ಉತ್ತರಪ್ರದೇಶ | ಹೆಚ್ಚುತ್ತಲೇ ಇದೆ ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ; ಕಣ್ಣು-ಕಿವಿ -ಬಾಯಿ ಮುಚ್ಚಿ ಕೂತ ಯೋಗಿ

Date:

ಇತ್ತೀಚೆಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ‘ಡ್ರೋನ್ ಕಳ್ಳ’ ಎಂಬ ಶಂಕೆಯಿಂದ ಹರಿಓಂ(38) ಎಂಬ ದಲಿತ ವ್ಯಕ್ತಿಯನ್ನು ಗ್ರಾಮಸ್ಥರ ಗುಂಪು ಥಳಿಸಿ ಕೊಂದಿದೆ. ಕಳ್ಳತನಕ್ಕೂ ಮುಂಚೆ ಮನೆಗಳನ್ನು ಗುರುತಿಸಲು ಡ್ರೋನ್ ಹಾರಾಟ ನಡೆಸುತ್ತಿದ್ದ ಎಂಬ ವದಂತಿಯೇ ಈ ಹತ್ಯೆಗೆ ಕಾರಣವಾಗಿದೆ. ನವೆಂಬರ್ 2ರಂದು ಇದೇ ಉತ್ತರ ಪ್ರದೇಶದ ಮಥುರಾದಲ್ಲಿ 10 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಉತ್ತರಪ್ರದೇಶದಲ್ಲಿ ಇದು ನಿತ್ಯದ ಸುದ್ದಿ. ಇಂತಹ ಪೈಶಾಚಿಕ ಕೃತ್ಯ ತಡೆಯಲು ಏನು ಮಾಡಿದೆ ಉತ್ತರಪ್ರದೇಶ ಸರ್ಕಾರ ಎಂದು ನೋಡಿದರೆ ಕಣ್ಣು-ಕಿವಿ-ಬಾಯಿ ಮುಚ್ಚಿ ಕುಳಿತ ಯೋಗಿಯ ಚಿತ್ರ ಕಣ್ಮುಂದೆ ಬರುತ್ತದೆ.

ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿ ಎರಡನೇ ಅವಧಿ ಮುಗಿಯುತ್ತ ಬಂದಿದೆ. ಮೊದಲ ಅವಧಿಯಲ್ಲಿ ದೇಶದಾಚೆಗೂ ಸುದ್ದಿ ಮಾಡಿದ್ದ, ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳೆಂದರೆ ಹಾಥರಸ್‌ ಮತ್ತು ಉನ್ನಾವೋ ಯುವತಿಯರ ಪ್ರಕರಣ. ಆದರೆ, ಆ ನಂತರವೂ ಅಲ್ಲಿ ಮಹಿಳೆಯರ ಪ್ರಾಣಕ್ಕೆ ಬೆಲೆ ಇಲ್ಲ. ಅದೇ ರೀತಿ ದಲಿತರನ್ನು ನಾನಾ ಬಗೆಯಲ್ಲಿ ಹಿಂಸಿಸಲಾಗುತ್ತಿದೆ. ದೇಶದಲ್ಲಿ ಅತ್ಯಧಿಕ ದಲಿತರ ವಿರುದ್ದ ದೌರ್ಜನ್ಯ ನಡೆಯುವ ರಾಜ್ಯ ಉತ್ತರ ಪ್ರದೇಶ. ಆದರೂ, ಯೋಗಿಯನ್ನು ಮುಂದಿನ ಪ್ರಧಾನಿಯಾಗಿ ಹಲವರು ನೋಡಲು ಬಯಸುತ್ತಿರುವುದು ವಿಪರ್ಯಾಸ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ರ ಇತ್ತೀಚಿನ ವರದಿ ಪ್ರಕಾರ 2023ರಲ್ಲಿ ಒಟ್ಟಾರೆಯಾಗಿ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ (28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ) 11ನೇ ಸ್ಥಾನದಲ್ಲಿದ್ದರೂ ದೇಶದಲ್ಲೇ ಅಧಿಕ ದಲಿತ ವಿರೋಧಿ, ಮಹಿಳಾ ವಿರೋಧಿ ಅಪರಾಧಗಳು ದಾಖಲಾಗಿದೆ. ಅದರಲ್ಲೂ ಯೋಗಿ ಆಡಳಿತದಲ್ಲಿ ದಲಿತ ಮಹಿಳೆಯರು ‘ಬಲಾಢ್ಯರು’ ಎನಿಸಿಕೊಂಡಿರುವ ಸವರ್ಣೀಯರ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಮಾತ್ರ ರಾಜಕೀಯದಲ್ಲೇ ಮುಳುಗಿ ಹೋಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ದಲಿತ ಕುಟುಂಬದ ಮೇಲೆ ಹಲ್ಲೆ, ಪ್ರಕರಣ ದಾಖಲು

ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು

2022ರಲ್ಲಿ ಉತ್ತರ ಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 171.6 ಅಪರಾಧ ಪ್ರಕರಣಗಳು ದಾಖಲಾಗಿದೆ. ಆದರೆ 2023ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಅಪರಾಧ ಪ್ರಕರಣಗಳ ಸಂಖ್ಯೆ 335.3ಕ್ಕೆ ಏರಿಕೆಯಾಗಿದೆ. ಎನ್‌ಸಿಆರ್‌ಬಿ ವರದಿ ಪ್ರಕಾರ ದೇಶದ ಸರಾಸರಿ ಅಪರಾಧ ದರ(448.3) ಕ್ಕಿಂತ ಉತ್ತರ ಪ್ರದೇಶದಲ್ಲಿ ಅಪರಾಧ ದರ(448.3) ಕಡಿಮೆಯಿದೆ. ಆದರೆ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆ, ಅದರಲ್ಲೂ ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2022ರಲ್ಲಿ ಯುಪಿಯಲ್ಲಿ 4.01 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಬರೀ ಒಂದು ವರ್ಷದಲ್ಲೇ ಈ ಪ್ರಕರಣಗಳ ಸಂಖ್ಯೆಯು 7.93 ಲಕ್ಷಕ್ಕೆ ಜಿಗಿದಿದೆ. 2023 ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ ಮಹಿಳೆಯರ ವಿರುದ್ಧದ ಅಪರಾಧ, ಕೊಲೆ, ಅಪಹರಣ, ದಲಿತರ ವಿರುದ್ಧದ ಅಪರಾಧ ಪ್ರಕರಣದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ.

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ

2023ರಲ್ಲಿ ಉತ್ತರ ಪ್ರದೇಶದಲ್ಲಿ ಸರಿಸುಮಾರು 66,381 ಮಹಿಳೆಯರ ವಿರುದ್ದ ನಡೆದ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ಇಡೀ ದೇಶದಲ್ಲಿ ದಾಖಲಾದ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಶೇ.15ರಷ್ಟಿದೆ. 2022ರಲ್ಲಿ 65,743ರಷ್ಟು ಪ್ರಕರಣಗಳು ದಾಖಲಾಗಿದ್ದವು. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2022ರಲ್ಲಿ 3,690 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ ಸರಿಸುಮಾರು 5,310 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಕೊಲೆ ಪ್ರಕರಣಗಳ ಪಟ್ಟಿಯಲ್ಲಿಯೂ ಅಗ್ರ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 2023ರಲ್ಲೇ ಸುಮಾರು 33 ಅತ್ಯಾಚಾರ/ಸಾಮೂಹಿಕ ಅತ್ಯಾಚಾರ ಕೊಲೆ ನಡೆದಿದೆ. ಮಹಿಳೆಯರ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ಶೇ.9ರಷ್ಟು ಜಿಗಿತ ಕಂಡಿದೆ. ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾಗಿದ್ದರೂ ಮಹಿಳೆಯರ ವಿರುದ್ಧದ ಅಪರಾಧವನ್ನು ತಡೆಗಟ್ಟುವಲ್ಲಿ ಯುಪಿ ಸರ್ಕಾರ ವಿಫಲವಾಗಿದೆ.

