ಇಂಗ್ಲೆಂಡ್ ಚುನಾವಣೆ | ನಮ್ಮ ಜನ ರಾಜಕಾರಣಕ್ಕೆ ಪಾಠವಾಗಬಲ್ಲ ಕಾರ್ಬಿನ್ ಗೆಲುವು

Date:

ಫ್ರೆಂಚ್ ಲೇಖಕ André Gideನ ‘ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಆಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ’ ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ ಐವತ್ತು ವರ್ಷಗಳಿಂದ ತನ್ನ ದುಡಿಯುವ ವರ್ಗದ ಪರ ಚಿಂತನೆಗಳನ್ನು ಹೇಳುತ್ತಲೇ ಬಂದಿರುವ ಕಾರ್ಬಿನ್ ಎಪ್ಪತ್ತರ ವಯಸ್ಸಿನಲ್ಲಿಯೂ ಆಶಾವಾದ ಕಳೆದುಕೊಂಡಿಲ್ಲ.

ಮಾಜಿ ಲೇಬರ್ ಪಕ್ಷದ ಮುಖಂಡ, ಸಮಾಜವಾದಿ, ರಾಜಕೀಯವಾಗಿ ಎಡಪಂಥೀಯ, ಪ್ಯಾಲೆಸ್ತೀನ್ ಬೆಂಬಲಿಗ ಜೆರ್ಮಿ ಕಾರ್ಬಿನ್ ಈ ಬಾರಿ ಭಾರತೀಯ ಮೂಲದ, ಲೇಬರ್ ಪಕ್ಷದ ಬಲಪಂಥೀಯ ಬೆಂಬಲಿಗ ಪ್ರಫುಲ್ ನರಗುಂದ ಅವರನ್ನು ಸೋಲಿಸಿದ್ದಾರೆ.

1960ರ ದಶಕದಲ್ಲಿ ದ. ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಟದಿಂದ ಶುರುವಾಗಿ ಇತ್ತೀಚಿನ ಇಸ್ರೇಲ್‌ನ ನರಮೇಧದ ವಿರುದ್ಧ ಹೋರಾಡುತ್ತಿರವ ಕಾರ್ಬಿನ್ ಪ್ರಸ್ತುತ ಸಂದರ್ಭದಲ್ಲಿ ತನ್ನ ಸಮಾಜವಾದಿ ನಿಲುವಿಗಾಗಿ ಕಟುವಾಗಿ ಟೀಕೆಗೆ ಒಳಗಾದ ರಾಜಕಾರಣಿ. ಆದರೆ ‘ಗಾಜಾ ಪ್ರದೇಶದಲ್ಲಿನ ಹೆಣಗಳನ್ನು ಕಂಡು ಹೇಗೆ ನಿದ್ರಿಸಬಲ್ಲೆ’ ಎಂದು ವಿಷಾದ ವ್ಯಕ್ತಪಡಿಸಿದ ಕಾರ್ಬಿನ್ ಪರ ಬ್ರಿಟನ್‌ನ ಸಾವಿರಾರು ಪ್ಯಾಲೆಸ್ತೀನ್ ಬೆಂಬಲಿಗರು ನಿಂತರು.

ಇದು ವೈರುಧ್ಯಗಳ ಜಗತ್ತಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಫ್ರೆಂಚ್ ಲೇಖಕ André Gideನ ‘ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಆಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ’ ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ ಐವತ್ತು ವರ್ಷಗಳಿಂದ ತನ್ನ ದುಡಿಯುವ ವರ್ಗದ ಪರ ಚಿಂತನೆಗಳನ್ನು ಹೇಳುತ್ತಲೇ ಬಂದಿರುವ ಕಾರ್ಬಿನ್ ಎಪ್ಪತ್ತರ ವಯಸ್ಸಿನಲ್ಲಿಯೂ ಆಶಾವಾದ ಕಳೆದುಕೊಂಡಿಲ್ಲ.

