಹಣೆ ಮಾಡುತ್ತಿದ್ದೆವು. ದಲಿತರ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ವರದಿ ಮಾಡುತ್ತಿದ್ದೆವು… ‘ಶೋಷಿತ’ ಹೆಸರಿಗೆ ಕೇಂದ್ರ ಸರ್ಕಾರದಿಂದ ನೋಂದಣಿ ಸಿಗಲಿಲ್ಲ. ಹೀಗಾಗಿ ಶೋಷಿತ ಬದಲಾಗಿ ‘ಪಂಚಮ’ ಎಂಬ ಹೆಸರು ಕಳುಹಿಸಿದೆವು. ಅದಕ್ಕೆ ಅನುಮತಿ ದೊರೆಯಿತು. 1976ರ ಮಾರ್ಚ್‌ 7ನೇ ತಾರೀಖು ‘ಪಂಚಮ’ ಆರಂಭವಾಯಿತು. ಅದಕ್ಕೂ ನಮ್ಮ ಈ ಐದು ಜನರ ಟೀಂ ಮುಂದುವರೆಯಿತು” ಎಂದು ಇಂದೂಧರ ಹೊನ್ನಾಪುರ ‘ಪಂಚಮ’ದ ದಿನಗಳನ್ನು ಸ್ಮರಿಸಿದ್ದಾರೆ.

ರಾಜ್ಯ ಹಾಗೂ ದೇಶದ ದಲಿತ ದೌರ್ಜನ್ಯಗಳನ್ನು ದಾಖಲಿಸುವಲ್ಲಿ ‘ಪಂಚಮ’ ಪತ್ರಿಕೆ ನಿರ್ಣಾಯಕ ಪಾತ್ರ ವಹಿಸಿದೆ. ಭೂ ವಿವಾದಗಳು ಮತ್ತು ಸಾಮಾಜಿಕ ಬಹಿಷ್ಕಾರಗಳಿಂದ ಹಿಡಿದು ಹುಣಸಿಕೋಟೆ ಮತ್ತು ದಾಸನಪುರದಂತಹ ಹಳ್ಳಿಗಳಲ್ಲಿ ನಡೆದ ಕ್ರೂರ ಹತ್ಯೆ, ಜಾತಿ ಹಿಂಸಾಚಾರ ಹಾಗೂ ತಾರತಮ್ಯದ ಘಟನೆಗಳನ್ನು ‘ಪಂಚಮ’ ಮಾನವೀಯ ನೆಲೆಯಿಂದ ವರದಿ ಮಾಡಿದೆ. ತಳಮಟ್ಟದ ನೈಜತೆಯನ್ನು ಬೆಳಕಿಗೆ ತರುವ ಮೂಲಕ, ಪ್ರಭುತ್ವದ ಮೌನ ಸಮ್ಮತಿ ಮತ್ತು ಮುಖ್ಯವಾಹಿನಿ ಪತ್ರಿಕೆಗಳ ನಿರ್ಲಕ್ಷ್ಯವನ್ನು ‘ಪಂಚಮ’ ಎಪ್ಪತ್ತರ ದಶಕದಲ್ಲೇ ಪ್ರಶ್ನಿಸಿದೆ. ಈ ನಿರ್ಭೀತ ಬದ್ಧತೆಯು ‘ಪಂಚಮ’ ಪತ್ರಿಕೆಯನ್ನು ದಲಿತ ಪ್ರತಿರೋಧದ ಜೀವಂತ ದಾಖಲೆಯಾಗಿಸಿತ್ತು. ಜತೆಗೆ, ದಲಿತ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಪೀಳಿಗೆಯನ್ನು ಪೋಷಿಸುವಲ್ಲಿ ‘ಪಂಚಮ’ ಪತ್ರಿಕೆ ಮಹತ್ತರ ಪಾತ್ರ ವಹಿಸಿದೆ. ಪ್ರಬಲ ಸಾಹಿತ್ಯ ವಲಯದ ನಿರ್ಬಂಧಗಳಿಂದ ಮುಕ್ತವಾಗಿ, ಮೊದಲ ತಲೆಮಾರಿನ ದಲಿತ ಬರಹಗಾರರು ತಮ್ಮ ಅನುಭವಗಳನ್ನು ಮತ್ತು ತಾತ್ವಿಕ ಚಿಂತನೆಗಳನ್ನು ತಮ್ಮದೇ ಧ್ವನಿಯಲ್ಲಿ ವ್ಯಕ್ತಪಡಿಸಲು ‘ಪಂಚಮ’ ಅವಕಾಶ ಕಲ್ಪಿಸಿತ್ತು.