ದಲಿತರ ಮೇಲಿನ ದೌರ್ಜನ್ಯ ಏರಿಕೆ

ಉತ್ತರ ಪ್ರದೇಶದಲ್ಲಿ ದಲಿತರ ವಿರುದ್ದದ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಲೇ ಸಾಗುತ್ತಿದೆ. 2020ರಲ್ಲಿ 12,714, 2021ರಲ್ಲಿ 13,146 ಮತ್ತು 2022ರಲ್ಲಿ 15,368- ಹೀಗೆ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. 2021ರಿಂದ 2022ರ ವೇಳೆಗೆ ಶೇ. 13.1ರಷ್ಟು ಏರಿಕೆಯಾಗಿದ್ದರೆ, 2023ರಲ್ಲಿ 57,789ರಷ್ಟು ಪ್ರಕರಣ ದಾಖಲಾಗಿದ್ದು ಶೇ.0.4ರಷ್ಟು ಹೆಚ್ಚಳವಾಗಿದೆ. ದಲಿತರ ವಿರುದ್ಧದ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದರೂ ನ್ಯಾಯ ಇಂದಿಗೂ ಸಲಾವಾಗಿಯೇ ಉಳಿದಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಅತೀ ಕಡಿಮೆ ಅಂದರೆ ಸುಮಾರು 32.4ರಷ್ಟಿದೆ. ಆದರೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಭಾರಿ ಅಧಿಕವಾಗಿದೆ. 2022ರಲ್ಲಿ ಸುಮಾರು ಶೇ.95ಕ್ಕೂ ಅಧಿಕ ಪ್ರಕರಣದಲ್ಲಿ ಇನ್ನೂ ತನಿಖೆ ನಡೆದಿಲ್ಲ. ಈ ತನಿಖೆ ನಡೆಯದಂತೆ ತಡೆಯುವವರು ಯಾರು? ಇದರ ವಿರುದ್ಧ ಯುಪಿ ಸರ್ಕಾರ ಕ್ರಮವೇಕೆ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಉತ್ತರವಿಲ್ಲ.

yogi up

ಇದನ್ನು ಓದಿದ್ದೀರಾ? ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರವೆಸಗಿ, ತುಂಡುತುಂಡಾಗಿ ಕತ್ತರಿಸಿ ಭೀಕರ ಹತ್ಯೆ

ಹೆಚ್ಚು ನಲುಗುವವರು ದಲಿತ ಮಹಿಳೆಯರು

ಯಾವುದೇ ರಾಜ್ಯವಾದರೂ ಅಲ್ಲಿ ಹೆಚ್ಚಾಗಿ ತುಳಿತಕ್ಕೆ ಒಳಗಾಗುವವರು ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರು. 2023, 2024 ಮತ್ತು 2025ರಲ್ಲಿ ಹಲವು ಅತಿ ಭೀಕರವಾದ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಎಷ್ಟೋ ಪ್ರಕರಣಗಳಲ್ಲಿ ಪೊಲೀಸರು ಸಂತ್ರಸ್ತರ ಪರವಾಗಿ ನಿಲ್ಲುವುದು ಬಿಡಿ ದೂರೂ ದಾಖಲಿಸಿಕೊಂಡಿಲ್ಲ. ಇನ್ನೂ ಹಲವು ದೂರುಗಳ ಸವರ್ಣೀಯರ ಭಯದಿಂದಾಗಿ ದಾಖಲಾಗಿಲ್ಲ. ದೇಶ ಎಷ್ಟೇ ಬದಲಾದರೂ ಉತ್ತರ ಪ್ರದೇಶದ ಹಲವು ಗ್ರಾಮಗಳಲ್ಲಿ ದಲಿತ ಹೆಣ್ಣು ಮಕ್ಕಳು ನ್ಯಾಯದ ನಿರೀಕ್ಷೆಯನ್ನೇ ಕಳೆದುಕೊಂಡಿದ್ದಾರೆ.

ದಲಿತ ಮಹಿಳೆಯರ ವಿರುದ್ಧದ ಪ್ರಕರಣಗಳು

2025ರ ಏಪ್ರಿಲ್‌ನಲ್ಲಿ ರಾಮ್‌ಪುರದಲ್ಲಿ 11 ವರ್ಷದ ಮಾತು ಬರದ, ಕಿವಿ ಕೇಳಿಸಿದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಅದೇ ತಿಂಗಳಲ್ಲಿ ಮೈನ್‌ಪುರಿಯಲ್ಲಿ 40 ವರ್ಷದ ದಲಿತ ಮಹಿಳೆಯ ಮೇಲೆ ಆಕೆಯ ನಾಲ್ಕು ವರ್ಷದ ಮಗನ ಮುಂದೆಯೇ ಅತ್ಯಾಚಾರ ಎಸಗಲಾಗಿತ್ತು. ಬಂದೂಕು ತೋರಿಸಿ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ನಡೆಸಲಾಗಿತ್ತು.