ನವ ಉದಾರೀಕರಣದ ವಿರುದ್ಧದ ‘ಕಾರ್ಬಿನಿಸಂ’ ನೀತಿಗಳನ್ನು ಲೇಬರ್ ಪಕ್ಷದ ಪ್ರಣಾಳಿಕೆಯಾಗಿ ಪರಿವರ್ತನೆಯಾಗಲಿಲ್ಲ. ಈ ಕಾರಣದಿಂದ ಕಾರ್ಬಿನ್ ನಾಲ್ಕು ದಶಕಗಳಿಂದ ಗೆಲುವು ಸಾಧಿಸಿದರೂ ಸಹ ಆತನ ನೇತೃತ್ವದಲ್ಲಿ 2019ರ ಚುನಾವಣೆಯಲ್ಲಿ ದಯನೀಯವಾಗಿ ಸೋತರು.

ಇದನ್ನು ಓದಿದ್ದೀರಾ?: ಯುಕೆ ಚುನಾವಣೆ | ಕೀರ್ ಸ್ಟಾರ್ಮರ್‌ ಆಡಳಿತದಲ್ಲಿ ಬದಲಾಗುವುದೇ ಬ್ರಿಟನ್?

ಸಮಾನತೆ, ಪ್ರಜಾಪ್ರಭುತ್ವ, ಶಾಂತಿ ಕುರಿತು ಮಾತನಾಡುವ ಕಾರ್ಬಿನ್ ಅವರ ಸಮತಾವಾದವನ್ನು ತೀವ್ರ ಎಡಪಂಥೀಯ ಎಂದು ಟೀಕಿಸಿದ ಲೇಬರ್ ಪಕ್ಷದ ಸ್ಟಾರ್ಮರ್ 2020ರಲ್ಲಿ ಕಾರ್ಬಿನ್‌ರನ್ನು ಪಕ್ಷದಿಂದ ಅಮಾನತು ಮಾಡಿದರು. 2024ರ ಚುನಾವಣೆಯಲ್ಲಿ ಕಾರ್ಬಿನ್ ಮತ್ತು ಪ್ಯಾಲೆಸ್ತೀನ್ ಪರ ಇತರ ನಾಲ್ವರು ಸ್ವತಂತ್ರವಾಗಿ ಸ್ಪರ್ದಿಸಿದಾಗ ಈ ಐವರನ್ನು ಪಕ್ಷದಿಂದ ಹೊರ ಹಾಕಲಾಯಿತು.

ಆದರೆ ಈ ಬಾರಿ ಬ್ರಿಟನ್ನರ ಕನ್ಸರ್ವೇಟಿವ್ ವಿರೋಧಿ ನಿಲುವು ಎಲ್ಲವನ್ನೂ ಬದಲಾಯಿಸಿದೆ.

ಕಾರ್ಬಿನ್ ಜೊತೆಗೆ ಶೋಕತ್ ಅಡಮ್, ಅಯೂಬ್ ಖಾನ್, ಅದ್ನಾನ್ ಹುಸೇನ್, ಇಕ್ಬಾಲ್ ಮಹಮ್ಮದ್ ಸಹ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇವರ ಜೊತೆ ಗ್ರೀನ್ ಪಕ್ಷದ ನಾಲ್ವರು ಗೆದ್ದಿದ್ದಾರೆ. ಇವರೆಲ್ಲರೂ ಮರಳಿ ಪ್ರಗತಿಪರ, ಬಲಪಂಥೀಯ, ನವ ಉದಾರೀಕರಣ ವಿರೋಧಿ ರಾಜಕಾರಣವನ್ನು ಮರಳಿ ಕಟ್ಟಲು ಈ ಗೆಲುವಿನಲ್ಲಿ ಸೂಕ್ತ ಅವಕಾಶ ದೊರಕಿದೆ.

ಮತ್ತು ಜನ ರಾಜಕಾರಣ ಮಾಡಲು ತಡಬಡಾಯಿಸುವ ನಮಗೆ ಒಂದು ಪಾಠವೂ ಸಹ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...