‘ಪಂಚಮ’ 1990ರಲ್ಲಿ ತನ್ನ ಪ್ರಕಟಣೆ ನಿಲ್ಲಿಸಿದರೂ ಪತ್ರಿಕೆಯ ಆಶಯಗಳು ಇಂದಿನ ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳಿಗೂ ಸ್ಫೂರ್ತಿ ನೀಡುತ್ತಲೇ ಇವೆ. ‘ಪಂಚಮ ಪದ’ದಂತಹ ಇತ್ತೀಚಿನ ರಂಗ ಪ್ರಯೋಗಗಳು ಪತ್ರಿಕೆಯ ವರದಿ, ಲೇಖನ ಮತ್ತು ಹಾಡುಗಳನ್ನು ಮರುಶೋಧಿಸುವ ಪ್ರಯತ್ನದಂತಿವೆ ಹಾಗೂ ಹಲವು ಸಾಂಸ್ಕೃತಿಕ ಪ್ರಯೋಗಗಳಿಗೆ ಒತ್ತಾಸೆಯಾಗಿವೆ. ಬದ್ಧತೆಯುಳ್ಳ ಪಾಕ್ಷಿಕ ಪತ್ರಿಕೆಯೊಂದು ಹೇಗೆ ಸಾಮಾಜಿಕ ಬದಲಾವಣೆಯ ಎಚ್ಚರದ ಶಕ್ತಿಯಾಗಬಲ್ಲದು ಹಾಗೂ ದನಿ ಇಲ್ಲದವರಿಗೆ ದನಿಯಾಗಬಲ್ಲದು ಎಂಬುದಕ್ಕೆ ‘ಪಂಚಮ’ ಪತ್ರಿಕೆಯು ಇಂದಿಗೂ ಮಾದರಿಯಂತಿದೆ.

ದೇವನೂರ ಮಹಾದೇವ 4

ಕುವೆಂಪು ‘ಪಂಚಮ’ ಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದರು
”ಹೆಮ್ಮೆಯಿಂದ ನೆನಪಿಸಿಕೊಳ್ಳಬಹುದಾದ ವಿಷಯ ಏನೆಂದರೆ ಕುವೆಂಪು ‘ಪಂಚಮ’ ಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದರು. ನಮ್ಮ ಹಣಕಾಸಿನ ತಾಪತ್ರಯಗಳ ಕಾರಣಕ್ಕೆ ಪತ್ರಿಕೆ ಬರುವುದು ತಡವಾದರೆ ತೇಜಸ್ವಿ ಅವರಿಗೆ ಬುಲಾವ್ ಹೋಗುತ್ತಿತ್ತು. ‘ಎಲ್ಲಿ ಪತ್ರಿಕೆ ಬಂದಿಲ್ಲ?’ ಎಂದು ಕುವೆಂಪು ತೇಜಸ್ವಿ ಅವರನ್ನು ಕೇಳುತ್ತಿದ್ದರು. ತೇಜಸ್ವಿ ನಮ್ಮ ಬಳಿ ಬಂದು, ‘ಅಣ್ಣನಿಗೆ(ಕುವೆಂಪು) ಪಂಚಮ ಪತ್ರಿಕೆಯನ್ನು ಓದದೇ ಇದ್ದರೆ ಏನೋ ಕಳೆದುಕೊಂಡಂತೆ ಆಗುತ್ತೆ’ ಎನ್ನುತ್ತಿದ್ದರು. ನಮ್ಮ ಹಣಕಾಸಿನ ತಾಪತ್ರಯದ ಬಗ್ಗೆ ಹೇಳಿದರೆ ತೇಜಸ್ವಿ ಸ್ವಲ್ಪ ಹಣಕಾಸಿನ ನೆರವು ನೀಡುತ್ತಿದ್ದರು. ಕುವೆಂಪು ‘ಪಂಚಮ’ ಪತ್ರಿಕೆಯನ್ನು ಓದುತ್ತಿದ್ದರು ಎನ್ನುವುದೇ ‘ಪಂಚಮ’ಕ್ಕೆ ಒಂದು ದೊಡ್ಡ ಗೌರವ.”

-ದೇವನೂರಮಹಾದೇವ,
‘ಪಂಚಮ’ ಪತ್ರಿಕೆಯ ಆರಂಭದ ದಿನಗಳ ವ್ಯವಸ್ಥಾಪಕ ಸಂಪಾದಕ

dayanand
ದಯಾನಂದ
+ posts

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ದಯಾನಂದ
ದಯಾನಂದ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನವರಾದ ದಯಾನಂದ ಅವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಸಮಯ ಟಿವಿ', 'ಪ್ರಜಾವಾಣಿ', 'ಸಮಾಚಾರ.ಕಾಂ' ಪತ್ರಿಕಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಪತ್ರಿಕೋದ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೊದಲ ನಾಟಕ 'ಬಾಳಪೂರ್ಣ'. ಕಥಾ ಸಂಕಲನ 'ದೇವರು ಕಚ್ಚಿದ ಸೇಬು' ಛಂದಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ಇವರ 'ಬುದ್ಧನ ಕಿವಿ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದೆ. ಅಲೆಮಾರಿ ಸಮುದಾಯದಿಂದ ಬಂದಿರುವ ಇವರು ತಬ್ಬಲಿ ಸಮುದಾಯಗಳ ಬಗ್ಗೆ ನಿರಂತರ ಬರೆಯುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...