ಮೇ ತಿಂಗಳಲ್ಲಿ ಸುಲ್ತಾನ್‌ಪುರದಲ್ಲಿ 14 ವರ್ಷದ ದಲಿತ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಮೂವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದೇ ತಿಂಗಳು ಮೊರಾದಾಬಾದ್‌ನಲ್ಲಿ 12 ವರ್ಷದ ದಲಿತ ಬಾಲಕಿಯ ಮೇಲೆ ಶಾಲಾ ಪ್ರಾಂಶುಪಾಲರ ಕಚೇರಿಯಲ್ಲಿ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಜೂನ್‌ನಲ್ಲಿ ಫತೇಪುರದಲ್ಲಿ ಎಂಟನೇ ತರಗತಿಯ ದಲಿತ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇದಾದ ಬಳಿಕ ಸೆಪ್ಟೆಂಬರ್‌ನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇವಿಷ್ಟು ಮುನ್ನೆಲೆಗೆ ಬಂದ ಪ್ರಕರಣಗಳಾದರೆ ಅದೆಷ್ಟೋ ಪ್ರಕರಣಗಳು ಇನ್ನೂ ದಾಖಲಾಗಿಲ್ಲ.

ಇದನ್ನು ಓದಿದ್ದೀರಾ? ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ | ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ

2017ರಲ್ಲಿ ಈ ಹಿಂದಿನ ಸರ್ಕಾರವನ್ನು ದೂಷಿಸಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಬಿಜೆಪಿ ಇಂದಿಗೂ ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸಫಲವಾಗಿಲ್ಲ. ದಲಿತರ ವಿರುದ್ಧದ ದೌರ್ಜನ್ಯಗಳು, ಕೊಲೆಗಳು ಹೆಚ್ಚಾಗುತ್ತಿರುವಾಗ ಸರ್ಕಾರ ಮಾತ್ರ ಸಬೂಬು ಕೊಡುವುದರಲ್ಲೇ ನಿರತವಾಗಿದೆ. “ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಾಗಿರುವುದಲ್ಲ. ಸರ್ಕಾರದ ಉತ್ತೇಜನದಿಂದಾಗಿ ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿದ್ದಾರೆ, ಅದರಿಂದಾಗಿ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ” ಎಂದು ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುದು ಖೇದಕರ.

ನಿರಂತರವಾಗಿ ಕೋಮು ದ್ವೇಷ ಭಾಷಣ, ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ಸರ್ಕಾರ ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕೊಂಚ ಗಮನಹರಿಸುವುದು ಒಳಿತು. ಅಷ್ಟಕ್ಕೂ ಇಂತಹ ಕೃತ್ಯಗಳ ಹೊಣೆಯನ್ನು ಹೊರುವವರು ಯಾರು? ಉತ್ತರ ಪ್ರದೇಶದ ಹೆಸರು ಮಾತ್ರಕ್ಕೆ ಮಿಷನ್ ಶಕ್ತಿ ಎಂಬ ಯೋಜನೆಯನ್ನು ಘೋಷಿಸಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವಲ್ಲಿ ಗಮನ ಹರಿಸಿಲ್ಲ. ಈ ಯೋಜನೆ ಜಾರಿಯಲ್ಲಿದ್ದರೂ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಮಾತ್ರ ಹೆಚ್ಚುತ್ತಲೇ ಇದೆ. ಅಪರಾಧ ನಡೆದ ಬಳಿಕ ಶಿಕ್ಷೆ ವಿಧಿಸುವುದಕ್ಕಿಂತ, ಅಪರಾಧ ನಡೆಯುವುದನ್ನು ತಡೆಯುವುದು ಸರ್ಕಾರದ ಕರ್ತವ್ಯವಲ್ಲವೇ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...