ಜನರ ನಡುವೆ ಮನುವಾದ, ದ್ವೇಷವನ್ನು ಬಿತ್ತುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಸರ್ಕಾರಿ ಸ್ಥಳಗಳಲ್ಲಿ ನಡೆಸುವ ಯಾವುದೇ ಬಗೆಯ ಚಟುವಟಿಗಳಿಗೆ ನಿಷೇಧ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ.
“ಸರ್ಕಾರಿ ಮತ್ತು ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆತುತ್ತಾ, ಪೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ, ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು” ಎಂದು ಪ್ರಿಯಾಂಕ್ ಖರ್ಗೆ ಇತ್ತೀಚೆಗ ಸಿಎಂಗೆ ಪತ್ರ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಸರ್ಕಾರಿ ಸ್ಥಳಗಳಲ್ಲಿ RSS ನಡೆಸುವ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಬೇಕು: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ
ಇದಾದ ಬೆನ್ನಲ್ಲೇ ಸಂಘಪರಿವಾರದ ನಾಯಕರುಗಳು ಪ್ರಿಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕ್ ಮತ್ತು ಅವರ ಕುಟುಂಬಕ್ಕೆ ಕಳೆದ ಎರಡು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿವೆ.
For the past two days, my phone hasn’t stopped ringing. Calls filled with threats, intimidation and the filthiest abuse directed at me and my family, simply because I dared to question and restrain RSS activities in government schools, colleges and public institutions.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 14, 2025
But I’m…
ಈ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, “ಕಳೆದ ಎರಡು ದಿನಗಳಿಂದ ನಿರಂತರವಾಗಿ ನನಗೆ ಕರೆಗಳು ಬರುತ್ತಿವೆ. ನಾನು ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ, ಎಚ್ಚರಿಕೆ ಮತ್ತು ಅಸಭ್ಯ ನಿಂದನೆಗಳನ್ನು ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಇತರೆ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಡೆಸುವುದನ್ನು ಪ್ರಶ್ನಿಸಿದ ಕಾರಣಕ್ಕೆ ನನಗೆ ಬೆದರಿಕೆ ಹಾಕಲಾಗುತ್ತಿದೆ” ಎಂದು ಹೇಳಿದ್ದಾರೆ.
“ಆದರೆ ನಾನು ಭಯಪಟ್ಟಿಲ್ಲ ಮತ್ತು ಆಶ್ಚರ್ಯವೂ ಆಗಿಲ್ಲ. ಆರ್‌ಎಸ್‌ಎಸ್ ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಟ್ಟಿಲ್ಲ. ನನ್ನನ್ನೇಕೆ ಬಿಡುತ್ತಾರೆ? ಬೆದರಿಕೆ ಮತ್ತು ವೈಯಕ್ತಿಕ ನಿಂದನೆಯಿಂದ ನನ್ನನ್ನು ಮೌನವಾಗಿಸಬಹುದು ಎಂದು ಅವರಂದುಕೊಂಡಿದ್ದರೆ, ಅದು ಅವರ ತಪ್ಪು ಕಲ್ಪನೆ. ಇದು ಆರಂಭ ಮಾತ್ರ” ಎಂಬ ಎಚ್ಚರಿಕೆಯ್ನನೂ ಪ್ರಿಯಾಂಕ್ ನೀಡಿದ್ದಾರೆ.
“ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬರ ಮೂಲತತ್ವವನ್ನು ಹೊಂದಿರುವ, ಸಮಾನತೆ, ಉದ್ದೇಶ ಮತ್ತು ದಯೆ ಹೊಂದಿರುವ ಸಮಾಜವನ್ನು ಕಟ್ಟುವ ಸಮಯ ಇದಾಗಿದೆ. ಹಾಗೆಯೇ ಈ ದೇಶದಿಂದ ಅತಿ ಕೆಟ್ಟ ವೈರಸ್ ಅನ್ನು ಹೊರದಬ್ಬುವ ಸಮಯವಿದು” ಎಂದು ಎಕ್ಸ್‌ನಲ್ಲಿ ಸಚಿವರು ಬರೆದುಕೊಂಡಿದ್ದಾರೆ.





