ರಾಜ್ಯದ ಜಾತಿ ಜನಗಣತಿ ವರದಿಯಲ್ಲಿ ಅನುಸರಿಸುವಂತಹ ಯಾವುದೇ ಒಳ್ಳೆಯ ಅಂಶಗಳು ಇಲ್ಲ: ಆರ್‌ ಅಶೋಕ್

Date:

ಜಾತಿ ಜನಗಣತಿ ಹೇಗೆ ಮಾಡಬಾರದು ಎನ್ನುವುದಕ್ಕೆ ಕರ್ನಾಟಕದ ಜಾತಿಗಣತಿ ವರದಿಯೇ ಮಾದರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ಎಕ್ಸ್‌ ತಾಣದಲ್ಲಿ ತಿರುಗೇಟಿ ನೀಡಿರುವ ಅವರು,”ಸಿಎಂ ಸಿದ್ದರಾಮಯ್ಯ ಅವರೇ, ಜಾತಿ ಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ ಎಂದು ತಾವು ನೀಡಿರುವ ಹೇಳಿಗೆ ನಿಜಕ್ಕೂ ಹಾಸ್ಯಾಸ್ಪದ” ಎಂದಿದ್ದಾರೆ.

“ಮೂಲ ಪ್ರತಿ ಕಳೆದು ಹೋಗಿರುವ, ಕಾರ್ಯದರ್ಶಿಗಳ ಸಹಿಯೇ ಇಲ್ಲದ, ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ ಮಾಡಿಸಿರುವ, ನಾಯಿಗಳು ಇರುವ ಮನೆಯಲ್ಲಿ ಜಾತಿ ಗಣತಿ ಮಾಡೋಕೆ ಹೋಗದ, ಹತ್ತು ವರ್ಷಗಳಾದರೂ ಸ್ವೀಕರಿಸಿದ ನಿಮ್ಮ ಜಾತಿ ಗಣತಿ ವರದಿ, ಜಾತಿ ಜನಗಣತಿಯನ್ನು ಹೇಗೆ ಮಾಡಬಾರದು ಎನ್ನುವುದಕ್ಕೆ ಮಾದರಿ” ಎಂದು ಕುಟುಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜಾತಿ ಜನಗಣತಿಯನ್ನ ಬಿಜೆಪಿ ವಿರೋಧಿಸುತ್ತಲೇ ಬಂದಿದೆ ಎಂದು ತಾವು ಹೇಳಿರುವುದು ಹಸಿ ಸುಳ್ಳು. 2010ರಲ್ಲಿ ಅಂದಿನ ಲೋಕಸಭೆಯ ವಿಪಕ್ಷ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು 2011ರ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸಲು ಬಿಜೆಪಿ ಬೆಂಬಲಿಸುತ್ತದೆ ಎಂದು ಲಿಖಿತ ರೂಪದಲ್ಲಿ ಯುಪಿಎ ಸರ್ಕಾರಕ್ಕೆ ತಿಳಿಸಿದ್ದರು. ಸಂಸತ್ತಿನಲ್ಲಿ ಅಂಗೀಕರಿಸಲಾದ ಸರ್ವಾನುಮತದ ನಿರ್ಣಯವನ್ನೂ ಬಿಜೆಪಿ ಬೆಂಬಲಿಸಿತ್ತು” ಎಂದು ಸುಷ್ಮಾ ಸ್ವರಾಜ್ ಪತ್ರವನ್ನು ಹಂಚಿಕೊಂಡಿದ್ದಾರೆ.

ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯ ಬದಲು ಕಾಟಾಚಾರಕ್ಕೆ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ – 2011 (SECC-2011) ಸಮೀಕ್ಷೆಯ ನಡೆಸಿತು. ಕರ್ನಾಟಕದ ಜಾತಿ ಗಣತಿಯಂತೆ ಕಳಪೆ ಯೋಜನೆ ಮತ್ತು ಅಸಮರ್ಥ ಅನುಷ್ಠಾನದಿಂದಾಗಿ ಅದು ಸಂಪೂರ್ಣವಾಗಿ ವಿಫಲವಾಯಿತು. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ ನಂತರವೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲೇ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಗಣತಿ ಬಗ್ಗೆ ಇರುವ ನಿಜವಾದ ಬದ್ಧತೆ” ಎಂದು ಹರಿಹಾಯ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು

“ಬಿಜೆಪಿಗೆ ಜಾತಿ ಗಣತಿಯನ್ನ ಎಂದಿಗೂ ಚುನಾವಣಾ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಅಧಿಕಾರವಿದ್ದಾಗ ಜಾತಿ ಜನಗಣತಿ ಮಾಡುವ ನಿರ್ಧಾರ ಕೈಗೊಂಡು ಬದ್ಧತೆ ಪ್ರದರ್ಶನ ಮಾಡಿದ್ದೇವೆಯೇ ಹೊರತು ವಿಪಕ್ಷದಲ್ಲಿದಾಗ ಮೊಸಳೆ ಕಣ್ಣೀರು ಸುರಿಸಿ, ಅಧಿಕಾರ ಇದ್ದಾಗ ನಿರ್ಲಕ್ಷ್ಯ ಮಾಡುವ ಕೀಳು ರಾಜಕೀಯ ಮಾಡಿಲ್ಲ. ಇದು ಸಾಮಾಜಿಕ ನ್ಯಾಯದ ಬಗ್ಗೆ ನಮಗಿರುವ ನೈಜವಾದ ಬದ್ಧತೆ. ಜಾತಿ ಜನಗಣತಿ ಬಗ್ಗೆ ಬಿಜೆಪಿಯದ್ದು ಇದ್ದ ತಕರಾರು ಒಂದೇ. ಅದು ರಾಜಕೀಯ ದಾಳವಾಗಿ ದುರ್ಬಳಕೆ ಆಗಬಾರದು ಎಂಬುದು” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರ ಈಗ ನಡೆಸಲಿರುವ ಜಾತಿ ಗಣತಿ ಅತ್ಯಂತ ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ಸದುದ್ದೇಶದಿಂದ ನಡೆಯಲಿದೆಯೇ ಹೊರತು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿದಂತೆ ರಾಜಕೀಯ ಅನುಕೂಲಕ್ಕಾಗಿ ಮೂಗಿನ ನೇರಕ್ಕೆ ದತ್ತಾಂಶವನ್ನು ತಿರುಚುವ ದುರುದ್ದೇಶದಿಂದ ಮಾಡುವುದಿಲ್ಲ. ಕರ್ನಾಟಕದ ಜಾತಿ ಗಣತಿ ಪ್ರಕ್ರಿಯೆ ಜಾತಿಗಣತಿಯನ್ನ ಹೇಗೆ ನಡೆಸಬಾರದು ಎಂಬುದಕ್ಕೆ ಮಾದರಿಯೇ ಹೊರತು ಅದರಲ್ಲಿ ಅನುಸರಿಸುವಂತಹ ಯಾವುದೇ ಒಳ್ಳೆಯ ಅಂಶಗಳೂ ಇಲ್ಲ” ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...