ಮೋದಿ ಸರ್ಕಾರದಲ್ಲಿ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ದೇವನಾಗರಿ ಲಿಪಿಯಲ್ಲಿ ತಪ್ಪಾಗಿ ಬರೆದಿರುವ ವಿಡಿಯೋ ವೈರಲ್ ಆಗಿದೆ. ಪ್ರತಿಪಕ್ಷ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಜಾರ್ಖಂಡ್‌ನಲ್ಲಿ ‘ಸ್ಕೂಲ್ ಚಲೇ ಹಮ್ ಅಭಿಯಾನ್’ ಅಡಿಯಲ್ಲಿ ಶಾಲೆಗಳ ಹೊಸ ಶೈಕ್ಷಣಿಕ ಸಮಾವೇಶವನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುತ್ತಿದೆ. ಅದರ ಅಂಗವಾಗಿ ಮಂಗಳವಾರ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಎನ್‌ಜಿಒ ಕಾರ್ಯಕ್ರಮ ಆಯೋಜಿಸಿದ್ದತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಮೋದಿ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷಣೆಯನ್ನು ತಪ್ಪಾಗಿ ಬರೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
12ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಠಾಕೂರ್ ಜಾರ್ಖಂಡ್‌ನ ಧಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಎರಡನೇ ಬಾರಿಗೆ ಸಂಸದರಾಗಿ, ಈಗ ಸಚಿವರೂ ಆಗಿರುವ ಅವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದನ್ನು ‘ಬೇಟಿ ಪಢಾವೋ ಬಚ್ಚಾವ್’ ಎಂದು ಬರೆದಿದ್ದಾರೆ.
ये कैसा नेतृत्व …?? क्या प्रधानमंत्री @narendramodi जी को अपनी सरकार में सिर्फ #Rubber_Stamp मंत्री ही चाहिए?
जनप्रतिनिधि कैसा होना चाहिए इसका कोई मापदंड तो तय नहीं है, पर कम से कम उसे अक्षरज्ञान तो होना ही चाहिए!#धार की #सांसद और केंद्रीय मंत्रिमंडल में महिला एवं बाल विकास… pic.twitter.com/n3TIx0RYs3
— Umang Singhar (@UmangSinghar) June 19, 2024
ಆ ವಿಡಿಯೋವನ್ನು ಹಂಚಿಕೊಂಡು ಅಪಹಾಸ್ಯ ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ಸಲಹೆಗಾರ ಮತ್ತು ಪಕ್ಷದ ಹಿರಿಯ ನಾಯಕ ಕೆ.ಕೆ ಮಿಶ್ರಾ, “ಯಾರ ದುರದೃಷ್ಟವೆಂದು ನಾವು ಪರಿಗಣಿಸಬೇಕು… ದೇಶ, ಪ್ರಜಾಪ್ರಭುತ್ವ, ಸಂವಿಧಾನ ಅಥವಾ ಶಿಕ್ಷಣ ನೀತಿ” ಎಂದು ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘರ್, “ಇದು ಎಂತಹ ನಾಯಕತ್ವ….??? ಪ್ರಧಾನಿಗೆ ತಮ್ಮ ಸರ್ಕಾರದಲ್ಲಿ ರಬ್ಬರ್ ಸ್ಟಾಂಪ್ ಮಂತ್ರಿಗಳು ಮಾತ್ರ ಬೇಕೇ? ಒಬ್ಬ ಸಾರ್ವಜನಿಕ ಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ. ಆದರೆ, ಕನಿಷ್ಠ ಅವರು ಅಕ್ಷರಸ್ಥರಾಗಿರಬೇಕು! ಧಾರ್ ಸಂಸದೆ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಅವರಿಗೆ ಎರಡು ಪದಗಳನ್ನು ಬರೆಯಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಅವರು ತಪ್ಪಾಗಿ ಬರೆಯುವುದನ್ನು ನೋಡಿ ಏನನ್ನಿಸಿರಬಹುದು ಎಂದು ಅರ್ಥಮಾಡಿಕೊಳ್ಳಬಹುದು! ಇಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಮುನ್ನ ಮತದಾರರು ಯೋಚಿಸಬೇಕಿತ್ತು. ಮೋದಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಎತ್ತುವ ವಿದ್ಯಾವಂತ ನಾಯಕರು ಬೇಕಾಗಿಲ್ಲ” ಎಂದು ಟೀಕಿಸಿದ್ದಾರೆ.




