ಜಾರ್ಖಂಡ್‌ನಲ್ಲಿ ನಡೆದ ಮುಂಬೈ-ಹೌರಾ ರೈಲು ಅಪಘಾತದ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ರೈಲು ಅಲ್ಲ ರೀಲ್ ಸಚಿವ ಎಂದು ಕರೆದಿದ್ದಾರೆ.
ಮುಂಬೈ-ಹೌರಾ ರೈಲು ಅಪಘಾತದಲ್ಲಿ ಇಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರವ ವಿರುದ್ಧ ವಿರೋಧ ಪಕ್ಷಗಳು ಮಂಗಳವಾರ ತೀವ್ರ ವಾಗ್ದಾಳಿ ನಡೆಸಿವೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರೈಲು ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ. “ಕೇಂದ್ರ ಸರ್ಕಾರವು ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದಾಖಲೆಯನ್ನು ಹೊಂದಿದ್ದಾರೆ. ಈಗ ಸರ್ಕಾರವು ರೈಲು ಅಪಘಾತಗಳಲ್ಲಿ ದಾಖಲೆ ಮಾಡಲು ಕೇಂದ್ರ ಸರ್ಕಾರವು ಬಯಸುತ್ತದೆ. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಸರ್ಕಾರವು ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಾ ಸರಣಿ ರೈಲ್ವೆ ಅಪಘಾತಗಳ ಹೊಣೆಗಾರಿಕೆಯನ್ನು ಸರ್ಕಾರ ಹೊತ್ತುಕೊಳ್ಳುವಂತೆ ಮತ್ತು ಇಂತಹ ಘಟನೆಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಜಾರ್ಖಂಡ್ | ಹಳಿ ತಪ್ಪಿದ ಮುಂಬೈ-ಹೌರಾ ರೈಲಿನ 18 ಭೋಗಿಗಳು; ಇಬ್ಬರು ಮೃತ್ಯು
“ನಾನು ಗಂಭೀರವಾಗಿ ಕೇಳುತ್ತೇನೆ ಇದು ಆಡಳಿತವೇ? ಬಹುತೇಕ ಪ್ರತಿ ವಾರ ಸರಣಿ ರೈಲು ಹಳಿಗಳ ಮೇಲೆ ಸಾವು ನೋವು ಸಂಭವಿಸುತ್ತಿದೆ. ನಾವು ಇದನ್ನು ಎಷ್ಟು ದಿನ ಸಹಿಸಿಕೊಳ್ಳುವುದು? ಭಾರತ ಸರ್ಕಾರದ ನಿರ್ದಾಕ್ಷಿಣ್ಯಕ್ಕೆ ಅಂತ್ಯವಿಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ಈ ಅಪಘಾತಗಳು ಸರ್ಕಾರದ ನಾಚಿಕೆಗೇಡಿನ ನಿರಾಸಕ್ತಿ ಎಂದು ಆರೋಪಿಸಿದರು. ಹಾಗೆಯೇ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದರು. “ಎಷ್ಟು ಸಾವು ನೋವಾದರೂ ಯಾವುದೇ ಪ್ರಭಾವ ಬೀರಲ್ಲ. ಏನೇ ಆದರೂ ಪರಿಹಾರವನ್ನು ಘೋಷಿಸುವುದು, ತನಿಖೆಯ ಭರವಸೆ ನೀಡುವುದು, ಕೊನೆಗೆ ಇನ್‌ಸ್ಟಾಗ್ರಾಂ ರೀಲ್‌ನತ್ತ ಹೋಗುವುದು” ಎಂದು ಟೀಕಿಸಿದ್ದಾರೆ.
ಹಾಗೆಯೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ‘ರೀಲ್ ಸಚಿವ’ ಎಂದು ಕರೆದಿದ್ದಾರೆ. ರೈಲುಗಳಲ್ಲಿ ಜನದಟ್ಟಣೆಯ ಬಗ್ಗೆಯೂ ಪ್ರಶ್ನಿಸಿದ್ದಾರೆ. “ಜನರು ಶೌಚಾಲಯಗಳಲ್ಲಿ ಪ್ರಯಾಣಿಸುತ್ತಾರೆ ಆದರೆ ಸರ್ಕಾರವು ನಾಚಿಕೆಪಡುತ್ತಿಲ್ಲ” ಎಂದು ಹೇಳಿದರು.
ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯಲ್ಲಿ ಹೌರಾ-ಮುಂಬೈ ರೈಲುಗಳ ಕನಿಷ್ಠ 18 ಬೋಗಿಗಳು ಹಳಿತಪ್ಪಿದ್ದು ಇಬ್ಬರು ಸಾವನ್ನಪ್ಪಿದರೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
Another day begins with another #TrainAccident ,this time involving the Howrah-Mumbai Passenger Train.
— Adan Zubain (@aitcadan) July 30, 2024
The derailment has resulted in 6 injuries so far.
This is the 7th accident in last 13 days, and our Reel Minister is busy doing reels on Vande Bharat! pic.twitter.com/N2dumtOABg
One passenger dead. With several deaths and no accountability till date, I guess this also won’t have any impact. Announce compensation, promise enquiry and move on to another PR Instagram reel.
— Priyanka Chaturvedi🇮🇳 (@priyankac19) July 30, 2024
Shameful apathy. https://t.co/E3rzEs4FCf




