ಉನ್ನಾಂವ್ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದೆ. ಈ ವಿಚಾರವು ಕರ್ನಾಟಕದಲ್ಲಿ ಬಿಜೆಪಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಜಟಾಪಟಿಗೆ ಕಾರಣವಾಗಿದೆ. ಅತ್ಯಾಚಾರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತು ಮಾಡಲಾಗಿರುವುದಕ್ಕೆ ಕೇಂದ್ರ ಸರ್ಕಾರವನ್ನು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಅವರು ಬಳಸಿದ್ದ ಎಐ ರಚಿತ ಚಿತ್ರವನ್ನು ಖಂಡಿಸಿರುವ ಬಿಜೆಪಿ, ಸಚಿವರು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದೆ.
ದೆಹಲಿ ಹೈಕೋರ್ಟ್‌ನ ಆದೇಶ ಹೊರಬಿದ್ದ ಬಳಿಕ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ, ‘ಕಂಗ್ರಾಜುಲೇಷನ್ಸ್ ಮೋದಿ, ನಿಮ್ಮ ಬೇಟಿ ಬಚಾವೋ – ಬೇಟಿ ಪಡಾವೋ ಘೋಷಣೆಯು ಹೊಸ ಅರ್ಥ ಪಡೆದುಕೊಂಡಿದೆ’ ಎಂದು ಟೀಕಿಸಿದ್ದರು. ಅವರ ಹಂಚಿಕೊಂಡಿದ್ದ ಎಐ ರಚಿತ ಚಿತ್ರದಲ್ಲಿ, ದೆಹಲಿಯ ತಿಹಾರ್ ಜೈಲಿನ ಎದುರು ಸೆಂಗರ್‌ಗೆ ಕೆಲವು ಬಿಜೆಪಿಗರು ಹಾರ ಹಾಕಿ ಸ್ವಾಗತಿಸುತ್ತಿರುವುದು ಕಂಡುಬಂದಿತ್ತು.
ಈ ಚಿತ್ರವನ್ನು ಬಳಸಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಕರ್ನಾಟಕ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. “ಸ್ವಯಂ ಘೋಷಿತ ‘ಫ್ಯಾಕ್ಟ್ ಚೆಕರ್’ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ನಡೆಸುವ ಉದ್ದೇಶದಿಂದ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯಲು ಎಐ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತದ ಹೆಣ್ಣುಮಕ್ಕಳ ಸಬಲೀಕರಣದ ಪ್ರಮುಖ ಯೋಜನೆ ‘ಬೇಟಿ ಬಚಾವೋ, ಬೇಟಿ ಪಡಾವೋ’ದ ಅರ್ಥವನ್ನು ಸುಳ್ಳುಗಳ ಮೂಲಕ ವ್ಯಂಗ್ಯವಾಡಿದ್ದಾರೆ” ಎಂಧು ಆರೋಪಿಸಿದೆ.
The self-proclaimed 'fact-checker' @PriyankKharge is caught spreading fake news!
— BJP Karnataka (@BJP4Karnataka) December 26, 2025
Despite holding the IT & BT portfolio, he circulated a malicious, AI-generated image to attack PM Shri @narendramodi and mislead the public about a court order.
𝐇𝐞 𝐬𝐡𝐚𝐦𝐞𝐟𝐮𝐥𝐥𝐲… pic.twitter.com/PMDIbmYKff
“ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ಅಮಾನತು ಮಾಡುವುದು ಸರ್ಕಾರದ ನಿರ್ಧಾರವಲ್ಲ. ಅದು ನ್ಯಾಯಾಲಯದ ಆದೇಶವಾಗಿದೆ. ಆ ಆದೇಶವನ್ನು ಸಿಬಿಐ ಪ್ರಶ್ನಿಸಲಿದೆ. ಅಲ್ಲದೆ, ಸೆಂಗರ್ ಮತ್ತೊಂದು ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಪ್ರಿಯಾಂಕ್ ಖರ್ಗೆ ಹಂಚಿಕೊಂಡಿರುವ ಪೋಸ್ಟ್ ಅವರದೇ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ವಿರೋಧಿ ಮಸೂದೆಯ ಉಲ್ಲಂಘನೆಯಾಗಿದೆ” ಎಂದು ಬಿಜೆಪಿ ಹೇಳಿದೆ.
ಈ ಬೆನ್ನಲ್ಲೇ ಮತ್ತೊಂದು ಪ್ರಿಯಾಂಕ್ ಖರ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ಗುಜರಾತ್‌ನ ಬಿಲ್ಕೀಸ್ ಬಾನೊ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿದ ಸಂದರ್ಭದ ಚಿತ್ರವನ್ನು ಬಳಿಸಿರುವ ಪ್ರಿಯಾಂಕ್ ಖರ್ಗೆ, “ನಾನು ಹಿಂದಿನ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದ ಚಿತ್ರವು ಎಐನಿಂದ ರಚನೆ ಮಾಡಿರಬಹುದು. ಅದು ಕಣ್ತಪ್ಪಿ ಪೋಸ್ಟ್ ಆಗಿರಬಹುದು. ಆದರೆ ನಿಮ್ಮ (ಬಿಜೆಪಿ) ಖ್ಯಾತಿಯು (ಬಿಲ್ಕೀಸ್ ಬಾನೊ ಪ್ರಕರಣದ ಚಿತ್ರ) ನಿಮ್ಮ ಮುಂದೆಯೇ ಇದೆ” ಎಂದು ಹೇಳಿದ್ದಾರೆ.
While the image in the previous post may have been AI-generated and was shared due to an inadvertent oversight, your reputation precedes you, @BJP4Karnataka. (Take a look at the picture attached)
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 26, 2025
The larger issue remains: the BJP continues to honour and shield perpetrators. Why… https://t.co/Z846o34xdx pic.twitter.com/Eyt0bNicW8
“ಬಿಜೆಪಿ ಅಪರಾಧಿಗಳನ್ನು ಗೌರವಿಸುವುದು ಮತ್ತು ರಕ್ಷಿಸುವುದನ್ನು ಮುಂದುವರಿಸಿದೆ. ಕರ್ನಾಟಕದಲ್ಲಿ ಪೋಕ್ಸೋ ಆರೋಪಿಗಳ ವಿರುದ್ಧ ಯಾಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ? ಈ ನಾಯಕನನ್ನು ಇನ್ನೂ ನಿಮ್ಮ ಪಕ್ಷದ ‘ಮಾರ್ಗದರ್ಶಕ’ ಹಾಗೂ ‘ಮಾರ್ಗದರ್ಶಿ ಬೆಳಕು’ ಎಂಬುದಾಗಿಯೇ ಬಿಂಬಿಸಲಾಗುತ್ತಿದೆ ಅಲ್ಲವೇ?” ಎಂದು ಯಡಿಯೂರಪ್ಪನವರ ಹೆಸರನ್ನು ಉಲ್ಲೇಖಿಸಿದೆ ಅವರ ಬಗ್ಗೆ ಪ್ರಶ್ನಿಸಿದ್ದಾರೆ.




